ಬೆಳಗು

ಕವಿತೆ

ಬೆಳಗು

ವೀಣಾ ನಿರಂಜನ

white daisy flowers

ಈಗಷ್ಟೇ ಏಳುತ್ತಿದ್ದೇನೆ
ಒಂದು ಸುದೀರ್ಘ ನಿದ್ರೆಯಿಂದ
ಇನ್ನೇನು ಬೆಳಕು ಹರಿಯಲಿದೆ
ತನ್ನದೇ ತಯಾರಿಯೊಡನೆ

ಪ್ರತಿ ದಿನ ಸೂರ್ಯ ಹುಟ್ಟುತ್ತಾನೆ
ಸೂರ್ಯನೊಂದು ಕಿರಣ
ಕತ್ತಲೆಯ ಎದೆಯ ಹಾದು
ಬಗೆಯುತ್ತದೆ ಬೆಳಕು ಮೂಡುತ್ತದೆ

ಬರೀ ಸೂರ್ಯ ಹುಟ್ಟಿದ್ದು
ಕೋಳಿ ಕೂಗಿದ್ದು
ಹಕ್ಕಿ ಕಲರವ ಕೇಳಿದ್ದೇ –
ಬೆಳಗಾಯಿತೀಗ ಎಂಬರು

ಕಾನು ಕತ್ತಲೆಯ ಸರಿಸಿ
ಭೂಮಿ ಬೆಳಗಿದರಷ್ಟೆ ಸಾಕೇ
ಎದೆಯ ಕತ್ತಲು ಬಗೆಯದೆ
ಬೆಳಗಾಗುವುದೆಂತು

ಸಹಸ್ರ ಬೆಳಗುಗಳ ಸೂರ್ಯ
ಹೊತ್ತು ತರುವ ಬೆಳಕಿನ ಕಿರಣಗಳಲ್ಲಿ
ಒಂದು ಕಿರಣ ದಕ್ಕಿದರೂ ಸಾಕು
ನಡು ನೆತ್ತಿಯ ಸುಟ್ಟು ಕೊಂಡು
ಸಾರ್ಥಕ ಈ ಬದುಕು.

    **************************

3 thoughts on “ಬೆಳಗು

Leave a Reply

Back To Top