ಇರುವುದನ್ನು ಕಾಣಲಾಗದೆ
ಕವಿತೆ ರಜಿಯಾ ಕೆ ಭಾವಿಕಟ್ಟಿ ನಿಮ್ಮಂತೆ ಇರಲಾಗದೆ ನನ್ನಂತೆ ನಾನುಇರಲಾಗದೆ.ಪರರ ಚಿಂತೆಗೆ ಚಡಪಡಿಸುತಿರೆಮನದ ದುಗುಢ ಇಮ್ಮಡಿಯಾಗುತಲಿ.ದಿನದೂಡುವಂತಾಗಿದೆ. ಇರುವುದನ್ನು ಇಲ್ಲದಂತೆ ಕಂಡು ಇಲ್ಲದನ್ನುಇರುವುದೆಂಬ ಭಾವದಲಿ ಬದುಕು ಬರುಡಾಗಲುಸಿದ್ಧಸ್ಥವಾಗುತಲಿ ದೂರವೇ ನಿಂತು ದಡ ಸೇರಲುಆತುರದ ದೋಣಿ ತವಕಿಸುತಿದೆ. ಜಗದೊಡಲಲಿ ತೆನೆ ಚಿಗುರಿದ ಕ್ಷಣದಲಿಉತ್ತವರು ಯಾರೋ ಬಿತ್ತವರೂ ಯಾರೋಉತ್ತಮರನು ಹುಡುಕುವ ಬರದಲಿ ಮಧ್ಯಸ್ಥಉಳಿದವನೇ ಉಳ್ಳವನಾಗುವ ಇದ್ದವ ಇಲ್ಲದವನಾದ . ಪರಮ ವೈರಿಯನು ಗುರುವೆಂದು ತಿಳಿದವಮುಂದಾದ ಅವಸಾನಕೆ ವಶವಾಗಿ ಮತಿ ಇನವನಾದಒಳಿತಿಗಾಗಿ ಹೊರಟು ಕೆಡಕುಗಳು ಬಲೆಗೆಅವನೇ ವರವಾದ ದುರಂತಗಳ ಸೆಲೆಗೆ ಬದುಕಾದ. ಸಿರಿಗಾಗಿ […]
ಲೋಕಶಾಹಿರ ಅಣ್ಣಾಭಾವು ಸಾಠೆ
“ನೀನು ಗುಲಾಮನಲ್ಲ, ಈ ವಾಸ್ತವ್ಯ ಜಗತ್ತಿನ ನಿರ್ಮಾಪಕ“ “ನೀನು ಗುಲಾಮನಲ್ಲ, ಈ ವಾಸ್ತವ್ಯ ಜಗತ್ತಿನ ನಿರ್ಮಾಪಕ” ಹೀಗೆ ಹೇಳಿದ್ದು, ಯಾವ ವಿದೇಶಿ ವಿಚಾರವಂತನಲ್ಲ; ಮರಾಠಿ ಮೂಲ ಮಹಾನ್ ಸಾಹಿತಿ ಲೋಕಶಾಹಿರ ಅಣ್ಣಾಭಾವು ಸಾಠೆ. ದಮನಿತ, ಶೋಷಿತ, ಕಾರ್ಮಿಕ, ರೈತ ಈ ಎಲ್ಲ ವರ್ಗಗಳ ಧ್ವನಿಯಾಗಿ ಸಾಹಿತ್ಯ ರಚಿಸಿದ ಕ್ರಾಂತಿಪುತ್ರ. ಎರಡು ದಿನವೂ ಪೂರ್ಣ ಶಾಲೆಗೆ ಹೋಗದ ಇವರು ವಿಶ್ವಮಾನ್ಯ ಸಾಹಿತ್ಯವನ್ನು ಸ್ವ-ಅನುಭವದಿಂದಲೆ ರಚಿಸಿದರು. ಇವರ ಮಹಾನ್ ಸಾಹಿತ್ಯ ಇಂದು ಜಾಗತಿಕವಾಗಿ 27 ಭಾಷೆಗಳಲ್ಲಿ ಅನುವಾದಗೊಂಡಿದೆ. ಅಗಸ್ಟ 1 […]
ವಾರದ ಕವಿತೆ
ಕಿಟಕಿ -ಗೋಡೆ ವಾರದ ಕವಿತೆ(ಪ್ರತಿ ಶುಕ್ರವಾರ) ವಸುಂಧರಾ ಕದಲೂರು ನಾನೊಂದು ಕಿಟಕಿ; ಮುಚ್ಚಿಯೇಇದ್ದೇನೆ ಶತಮಾನಗಳಿಂದಗತಕಾಲದ ಗಾಳಿ ಒಳಗೆಸುಳಿದಾಡುತ್ತಾ ಕತ್ತಲ ಘಮಲಿನಅಮಲಲಿ ಉರುಳಾಡುತ್ತಾಎದ್ದೆದ್ದು ಕುಣಿಯುವಆತ್ಮಗಳೂ ಅಸ್ಥಿಪಂಜರಗಳೂನನ್ನೊಳಗಿವೆ. ವಿಶಾಲ ಬಿಳಲುಗಳ ಆಲದಮರವೊಂದು ಟಿಸಿಲೊಡೆದುತೊಗಟೆ ಕಳಚಿಕೊಳ್ಳದೆ ಬೇರೂರಿಮುಚ್ಚಿದ ಕಿಟಕಿಯಾಚೆಸ್ವಚ್ಛ ಗಾಳಿಗೆ ಚಿಗುರು ಚಿಗಿಸಿಹಕ್ಕಿ ಗೂಡಿಗೆ ಟೊಂಗೆ ಚಾಚಿದೆ.ಒಂದೊಂದು ಟೊಂಗೆಗೂಗೂಡು. ಗೂಡೊಳಗೆ ಕಾವುಕೂತ ಹಸಿ ಬಾಣಂತಿ ಹಕ್ಕಿಕಿಟಕಿ ಕುಟುಕಿದ ಸದ್ದು;ಚಾಚಿದ ಟೊಂಗೆಯೋಚೈತನ್ಯದ ಹಕ್ಕಿಯೋ ತಿಳಿಯದು.ಪ್ರತೀ ಶಬ್ದ ಮಾಡುವ ಹಕ್ಕಿಗೂಅದೇನು ರಾಗವೋಸುಮ್ಮಗೆ ಬೀಸುವ ಗಾಳಿಗೆತಲೆದೂಗುವ ಟೊಂಗೆಗಳಿಗೂಅದೇನು ಹೊಸ ರಂಗೋ ನಾನು ಮಾತ್ರ ತೆರೆಯುವುದಿಲ್ಲ. ಶತಮಾನಗಳಿಂದ […]
ಚಂದ್ರ ಮತ್ತು ನಾನು…
ಮೊದಲ ಕವಿತೆಯ ರೋಮಾಂಚನ ಫಾಲ್ಗುಣ ಗೌಡ ಅಚವೆ. ಮನೆಯ ಅಂಗಳದಲ್ಲಿ ಅಪ್ಪನ ಆರಾಮ ಕುರ್ಚಿಯಲ್ಲಿ ನಕ್ಷತ್ರ ರಾಶಿಯನ್ನು ನೋಡುತ್ತ ಕೂತಿದ್ದೆ.ಹುಣ್ಣುಮೆಯ ಎರಡು ದಿನ ನಂತರದ ಚಂದ್ರ ನನಗೆ ವಿಶೇಷವಾಗಿ ಕಂಡ.ಅವನ ಕಾಂತಿಯಲ್ಲಿ ಬೆಳದಿಂಗಳು ಮೀಯುತ್ತಿತ್ತು.ನಕ್ಷತ್ರದಾಚೆಗಿನ ನೀಲಿ ಪರದೆಯ ಗುಂಟ ಹರಿವ ಅವಳ ಮುಗ್ಧ ಪ್ರೀತಿ ಮನಸೊಳಗೆ ಒಲವಿನ ಭಾಷ್ಯ ಬರೆಯುತ್ತಿತ್ತು.ತೆಂಗು ಗರಿಗಳ ನಡುವೆ ಆ ತುಂಬು ಚಂದಿರ ಬಂದು ನನ್ನೊಳಗೆ ಎಂಥದೋ ಮಿಂಚಿಸಿ ಹೋಗಿದ್ದ.ಆ ಮಿಂಚು ನನ್ನ ಮನಃಪಟಲದ ನರ ನಾಡಿಗಳಲ್ಲಿ ಸಂಚರಿಸಿ ಇಂಪಿನ ನಾದಗೈದು ನನ್ನನ್ನು […]
ಪುಟ್ಟಿ ಅನ್ನೊ ಮೊದಲ ಪದ್ಯ
ಮೊದಲ ಕವಿತೆಯ ರೋಮಾಂಚನ ಚೈತ್ರಾ ಶಿವಯೋಗಿಮಠ ಮೊದಲ ಸಾರಿ ಚೆಂದದ ಪದ್ಯ ಇದು ಅಂತ ಬರೆದದ್ದು ನನಗೆ ಅಷ್ಟು ನೆನಪಿಲ್ಲ. ಆದರೆ ಮೊದಲ ಸಲ ನಾನು ಪದ್ಯ ಬರೆದದ್ದು ಏಳನೇ ಕ್ಲಾಸಿನಲ್ಲಿ. ಆಗ ಪದ್ಯ ಅಂದರೆ ಏನು ಅಂತ ಸಹ ತಿಳಿದಿರಲಿಲ್ಲ. ಮನೆಗೆ ಪ್ರತಿ ವಾರ ತರಂಗ ವಾರಪತ್ರಿಕೆ ಖಾಯಂ ಬರುತ್ತಿತ್ತು. ಮತ್ತು ಮನೆಯ ಬಳಿಯ ನಗರ ಕೇಂದ್ರ ಗ್ರಂಥಾಲಯದ ಸದಸ್ಯತ್ವವೂ ಇತ್ತು. ಪ್ರತಿ ವಾರ ಪುಸ್ತಕಗಳನ್ನ ತಂದು ಓದೋದು ನನ್ನಿಷ್ಟದ ಕೆಲಸಗಳಲ್ಲೊಂದು. ತರಂಗದಲ್ಲಿ ಬರುವ ಮಕ್ಕಳ […]
ಮೊದಲ ಕವಿತೆಯ ಹುಟ್ಟು
ಮೊದಲ ಕವಿತೆಯ ರೋಮಾಂಚನ ಅರ್ಪಣಾ ಮೂರ್ತಿ ಸುಮಾರು ಮೂರು ವರ್ಷಗಳ ಹಿಂದಿರಬಹುದು, ಸ್ಮಾರ್ಟ್ ಫೋನ್ ಬಳಸಲು ಬಾರದ ದಿನಗಳಲ್ಲಿ ಅಚಾನಕ್ಕಾಗಿ ಉಡುಗೊರೆಯಾಗಿ ಸಿಕ್ಕಿದ ಸ್ಮಾರ್ಟ್ ಫೋನ್ ಮಂತ್ರದಂಡ ಕೈಗೆ ಸಿಕ್ಕಷ್ಟೇ ಖುಷಿ ತಂದಿತ್ತು. ಸಾಮಾಜಿಕ ಜಾಲತಾಣಗಳ ಬಳಕೆ ಅಭ್ಯಾಸವಿಲ್ಲದ ನನಗೆ ಎಫ್ಬಿಯ ಕುರಿತು ಒಂದು ಸಣ್ಣ ಕುತೂಹಲವನ್ನು ನನ್ನೊಳಗೆ ಮೂಡಿಸಿತ್ತು. ಪರಿಚಯದ ಗೆಳೆಯರ ಮಾತಿನಂತೆ ಕೆಲವೇ ಕೆಲವು ಬರಹಗಾರರ ಕವಿಗಳ ಸ್ನೇಹಪಟ್ಟಿಯಲ್ಲಿ ನಾನೂ ಸಹ ಸ್ಥಾನ ಗಿಟ್ಟಿಸಿದ್ದೆ. ಎಫ್ಬಿ ಲೋಕದಲ್ಲಿ ಗುರುತಿಸಿಕೊಂಡಿದ್ದ ಕವಿಗಳ ಸಾಲಿನಲ್ಲಿ ನಾ ಕಾಣದ […]
ಸ್ನೇಹದ ಫಸಲು
ಗೆಳೆತನದ ದಿನಕ್ಕೊಂದು ಕವಿತೆ ರೇಶ್ಮಾಗುಳೇದಗುಡ್ಡಾಕರ್ ಗೆಳೆತನವಿದು ಪ್ರೀತಿ ,ಸ್ನೇಹದಆಗರವಿದು ಗೆಳೆತನವಿದು ನಂಬಿಕೆ ,ವಿಶ್ವಾಸಗಳಚಿನ್ನದ ಗಣಿಯಿದು ಗೆಳೆತನವಿದು ನೋವು,ನಲಿವಿಗೆಭಾಗಿಯಾಗಿ ಜೊತೆ ನಡೆವುದು ಗೆಳೆತನವಿದು ತಪ್ಪುಗಳ ತಿದ್ದಿತೀಡಿ ಬದುಕಿಗೆ ಸರಿದಾರಿ ತೋರುವದು ಗೆಳೆತನವಿದು ಹೆಣ್ಣು-ಗಂಡು ಎಂಬಭೇದವಿಲ್ಲದೆ ಸ್ನೇಹದ ಕೊಂಡಿಯಾಗುವದು ಗೆಳೆತನವಿದು ಜಾತಿ-ವಿಜಾತಿ ಎನದೆಗಡಿಗಡಿಗಳಾಚೆ ನಮಗಾಗಿ ಮಿಡಿಯುವದು ಗೆಳೆತನವಿದು ಸಂಬಂಧದ ಹಂಗಿಲ್ಲದೆಸಿರಿತನದ ಬೇರುಇಲ್ಲದೆ ಚಿಗುರುವದು ಗೆಳತೆನವಿದು ಹಿರಿಯರು ಕಿರಿಯರುಎನದೆ ಕೈಹಿಡಿದು ಮುನ್ನಡೆಸುವದು ಗೆಳೆತನವಿದು ಬಾಳಿನ ಹೊಸ ಮಗ್ಗಿಲಿಗೆಆರದ ದೀವಿಗೆಯಾಗುವದು ಗೆಳೆತನವಿದು ಪ್ರತಿಫಲ ಬಯಸದೆಫಸಲು ನೀಡುವದು ಎಂದಿಗೋ ನಿಜವಾದ ಸ್ನೇಹವಿದು *********************
ಉಗಾದಿ ಚಿತ್ರಗಳು ಕೆರೆಕೋಡಿ ಪಕ್ಕದಲ್ಲಿದ್ದ ಬೀದಿಯೊಂದರಲ್ಲಿ ನನ್ನ ತಾರುಣ್ಯ ಕಳೆಯಿತು. ಅಲ್ಲಿ ಬೆಸ್ತರು, ಈಡಿಗರು, ಬಡಗಿಗೆಲಸದ ಆಚಾರಿಗಳು, ಕಮ್ಮಾರರು, ಮಂಡಕ್ಕಿಭಟ್ಟಿಯವರು, ಮೇದಾರರು ಇದ್ದರು. ಎಲ್ಲರೂ ಬಸವಣ್ಣನವರ ವಚನದಲ್ಲಿ ಬರುವಂತೆ `ಅಂದಂದೆ ಹುಟ್ಟಿತ್ತು ಅಂದಂದೆ ಹೊಂದಿತ್ತು’ ಎಂಬಂತೆ ಹಗಲ ದುಡಿಮೆ- ರಾತ್ರಿಯ ಊಟದ ಅವಸ್ಥೆಯವರು. ಒಬ್ಬರ ಮನೆಯ ಹಬ್ಬ ಇಡೀ ಬೀದಿಯ ಹಬ್ಬವಾಗುತ್ತಿತ್ತು. ರಂಜಾನ್ ದಿನ ಶೀರ್ಕುರುಮಾ ಬಟ್ಟಲನ್ನು ಬೀದಿಯ ಎಲ್ಲರ ಮನೆಗೆ ತಲುಪಿಸುವುದು ನಮಗೆ ಲೋಕಮಹತ್ವದ ಕಾಯಕವಾಗಿತ್ತು. ಉಗಾದಿಯ ದಿನ ಬೇರೆಯವರ ಮನೆಗಳಿಂದ ಬರುತ್ತಿದ್ದ ಹೋಳಿಗೆ, ಕೋಸಂಬರಿ, […]
ಕೆಂಪು ಐರಾವತ
ಕವಿತೆ ಡಾ.ಪ್ರೇಮಲತ ಬಿ. ರೆಕ್ಕೆಬಿಚ್ಚಿ ಉಡ್ಡಯನಗೈಯ್ಯುವ ಮುನ್ನವೇ ಹಿಡಿಯಬೇಕೆಂದು ಓಡಿದೆ ಒರೆಸುತ್ತ ಹಣೆಯ ಮೇಲಿನ ಬೆವರು ಒಡಲ ತುಂಬುತ್ತ, ಹರಟೆಯೊಡೆಯುತ್ತ ಪುಕ್ಕವರಡಿ ವಿರಮಿಸಿ ನಿಂತಿತ್ತು ದೇದೀಪ್ಯಮಾನವಾದ ಕೆಂಪು ಐರಾವತ ಏನೋ ಸಂಕಟ, ಬಿಟ್ಟು ಹೊರಟ ತವಕ ನನ್ನದಲ್ಲದ ಊರ, ಮೂರ್ತವಲ್ಲದ ಭಾವ ದಿನಕೊಂದು ಕೊನೆಕಟ್ಟಿ ಗಟ್ಟಿಯಾಗಿರದ ಅಳ್ಳಕ ಒಂದೇ ಗಂಟೆ ಊರ ತಲುಪಲು ಒಂದೆರಡೇ ದಿನದ ಗಡುವು ಮತ್ತೆ ಮರಳಲು ನಿಟ್ಟುಸಿರಿಟ್ಟೆ ನಕ್ಕು..” ಎಲ್ಲ ಮರುಳು” ಯಾರೋ ಬಂದರು, ಯಾರೋ ಇಳಿದರು ಕಣ್ಣ ಮುಚ್ಚಿ ಕಿಟಗಿಗೊರಗಿ ಗುನುಗಿ […]
ಮಾತು – ಮಳೆ ಹಾಡು
ಕವಿತೆ ಬಾಲಕೃಷ್ಣ ದೇವನಮನೆ ಚಿತ್ರ ಕಟ್ಟಿದ ಚೌಕಟ್ಟು ಮಾತು ಮಳೆಯಂತೆ ಧೋ… ಎಂದು ಸುರಿಯುತ್ತಿರುತ್ತದೆ ನಿಲ್ಲುವುದಿಲ್ಲ ಒಮ್ಮೊಮ್ಮೆ ಮಳೆ ನಿಂತರೂ ಮಾತು ನಿಲ್ಲುವುದಿಲ್ಲ… ಮೌನವೂ ಮಾತಾದಂತೆ ಮಳೆ ನಿಂತ ಮೇಲಿನ ಮರದ ಹನಿಯಂತೆ… ಚೌಕಟ್ಟಿನೊಳಗೆ ಮಾತು ಮಳೆ ಹಾಡು. ದೃಶ್ಯ ಒಂದು ಆಕಸ್ಮಿಕದ ಭೇಟಿ ಎಷ್ಟೋ ಕಾಲದ ಮೇಲೆ ಮರು ಮಿಳಿತವಾದ ಗೆಳೆತನ ಮುಗಿಯುತ್ತಿಲ್ಲ ಕ್ಷೇಮ ಕುಶಲೋಪರಿ ಕೂಡಿ ಆಡಿದ […]