ಇನ್ನೆಷ್ಟು ತ್ಯಾಗ ಮಾಡಬೇಕು.

ಇನ್ನೆಷ್ಟು ತ್ಯಾಗ ಮಾಡಬೇಕು.

ಕವಿತೆ ಇನ್ನೆಷ್ಟು ತ್ಯಾಗ ಮಾಡಬೇಕು. ಅನಿಲ ಕಾಮತ ಒಡಲಲ್ಲಿ ನಿನ್ನ ಕುಲದ ಕುಡಿಯನುಜತವಾಗಿಸಿಕೊಂಡಿರುವೆನಿನ್ನ ಕೆಣಕಿಸಿ ಜನರುಉಡಾಫೆಯ ನಗು ನಕ್ಕರುನಿನ್ನನ್ನು ನಾನು ಸಂತೈಸಿರುವೆ ತಾಳ್ಮೆ ಕಳೆದುಕೊಂಡುಸೋತ ಮೊಗವ ಹೊತ್ತುಮನೆಯ ಮೂಲೆ ಸಂಧಿಯಲಿಕೂತಾಗ ನಗುವಲ್ಲೇ ತೇಲಿಸಿದ್ದೇನೆ ಮದಿರೆಯಲಿ ಮಿಂದೆದ್ದಾಗನಿನ್ನ ಮರ್ಯಾದೆ ಮುಕ್ಕಾಗದ ಹಾಗೆನಟಿಸಿದ್ದೇನೆಕೋಪಾಗ್ನಿಗೆ ಬೆನ್ನ ಮೇಲಿನಬರೆಗಳು ನಿನ್ನನ್ನೇ ದಿಟ್ಟಿ ಸುತ್ತಿವೆ ನಿನ್ನ ಬರುವಿಕೆಗಾಗಿಅದೆಷ್ಟು ಇರುಳನ್ನುಏಕಾಂತದಲ್ಲೇ ಕಳೆದಿದ್ದೇನೆನಿನ್ನ ಕಾಮದ ಜ್ವಾಲಾಮುಖಿಗೆಸುಟ್ಟು ಕರಕಲಾಗಿದ್ದೇನೆನಿನಗಾಗಿ ಇನ್ನೆಷ್ಟು ತ್ಯಾಗ ಮಾಡಬೇಕು… ***********************

ಹನಿಗಳು

ಹನಿಗಳು ಭಾರತಿ ರವೀಂದ್ರ ಕೆಂಪಿನ ಮುತ್ತು ಬೆಳಗಿನಿಂದ ಕೆಂಪಾದಕೆನ್ನೆಯೊಂದಿಗೆ ನನ್ನವರಿಗೆ ಖುಷಿಯೇಖುಷಿ, ಬಿಡಿಸಿ ಹೇಳಲಿಹೇಗೆ? ಆ ಕೆಂಪಿಗೆಕಾರಣ ನಾನಲ್ಲಇಡೀ ರಾತ್ರಿ ಸೊಳ್ಳೆ ಕೊಟ್ಟ ಮುತ್ತಿನ ಪ್ರಭಾವ ಅಂತಾ ನೆನಪು ನಸು ನಾಚುತ ನಲ್ಲೆಕೇಳಿದಳು. ನೆನಪಿದೆಯಾ ನಿಮಗೆನಾ ಮೊದಲ ಬಾರಿಮಾಡಿದ ಹಲ್ವಾ…ಮೊಗದಿ ನಗು ಸೂಸಿಮನದಲ್ಲಿ ಅಂದು ಕೊಂಡೆ ಹೇಗೆ ಕಣೆಮರೆಯಲು ಸಾಧ್ಯಕಾಗದ ಅಂಟಿಸೋಅಂಟಿನ ಹಾಗೆ ಬಳಸಿದ್ದೆಅಂತಾ… ಮುಡಿದ ಮಲ್ಲಿಗೆ ಮದುವೆ ಮನೆಯಲ್ಲಿಮುಡಿ ತುಂಬಾ ಮಲ್ಲಿಗೆದಂಡೆ ಮುಡಿದವಳ ನಡೆ ಬಲು ಸೊಕ್ಕಿನದು,ಪಾಪ ಅದೇನಾಯಿತೋ ಗದ್ದಲದಿ ಅವಸರದಿಓಡಿ ಬರೋ ಹುಡುಗನಕೈಲಿ ದಂಡೆ […]

ಸ್ವತಂತ್ರ ಭಾರತದ ಮೊದಲ ದೀಪಾವಳಿಯಂದು ರಾಷ್ಟ್ರಕ್ಕೆ ಮಹಾತ್ಮ ಗಾಂಧಿಯವರ ಸಂದೇಶ

ಲೇಖನ ಸ್ವತಂತ್ರ ಭಾರತದ ಮೊದಲ ದೀಪಾವಳಿಯಂದು ರಾಷ್ಟ್ರಕ್ಕೆ ಮಹಾತ್ಮ ಗಾಂಧಿಯವರ ಸಂದೇಶ    – ಡಾ. ಎಸ್.ಬಿ. ಬಸೆಟ್ಟಿ ಬಹುಶಃ ಭಾರತಕ್ಕಿಂತ ಹೆಚ್ಚು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯಾವ ಹೊಸ ರಾಷ್ಟ್ರವೂ ಎದುರಿಸಿರಲಿಕ್ಕಿಲ್ಲ. ಬ್ರಿಟಿಷರು ಆಖ್ಯೇರಾಗಿ ಉಪಖಂಡದ ಮೇಲಿನ ಹತೋಟಿಯನ್ನು ತ್ಯಜಿಸಿದಾಗ ಅವರು ತಮ್ಮ ಬೆನ್ನಿಗೆ ಒಂದಲ್ಲ ಎರಡು ರಾಷ್ಟ್ರಗಳನ್ನು ಬಿಟ್ಟು ಹೋಗಿದ್ದರು. ಒಂದು ಹೊಸ ರಾಷ್ಟ್ರವಲ್ಲ   ಎರಡು, ಭಾರತ ಮತ್ತು ಪಾಕಿಸ್ತಾನ. ಅಲ್ಪಸಂಖ್ಯಾತರಾದ ಮುಸ್ಲಿಮರ ಸ್ವದೇಶವಾಗಿ ಪಾಕಿಸ್ತಾನವನ್ನು ಸೃಷ್ಠಿಸಲಾಯಿತು. ಈ ಕೋಮುಗಲಭೆಗಳು ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡವು. ಪೂರ್ವ […]

ದೀಪಾವಳಿ

ಕವಿತೆ ದೀಪಾವಳಿ ವಿದ್ಯಾಶ್ರೀ ಅಡೂರ್ ಮನಗಳ ನಡುವಿನ ತಮಗಳ ಕಳೆಯಲಿಬೆಳಕಿನ ಹಬ್ಬ ದೀಪಾವಳಿನೀಗದ ಬೆಳಕು ತುಂಬುತ ಬದುಕಲಿಕಳೆಯಲಿ ಕತ್ತಲ ಅಸುರನ ಧಾಳಿ ಬಗೆಬಗೆ ಖಾದ್ಯದ ಚಪಲವ ಮನದಲಿಹುಟ್ಟಿಸುವಂತ ಖಾನಾವಳಿಸುಡುಮದ್ದಿನಲಿ ಪರಿಸರ ಕೆಡಿಸದೆಮಾಡದೆ ಇರೋಣ ಹಾವಳಿ ಹಿಂದಿನ ದಿನಗಳ ಹಬ್ಬದ ನೆನಪುಬಿಟ್ಟಿದೆ ಮನದಲಿ ಕಚಗುಳಿಹಿಂದೆಗೂ ಮುಂದೆಗೂ ಕೊಂಡಿಗಳಾಗುತಹರಡುವ ಹಬ್ಬದ ಬಳುವಳಿ. ****************************

ಶ್ರೀಗಂಧದ ಕೊರಡು

ಕಥೆ ಶ್ರೀಗಂಧದ ಕೊರಡು  ಸುಧಾ ಭಂಡಾರಿ‌ ಪಾರು ಎಂದಿನಂತೆ ಊಟದ ನಂತರ ಒಬ್ಬಳೆ ಟಿವಿ ಹಚ್ಗಂಡು ಕೂತಿದ್ಲು.ತುಂಬಾ ದಿನಗಳ ನಂತ್ರ ರಾಜ್ ಕುಮಾರ ನ ‘ ಜೀವನ ಚೈತ್ರ’ ತಾಗಿತ್ತು.ಪಾರುಗೆ ರಾಜ್ ಕುಮಾರ ಸಿನಿಮಾ ಅಂದ್ರೆ ಪಂಚಪ್ರಾಣ. ಸಿನಿಮಾದಲ್ಲಿ ರಾಜ್‍ಕುಮಾರ್ ಹೆಂಡತಿ ಬಸುರಿ ಎಂದು ಗೊತ್ತಾದಾಗ ಅವಳನ್ನ ಎತ್ಗಂಡು ‘ ಲೇ ನೀನು ನನ್ ಮಗೂನ ತಾಯಿ ಆಗ್ತಿದ್ದೀಯಾ’ ಅಂತ ಮುದ್ದಾಡಿ ಒಂದು ಹಾಡು ಇರೋ ಸೀನ್ ಬರ್ತದೆ..ನೋಡ್ತಾ ನೋಡ್ತಾ ಪಾರೂನ ಅಂತರಂಗದ ಆಸೆ ಮತ್ತೆ ಧುಸ್ಸೆಂದು […]

ಆರದಿರಲೀ ದೀಪ

ಕವಿತೆ ಆರದಿರಲೀ ದೀಪ ಶಾಂತಲಾ ಮಧು ಆರದಿರಲೀ ದೀಪಉತ್ಸಾಹದೀ ದೀಪಆರದಿರಲಿ ಕ್ಷಣಿಕ ಬದುಕಿನಸುಡುವ ಗಾಳಿಯಕನಸ ಮಾತಿನಭ್ರಮೆಯ ಬೆಂಕಿಗೆಆರದಿರಲಿ ದೀಪ ಮುಗಿಲ ಮೋಡದನಡುವೆ ಇಣುಕುವತಮವ ಕಳೆಯುವರವಿಯ ತೆರದಲಿ ಸ್ನೇಹ ಸಿಂಚನ ರಕ್ಷೆ ಇರಲಿಹರಿವ ನದಿಯ ಹರಿತವಿರಲಿಆರದಿರಲಿ ಉತ್ಸಾಹದೀ ದೀಪಆರದಿರಲಿ ಪ್ರೀತಿಉಸಿರ ಹಸಿರು ಉಳಿಯಲಿಮನಸು ಮನಸಿಗೆದೀಪವಾಗಲಿಆರದಿರಲಿ ದೀಪಉತ್ಸಾಹದೀ ದೀಪಆರದಿರಲಿ *******************

ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ

ಕವಿತೆ ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ ನಾಗರಾಜ್ ಹರಪನಹಳ್ಳಿ ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ ; ಅದಕೆ ನಾಮಗುವಿನಂತೆ ‌ನಿನ್ನ ಎದೆಗೊತ್ತಿಕೊಂಡೇ ಇರುವೆ ಜಗದ ತುಂಬಾ ಮುಗಿಲ ಬೆಳಕ ಯಾಕೆ ತುಂಬಿದೆ ಒಲವೇಅದಕೆ ನಾಅವಳ ಜಗದ ಕತ್ತಲೆಯಲ್ಲೂ ದೂರ ಇರುವ ಅವಳಹುಡುಕುತಿರುವೆ ನೂರಾರು ಬಣ್ಣಬಣ್ಣದ ಹೂಗಳ ಯಾಕೆ ಈ ಭೂಮಿಗೆ ಕಳಿಸಿದೆ ಒಲವೇಅದಕೆ ನಾ ; ಅವಳ ಕನಸುಗಳಿಗೆ ಬಣ್ಣ ತುಂಬಿದೆ ಯಾಕೆ ಪ್ರತಿ ಉಸಿರಿಗೂ ನಿನ್ನ ಹೆಸರ ಬರೆದೆ ಒಲವೇಅದಕೆ ನಾನಿನ್ನ ಧ್ಯಾನಿಸುವೆ […]

ಶುಭ ದೀಪಾವಳಿ

ಕವಿತೆ ಶುಭ ದೀಪಾವಳಿ ಮುರಳಿ ಹತ್ವಾರ್ ಒಣಗುವ ಮುನ್ನವೇ ಉದುರಿದ ಹಸಿ-ಹಸಿಯ ಎಲೆಗಳ ರಾಶಿ ಇಬ್ಬನಿಯ ತಬ್ಬಿದ ನೆಲವ ತುಂಬಿದೆ ಯಾವ ಹಸಿವಿನ ಹೊಟ್ಟೆಯ ಹೊಂಚೋ? ನಡುಗುತ ಸೊರಗಿವೆ ಬೋಳು ಮರಗಳು ಆಳದ ಬೇರಿಗೂ ಕರಗಿ ಹೋಗುವ ಚಿಂತೆಯಾವ ಕಾರಿರುಳ ರಕ್ಕಸ ಸಂಚೋ ? ಹಣತೆ ಹಣತೆಗಳ ಕಿರಣಗಳ ಬಾಣ ಬಂಧಿಸಲಿ ಭಯದ ಎಲ್ಲ ನೆರಳುಗಳ, ಹೊಸೆದ ಬೆಳಕಿನ ಶರ ಪಂಜರದಲಿ  ಒಲುಮೆಯ ಅಭಯದ ಆ ಬಯಲಲಿ ಮತ್ತೆ ಚಿಗುರಲಿ ಬಯಕೆಯ ಹಸಿರು ಹೊಸ ನಗೆಯ ತುಂಬಿ ಮುಖ ಪಂಕಜದಲಿ *******************

ವಿರಹ ತಾಪ

ಕವಿತೆ ವಿರಹ ತಾಪ ನಿ.ಶ್ರೀಶೈಲ ಹುಲ್ಲೂರು ತಿರುತಿರುಗಿ ಒರಗುತಿದೆಭಾವಲಹರಿಯ ಬುಗುರಿನಲಿವಿನಲು ಹಸಿಗಾಯಹೀಗೇಕೆ ಎದೆ ನಗರಿ ? ಎನಿತೆನಿತೊ ಆಸೆಗಳಹೊತ್ತ ಒಡಲಿನ ತುಡಿತನಿನ್ನೊಲವಿನಮಲಿನಲೆತೊಪ್ಪೆಯಾಗಿದೆ ಮಿಡಿತ ಬಾನು ರಂಗೇರಿದರುಬಿಡದು ಕಡಲಿನ ಮೊರೆತಕತ್ತಲೆಯನಪ್ಪಿದ ಕಣ್ಬೆಳಕಲು ನೆನಪಿನದೆ ಇರಿತ ಹಿಡಿದಷ್ಟು ಉಕ್ಕುವುದುಹಾಲ ನೊರೆಯಂತೆನೀನಿರದ ಈ ಬದುಕುನೀರಿರದ ಕೆರೆಯಂತೆ ಬಳಲಿದರು ತೆವಳುತಿದೆನಿನ್ನೆಡೆಗೆ ಈ ದೇಹಅದಾವ ಪರಿ ಸೆಳೆದೆ ನೀನರಳುತಿದೆ ಮೋಹ ಸುಖದ ಸುಗ್ಗಿಯನೆಲ್ಲಮಾಡುತಿಹೆ ಕನಸಿನಲಿಹುರಿದು ಮುಕ್ಕುವೆ ಏಕೆಸೊಗಸಿರದ ಮನಸಿನಲಿ ಕಂಕಣಬಲವಿಲ್ಲೆನಗೆ ನೀನೋಡಿ ಬಂದು ಬಿಡುಬರದಿದ್ದರೆ ಬೇಗ ಕೈಯಾರೆ ಕೊಂದು ಬಿಡು **********************************

ಭಾವಪೂರ್ಣ ಅಂತಿಮ ನಮನ.

ಭಾವಪೂರ್ಣ ಅಂತಿಮ ನಮನ. ಹುಬ್ಬಳ್ಳಿ ಯ ಕರ್ಮವೀರ ಕಾಲದಿಂದಲೂ ನಿನ್ನೆ ಮೊನ್ನೆಯವರಿಗೂ ಸುಮಾರು ಇಪ್ಪತ್ತು ವರ್ಷಗಳ ಆತ್ಮೀಯ ಒಡನಾಟ ಹೊಂದಿದ್ದ ನಾಡಿನ ದೈತ್ಯ ಬರಹಗಾರ ಆತ್ಮೀಯ ರವಿ ಬೆಳಗೆರೆ ಅವರ ಸಾವು ತುಂಬಾ ನೋವು ತಂದಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುವೆ.ನನ್ನ ನೂರಾರು ಹನಿಗವನ ,ಕವನ, ಗಜಲ್, ಕಥೆ,ಬರಹ ಪ್ರಕಟಿಸಿ ನನಗೆ ಒಂದು ಶಕ್ತಿಯಾಗಿದ್ದ ಈ ಓದುಗರ ದೊರೆ ನನಗೆ ಸ್ನೇಹಿತನಾಗಿದ್ದ ಎಂಬ ಹೆಮ್ಮೆ.ಈ ಕೊಂಡಿ ಇಷ್ಟು ಬೇಗ ಕಳಚಬಾರದಿತ್ತು. ಹುಬ್ಬಳ್ಳಿ ಯ ಕಸ್ತೂರಿ, ಸಂಯುಕ್ತ ಕರ್ನಾಟಕ […]

Back To Top