ಇರಲಿ ಬಿಡು
ಕವಿತೆ ಇರಲಿ ಬಿಡು ಸ್ಮಿತಾ ರಾಘವೆಂದ್ರ ಸಂಬಂಧಗಳು ಸವಿಯೆಂದು ಬೀಗುತಿದ್ದೆಕಳಚಿ ಬಿದ್ದಾಗಲೇ ಗೊತ್ತಾಗಿದ್ದು ಕಹಿಯೆಂದುಚಿಗುರು ಚಿವುಟಿದಮೇಲೆ ಫಲ ನೀಡುವ ಖಾತರಿ ಇಲ್ಲಸುಮ್ಮನೇ ಬೆಳೆಯಲು ಬುಡವಾದರೂಇರಲಿ ಬಿಡು. ಕಳೆದ ಕಾಲವ ತಿರುಗಿ ನೋಡುತಲಿದ್ದೆ.ಎಷ್ಟೊಂದು ನಲಿವುಗಳು ಉಸಿರ ನಿಲ್ಲಿಸಿವೆನೋವುಗಳೂ ಬಸವಳಿದು ಸುಮ್ಮನಾಗಿವೆ,ಬೇಡ ಬಾಚಿಕೊಳ್ಳುವದು ಏನನ್ನೂಹಾಗೇ ಬದುಕಲು ಭಾವಗಳಾದರೂ ಇರಲಿ ಬಿಡು. ಜೊತೆಯಿದ್ದ ನಂಬಿಕೆಯ ಜೀವಗಳ ಜತನದಲಿ ಸಲಹಿದ್ದೆಜಾಡು ಮರೆತು ಮೇಲೇರಿ ಅಣಕಿಸುತಲಿವೆಈಗ ಹಕ್ಕಿ ಗೂಡಿಗೆ ಮಾತ್ರ ಸೀಮಿತರೆಕ್ಕೆಯನೇ ಮರೆಯುವದು ಅನಿವಾರ್ಯಸೋತ ಕಾಲುಗಳಾದರೂ ಇರಲಿ ಬಿಡು. ದಟ್ಟವಾಗಿದ್ದ ಕಣ್ಣ ಕನಸಿನ ಗರಿಗಳುಒಂದೊಂದೇ […]
ಬೆಳಗು
ಕವಿತೆ ಬೆಳಗು ವೀಣಾ ನಿರಂಜನ ಈಗಷ್ಟೇ ಏಳುತ್ತಿದ್ದೇನೆಒಂದು ಸುದೀರ್ಘ ನಿದ್ರೆಯಿಂದಇನ್ನೇನು ಬೆಳಕು ಹರಿಯಲಿದೆತನ್ನದೇ ತಯಾರಿಯೊಡನೆ ಪ್ರತಿ ದಿನ ಸೂರ್ಯ ಹುಟ್ಟುತ್ತಾನೆಸೂರ್ಯನೊಂದು ಕಿರಣಕತ್ತಲೆಯ ಎದೆಯ ಹಾದುಬಗೆಯುತ್ತದೆ ಬೆಳಕು ಮೂಡುತ್ತದೆ ಬರೀ ಸೂರ್ಯ ಹುಟ್ಟಿದ್ದುಕೋಳಿ ಕೂಗಿದ್ದುಹಕ್ಕಿ ಕಲರವ ಕೇಳಿದ್ದೇ –ಬೆಳಗಾಯಿತೀಗ ಎಂಬರು ಕಾನು ಕತ್ತಲೆಯ ಸರಿಸಿಭೂಮಿ ಬೆಳಗಿದರಷ್ಟೆ ಸಾಕೇಎದೆಯ ಕತ್ತಲು ಬಗೆಯದೆಬೆಳಗಾಗುವುದೆಂತು ಸಹಸ್ರ ಬೆಳಗುಗಳ ಸೂರ್ಯಹೊತ್ತು ತರುವ ಬೆಳಕಿನ ಕಿರಣಗಳಲ್ಲಿಒಂದು ಕಿರಣ ದಕ್ಕಿದರೂ ಸಾಕುನಡು ನೆತ್ತಿಯ ಸುಟ್ಟು ಕೊಂಡುಸಾರ್ಥಕ ಈ ಬದುಕು. **************************
ಕೊಂಕಣಿ ಕವಿ ಪರಿಚಯ
ಕೊಂಕಣಿ ಕವಿ ಪರಿಚಯ ವಿಲ್ಸನ್ ಕಟೀಲ್ ವಿಲ್ಸನ್ ಕಟೀಲ್ ಕಾವ್ಯನಾಮದಿಂದ ಬರೆಯುವ ವಿಲ್ಸನ್ ರೋಶನ್ ಸಿಕ್ವೇರಾ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಟೀಲಿನವರು. ಹುಟ್ಟಿದ ದಿನಾಂಕ – 31.08.1980. ತಂದೆಯ ಹೆಸರು ಗ್ರೆಗರಿ ಸಿಕ್ವೇರಾ, ತಾಯಿ ಬೆನೆಡಿಕ್ಟ ಸಿಕ್ವೇರಾ. ಕಾರಣಾಂತರಗಳಿಂದ ಇಂಜಿನಿಯರಿಂಗ್ ವ್ಯಾಸಂಗವನ್ನು ತ್ಯಜಿಸಿ ಸಾಹಿತ್ಯದತ್ತ ಆಕರ್ಷಣೆ. ತಮಿಳು ಹಾಡುಗಳಿಂದ ಸ್ಪೂರ್ಥಿಗೊಂಡು ಕಾವ್ಯದತ್ತ ಒಲವು. ತನ್ನ ತಾಯಿಭಾಷೆ ಕೊಂಕಣಿಯಲ್ಲಿ ಕತೆ, ಕವಿತೆ, ಗೀತೆ ಹಾಗೂ ಇನ್ನಿತರ ಸಾಹಿತ್ಯ ಕೃಷಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೊಂಕಣಿಯಲ್ಲಿ ಇದುವರೆಗೆ ’ದೀಕ್ ಆನಿ ಪೀಕ್’’, […]
ಶ್ರೀದೇವಿಗೆ ಶ್ರೀ ವಿಜಯ ಪ್ರಶಸ್ತಿ
ಶ್ರೀದೇವಿಗೆ ಶ್ರೀ ವಿಜಯ ಪ್ರಶಸ್ತಿ ‘ಸಂಗಾತಿ’ಯ ಮೂರನೇ ಆಯಾಮ ಅಂಕಣಬರೆಯುತ್ತಿರುವ ಶ್ರೀದೇವಿ ಕೆರೆಮನೆಯವರಿಗೆ ಶ್ರೀ ವಿಜಯ ಪ್ರಶಸ್ತಿ ದೊರಕಿದ್ದು ಪತ್ರಿಕೆಅವರನ್ನು ಅಭಿನಂದಿಸುತ್ತದೆ ಶ್ರೀದೇವಿ ಕೆರೆಮನೆಗೆ ಶ್ರೀವಿಜಯ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ನಾಡಿನ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಶ್ರೀ ವಿಜಯ ಪ್ರಶಸ್ತಿಗೆ ಜಿಲ್ಲೆಯ ಕವಿಯತ್ರಿ, ಕಥೆಗಾರ್ತಿ, ಅಂಕಣಗಾರ್ತಿ ಶ್ರೀದೇವಿ ಕೆರೆಮನೆ ಭಾಜನರಾಗಿದ್ದಾರೆ. ಈಗಾಗಲೇ ತಮ್ಮ ಕಥೆ ಕವನ ಅಂಕಣಗಳಿಂದ ಮನೆಮಾತಾಗಿರುವ ಶ್ರೀದೇವಿ ಕೆರೆಮನೆಯವರು ಐದು ಕವನ ಸಂಕಲನ, ಐದು ಅಂಕಣ ಬರಹ ಸಂಕಲನ, ಎರಡು ಗಜಲ್ […]
ಅಂಕಣ ಬರಹ ಕಬ್ಬಿಗರ ಅಬ್ಬಿ–12 ಬಸರೀಕಟ್ಟೆ ಮತ್ತು ಬೂದಿಕಟ್ಟೆ ನಡುವಿನ ಈ ವಿಸ್ಮಯ ಆ ಇಬ್ಬರು ಆಗಲೇ ೨೭೦೦೦ ಅಡಿಗಳಷ್ಟು ಎತ್ತರ ಏರಿದ್ದರು. ಅದುವರೆಗೂ ಯಾರೂ ಏರದ ಎತ್ತರ ಅದು. ಹಿಮದ ಗಡ್ಡೆಗಳ ಇಳಿಜಾರು ಒಂದು ಕಡೆ, ದೂರ ದೂರದತ್ತ ಕಣ್ಣು ಹಾಯಿಸಿದರೆ ಕಾಣುವುದು ಬರೇ ಬಿಳಿ ಬಿಳೀ ಹಿಮ. ಅದರಡಿಯಲ್ಲಿ ಅದೆಷ್ಟು ಸಾಹಸೀ ದೇಹಗಳು ದಫನವಾಗಿವೆ ಎಂದು ಯೋಚಿಸಿ ಆತ ನಡುಗುತ್ತಾನೆ. ಬದುಕೇ ಹಾಗೆ, ಕಾಣದ ಕಾಣ್ಕೆಗೆ ಹಂಬಲಿಸುತ್ತೆ. ಎತ್ತರೆತ್ತರ ಏರಲು, ಏನೋ ಹೊಸತು..ಹೊಸ ದಿಕ್ಕು, […]
ಹಕ್ಕಿಯ ದುರಂತ
ಅನುವಾದಿತ ಕವಿತೆ ಹಕ್ಕಿಯ ದುರಂತ ವಿ.ಗಣೇಶ್ ಸಗ್ಗದ ಚೆಲುವಿನ ಹಕ್ಕಿಯು ಒಂದುಭಾನಂಗಳದಿಂದ ಧರೆಗಿಳಿದುಊರಿನ ಮನೆ ಮಂದಿರಗಳ ಮೇಲ್ಗಡೆಹಾರುತಲಿದ್ದಿತು ನಲಿನಲಿದು. ಚಿನ್ನದ ವರ್ಣದ ರನ್ನದ ರೆಕ್ಕೆಯನೀಲಿಯ ಕಂಗಳ ಆ ಹಕ್ಕಿಹಾರುತ ಬರುವುದ ನೋಡಿದ ಮಕ್ಕಳಎದೆಯಲಿ ಆನಂವೆ ಉಕ್ಕಿ ಹಕ್ಕಿಯು ಹಾರುತ ಸಾಗುವ ಜಾಡಲಿತಾವೂ ಓಡುತ ಕೆಳಗಿಂದಕೇಕೆಯ ಹಾಕುತ ನಲಿಯುತಲಿರಲುಜನ ಸೇರಿತು ಅಚ್ಚರಿಯಿಂದ ಎಂಥ ಚೆಂದದ ಚೆಲುವಿನ ಹಕ್ಕಿಏನದು ಚೆಂದ ಆ ಮೈ ಬಣ್ಣ!ಕೈಗದು ಸಿಕ್ಕರೆ ಮಾರಲು ಆಗಕೈತುಂಬ ಹಣ ಝಣ ಝಣ ಮಾರುವುದೇತಕೆ ನಾವೇ ಹಿಡಿದುಕೊಂದೇ ತಿಂದರೆ ಬಹಳ […]
ನಸುಕಿನ ಕನಸಿನಲಿ ನನ್ನವಳು
ಕವಿತೆ ನಸುಕಿನ ಕನಸಿನಲಿ ನನ್ನವಳು ಜಯಶ್ರೀ.ಭ.ಭಂಡಾರಿ .
ತಮಂಧದೆಡೆಗೆ
ಕವಿತೆ ತಮಂಧದೆಡೆಗೆ ನೂತನ ದೋಶೆಟ್ಟಿ ತುತ್ತಿಡುತ್ತ ತೋರಿದ ಚಂದಮಾಮಬೆದರಿ ಅಡಗಿದ ಮೊಲಕಣ್ಣ ಕ್ಯಾನ್ವಾಸಿನಲ್ಲಿ ಕಳೆದು ಹೋದ ಕೌತುಕ ಆಕೆಯೊಂದಿಗಿನ ಬೆಳದಿಂಗಳ ರಾತ್ರಿಕ್ಯಾಂಡಲ್ ಡಿನ್ನರ್ಭ್ರಮೆಯಲ್ಲಿ ಕರಗಿದ ಕಲ್ಪನಾ ಲೋಕ ಚಂದ್ರನ ಮೇಲೀಗ ಸೈಟ್ ಬುಕ್ಕಿಂಗ್!ನೀರಿಲ್ಲದ ಚದರಡಿಯ ಬೆಲೆ ಕೊಂಚ ಕಮ್ಮಿಪಸೆಯ ನೆಲ ಚಿನ್ನಕ್ಕೂ ಮಿಗಿಲುಲೋಡ್ ಶೆಡ್ಡಿಂಗ್ ನ ಹೋಗಲು ರಾತ್ರಿಗಳಲೂಮನೆಯ ಸ್ಕೆಚ್ಚು ತಯಾರು ಓಡುವ ಚಂದಿರನ ಹಿಡಿಯಲುಆಕಾಶಕ್ಕೆ ಇಟ್ಟು ಏಣಿಯ ಮೇಲೆವಾಮನನ ಎರಡು ಪಾದಗಳುಇನ್ನೊಂದಕ್ಕೆ ಮಂಗಳನ ಆಹ್ವಾನ ನೀರು ಗುರುತಿದ್ದರೆ ಹೇಳಿಗಾಳಿ,ಮಳೆ, ಬೆಳಕೆಲ್ಲಹುಟ್ಟುವವು ಲ್ಯಾಬಿನಲ್ಲಿನಾಳೆಗಳು ಕರೆದೊಯ್ಯಲುಬೆಳಕಿನಿಂದ ಕತ್ತಲೆಡೆಗೆ. *********************************
ಹಲವು ಭಾವಗಳನ್ನು ಒಟ್ಟಿಗೆ ಸೆರೆಹಿಡಿಯುವ ರೂಪಕಗಳು ಸೂಜಿ ಕಣ್ಣಿಂದ ತೂರಿದದಾರಕ್ಕೆ ಒಳಗಿಲ್ಲ ಹೊರಗಿಲ್ಲ ಈ ಒಂದು ಸಾಲಲ್ಲಿಯೇ ತನ್ನ ಇಡೀ ಕಾವ್ಯದ ಸತ್ವವನ್ನು ನಮ್ಮೆದುರಿಗೆ ತೆರೆದಿಟ್ಟ ಕೃಷ್ಣ ಗಿಳಿಯಾರ ಎಂಬ ವೈದ್ಯರ ಪರಿಚಯ ಯಾರಿಗಿಲ್ಲ ಹೇಳಿ. ವೃತ್ತಿಯಲ್ಲಿ ವೈದ್ಯರಾದರೂ ನವಿರು ಗೆರೆಗಳು ಅವರ ಭಾವಾಭಿವ್ಯಕ್ತಿಯ ಪ್ರತಿರೂಪ. ಭಟ್ಕಳದಲ್ಲಿ ವೈದ್ಯರಾಗಿ ಕಾರ್‍ಯ ನಿರ್ವಹಿಸುತ್ತಿರುವ ಕೃಷ್ಣ ಗಿಳಿಯಾರರ ಕ್ಯಾಮರಾಕ್ಕೆ ಫೋಸ್ ನೀಡಲೆಂದೇ ಬಹಳಷ್ಟು ಹೂವುಗಳು ಅರಳುತ್ತವೆ. ಹೆಚ್ಚಿನ ಪಕ್ಷಿಗಳು ಅವರೆದುರು ಹೊಸ ಮದುವಣಗಿತ್ತಿಯಂತೆ ನುಲಿಯುತ್ತ ನಡೆಯುತ್ತವೆ. ಸೂರ್‍ಯ ಬಳಕುತ್ತ ತನ್ನದೊಂದು […]
ಪಾಲಿಸೋ ಹೂವ ನಾನು ಚಿಕ್ಕವಳಿದ್ದಾಗ ಊರಿನ ಆಂಜನೇಯ ದೇವಸ್ಥಾನದ ದೇವರ ಪಲ್ಲಕ್ಕಿ ವರುಷಕ್ಕೊಮ್ಮೆ ನಮ್ಮ ಮನೆಗೆ ಬರುತ್ತಿತ್ತು. ಮನೆಯ ಹಿರಿಯರೆಲ್ಲರೂ ಭಯ-ಭಕ್ತಿಗಳಿಂದ ದೇವರನ್ನು ಸ್ವಾಗತಿಸಲು ಸಿದ್ಧರಾದರೆ, ನನ್ನ ಮನಸ್ಸಿನಲ್ಲೊಂದು ವಿಚಿತ್ರವಾದ ಸಡಗರ ತುಂಬಿಕೊಳ್ಳುತ್ತಿತ್ತು. ಕಲ್ಲು-ಮುಳ್ಳು ಬಿಸಿಲು ಯಾವುದನ್ನೂ ಲೆಕ್ಕಿಸದೆ ಮಡಿಬಟ್ಟೆಯಲ್ಲಿ ಪಲ್ಲಕ್ಕಿ ಹೊರುತ್ತಿದ್ದ ಗಂಡಸರು, ಅವರ ಕಾಲುಗಳನ್ನು ತಣ್ಣೀರಿನಿಂದ ತೊಳೆದು ಹಳೆಹಾಡುಗಳನ್ನು ಹಾಡುತ್ತ ಪಲ್ಲಕ್ಕಿಯನ್ನು ಸ್ವಾಗತಿಸುತ್ತಿದ್ದ ಹೆಂಗಸರು, ದೇವರು-ಶಾಸ್ತ್ರ ಯಾವುದರ ಬಗ್ಗೆಯೂ ಸ್ಪಷ್ಟ ಕಲ್ಪನೆಯಿಲ್ಲದೆ ದೇವರ ಆಗಮನವನ್ನು ನೆಂಟರು ಬಂದಂತೆ ಸಂಭ್ರಮಿಸುತ್ತಿದ್ದ ಮಕ್ಕಳು ಹೀಗೆ ಬಿಡಿಬಿಡಿಯಾದ ಪ್ರಪಂಚಗಳನ್ನು […]