ಕೊಂಕಣಿ ಕವಿ ಪರಿಚಯ

ಕೊಂಕಣಿ ಕವಿ ಪರಿಚಯ

ವಿಲ್ಸನ್ ಕಟೀಲ್

ವಿಲ್ಸನ್ ಕಟೀಲ್ ಕಾವ್ಯನಾಮದಿಂದ ಬರೆಯುವ ವಿಲ್ಸನ್ ರೋಶನ್ ಸಿಕ್ವೇರಾ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಟೀಲಿನವರು. ಹುಟ್ಟಿದ ದಿನಾಂಕ – 31.08.1980. ತಂದೆಯ ಹೆಸರು ಗ್ರೆಗರಿ ಸಿಕ್ವೇರಾ, ತಾಯಿ ಬೆನೆಡಿಕ್ಟ ಸಿಕ್ವೇರಾ.

ಕಾರಣಾಂತರಗಳಿಂದ ಇಂಜಿನಿಯರಿಂಗ್ ವ್ಯಾಸಂಗವನ್ನು ತ್ಯಜಿಸಿ ಸಾಹಿತ್ಯದತ್ತ ಆಕರ್ಷಣೆ. ತಮಿಳು ಹಾಡುಗಳಿಂದ ಸ್ಪೂರ್ಥಿಗೊಂಡು ಕಾವ್ಯದತ್ತ ಒಲವು. ತನ್ನ ತಾಯಿಭಾಷೆ ಕೊಂಕಣಿಯಲ್ಲಿ ಕತೆ, ಕವಿತೆ, ಗೀತೆ ಹಾಗೂ ಇನ್ನಿತರ ಸಾಹಿತ್ಯ ಕೃಷಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೊಂಕಣಿಯಲ್ಲಿ ಇದುವರೆಗೆ ’ದೀಕ್ ಆನಿ ಪೀಕ್’’, ’ಪಾವ್ಳೆ’, ’ಎನ್‍ಕೌಂಟರ್’ ಕವನ ಸಂಕಲನಗಳು ಪ್ರಕಟವಾಗಿವೆ. ದೂರದರ್ಶನ, ಆಕಾಶವಾಣಿ. ದಸರಾ ಕವಿಗೋಶ್ಟಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕವಿಗೋಷ್ಟಿಗಳಲ್ಲಿ ಭಾಗವಹಿಸಿದ್ದಾರೆ. ಮೂರು ಬಾರಿ ಅತ್ಯುತ್ತಮ ಗೀತರಚನೆಗಾಗಿ, ಮಾಂಡ್ ಸೊಭಾಣ್ ಸಂಸ್ಥೆ ಕೊಡಮಾಡುವ ಜಾಗತಿಕ ಸಂಗೀತ ಪುರಸ್ಕಾರಕ್ಕೆ ಭಾಜನರಾಗಿದ್ಡಾರೆ. ಇವರಿಗೆ ’ಕಿಟಾಳ್ ಯುವ ಪುರಸ್ಕಾರ’ವೂ  ಪ್ರಾಪ್ತಿಯಾಗಿದೆ. “ಎನ್ ಕೌಂಟರ್” ಕವನ ಸಂಕಲನಕ್ಕೆ 2017 ರ ಪ್ರತಿಷ್ಠಿತ ವಿಮಲಾ ವಿ ಪೈ ಕಾವ್ಯ ಪುರಸ್ಕಾರ ಪ್ರಾಪ್ತಿಯಾಗಿದೆ.

ಕನ್ನಡದಲ್ಲೂ ಅಪರೂಪಕ್ಕೆ ಬರೆಯುತ್ತಿದ್ದ ಇವರ ಕವಿತೆಗಳು, ಪಂಜು ಅಂತರ್ಜಾಲ ಪತ್ರಿಕೆ, ಗೌರಿ ಲಂಕೇಶ್, ಹೊಸತು, ಸುಧಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಗಿರೀಶ್ ಹಂದಲಗೆರೆ ಸಂಪಾದಕತ್ವದ ಅರಿವೇ ಅಂಬೇಡ್ಕರ್, ಕಾವ್ಯಮನೆ ಪ್ರಕಾಶನದ ಕಾವ್ಯಕದಳಿ ಸಂಕಲನಗಳಲ್ಲಿ ಇವರ ಕವಿತೆಗಳು ಸೇರಿವೆ. ಕೈದಿಗಳ ಒಳಿತಿಗಾಗಿ ಶ್ರಮಿಸುವ PRISON MINISTRY OF INDIA ಪುರವಣಿಯಲ್ಲಿ ಇವರ ಕವಿತೆ ಪ್ರಕಟಗೊಂಡಿದೆ.

ಟಿ.ಎಸ್. ಗೊರವರ್ ಸಂಪಾದಕತ್ವದ ’ಸಂಗಾತ’ ಪತ್ರಿಕೆಯ ಮೊದಲ ಸಂಚಿಕೆಯಲ್ಲಿ ಇವರ ಕವಿತೆಗಳು ಪ್ರಕಟಗೊಂಡು ಕಾವ್ಯಾಸಕ್ತರ ಗಮನ ಸೆಳೆದವು. ನಂತರ ’ಸಂಗಾತ ಪತ್ರಿಕೆ’ ಪ್ರಕಾಶನದಿಂದಲೇ ಇವರ ಮೊದಲ ಸಂಕಲನ ’ನಿಷೇಧಕ್ಕೊಳಪಟ್ಟ ಒಂದು ನೋಟು’ ಪ್ರಕಟಗೊಂಡಿತು. ಈ ಸಂಕಲನಕ್ಕೆ ಆರಿಫ್ ರಾಜಾ ಇವರ ಮುನ್ನುಡಿಯಿದೆ. ಈ ಸಂಕಲನಕ್ಕೆ ’ಯುವಕವಿಗಳ ಪ್ರಥಮ ಸಂಕಲನ’ ವಿಭಾಗದ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ.

ಪ್ರಸ್ತುತ “ಆರ್ಸೊ’ ಕೊಂಕಣಿ ಮಾಸಿಕ ಪತ್ರಿಕೆಯ ಸಂಪಾದಕ ಹಾಗೂ ’ಕಿಟಾಳ್’ ಸಾಹಿತ್ಯ ಜಾಲತಾಣದ ಉಪ ಸಂಪಾದಕಾರಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ, ಪತ್ನಿ ಪ್ರಿಯಾ ಹಾಗೂ ಇಬ್ಬರು ಮಕ್ಕಳೊಂದಿಗೆ ಕಟೀಲಿನಲ್ಲಿ ವಾಸ. ಸಾಹಿತ್ಯವಲ್ಲದೆ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

ಅವರ ಎರಡು ಕೊಂಕಣಿ ಕವಿತೆಗಳು ನಿಮ್ಮ ಓದಿಗಾಗಿ.

ಕೊಂಕಣಿ, ಕನ್ನಡ ಎರಡೂ ಭಾಷೆಯಲ್ಲಿ ವಿಲ್ಸನ್ ಕಟೀಲ್ ಅವರೇ ಬರೆದಿದ್ದಾರೆ.

ಸಾಂತ್

ಭುರ್ಗ್ಯಾನ್ ಎದೊಳ್ ಚ್

ಬೊಂಬ್ಯಾಕ್

ಪೊಟ್ಲುನ್ ಧರುನ್

ಏಕ್ ದೋನ್ ಉಮೆಯ್

ದೀವ್ನ್ ಜಾಲ್ಯಾತ್…

ಪುಣ್

ವ್ಹಡಾಂಚಿ ವಾರ್ಜಿಕ್

ಆಜೂನ್ ಸಂಪೊಂಕ್ ನಾ!

**

ಉಮ್ಕಳ್ಚಿಂ ವಸ್ತುರಾಂ

ವಿಂಚ್ತೇ ಆಸಾತ್-

ಆಪಾಪ್ಲ್ಯಾ ರಂಗ್

ಜೋಕ್

ಗಿರೇಸ್ತ್ ಕಾಯೆಕ್

ಜೊಕ್ತ್ಯಾ ಕುಡಿಂಕ್!

**

ನವ್ಯೊ ವ್ಹಾಣೊ

ಕಟೀಣ್ ತೊಪ್ತಾತ್…

ದುಬ್ಳ್ಯಾ ವ್ಯಾರಾಗಾರಾನ್

ಮಾತ್ಯಾರ್ ಘೆವ್ನ್

ಗಾಂವಾನ್ ಗಾಂವ್ ಭೊಂವ್ಡಾಯಿಲ್ಲ್ಯಾ ತಾಂಕಾಂ

ಥೊಡೊ ವೇಳ್ ಲಾಗ್ತಾ-

ಗಿರಾಯ್ಕಾಚ್ಯಾ ಪಾಂಯಾಂಕ್ ಹೊಂದೊಂಕ್!

*

ಪಾತ್ಳಾಯ್ಲ್ಯಾಂತ್ ಆಯ್ದಾನಾಂ..

ಪುಣ್ ಥೊಡ್ಯಾಂಕ್ ಮಾತ್ರ್

ತಿಚ್ಯೆ ಬುತಿಯೆಚೆರ್ ಚ್ ದೊಳೊ!

*

ಕೊಣಾಚ್ಯಾಗೀ ಹಾತಾ-ಗಿಟಾಚೆರ್

ಆಪ್ಲೊ ಫುಡಾರ್ ಸೊಧ್ತಾತ್

ಭವಿಶ್ಯ್ ಸಾಂಗ್ಚೆ!

*

ಭಾಜ್ ಲ್ಲೆ ಚಣೆಂ

ಗುಟ್ಲಾಯಿಲ್ಲ್ಯಾ ಕಾಗ್ದಾಂನಿ

ಪರತ್ ಉಬೆಲ್ಯಾತ್

ಪರ್ನ್ಯೊ ಖಬ್ರೊ!

*

ಹಾತ್ ಒಡ್ಡಾಯ್ಲಾ ಭಿಕಾರ್ಯಾನ್…

ಹರ್ದೆಂ ಉಸವ್ನ್ ಪಡ್ಲ್ಯಾತ್

ವಿಕುನ್ ವಚನಾತ್ ಲ್ಲಿಂ

ರಿತಿಂ ಪರ್ಸಾಂ!

****************

ಸಂತೆಯ ಬಿಡಿ ಚಿತ್ರಗಳು

*

ಮಗು ಈಗಾಗಲೇ

ಗೊಂಬೆಯನ್ನು ಎದೆಗಪ್ಪಿ

ಒಂದೆರಡು ಮುತ್ತುಗಳನ್ನೂ

ಕೊಟ್ಟಾಗಿದೆ…

ದೊಡ್ಡವರ

ಚಿಲ್ಲರೆ ಚೌಕಾಸಿಯಿನ್ನೂ ಮುಗಿದಿಲ್ಲ!

*

ಜೋಡಿಸಿಟ್ಟ ಬಟ್ಟೆಗಳು

ಹುಡುಕುತ್ತಿವೆ-

ತಂತಮ್ಮ ಬಣ್ಣ,

ಅಳತೆ,

ಶ್ರೀಮಂತಿಕೆಗೆ

ತಕ್ಕ ದೇಹಗಳನ್ನು!

*

ಹೊಸ ಚಪ್ಪಲಿಗಳು

ವಿಪರೀತ ಚುಚ್ಚುತ್ತಿವೆ…

ಬಡ ವ್ಯಾಪಾರಿ

ತಲೆಮೇಲೆ ಹೊತ್ತು 

ಊರೂರು ಸುತ್ತಿದ ಅವುಗಳಿಗೆ

ಕೆಲಕಾಲ ಹಿಡಿಯುತ್ತೆ…

ಗಿರಾಕಿಯ ಪಾದಗಳಿಗೆ ಹೊಂದಿಕೊಳ್ಳಲು!

*

ಹರಡಿಕೊಂಡಿವೆ ಪಾತ್ರೆಗಳು…

ಕೆಲವರಿಗಂತೂ

ಅವಳ ಬುತ್ತಿಯ ಮೇಲೆಯೇ ಕಣ್ಣು!

*

ಯಾರದೋ ಕೈರೇಖೆಗಳಲ್ಲಿ

ತಮ್ಮ ಬದುಕು ಹುಡುಕುತ್ತಿದ್ದಾರೆ

ಭವಿಷ್ಯ ಹೇಳುವವರು!

*

ಹುರಿದ ಕಡಲೆ ಕಟ್ಟಿದ ಪತ್ರದಲ್ಲಿ

ಮತ್ತೆ ಬೆಚ್ಚಗಾಗಿವೆ

ಹಳೆಯ ಸುದ್ದಿಗಳು!

*

ಕೈಚಾಚಿದ್ದಾನೆ ಭಿಕ್ಷುಕ…

ಎದೆತೆರೆದು ಬಿದ್ದುಕೊಂಡಿವೆ

ಮಾರಿ ಹೋಗದ

ಖಾಲಿ ಪರ್ಸುಗಳು!

**

ಪತ್ರ್

ಕೊಯ್ತೆಚೆ ವೋಂಟ್ ಪುಸ್‌ಲ್ಲೆಂ ಕಾಗತ್

ಭಾಯ್ರ್ ಉಡಯ್ತಚ್

ಸುಟಿ ಕೆಲ್ಲ್ಯೆ ಮಾಸ್ಳೆಚ್ಯೆ ಹಿಮ್ಸಣೆಕ್

ಸೆಜ್ರಾಮಾಜ್ರಾಂಮದೆಂ ಝುಜ್!

ಪಳೆವ್ನ್

ಬೊಟಾಂ ವಾಡನಾತ್ಲ್ಯಾ ಪೊರಾಂಕ್‌ಯೀ

ತಲ್ವಾರ್ ಧರ‍್ಚೆಂ ಧಯ್ರ್!

ಚಿಮ್ಣೆಚಿ ಜೀಬ್ ಲಾಗಯಿಲ್ಲೆಂ ಕಾಗತ್

ರಾಂದ್ಣಿಕ್ ಪಾವಯ್ತಚ್

ಸುಕ್ಯಾ ಲಾಂಕ್ಡಾಂಕ್

ಭಗ್ಗ್ ಕರ‍್ನ್ ಧರ‍್ಚೊ ಉಜೊ!

ಪಳೆವ್ನ್

ಆಂಗ್ ನಿಂವ್‌ಲ್ಲ್ಯಾ ಮ್ಹಾತಾರ‍್ಯಾಂಕ್‌ಯೀ

ಧಗ್ ಘೆಂವ್ಚಿ ವೊಡ್ಣಿ!

ಮ್ಹಜ್ಯಾ ಗಾಂವಾಂತ್

ಪತ್ರ್

ಕೊಣೀ ವಾಚಿನಾಂತ್

ಫಕತ್ ವಾಪಾರುನ್ ಉಡಯ್ತಾತ್!

********

ಪತ್ರಿಕೆ

ಕತ್ತಿಯ ತುಟಿ ಒರೆಸಿದ ಕಾಗದ

ಹೊರಕ್ಕೆಸೆದಾಗ

ಕತ್ತರಿಸಿದ ಮೀನಿನ ವಾಸನೆಗೆ

ನೆರೆಕರೆಯ ಬೆಕ್ಕುಗಳ ಮಧ್ಯೆ ಮಹಾ ಯುದ್ಧ!

ನೋಡುತ್ತಿದ್ದಂತೆಯೇ –

ಬೆರಳು ಮೊಳೆಯದ ಪೋರರಿಗೂ

ತಲವಾರು ಹಿಡಿಯುವ ಧೈರ್ಯ!

ಚಿಮಣಿಯ ನಾಲಗೆ ಸ್ಪರ್ಷಿಸಿದ ಕಾಗದ

ಒಲೆಯ ಒಳ ಹೊಕ್ಕಾಗ

ಒಣ ಕಟ್ಟಿಗೆಗೆ

ಭಗ್ಗನೆ ಹತ್ತಿಕೊಳ್ಳುವ ಜ್ವಾಲೆ!

ನೋಡುತ್ತಿದ್ದಂತೆಯೇ

ಕಾವು ಆರಿದ ಮುದುಕರಿಗೂ

ಬೆಂಕಿ ನೆಕ್ಕುವ ಹುಚ್ಚು!

ನನ್ನ ಊರಿನಲ್ಲಿ

ಪತ್ರಿಕೆಯನ್ನು

ಯಾರೂ ಓದುವುದಿಲ್ಲ….

ಬಳಸಿ ಎಸೆಯುತ್ತಾರೆ ಅಷ್ಟೆ!

*************************************************

ಶೀಲಾ ಭಂಡಾರ್ಕರ್

Leave a Reply

Back To Top