ಆರದಿರಲೀ ದೀಪ

ಕವಿತೆ

ಆರದಿರಲೀ ದೀಪ

ಶಾಂತಲಾ ಮಧು

Tea Lights, Candles, Light, Prayer

ಆರದಿರಲೀ ದೀಪ
ಉತ್ಸಾಹದೀ ದೀಪ
ಆರದಿರಲಿ

ಕ್ಷಣಿಕ ಬದುಕಿನ
ಸುಡುವ ಗಾಳಿಯ
ಕನಸ ಮಾತಿನ
ಭ್ರಮೆಯ ಬೆಂಕಿಗೆ
ಆರದಿರಲಿ ದೀಪ

ಮುಗಿಲ ಮೋಡದ
ನಡುವೆ ಇಣುಕುವ
ತಮವ ಕಳೆಯುವ
ರವಿಯ ತೆರದಲಿ

ಸ್ನೇಹ ಸಿಂಚನ ರಕ್ಷೆ ಇರಲಿ
ಹರಿವ ನದಿಯ ಹರಿತವಿರಲಿ
ಆರದಿರಲಿ ಉತ್ಸಾಹದೀ ದೀಪ
ಆರದಿರಲಿ

ಪ್ರೀತಿಉಸಿರ ಹಸಿರು ಉಳಿಯಲಿ
ಮನಸು ಮನಸಿಗೆ
ದೀಪವಾಗಲಿ
ಆರದಿರಲಿ ದೀಪ
ಉತ್ಸಾಹದೀ ದೀಪ
ಆರದಿರಲಿ


*******************

One thought on “ಆರದಿರಲೀ ದೀಪ

Leave a Reply

Back To Top