ಶ್ರದ್ದಾಂಜಲಿ

ವಿಡಂಬಾರಿ’ ಕಣ್ಮರೆ..!

Image result for photos of vidambari and his books

ಕೆ.ಶಿವು ಲಕ್ಕಣ್ಣವರ

ಖ್ಯಾತ ಚುಟುಕು ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ವಿಡಂಬಾರಿ’ ಕಣ್ಮರೆ..!

ಖ್ಯಾತ ಚುಟುಕು ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಡಂಬಾರಿ ಅವರು ಕಡತೋಕೆಯಲ್ಲಿ ತಮ್ಮ ಮಗಳ ಮನೆಯಲ್ಲಿ ನಿನ್ನೆ ನಿಧನರಾಗಿದ್ದಾರೆ…

‘ವಿಡಂಬಾರಿ’ ಕಾವ್ಯನಾಮದಿಂದ ಬರೆಯುತ್ತಿದ್ದ ವಿಷ್ಣುಗ. ಭಂಡಾರಿ ಜನಿಸಿದ್ದು 1935 ಫೆಬ್ರುವರಿ 29 ರಂದು.
‘ವಿಶಾಲ ಕರ್ನಾಟಕ’ದಲ್ಲಿ ಮೊದಲ ಚುಟುಕು ಪ್ರಕಟವಾಯಿತು. ವಿ.ಗ.ಭಂಡಾರಿ ಬದಲು ಸಂಪಾದಕರು ‘ವಿಡಂಬಾರಿ’ ಎಂದು ಬದಲಿಸಿ ಪ್ರಕಟಿಸಿದರು (ಅಂಚೆ ನೌಕರರಾಗಿದ್ದ ವಿಷ್ಣು ಅವರ ಹೆಸರಿನಲ್ಲಿಯೇ ಪ್ರಕಟವಾದರೆ ಅನವಶ್ಯಕ ತೊಂದರೆ ಎಂಬ ಕಾರಣದಿಂದ ಸಂಪಾದಕರೇ ನಾಮಧೇಯ ಬದಲಿಸಿದ್ದರು). ಮುಂದೆ ಅದುವೆ ಕಾವ್ಯನಾಮ ಆಯಿತು. ‘ವಿಡಂಬಾರಿ’ ಅವರ ಬದುಕಿಗೆ ಪಕ್ವತೆ ಬಂದದ್ದು ಭಟ್ಕಳದ ಶಿರಾಲಿಯಲ್ಲಿ. ನಿವೃತ್ತಿ ಆಗುವವರೆಗೂ ಶಿರಾಲಿಯಲ್ಲಿಯೇ ಇದ್ದರು. ಅವರ ಬದುಕಿಗೆ ಹೊಸ ಚಾಲನೆ ನೀಡಿದ್ದು ಶಿರಸಿಯ ‘ಚಿಂತನ’ ಕನ್ನಡ ಪುಸ್ತಕ ಮಳಿಗೆ…

ನಿವೃತ್ತಿಯ ನಂತರ ಜಲ್ಲಿ ಕ್ರಶ್ಶರಿನಲ್ಲಿ ಜೀವ ತೇಯುತ್ತಿದ್ದ ‘ವಿಡಂಬಾರಿ’ ಅವರು ಪುಸ್ತಕದಂಗಡಿಯ ಮ್ಯಾನೇಜರ ಆಗಿ ನೇಮಕಗೊಂಡರು. ಸ್ವಂತ ಮನೆ ಇಲ್ಲದ ಅವರು ಶಿರಸಿಗೆ ಸ್ಥಳಾಂತರವಾದರು. ಅಂದಿನಿಂದ ಪುಸ್ತಕಗಳೇ ಅವರ ದಿನಚರಿ. ವಿಡಂಬಾರಿ ಅವರು ಈವರೆಗೆ 4 ಕವನ ಸಂಕಲನ ಪ್ರಕಟಿಸಿದ್ದಾರೆ…

‘ಒಗ್ಗರಣೆ’ (1981), ‘ಕವಳ’ (1986) ‘ಕುದಿ ಬಿಂದು’ (2004) ‘ವಿಡಂಬಾರಿ ಕಂಡಿದ್ದು’ (2010) ಚುಟುಕು ಸಂಕಲನ. ‘ಅಂಚೆ ಪೇದೆಯ ಆತ್ಮ ಕಥನ’ ಅವರ ಆತ್ಮಕಥನ…

ಹೀಗೆ 7 ಪುಸ್ತಕ ಪ್ರಕಟವಾಗಿವೆ. ಇತ್ತೀಚೆಗೆ ಆನಾರೋಗ್ಯದಿಂದ ಬಳಲುತ್ತಿದ್ದ ಅವರು ಮಗಳ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಮರಣಾನಂತರ ಅವರ ಕುಟುಂಬದವರು ಕಾರವಾರ ಮೆಡಿಕಲ್ ಕಾಲೇಜಿಗೆ ‘ವಿಡಂಬಾರಿ’ ಅವರ ದೇಹದಾನ ಮಾಡಿದ್ದಾರೆ. ಬದುಕಿನ ಕೊನೆಯಲ್ಲೂ ದೇಹದಾನ ಮಾಡುವ ಮೂಲಕ ‘ವಿಡಂಬಾರಿ’ ಮಾದರಿಯಾಗಿದ್ದಾರೆ ಅವರಿಗೆ ಚಿರಶಾಂತಿ ದೊರೆಯಲೆಂದು ಹಾರೈಸೋಣ..!

*************

Leave a Reply

Back To Top