ಎಲೆಗಳ ಬಲೆಯಲ್ಲಿ…
ಲಲಿತ ಪ್ರಬಂಧ ಎಲೆಗಳ ಬಲೆಯಲ್ಲಿ… ಟಿ.ಎಸ್.ಶ್ರವಣಕುಮಾರಿ ಈ ಹದಿಮೂರು ಎಲೆಗಳಿಗೊಂದು ವಿಶಿಷ್ಟ ಆಕರ್ಷಣೆಯಿದೆ, ಸೆಳೆತವಿದೆ. ಕೆಲವರು ರಮ್ಮಿ, ಬ್ರಿಡ್ಜ್, ಮೂರೆಲೆ ಎನ್ನುತ್ತಾ ಇಸ್ಪೀಟಿನ ಹಿಂದೆ ಬಿದ್ದರೆ, ಇನ್ನು ಕೆಲವರು ಸಾಲಿಟೇರ್, ಫ್ರೀಸೆಲ್ ಎನ್ನುತ್ತಾ ಕಂಪ್ಯೂಟರಿನಲ್ಲಿ ಅದೇ ಹದಿಮೂರು ಎಲೆಗಳಲ್ಲಿ ಅಡಗಿಕೊಂಡಿರುತ್ತಾರೆ. ʻಅಂದರ್ ಬಾಹರ್ ಅಂದರ್ ಬಾಹರ್ʼ ಎಂದು ಕೋರಸ್‌ನಲ್ಲಿ ಗುನುಗುತ್ತ ʻಎಕ್ಕ ರಾಜ ರಾಣಿ ನನ್ನ ಕೈಯೊಳಗೆ, ಹಿಡಿಮಣ್ಣು ನಿನ್ನ ಬಾಯೊಳಗೆʼ ಎಂದು ಹಾಡುತ್ತ ಜಾಕಿ ಚಲನಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ತನ್ನೆಲ್ಲಾ ಅಭಿಮಾನಿಗಳನ್ನೂ ವಶೀಕರಣ ಮಾಡಿಕೊಂಡಿದ್ದು […]
ಅಂಕಣ ಬರಹ ಅರಿತವರ ಮರೆತು ಸಾಗುವುದೆಂದರೆ … ನಮ್ಮನ್ನು ನಾವು ಹುಡುಕಿಕೊಳ್ಳುವುದು ಎಂದರೆ ಏನು? ನಮ್ಮೊಳಗೆ ನಾವು ಇಳಿಯುವುದು ಎಂದರೆ ಏನು? ನಮಗೇ ಕಾಣದ ನಮ್ಮನ್ನು ಕಂಡುಕೊಳ್ಳುವುದು ಎಂದರೆ ಏನು? ಮತ್ತೆ ಈ ಧಾವಂತದ ಬದುಕಲ್ಲಿ ಅದಕ್ಕೆ ತಗುಲುವ ಸಮಯವನ್ನು ಉಳಿಸಿಟ್ಟುಕೊಳ್ಳುವ ವ್ಯವಧಾನವಾದರೂ ನಮ್ಮಲ್ಲಿ ಉಳಿದಿದೆಯಾ… ಇಂತಹ ಹಲವಾರು ಉತ್ತರ ಸಿಗದ ಪ್ರಶ್ನೆಗಳು, ಗೊಂದಲಗಳು ನನ್ನನ್ನು ಸದಾ ಕಾಡುತ್ತಿರುತ್ತದೆ. ಇಂಥವಕ್ಕೆ ನಾನೇ ನಾನು ಉತ್ತರಿಸಿಕೊಳ್ಳಬೇಕಿರುತ್ತದೆ. ಆದರೆ ಕೆಲವೊಮ್ಮೆ ಎಂತಹ ಸಂದಿಗ್ಧತೆ ಒದಗಿಬರುತ್ತದೆ ಎಂದರೆ ಉತ್ತರಿಸುವುದಿರಲಿ ಪ್ರಶ್ನೆಯನ್ನು ಎದುರಿಸುವುದೂ […]
ಬೆಳೆಸಲಾಗದ ಮಕ್ಕಳು
ಅನುವಾದಿತ ಕಥೆ ಬೆಳೆಸಲಾಗದ ಮಕ್ಕಳು ತೆಲುಗು ಮೂಲ: ಸಿ.ಹೆಚ್.ವಿ. ಬೃಂದಾವನ ರಾವು ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು ಪಾರ್ವತಿ ಹೇಳಿದ ಮಾತು ಕೇಳಿ ಸೋಜಿಗ ಗೊಂಡ ಕ್ರಿಸ್ಟಫರ್. ಮುಖ ಕೆಂಪಾಯಿತು. ಒಂದೈದು ನಿಮಿಷ ಹಾಗೇ ಇದ್ದ. ಕ್ರಮೇಣ ಆವೇಶದಿಂದ ಆಲೋಚನೆಯೆಡೆಗೆ ಬಂದ. ಏನು ಹೇಳಬೇಕೋ ಅರ್ಥವಾಗಲಿಲ್ಲ ಅವನಿಗೆ. ಗಂಡನ ಮುಖವನ್ನ ಹಾಗೇ ನೋಡ್ತಾ ಇದ್ದಳು ಪಾರ್ವತಿ. ಗಂಡ ಹಾಗೆ ಆಶ್ಚರ್ಯಗೊಳ್ಳುವುದು ಅವಳಿಗೇನೂ ವಿಚಿತ್ರವೆನಿಸಲಿಲ್ಲ. ಡಾಕ್ಟರರು ತನ್ನ ಹತ್ತಿರ ಈ ವಿಷಯದ ಪ್ರಸ್ತಾವಿಸಿದಾಗ ತನಗೂ ಇಂಥ ಆಶ್ಚರ್ಯವೇ ಆಗಿತ್ತು. […]
ಗುಪ್ತಗಾಮಿನಿ
ಕವಿತೆ ಗುಪ್ತಗಾಮಿನಿ ಸಂಗಮೇಶ್ವರ ಶಿ.ಕುಲಕರ್ಣಿ ನಿನಗೆ ನಾನ್ಯಾರು?ಕೇಳದಿರು ಹೇಳದಿರುಅಲ್ಲಿ ಕಾಡುವ ಒಗಟುಎದುರಾಗದಿರಲಿನಿನಗೆ ನನಗೆ ಇಬ್ಬರಿಗೂ…. ನನಗೆ ನೀನ್ಯಾರು?ಹೇಳುವೆ ಸಾರಿ ಸಾರಿಆತ್ಮದಲಿ ಆರೂಢವಾಗಿರುವಅಗೋಚರ ಆಕೃತಿ!ಪ್ರತಿಕ್ಷಣದ ಸ್ಮೃತಿ!! ಅಲ್ಲಿ ನೀನು ಇಲ್ಲಿ ನಾನುಅನ್ನುವ ಅಂತರದ ಮಾತೆಲ್ಲಿಆಣೆ ಮಾಡುವೆ ಬೇಕಾದರೆ;ಅಂತರಂಗ ಆಕ್ರಮಿಸಿದಮೊದಲ ದೊರೆಸಾನಿ ನೀನಿಲ್ಲಿ! ಉಬ್ಬುತಗ್ಗಿನ ಚರ್ಮದ-ಹೊದಿಕೆಯ ಮೋಹದಲ್ಲಿಮರೆತುಹೋಗುವ ಪಿಂಡವಲ್ಲ;ಎಲ್ಲ ದಾಟಿ ಅನಂತ ಹುಡುಕುವಅದಮ್ಯ ಚೇತನ! ನನಗೊಂದು ನಿನಗೊಂದುಬೇರೆಯದೇ ಕೋಳ,ಕಳಚಿ ಕೈಬಿಡುವ ಕೈಕಟ್ಟು ಅಲ್ಲ ಬಿಡು.ಇದರ ಮಧ್ಯೆ ನಮ್ಮದುಸಾವಿನಾಚೆಗೂ ಸಾಗುವ ಬಂಧ! ಈ ಜೀವಕ್ಕೆ ಅರ್ಧಜೀವ ನೀನು! ****************************
ಮಾಗಿಯ ಪದ್ಯಗಳು
ಕವಿತೆ ಮಾಗಿಯ ಪದ್ಯಗಳು ಪ್ರೇಮಲೀಲಾ ಕಲ್ಕೆರೆ ಕೌದಿ ಕವುಚಿಕಂಬಳಿ ಹುಳುವಾದರೂಅಡಗಲೊಲ್ಲದ ಚಳಿ ಬೆಳಗಾಗ ಬರುವಚುರುಕು ಬಿಸಿಲಿನ ನೆನಪೇಬಿಸಿ ಹುಟ್ಟಿಸಬಲ್ಲದುಒಳಗೆ ಉರಿಮುಖದ ಸೂರ್ಯ, ನಿನ್ನ ಆಗಮನಅದೆಷ್ಟು ಬೆಚ್ಚಗೆಜಡ ಮಾಗಿಗೆ !! 2 ತುಂಟ ಸೂರ್ಯ,ಎಲ್ಲಿ ಅಡಗಿದ್ದೆ ನೀನು ?ಇಷ್ಟೊಂದು ತಡವೇಕೆಮನೆಗೆ ಬರಲು ?? ಗುಟ್ಟೇನಿದೆ ,ಆ ನಿಶೆಯ ಜೊತೆನಿನ್ನ ಚೆಲ್ಲಾಟಜಗಕೇ ಗೊತ್ತು! ತರವಲ್ಲ ಬಿಡು,ತರವಲ್ಲ ಬಿಡು, ಆ ಕಪ್ಪುನಿಶೆಯಲಿಏನುಂಟು ಚೆಲುವು?ಬಿತ್ತಿದ್ದ ಬೆಳೆಯುವಇಳೆಗೆ ಮಿಗಿಲು?? ******************************************
ವಿಚಿತ್ರ ಆಸೆಗಳು…ಹೀಗೊಂದಷ್ಟು,
ಲಲಿತ ಪ್ರಬಂಧ ವಿಚಿತ್ರ ಆಸೆಗಳು…ಹೀಗೊಂದಷ್ಟು, ಸಮತಾ ಆರ್. “ಕಕ್ ಕಕ್ ಕಕ್ ಕೊಕ್ಕೋಕ್ಕೊ” ಅಂತ ಒಂದು ಬಿಳಿ,ಬೂದು,ಕೆಂಪು ಬಣ್ಣದ ರೆಕ್ಕೆ ಪುಕ್ಕಗಳ,ಅಂಗೈ ಅಗಲದ ಜುಟ್ಟಿದ್ದ,ಕಮ್ಮಿ ಅಂದರೂ ನಾಲ್ಕೈದು ಕೆಜಿ ತೂಗುತ್ತಿದ್ದ ಗಿರಿರಾಜ ಹುಂಜ ವೊಂದು ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಗತ್ತಿನಿಂದ ,ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದಾಗ,ಸುತ್ತ ನಾಲ್ಕೈದು ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ಕೂರಿಸಿಕೊಂಡು ವಿದ್ಯಾಗಮ ಕಾರ್ಯಕ್ರಮದ ಅಡಿಯಲ್ಲಿ ಕಲಿಸುತ್ತಿದ್ದ ನನಗೆ ಎಷ್ಟು ಪ್ರಯತ್ನ ಪಟ್ಟರೂ ಆ ಹುಂಜನಿಂದ ಕಣ್ಣು ಕೀಳ ಲಾಗಲಿಲ್ಲ. ನನ್ನಿಂದ ಅನತಿ ದೂರದಲ್ಲಿ ಕುಳಿತಿದ್ದ […]
“ಅಂತರ್ಬಹಿರಂಗ”
ಕವಿತೆ “ಅಂತರ್ಬಹಿರಂಗ“ ಉದಯ ಧರ್ಮಸ್ಥಳ ನಿದ್ದೆಯ ಮುಂಜಾವಿನಲ್ಲಿಮುಂಜಾವಿನ ನಿದ್ದೆಯಲ್ಲಿಮಂಪರು ಭಾವಗಳೊಂದಷ್ಟುಮತಿಯ ತೋಪಿನಲ್ಲಿಗತಿ ಲಯದ ಸಾಲು ತುರುಕಿದ ಕಾಡತೂಸುಗಳಂತೆಶಬ್ದಗಳಲ್ಲದೆಮೌನ ಅಕ್ಷರದುಂಡೆಗಳು ! ಎತ್ತೆತ್ತಲೋ ಎಸೆದೆರಗುವಂತಾಗಿಧಮಿಲ್ ಧಮಿಲ್ ಧಮಿಲ್ಹೊರಗುಗುಳುವಾಗಹಿಡಿದುದಾಖಲಾಗಿಸುವಾಗಅರೆಬಿರಿದ ಕಣ್ಣೆಡೆಯಿಂದದೃಷ್ಟಿ ಕಾಣುವ ಪಂಕ್ತಿ ಪದಅದೇನೋ ಅಪರೂಪದಆಗೀಗ ಬರುವ ಅತಿಥಿಯಂತೆನಕ್ಕಣರಳಿಸಿ ಬೀಸಿದ ಓರೆನೋಟ ! ಧಿಂಗಣ ಕುಣಿದ ರಂಗದಂಗಳದವೇಶಗಳಾಗಿ ಬಣ್ಣಬಣ್ಣ ಕಟ್ಟಿದೊಗಲೆ ದೊಗಲೆಯೊಳಗೆಅಂಡು ಬಿಗಿದ ಹಳೆಬಟ್ಟೆಯ ಹಿಂಡುಮೇಲೆ ಮಿರಮಿರನೆ ಝಗಮಗಿಸುವರಾಜನುಡುವ ರಂಗುರಂಗಿನ ಪೋಷಾಕಿನೊಳಗಿಂದಜೀವ ಲಕಲಕ ಲಕಾ ಭಾಷೆಯುಚ್ಛಾರ ! ಅದೇನೋ ಮೊರದಗಲತಡ್ಪೆ ಕಿರೀಟದ ಬಣ್ಣದ ವೇಶಅರಚಿ ಅರಚಿ ಬೆದರಿಸಿಅರ್ಥವಾಗದಿದ್ದರೂಅರ್ಥ ಮಾತಾಡುವಂತೆ ಕಂಡರೆಅದು […]
ದಿಕ್ಕಿಲ್ಲದ ಹಕ್ಕಿಯ ಮುಂದೆ ಹಿಂದೆ
ಕವಿತೆ ದಿಕ್ಕಿಲ್ಲದ ಹಕ್ಕಿಯ ಮುಂದೆ ಹಿಂದೆ ಪ್ರೇಮಶೇಖರ ಹೀಗೇಎತ್ತಲಿಂದಲೋ ಹಾರುತ್ತಾಇತ್ತ ಬಂದ ಗುರುತಿಲ್ಲದ ಹಕ್ಕಿ,ಇಲ್ಲೇ ಕೂತಿದೆ ಬೆಳಗಿನಿಂದಲೂ. ಲಲಿತೆ ಕಾಳು ಹಾಕಿದ್ದಾಳೆ,ಪುಟ್ಟಿ ನೀರಿಟ್ಟಿದ್ದಾಳೆ,ನಾನು ಕೋಲು ಹಿಡಿದುಪುಸ್ಸಿಯನ್ನು ಕಾಯುತ್ತಿದ್ದೇನೆ. ಪುಟ್ಟ ಹಕ್ಕಿಕಾಳು ತಿನ್ನುತ್ತಿಲ್ಲ,ನೀರು ಕುಡಿಯುತ್ತಿಲ್ಲ,ಬಾಯಿ ತೆರೆದು ಕೂಗುತ್ತಲೂ ಇಲ್ಲ. ಅಕ್ಕಪಕ್ಕದ ಮನೆಯವರು ಬಂದರು,ತಲೆಗೊಂದು ಮಾತು ಅಂದರು-ಅದು ಹಾರಿಬಂದ ದಿಕ್ಕುನೋಡಿದಿರಾ? ಮನೆಯೊಳಗೆ ನುಗ್ಗಿದಗಳಿಗೆ ಗಮನಿಸಿದಿರಾ? ಲಲಿತೆ ಅವರಿಗೆಲ್ಲ ಚಹ ಮಾಡುತ್ತಿದ್ದಾಳೆ,ಪುಟ್ಟಿ ವಾಷ್‍ಬೇಸಿನ್ ತೋರಿಸುತ್ತಿದ್ದಾಳೆ,ಪುಟ್ಟಹಕ್ಕಿ ಸುಮ್ಮನೆ ನೋಡುತ್ತಿದೆ,ನನ್ನ ಕೈಯಲ್ಲಿನ್ನೂ ಕೋಲು ಆಡುತ್ತಿದೆ.ಅವರು ಚಹಾ ಜತೆ ಹಕ್ಕಿಯನ್ನು ನೆಂಜಿಕೊಳ್ಳುತ್ತಿದ್ದಾರೆ. ಕಿವಿಚಿದರೆ ಕೂಸಿಗಾದರೂಒಂದೊತ್ತಿನ ಪಲ್ಯವೂ […]
ವಿರಾಗಿ ತ್ಯಾಗಿ
ಕವಿತೆ ವಿರಾಗಿ ತ್ಯಾಗಿ ಡಾಲಿ ಕೊಡನವಳ್ಳಿ ಚಕ್ರವರ್ತಿ ಭರತ…ನಿನಗಿಂತವಿರಾಗಿ ತ್ಯಾಗಿ ಬಾಹುಬಲಿಗೆಈ ಕನ್ನಡ ನೆಲ ತಲೆಬಾಗಿತಲೆ ಎತ್ತಿ ನೋಡಿದರೂ ನಿಲುಕದ ಪ್ರತಿಮೆಯನ್ನೇಕಡೆದು ನಿಲ್ಲಿಸಿದ್ದು ಯುದ್ದ ಗೆದ್ದು ಸೋತವನಏನಿಲ್ಲವೆಂದು ಹೊರಟವನಕೈಬೀಸಿ ಕರೆದುಗಿರಿನೆತ್ತಿಯ ಮೇಲಿರಿಸಿಮಸ್ತಕಕೆ ಬೆಳ್ಮುಗಿಲ ಮುಕುಟವಿರಿಸಿತಾರೆಗಳ ನೇವಣಿಯನೇರಿಸಿಅಂಬರಕೆ ಚುಂಬಿಸಿದವನನ್ನೇಕರುನಾಡುದೊರೆಯಾಗಿ ಸ್ವೀಕರಿಸಿತು ಮುರಿದು ಬೀಳುವ ಮಹಲಿನಹಂಗು ತೊರೆದವಗೆಗಿರಿಶಿಖರಗಳೇ ಕಂಬವಾಗಿಮೋಡಗಳೇ ಮೇಲ್ಛಾವಣಿಯಾಗಿನಾಡ ಗರ್ಭಗುಡಿಯಲ್ಲಿಸದ್ಗತಿ ಸಂದವನಪ್ರಾಪಂಚಿಕ ಸುಖ ಗೆದ್ದವನಪ್ರಕೃತಿಯ ಕಣಕಣವೂಪಾಲಿಸಿತಿಲ್ಲಿ ಬೆಳಗುಳ ನಂದನಪ್ರತಿದಿನ ನಿನ್ನದೇಪ್ರತೀಕ್ಷೆ ಪೃಥ್ವಿಗೆ.ಎಳೆಸಂತೆ ಕಂಗೊಳಿಸುವ ನಿನ್ನೀನವಿರು ಭಾವ ಹೊತ್ತ ಕುಸುಮ.ಗಂಧವತಿ ವಸುಧೆಯ ಗಂಧ ಘಮಹೊನ್ನ ಹಣತೆಯಲಿಜ್ಯೊತಿ ಬೆಳಗುವ ಶಶಿ ಸೂರ್ಯಆದಿ […]
ಸ್ವಾತಿಮುತ್ತು
ಕವಿತೆ ಸ್ವಾತಿಮುತ್ತು ಅಕ್ಷತಾ ಜಗದೀಶ. ಎನಿತು ಸುಂದರ ನೋಡುತಿಳಿನೀಲ ಮುಗಿಲು….ಮುತ್ತು ನೀಡುವಂತಿದೆಬಾನಂಚಿನ ಕಡಲು.. ಕಡಲಿಗು ಮುಗಿಲಿಗುಇದೆಂತಹ ಬಂಧ..ಅರಿಯಲಾರದಂತಹಅಂತರಂಗದ ಅನುಬಂಧ.. ಕಾಲಗಳು ಉರುಳಿದರುಯುಗಗಳೇ ಕಳೆದರುಕಾಣುವುದು ತಿಳಿನೀಲಿ ಬಿಂಬಮಾಸಿಹೋಗದ ಆ ಪ್ರತಿಬಿಂಬ.. ಭಾವದೊಳಗೆ ಸನಿಹ ಕಡಲುವಾಸ್ತವದೊಳು ದೂರ ಮುಗಿಲುಸತ್ಯದ ಒಳಗಿನ ಮಿಥ್ಯ..ನೆನಪಿಸುತಿದೆ ಅಲೆಗಳು ನಿತ್ಯ.. ಬಾನಿಂದ ಜಾರಿದೆ ಮಳೆ ಹನಿಕೇಳುತಿದೆ ಮರಳಿ ಕಡಲ ದನಿಮತ್ತೆ ಪ್ರೀತಿ ಮೂಡುವ ಹೊತ್ತುಕಡಲಾಳದಲಿ ಎಲ್ಲೆಲ್ಲೂ ಸ್ವಾತಿಮುತ್ತು…. ****************************