ಕಾಡುವ ಕವಿತೆಗೆ

ಕವಿತೆ

ಕಾಡುವ ಕವಿತೆಗೆ

ಅಬ್ಳಿ,ಹೆಗಡೆ

ಹೊತ್ತಿಲ್ಲ ಗೊತ್ತಿಲ್ಲ
ಕಾಡುವಾ ಕವಿತೆ.
ಬೇಕೆಂದು ಕರೆದಾಗ
ನೀನೆಲ್ಲಿ ಅವಿತೆ..?
ಬಂದಿಲ್ಲಿ ಅಕ್ಕರೆಯ
ಸಕ್ಕರೆಯ ನೀಡು.
ನನ್ನೆದೆಯ ಅಕ್ಕರದಿ
ನೀ…ನಾಟ್ಯವಾಡು.
ಕಂಕುಳಲಿ ಕೈಯ್ಯಿಟ್ಟು
ಗಿಲಗಿಚ್ಚಿಯಾಡಿ.
ನೋವಲ್ಲು ನಗಿಸುತ್ತ
ಮಾಡುವೆಯೆ ಮೋಡಿ.
ತುಂಟಾಟವಾಡುತಲಿ
ಕಳೆದೆನ್ನ ‘ಹಮ್ಮು’.
ತಂಟೆಮಾಡದೆ ಒಳಗೆ
ಉಳಿಯೆ ‘ಖಾಯಮ್ಮು’.!

****************************************

Leave a Reply

Back To Top