ಸ್ನೇಹದ ಫಸಲು

ಗೆಳೆತನದ ದಿನಕ್ಕೊಂದು ಕವಿತೆ

ರೇಶ್ಮಾಗುಳೇದಗುಡ್ಡಾಕರ್

ಗೆಳೆತನವಿದು ಪ್ರೀತಿ ,ಸ್ನೇಹದ
ಆಗರವಿದು

ಗೆಳೆತನವಿದು ನಂಬಿಕೆ ,ವಿಶ್ವಾಸಗಳ
ಚಿನ್ನದ ಗಣಿಯಿದು

ಗೆಳೆತನವಿದು ನೋವು,ನಲಿವಿಗೆ
ಭಾಗಿಯಾಗಿ ಜೊತೆ ನಡೆವುದು

ಗೆಳೆತನವಿದು ತಪ್ಪುಗಳ ತಿದ್ದಿ
ತೀಡಿ ಬದುಕಿಗೆ ಸರಿದಾರಿ ತೋರುವದು

ಗೆಳೆತನವಿದು ಹೆಣ್ಣು-ಗಂಡು ಎಂಬ
ಭೇದವಿಲ್ಲದೆ ಸ್ನೇಹದ ಕೊಂಡಿಯಾಗುವದು

ಗೆಳೆತನವಿದು ಜಾತಿ-ವಿಜಾತಿ ಎನದೆ
ಗಡಿಗಡಿಗಳಾಚೆ ನಮಗಾಗಿ ಮಿಡಿಯುವದು

ಗೆಳೆತನವಿದು ಸಂಬಂಧದ ಹಂಗಿಲ್ಲದೆ
ಸಿರಿತನದ ಬೇರುಇಲ್ಲದೆ ಚಿಗುರುವದು

ಗೆಳತೆನವಿದು ಹಿರಿಯರು ಕಿರಿಯರು
ಎನದೆ ಕೈಹಿಡಿದು ಮುನ್ನಡೆಸುವದು

ಗೆಳೆತನವಿದು ಬಾಳಿನ ಹೊಸ ಮಗ್ಗಿಲಿಗೆ
ಆರದ ದೀವಿಗೆಯಾಗುವದು

ಗೆಳೆತನವಿದು ಪ್ರತಿಫಲ ಬಯಸದೆ
ಫಸಲು ನೀಡುವದು ಎಂದಿಗೋ ನಿಜವಾದ ಸ್ನೇಹವಿದು

*********************

One thought on “ಸ್ನೇಹದ ಫಸಲು

Leave a Reply

Back To Top