ಕವಿತೆ
ಪ್ರಾರ್ಥನೆ
ಬಾಪು ಖಾಡೆ
ಹಸಿರು ಬೆಟ್ಟಗಳ ಕಾಡು-ಕಣಿವೆಗಳ
ರುದ್ರ ರಮಣೀಯತೆಯಲಿ ಉಗಮಿಸಿ
ಝರಿಯಾಗಿ ತೊರೆಯಾಗಿ ಜಲಪಾತವಾಗಿ
ಬಳುಕುತ್ತ ಬಾಗುತ್ತ ನಿನಾದಗೈಯುತ್ತ
ವೈಯಾರದಿ ಸಾಗುವ ನದಿಮಾತೆಯೆ
ಹೀಗೆ ಪ್ರಸನ್ನವದನೆಯಾಗಿ ಸಾಗುತ್ತೀರು
ಕಾಡು ಕಡಿ-ಕಡಿದು ಬಯಲಾಗಿಸಿ
ನಿನ್ನೊಡಲ ಬಗೆಬಗೆದು ಬರಿದಾಗಿಸಿ
ಮಾಲಿನ್ಯ ಸುರಿಸುರಿದು ಕಪ್ಪಾಗಿಸಿ
ತಿಳಿನೀರ ಹೊಳೆಯನ್ನು
ಕೊಳೆಯಾಗಿಸಿ
ಜಲಚರ ಜೀವಕ್ಕೆ ವಿಷ ಉಣ್ಣಿಸಿದ
ಕಟುಕ ಹೃದಯದ ನಿನ್ನ ಮಕ್ಕಳನು
ಒಮ್ಮೆ ಕ್ಷಮಿಸಿ ಬೀಡು ತಾಯೆ
ಬಿಟ್ಟ ಬಿಸಿಯುಸಿರು ಕಪ್ಪುಮೋಡಗಳಾಗಿ
ಆಕ್ರೋಶದ ಬೆಂಕಿ ಚಂಡಮಾರುತವಾಗಿ
ಕಡಲೆಲ್ಲ ಉಪ್ಪಾಗಿ ಸುನಾಮಿಯಾಗಿ
ಕುಂಭದ್ರೋಣದ ಬಿರುಮಳೆಯಾಗಿ
ಭೀಕರ ಪ್ರವಾಹವಾಗಿ ಉಕ್ಕೇರದಿರು
ಪಾತ್ರದಂಚನು ಮೀರಿ ಹರಿಯದಿರು
ತಪ್ಪೆಸಗಿದ ನಿನ್ನ ಮಕ್ಕಳನು ಮತ್ತೊಮ್ಮೆ ಮನ್ನಿಸಿ ಬೀಡು ಭೂತಾಯಿಯಂತೆ ಕ್ಷಮಯಾದರಿತ್ರಿಯಾಗಿರು
***********************************
ಆಶಯ ಚನ್ನಾಗಿದೆ