ಕಣ್ಣ ಕನ್ನಡಿ

ಕಣ್ಣ ಕನ್ನಡಿ

closeup photo of person

ಶಾಂತಾ ಜೆ ಅಳದಂಗಡಿ

ಕಣ್ಣಕನ್ನಡಿ

ಹಸಿರ ಉಸಿರು ಅದುಮಿ ಹಿಡಿದು
ತಂಪು ತಂಗಾಳಿ ಏಕಿಲ್ಲ ವೆಂದರೆ
ಏನಹೇಳಲಿ ಉತ್ತರ?
ಗೈದತಪ್ಪಿಗೆ ಬದುಕಾಗಿದೆ ತತ್ತರ

ಕೊಳಕ ಕೊಳಗವ ಚೆಲ್ಲಬಿಟ್ಟು
ಶುದ್ಧಪರಿಮಳ ಇಲ್ಲವೆಂದರೆ
ಯಾರು ಕೊಡುವರು ಉತ್ತರ?
ಪಡೆಯಬೇಕಿದೆ ಕೆಟ್ಟ ವಾಸನೆ ನಿರಂತರ

ಬದಿಗೆಕರೆದು ಕಳ್ಳತನದಲಿ
ಲಂಚನೀಡಿ ಕೆಲಸ ಮಾಡಿಸಿ
ದುಡ್ಡಿನಾಸೆಯ ತೋರಿ ಕೆಡಿಸಿ
ರಾಜಕಾರ್ಯವ ನಿಂದಿಸಿದರೆ

ಯಾರು ಕೊಡುವರು ಉತ್ತರ
ಸರದಿಸಾಲಿನ ಮಧ್ಯೆತೂರಿ ಬಾಯಬಡಿದು ಬಣ್ಣಗೆಟ್ಟರೆ
ಮಾನ್ಯ ನೆಂಬ ಪದವಿ ಸಿಗುವುದೆ?

ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೆ ಉತ್ತರ
ಕಹಿಯನೀಡಿ ಸಿಹಿಯ ಬಯಸಲು
ಸಿಗದು ಎಂದಿಗು ಮಧುರತೆ

ಪರರ ಹಿತವನು ಬಯಸೆ ಮನದಲಿ
ಖುಶಿಯು ದೊರೆವುದು ಬಾಳಲಿ
ಕಣ್ಣಕನ್ನಡಿ ಸಟೆಯನಾಡದು
ದಯೆಯ ದರ್ಪಣ ಒಡೆಯಬಾರದು
ಒಗ್ಗಟ್ಟಿನಬಲ ಕುಸಿಯಬಾರದು.

*********

Leave a Reply

Back To Top