ಅಂಕಣ ಬರಹ ಜ್ಞಾನಪಾನ ಭಕ್ತಿ ಜ್ಞಾನಗಳನ್ನು ಪ್ರೇರಿಸುವ ಕೃತಿ ಕೃತಿಯ ಹೆಸರು : ಜ್ಞಾನಪಾನಪ್ರಕಾಶಕರು : ಶ್ರೀ ಅಯ್ಯಪ್ಪ ಭಕ್ತ ಸಭಾ , ಚೆನ್ನೈಪ್ರಕಟಣಾ ವರ್ಷ : ೨೦೨೦ಪುಟಗಳು : ೩೨ ಹದಿನಾರನೆಯ ಶತಮಾನದಲ್ಲಿ ಭಾರತದಾದ್ಯಂತ ನಡೆದ ಭಕ್ತಿ ಚಳುವಳಿಯ ಸಂದರ್ಭದಲ್ಲಿ ಮಲೆಯಾಳ ಭಕ್ತಿ ಕಾವ್ಯ ರಚನೆ ಮಾಡಿದವರಲ್ಲಿ ಪ್ರಮುಖರು ಪೂಂದಾನಂ ನಂಬೂದಿರಿ. ಕನ್ನಡದಲ್ಲಿ ರಚನೆಯಾದ ದಾಸ ಸಾಹಿತ್ಯದಷ್ಟು ವ್ಯಾಪಕವಾದ ವಸ್ತು ವೈವಿಧ್ಯಗಳಿಲ್ಲದಿದ್ದರೂ ಮಲೆಯಾಳದಲ್ಲಿ ಪೂಂದಾನಂ, ಚೆರುಶ್ಶೇರಿ ನಂಬೂದಿರಿ, ತುಂಜತ್ತ್ ಎಳುತ್ತಚ್ಛನ್, ನಾರಾಯಣ ಭಟ್ಟಾತಿರಿಪ್ಪಾಡ್ ಮೊದಲಾದ ಭಕ್ತಿ […]
ಮೊಬೈಲಾಯಣ
ಕವಿತೆ ಮೊಬೈಲಾಯಣ ಪೂರ್ಣಿಮಾ ಸುರೇಶ್ ಹಳೆಯದು,ಉಪಯೋಗಕ್ಕೆ ಬಾರದು ಎಂದು ಸರಿಸಿಟ್ಟಮೂಲೆ ಸೇರಿದ ಮೊಬೈಲ್ಇಂದು ಅಚಾನಕ್ ಸಿಕ್ಕಿದೆ ಗಾತ್ರದಲ್ಲಿ ಚಿಕ್ಕದುಅಡ್ಡಡ್ಡ ತರಚಿದ ಕವಚಪರದೆ ದೃಷ್ಟಿ ಮಂದಇದರ ಮಿದುಳಲ್ಲಿ ನಾನು ಎಷ್ಟೊಂದು ಭಾವರಸ, ಚಿತ್ರಪಟಕಸವನ್ನೂ ತುಂಬಿಟ್ಟಿದ್ದೆಬೇಕಾದಾಗ ನೆರವಾಗುವುದೆಂದು ನಂಬಿದ್ದೆ ಕುತೂಹಲ ಆಶ್ಚರ್ಯಕರಹಿಡಿಯಲ್ಲಿ ಬ್ರಹ್ಮಾಂಡಧರ ಅಳಿಸದ ಮಾತು ತಳದಲ್ಲಿ ಉಳಿದಿರಬಹುದೇನನ್ನೊಡನೆ ಅನುಸಂಧಾನ ನಡೆಸಬಹುದೇಬಿಚ್ಚದೆ ರೆಕ್ಕೆ ತೆಪ್ಪಗಿದೆಚಾರ್ಜರ್ ಗೆ ಸಿಕ್ಕಿಸಿದೆಧ್ಯಾನಬಿಂದು ಮಿನುಗುವಂತೆಆಹಾ! ಕೆಂಪು ಚುಕ್ಕಿ ಅತ್ತ ಸರಿದು ದಿಟ್ಟಿಸಿದೆಈಡಾಗಿ ಸೂಕ್ಷ್ಮ ಸೆಳೆತಕ್ಕೆ ಈಗ ತನ್ನನ್ನು ತಾನೇತೆರೆದುಕೊಂಡಿತು ಕ್ಷಣಾರ್ಧದಲ್ಲಿನನ್ನ ಮೊಗದಲ್ಲಿ ಮುಗುಳ್ನಗೆಯ ಚೆಲ್ಲಿ- ಜಾತ್ರೆಯಲ್ಲಿ […]
ನೋವಮೌನ-ಅನಾಥನಲಿವು
ಕವಿತೆ ನೋವಮೌನ-ಅನಾಥನಲಿವು ಮಮತ ಅರಸೀಕೆರೆ ಸುಡುವ ಆಲೋಚನೆಗಳ ಹೊರೆಭಾರದಲ್ಲಿ ಮಗ್ಗುಲು ಬದಲಾಯಿಸಿದ ಅವಳ ನಿಟ್ಟುಸಿರು ಅತ್ಯಾಚಾರದ ಕನಸು ಕಂಡು ದಡಕ್ಕನೆ ಎಚ್ಚರಗೊಂಡ ಬೆಲೆವೆಣ್ಣ ಸಾಂದ್ರಗೊಂಡ ನಿರಾಳತೆ ಗದರಿಕೆಗೆ ಬೆದರಿ ಕೈಮುಷ್ಟಿ ಹಿಡಿದು ಸ್ಥಂಭೀಭೂತವಾಗಿ ನಿಂತ ಅಬೋಧ ಬಾಲನ ಬೆರಗು ಕಣ್ಣುಮೊಲೆಹಾಲು ಕುಡಿದು ಕಟುವಾಯಿಯಲ್ಲಿ ಇಳಿಯುವಾಗಲೇ ಅಂಗಾತವಾದ ನಿದ್ದೆಗಣ್ಣ ಬೊಮ್ಮಟೆ ನಗು ಬವಣೆಗಳನ್ನೆಲ್ಲ ಬರಹವಾಗಿಸಿದ ಅಪೂರ್ಣ ಡೈರಿಯ ಇನ್ನರ್ಧ ಖಾಲಿಪುಟಗಳ ಚಡಪಡಿಕೆಬರೆಯುತ್ತಲೇ ಅತ್ಯುತ್ಸಾಹಕ್ಕೆ ಸ್ತಬ್ಧವಾದ ಸಾಲುಗಳ ನಡುವಿನ ರೂಪಣಾತ್ಮಕ ಧ್ವನ್ಯಾರ್ಥ ಪ್ರಯಾಣದ ನಡುವೆಯೇ ತಿರುವು ರಸ್ತೆಯಲ್ಲಿ ತಟಕ್ಕನೆ ಕೆಟ್ಟು […]
ಜನ್ನತ್ ಮೊಹಲ್ಲಾ
ಕಥೆಗಾರ, ಕಾದಂಬರಿಕಾರ ಅಬ್ಬಾಸ ಮೇಲಿನಮನಿಯವರು ಇವತ್ತು ನಮ್ಮನ್ನಗಲಿದ್ದಾರೆ. ಅವರ ಜನ್ನತ್ ಮೊಹಲ್ಲಾ ಎಂಬ ಕಾದಂಬರಿ ಕುರಿತು ಸುನಂದಾ ಕಡಮೆ ಬರೆದಿದ್ದಾರೆ ಜನ್ನತ್ ಮೊಹಲ್ಲಾ ಸುನಂದಾ ಕಡಮೆ ಅಬ್ಬಾಸ ಮೇಲಿನಮನಿಯವರ ಹೆಂಗರುಳು ತುಂಬಿದ ‘ಜನ್ನತ್ ಮೊಹಲ್ಲಾ’ ಎರಡು ಓದಿನ ನಂತರ ಈ ಜನ್ನತ್ ಮೊಹಲ್ಲಾದಲ್ಲಿ ಎರಡು ದಿನ ಇದ್ದು ವಿಶ್ರಮಿಸಿ ಬಂದಂತೆ ಪಾತ್ರಗಳು ಸಂಭಾಷಣೆಗಳು ಘಟನೆಗಳು ಪುನಃ ಪುನಃ ಕಾಡತೊಡಗಿದವು. ಅಚ್ಚರಿಯೆಂದರೆ ಇಲ್ಲಿಯ ಹೆಣ್ಣು ಮಕ್ಕಳಿಗೆ ಹಿಂಸೆಯೆನಿಸದ ಸ್ವಾತಂತ್ರ್ಯವಿದೆ ಮತ್ತು ಕಕ್ಕುಲಾತಿಯ ಬಂಧನಗಳಿವೆ. ನಂಬಿಕೆಗಳಿಗೆ ಕಟ್ಟುಬೀಳದೇ […]
ವಾರದ ಕವಿತೆ
ಮಕ್ಕಳಹಾಡು ದೂರವಿರಲಾಗದ ಹಾಡು ಶ್ರೀದೇವಿ ಕೆರೆಮನೆ ಶಾಲೆಗೆ ಬರಲೇ ಬೇಕು ಅಂತಕರೆದರೆ ಹೋಗದೇ ಏನು ಮಾಡೋದುದೂರದೂರ ಕುಳಿತುಕೋ ಅಂದರೆಒಬ್ಬಳೇ ಹೇಗೆ ಕೂರೋದು ಅಕ್ಕಪಕ್ಕ ಗೆಳತಿಯರಿಲ್ಲ ಅಂದ್ರೆಅಕ್ಕೋರು ಹೇಳೋ ಪಾಠ ತಿಳಿಯೋದು?ಅದು ಹೇಗೆ ನಾವು ಗೆಳತಿಯರೇ ಇದ್ರೆಮಾತಾಡುವಾಗಲೂ ದೂರ ನಿಲ್ಲೋದು ಮುಖಕ್ಕೆ ಮಾಸ್ಕು ಹಾಕ್ಕೋಂಡಿದ್ರೆಗೊತ್ತಾಗಲ್ಲ ರಾಣಿ ನಗೋದುಮೂಗು ಬಾಯಿ ಮುಚ್ಕೊಂಡಿದ್ರೆಶುದ್ಧಗಾಳಿ ಹೇಗೆ ಸಿಗೋದು ಅಣ್ಣನಿಗೆ ಪರೀಕ್ಷೆಯಂತೆ ಮುಂದಿನವಾರಹೆದರಿಕೆಲ್ಲಿ ಓದಿದ್ದು ಹೇಗೆ ನೆನಪಿರೋದುಪರೀಕ್ಷೆ ಬರೆಯೋಕೆ ಭಯ ಇಲ್ಲವಂತೆಬರೋದಿಲ್ಲ ಮಾಸ್ಕು ಹಾಕಿ ಉಸಿರಾಡೋದು ಶಾಲೆಗೆ ಹೋಗು ಅಂತ ಬೈಯ್ತಿದ್ದ ಅಮ್ಮಂಗೆಬೇಡವಂತೆ ಶಾಲೆ […]
ಕಾಡಿನಲ್ಲಿ ಕಾಡಿದ ಭೂತ
ಅನುವಾದಿತ ಕಥೆ ಕಾಡಿನಲ್ಲಿ ಕಾಡಿದ ಭೂತ ಇಂಗ್ಲೀಷ್ ಮೂಲ: ಆರ್.ಕೆ.ನಾರಾಯಣ್ ಬಹಳ ವರ್ಷಗಳ ಹಿಂದೆ ನಡೆದ ಘಟನೆ. ನೀವು ನಂಬುತ್ತೀರೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ಘಟನೆ ನಡೆದುದು ಮಾತ್ರ ಸತ್ಯ. ನಾನು ಆಗ ಕಾರಿನಲ್ಲಿ ಹೋಗುತ್ತಿದ್ದೆ. ಆಗ ನನ್ನ ಕಾರಿನ ಚಾಲಕ ದಾಸಪ್ಪ ತುಂಬ ಸಭ್ಯವಾದ ವ್ಯಕ್ತಿ. ಆದರೆ ಆ ದಿನ ಅವನು ಯಾಕೆ ಹಾಗೆ ವರ್ತಿಸಿದನೋ ಗೊತ್ತಿಲ್ಲ. ಅವನು ತುಂಬಾ ಕುಡಿದಿದ್ದಿರಬಹುದು. ಏನೇ ಆಗಲಿ, ನಿಮ್ಮ ಕುತೂಹಲಕ್ಕಾಗಿ ಈ ಕಥೆಯನ್ನು […]
ಕಾಡುವ ಕವಿತೆಗೆ
ಕವಿತೆ ಕಾಡುವ ಕವಿತೆಗೆ ಅಬ್ಳಿ,ಹೆಗಡೆ ಹೊತ್ತಿಲ್ಲ ಗೊತ್ತಿಲ್ಲಕಾಡುವಾ ಕವಿತೆ.ಬೇಕೆಂದು ಕರೆದಾಗನೀನೆಲ್ಲಿ ಅವಿತೆ..?ಬಂದಿಲ್ಲಿ ಅಕ್ಕರೆಯಸಕ್ಕರೆಯ ನೀಡು.ನನ್ನೆದೆಯ ಅಕ್ಕರದಿನೀ…ನಾಟ್ಯವಾಡು.ಕಂಕುಳಲಿ ಕೈಯ್ಯಿಟ್ಟುಗಿಲಗಿಚ್ಚಿಯಾಡಿ.ನೋವಲ್ಲು ನಗಿಸುತ್ತಮಾಡುವೆಯೆ ಮೋಡಿ.ತುಂಟಾಟವಾಡುತಲಿಕಳೆದೆನ್ನ ‘ಹಮ್ಮು’.ತಂಟೆಮಾಡದೆ ಒಳಗೆಉಳಿಯೆ ‘ಖಾಯಮ್ಮು’.! ****************************************
ಅಂಕಣ ಬರಹ ಗಂಗಾವತಿಯ `ಜಜ್ಬ್’ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಉರ್ದು ಪಂಡಿತರ ಪಡೆಯೊಂದು ಈಚಿನವರೆಗೂ ಇತ್ತು. ನಿಜಾಂ ಸಂಸ್ಥಾನದಲ್ಲಿ ಉರ್ದು ಆಡಳಿತ ಹಾಗೂ ಶಿಕ್ಷಣದ ಭಾಷೆಯಾಗಿದ್ದು, ಸಹಜವಾಗಿಯೇ ಈ ಭಾಗದ ಎಲ್ಲ ಜಾತಿಮತಗಳ ಜನ ಉರ್ದುವಿನಲ್ಲಿ ಶಿಕ್ಷಣ ಪಡೆದರು. ಅವರಲ್ಲಿ ಕೆಲವರು ಆಡಳಿತಾತ್ಮಕ ಉರ್ದುವಿನಲ್ಲಿ ವಿಶೇಷ ಪರಿಣತಿ ಪಡೆದುಕೊಂಡರು. 1948ರಲ್ಲಿ ಸಂಸ್ಥಾನವು ಭಾರತ ಒಕ್ಕೂಟದಲ್ಲಿ ವಿಲೀನಗೊಂಡಿತು. ಹಳೇ ಗುಲಬರ್ಗ ಬೀದರ್ ರಾಯಚೂರು ಜಿಲ್ಲೆಗಳು ಏಕೀಕೃತ ಕರ್ನಾಟಕದ ನಕ್ಷೆಯೊಳಗೆ ಬಂದವು. ಈ ರಾಜಕೀಯ ಪಲ್ಲಟವು ಉರ್ದು ಪಂಡಿತರನ್ನು ಇದ್ದಕ್ಕಿದ್ದಂತೆ […]
ಹರಟೆ ಕಟ್ಟೆ
ಲಹರಿ ಹರಟೆ ಕಟ್ಟೆ ಮಾಲಾ ಕಮಲಾಪುರ್ ನಾನು ಹೇಳುವ ಮಾತು ಇದು ಮೂವತ್ತು ವರ್ಷ ಗಳ ಹಿಂದು ಮುಂದಿನ ಮಾತು ಆಗಿನ ಜನರು ಗಂಡಾಗಲಿ ಹೆಣ್ಣಾಗಲಿ ಭೇದ ಭಾವ ಇಲ್ಲದೆ ತನ್ನವರು ನನ್ನವರು ಎನ್ನುವ ಭಾವನೆ ಯೊಂದಿಗೆ ಬೆರೆತು ಹರಟೆ ಹೊಡಿಯುತ್ತಿದ್ದರು. ತಮಗೆ ಬಿಡುವಾದಾಗ ಒಬ್ಬರಿಗೊಬ್ಬರು ಸಂಜೆಗೆ ಹರಟೆ ಕಟ್ಟೆಗೆ ಬಂದು ಹರಟೆ ಹೊಡೆದು ಹೋಗುತ್ತಿದ್ದರು. ಅಷ್ಟೇ ಅಲ್ಲ ಸುಖ ದುಃಖ ದಲ್ಲಿ ಪಾಲ್ಗೊಂಡು ತಮ್ಮ ಮನೆಯವರಂತೆ ಹಚ್ಚಿಕೊಂಡು ಕೆಲಸ ಮಾಡುತ್ತಿದ್ದರು. ಮನೆಯ ಯಜಮಾನಿಯಂತೂ ತನ್ನ ಊಟ […]
ಪ್ರಾರ್ಥನೆ
ಕವಿತೆ ಪ್ರಾರ್ಥನೆ ಬಾಪು ಖಾಡೆ ಹಸಿರು ಬೆಟ್ಟಗಳ ಕಾಡು-ಕಣಿವೆಗಳರುದ್ರ ರಮಣೀಯತೆಯಲಿ ಉಗಮಿಸಿಝರಿಯಾಗಿ ತೊರೆಯಾಗಿ ಜಲಪಾತವಾಗಿಬಳುಕುತ್ತ ಬಾಗುತ್ತ ನಿನಾದಗೈಯುತ್ತವೈಯಾರದಿ ಸಾಗುವ ನದಿಮಾತೆಯೆಹೀಗೆ ಪ್ರಸನ್ನವದನೆಯಾಗಿ ಸಾಗುತ್ತೀರು ಕಾಡು ಕಡಿ-ಕಡಿದು ಬಯಲಾಗಿಸಿನಿನ್ನೊಡಲ ಬಗೆಬಗೆದು ಬರಿದಾಗಿಸಿಮಾಲಿನ್ಯ ಸುರಿಸುರಿದು ಕಪ್ಪಾಗಿಸಿತಿಳಿನೀರ ಹೊಳೆಯನ್ನುಕೊಳೆಯಾಗಿಸಿಜಲಚರ ಜೀವಕ್ಕೆ ವಿಷ ಉಣ್ಣಿಸಿದಕಟುಕ ಹೃದಯದ ನಿನ್ನ ಮಕ್ಕಳನುಒಮ್ಮೆ ಕ್ಷಮಿಸಿ ಬೀಡು ತಾಯೆ ಬಿಟ್ಟ ಬಿಸಿಯುಸಿರು ಕಪ್ಪುಮೋಡಗಳಾಗಿಆಕ್ರೋಶದ ಬೆಂಕಿ ಚಂಡಮಾರುತವಾಗಿಕಡಲೆಲ್ಲ ಉಪ್ಪಾಗಿ ಸುನಾಮಿಯಾಗಿಕುಂಭದ್ರೋಣದ ಬಿರುಮಳೆಯಾಗಿಭೀಕರ ಪ್ರವಾಹವಾಗಿ ಉಕ್ಕೇರದಿರುಪಾತ್ರದಂಚನು ಮೀರಿ ಹರಿಯದಿರುತಪ್ಪೆಸಗಿದ ನಿನ್ನ ಮಕ್ಕಳನು ಮತ್ತೊಮ್ಮೆ ಮನ್ನಿಸಿ ಬೀಡು ಭೂತಾಯಿಯಂತೆ ಕ್ಷಮಯಾದರಿತ್ರಿಯಾಗಿರು ***********************************