ಮಹಿಳಾದಿನದ ವಿಶೇಷ
ಹೆಣ್ಣು ಮಾಯೆಯಲ್ಲ ರೇಖಾ ವಿ.ಕಂಪ್ಲಿ ಹೆಣ್ಣು ಮಾಯೆಯಲ್ಲ ಹೆಣ್ಣು ನಿನ್ನ ಛಾಯೆಯೂ ಅಲ್ಲ ಹೆಣ್ಣು ಕಣ್ಣಿಗಬ್ಬವು ಅಲ್ಲ ಹೆಣ್ಣು ಕಾಮ ತೃಷೆಯೂ ಅಲ್ಲ ಹೆಣ್ಣು ಬರೀ ತಾಯಿಯಲ್ಲ ಹೆಣ್ಣು ಹೊನ್ನ ಆಶಿಸುವವಳಲ್ಲ ಹೆಣ್ಣು ಹಣದ ಬೆನ್ನು ಅಲ್ಲ ಹೆಣ್ಣು ಮಂದಾರ ಪುಷ್ಪವಲ್ಲ ಹೆಣ್ಣು ಚೆಂದದ ಗೊಂಬೆಯಲ್ಲ ಹೆಣ್ಣು ಮುನಿಯುವ ಮಾರಿಯಲ್ಲ ಹೆಣ್ಣು ನಿನ್ನ ಅಡಿಯಾಳು ಅಲ್ಲ ಹೆಣ್ಣು ನಿನ್ನ ಬದಲಿಸುವ ಕಣ್ಣು ಹೆಣ್ಣು ಶಕ್ತಿ ತುಂಬುವ ಆಂತಾಯ೯ ಶಕ್ತಿಯೊಂದು ಗಂಡಾದರೇ ಜಗದ್ಯುಕ್ತಿಯಾದವಳೇ ಹೆಣ್ಣು ***********
ಮಹಿಳಾದಿನದ ವಿಶೇಷ
ಮುಖವಾಡ ದಾಕ್ಷಾಯಣಿ ನಾಗರಾಜ ಮತ್ತೆ ಮುಸ್ಸಂಜೆಯಲಿ ಮುಸುಕಿನ ಗುದ್ದಾಟ ಆಗಷ್ಟೇ ಮುದ್ದೆಯಾದ ಹಾಸಿಗೆಯಲಿ ನಲುಗಿದ ಹೂಗಳ ಅಘ್ರಾಣಿಸಿ ತಡಕಾಡುತ್ತೇನೆ ಒಂದಷ್ಟಾದರೂ ನಿನ್ನ ಪ್ರೀತಿ ಘಮಲು ಉಳಿದಿದೆಯೇ ? ಪ್ರತಿಸಾರಿಯಂತೆಯೇ, ರವಷ್ಟು ಕೂಡ ಮುಲಾಜಿಲ್ಲದೆ ರಾಚುತ್ತದೆ ಮೂಗಿಗೆ ತುಸು ಕಾಮ ಮತ್ತಷ್ಟು ಗೆದ್ದೆನೆಂಬ ನಿನ್ನ ಅಹಂ,, ಜಾರಿದ ಕಣ್ಣಹನಿಗೆ ಜತನದಿಂದ ನಗುವಿನ ಮುಖವಾಡ ತೊಡಿಸಿಬಿಡುತ್ತೇನೆ ನೀನಿಲ್ಲದ ಮತ್ತೊಂದು ಮುಸ್ಸಂಜೆಯಲಿ ಮುಖವಾಡ ಕಳಚಿಟ್ಟು ನಿಂದಿಸುತ್ತೇನೆ ಹೇ ನಿರ್ದಯಿ ಬದುಕೇ ಅದೆಷ್ಟು ಮುಖವಾಡಗಳ ತೊಡಿಸುವೆ? ಜಾರಿಸುತ್ತಾ ಕಂಬನಿಗಳ ,,,, *******
ಮಹಿಳಾದಿನದ ವಿಶೇಷ
ವಿಪ್ಲವದ ಪತಂಗ ಶೃತಿ ಮೇಲುಸೀಮೆ ವಯಸ್ಸಿನ್ನೂ ಹದಿನಾಲ್ಕು ಎತ್ತ ನೋಡಿದರೂ ಹರಡಿರದ ಮೈ.. ಸಿನಿಮಾ ಮೋಡಿಯೋ ಹದಿವಯಸ್ಸಿನ ಮಂಕೋ ಆಗಿತ್ತಂತೆ ಪ್ರೇಮ.. ಶಾಲೆಗೆ ಬಿಟ್ಟು ಬಿಟ್ಟು ಬರೋ ಚಾಳಿ ಶುರುವಾಯಿತು ಶಾಲೆ ಹೋಗಲ್ಲ ಅನ್ನೋ ಖಯಾಲಿ.. ಬಂಧು ಒಬ್ಬನಿದ್ದನಂತೆ ಬಾಂಧವ್ಯ ಬೆಸೆಯಲು ಸಾಕಿತ್ತು ಇಷ್ಟು ಹೆತ್ತವರಿಗೆ ಊದಿಸಿದರು ವಾಲಗವ ಅಕ್ಷರದ ಬೆಲೆ ತಿಳಿಯದ ಹಿರೀಕರು ಯಾರಿಗೂ ಗೊತ್ತಾಗದಂತೆ ಮದುವೆ ಆಗಿಯೇ ಹೋಯಿತು ಕಗ್ಗತ್ತಲಲ್ಲಿ ತಿಳಿದೂ ತಿಳಿಯದೆ ಬಿದ್ದಿದ್ದಾಗಿತ್ತು ಸಂಸಾರದ ಸುಳಿಗೆ.. ಈಗೇನಿದ್ರೂ ದುಡಿತ ಬಿಡುವಿಲ್ಲದ ಗಳಿಗೆ.. ಹಸಿದ […]
ಮಹಿಳಾದಿನದ ವಿಶೇಷ
ಮುಖಾಮುಖಿ ಟಿ.ಎಸ್.ಶ್ರವಣಕುಮಾರಿ ಮುಖಾಮುಖಿ ಸುಜಾತ ಊರಿಗೆ ಬಂದು ನಾಲ್ಕು ದಿನವಾಗಿತ್ತಷ್ಟೆ. ಅವಳ ಗಂಡನಿಗೆ ಕಲ್ಕತ್ತೆಗೆ ವರ್ಗವಾಗಿ ಹೋದಮೇಲೆ ಇದೇ ಮೊದಲಸಲ ತವರಮನೆಗೆ ಬಂದಿರುವುದು. ಬೆಂಗಳೂರಿನಲ್ಲಿದ್ದಾಗ ವರ್ಷದಲ್ಲಿ ಮೂರ್ನಾಲ್ಕು ಸಲವಾದರೂ ಬಂದು ಹೋಗುತ್ತಿದ್ದವಳಿಗೆ ಈಗೆರಡು ವರ್ಷದಿಂದ ಬರಲು ಆಗಿರಲಿಲ್ಲ. ಮಕ್ಕಳೂ ಅಮ್ಮ ವಾಪಸ್ಸು ಹೋಗುವುದಕ್ಕೆ ವಾರದ ಮುಂಚೆ ಬಂದು ಸೇರಿಕೊಳ್ಳುತ್ತೇವೆ, ಅಲ್ಲಿಯವರೆಗೆ ಏನೇನೋ ಕ್ಲಾಸುಗಳಿವೆ ಎಂದು ಹೇಳಿ ಇವಳೊಂದಿಗೆ ಬರುವುದನ್ನು ತಪ್ಪಿಸಿಕೊಂಡಿದ್ದರು. ದೊಡ್ಡ ಹುಡುಗರಾದ್ದರಿಂದ ಇವಳೂ ಒತ್ತಾಯಿಸಲು ಹೋಗಿರಲಿಲ್ಲ. ಎಷ್ಟೇ ಫೋನಲ್ಲಿ ಅಮ್ಮನ ಹತ್ತಿರ ಮಾತಾಡುತ್ತಿದ್ದರೂ ಎದುರೆದುರು ಕೂತು […]
ಮಹಿಳಾದಿನದ ವಿಶೇಷ
ಗೆಳತಿ ಕೇಳೆ ದೀಪಿಕಾಬಾಬು ಗೆಳತಿ ಕೇಳೆ, ಎಲ್ಲರಂತಲ್ಲ ನನ್ನವನು, ನನ್ನವನು ನನಗಾಗಿ ಇರುವವನು..! ತನ್ನ ಹಣೆಯ ಬರಹ ಬರೆದುಕೊಳ್ಳಲಾಗದೆ ಬೇರೆಯೆಲ್ಲರ ವಿಧಿ ಲಿಖಿತ ಬರೆಯುತ್ತ, ಸೃಷ್ಟಿಸಿದ ಮಗಳಾದ ಸರಸ್ವತಿಯನ್ನು ವರಿಸಿದ ಮೂರು ಶಿರವುಳ್ಳ ಬ್ರಹ್ಮನಂತಲ್ಲ, ಕಣೆ ಗೆಳತಿ ನನ್ನವನು..! ಸ್ಮಶಾನದ ಅಧಿಪತಿಯಾಗಿ ಭಸ್ಮ ಬಳಿದುಕೊಂಡು ಕೈಲಾಸನಾಥನೂ ಎನಿಸಿಕೊಂಡು ಪಾರ್ವತಿಯನ್ನು ವಿವಾಹವಾಗಿ ಗಂಗೆಯನ್ನು ಶಿರದಲ್ಲಿ ಮುಡಿದಿಹ ಶಂಕರನಂತಲ್ಲ , ಕಣೆ ಗೆಳತಿ ನನ್ನವನು..! ಶಾಂತ ಸಾಗರದಲ್ಲಿ ಸರ್ಪದ ಮೇಲೆ ಆಯಾಗಿ, ಲೋಕದ ಬಗ್ಗೆ ಚಿಂತಿಸದೆ ಮಲಗಿರುವ, ಶ್ರೀ ಮಹಾಲಕ್ಷ್ಮಿಯು […]
ಮಹಿಳಾದಿನದ ವಿಶೇಷ
ನಮ್ಮೊಳಗಿನ ಬೆಳಕು ಬಿದಲೋಟಿರಂಗನಾಥ್ ಹೆಣ್ಣೆಂದರೇ ನಮ್ಮೊಳಗಿನ ಬೆಳಕು ಹೆಣ್ಣೆಂದರೆ ಭೂಮಿ ತೂಕ.ಆಕೆಯು ಸಕಲವನ್ನು ಹೊತ್ತು ಸಾಗುತ ಬದುಕನ್ನು ನೀಸಿದವಳು.ಮನೆಯೆಂದರೆ ಅವಳು ತೊಲೆ ಕಂಬ.ಅದಿಲ್ಲದೆ ಛಾವಣಿ ಎಲ್ಲಿ ನಿಂತಿತು.ಹೆಣ್ಣು ಕುಟುಂಬದ ಕಣ್ಣು.ಎಲ್ಲರನ್ನು ನೋಡುತ್ತಾ ಪೊರೆಯುತ್ತಾ,ಅವರ ಸೇವೆಗಳನ್ನು ಮಾಡುತ್ತಾ ಬದುಕನ್ನು ಏಗಿದವಳು ಎಂದರೆ ತಪ್ಪಾಗಲಾರದು.ಒಂದು ಹೆಣ್ಣು ಮಗಳಾಗಿ ,ಹೆಂಡತಿಯಾಗಿ ಅತ್ತೆಯಾಗಿ ಸೊಸೆಯಾಗಿ ಸಕಲ ಪಾತ್ರಗಳನ್ನು ನಿರ್ವಹಿಸುತ್ತಾ ಸೈ ಎನಿಸಿಕೊಂಡವಳು.ಅವಳಿಲ್ಲದೆ ಬದುಕೇ ಶೂನ್ಯ.ಅವಳನ್ನು ಸಮಾಜ ನೋಡುವ ದೃಷ್ಠಿ ಬದಲಾಗಬೇಕು.ಗಾಂಧೀಜಿಯ ಆಸೆಯಂತೆ ಒಂದು ಹೆಣ್ಣು ನಡುರಾತ್ರಿಯಲ್ಲಿ ನಿರ್ಭಿಡೆಯಾಗಿ ಓಡಾಡುವಂತಹ ಸಮಾಜ ನಿರ್ಮಾಣ ಆಗಬೇಕು. […]
ಮಹಿಳಾದಿನದ ವಿಶೇಷ
ಹೆಣ್ಣಿನ ಸ್ವಗತ ಪ್ರೊ.ಕವಿತಾ ಸಾರಂಗಮಠ ಹೆಣ್ಣಿನ ಸ್ವಗತ ಹೆತ್ತವರಿಗೆ ಸಾಲವಾದೀತೆಂದು ಓದು ತ್ಯಜಿಸಿ ಸದಾ ನಗು ಬೀರುವಳು..! ವರದಕ್ಷಿಣೆ ಭಾರವಾದೀತೆಂದು ಮನ ಹಿಡಿಸದ ಮದುವೆಗೊಪ್ಪಿ ಸದಾ ನಗು ಬೀರುವಳು..! ಗೌರವ ಹಾಳಾದೀತೆಂದು ಕುಡುಕ ಪತಿಯೊಂದಿಗೆ ರಾಜಿಯಾಗಿ ಸದಾ ನಗು ಬೀರುವಳು..! ಇಲ್ಲ ಸಲ್ಲದ ಅಪವಾದಗಳೆಂದು ಒಡನಾಡಿಗಳೊಂದಿಗೆ ಹೊಂದಿಕೊಂಡು ಸದಾ ನಗು ಬೀರುವಳು..! ಸಮಾಜದಿ ಗಾಳವಾಗಬಾರದೆಂದು ಶೀಲಾಪಹರಣಗೊಂಡು ಆತ್ಮಹತ್ಯೆಗೆ ಶರಣಾದರೂ ನಗು ಬೀರುವಳು..! ಊರ್ಮಿಳೆ,ಅಹಲ್ಯೆ, ಸೀತೆಯರಿಗೆ ಅಪವಾದ ತಪ್ಪಲಿಲ್ಲ ,ನಾನಾವ ಲೆಕ್ಕವೆಂದು ಸದಾ ನಗು ಬೀರುವಳು..! ಅಸಹಜ ನಗುವ […]
ಮಹಿಳಾದಿನದ ವಿಶೇಷ
ಮಹಿಳಾ ಸಾಹಿತ್ಯ ಅಂದು ಇಂದು ಸುಜಾತಾ ರವೀಶ್ ಮಹಿಳಾ ಸಾಹಿತ್ಯ ಅಂದು ಇಂದು ಕವಿ ಮಹಾಲಿಂಗರು ಹೇಳುತ್ತಾರೆ “ಸುಲಿದ ಬಾಳೆಯ ಹಣ್ಣಿನಂದದ ಕಳೆದ ಸಿಗುರಿನ ಕಬ್ಬಿನಂದದ ಅಳಿದ ಉಷ್ಣದ ಹಾಲಿನಂದದ ಕನ್ನಡ ಸಾಹಿತ್ಯ”ಎಂದು. ನಿಜ ಮಧುರಕ್ಕೆ ಮಧುರವೂ ಸವಿಗೆ ಸವಿಯೂ ಆದ ನಮ್ಮ ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಕಡೆಗಣಿಸುವಂತಹದ್ದಲ್ಲ. ಪ್ರಚಲಿತವಿದ್ದ ಸ್ತ್ರೀಯರ ಸ್ಥಾನಮಾನ ನೆಲೆ ಬೆಲೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದಾಗ ಈ ಪಾಲು ಕಡಿಮೆಯೇ. ಮಹಿಳಾ ಸಾಹಿತ್ಯವನ್ನು ಕಾಲಘಟ್ಟದ ಮಾಪನದಲ್ಲಿಟ್ಟು ಅಳೆದು ನೋಡುವಾಗ ಈ ರೀತಿ ವಿಂಗಡಿಸಬಹುದು […]
ಮಹಿಳಾದಿನದ ವಿಶೇಷ
ವ್ಯಾಖ್ಯಾನ ಬೇಕೇ? ಪದ್ಮಜಾ ಜೋಯಿಸ್ ಯತ್ರ ನಾರ್ಯಾಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಹೆಣ್ಣಿಗೊಂದು ವ್ಯಾಖ್ಯಾನ ಬೇಕಾಗಿಲ್ಲ, ಹೆಣ್ಣೆಂದರೆ ಹೆಣ್ಣಷ್ಟೇ.. ಕೋಪ, ಅಸೂಯೆ, ಜಗಳ ಎಲ್ಲದರ ಹಿಂದೆಯೂ ಆಕೆಗಿರುವುದು ತನ್ನವರಿಗಾಗಿ ತಾನೆರೆವ ಮತ್ತು ತನಗಾಗಿ ತಾನು ಬಯಸುವ ನೈಜ ಪ್ರೀತಿ ಅಷ್ಟೇ… ಹೆಣ್ಣಾಗಿ ಹುಟ್ಟಿದ್ದೇ ನಮ್ಮ ಹಿರಿಮೆ ಇದೇ ನಮ್ಮ ಹೆಮ್ಮೆ… ವಿಶ್ವ ಮಹಿಳಾ ದಿನಾಚರಣೆಯ ಶುಭಕಾಮನೆಗಳು.. ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನ .. ಒಂದಿಷ್ಟು ಅಂತರಂಗದ ಆತ್ಮಾವಲೋಕನ… ಇನ್ನೊಬ್ಬರನ್ನು ಮುಕ್ತರಾಗಿಸಲು ಹಂಬಲಿಸುವ ನಾವೆಷ್ಟು ಮುಕ್ತರು […]
ಮಹಿಳಾದಿನದ ವಿಶೇಷ
ಮಹಿಳಾ ದಿನಾಚರಣೆ ಕೆ.ಶಿವುಲಕ್ಕಣ್ಣವರ ಅಂತರಾಷ್ಟ್ರೀಯ ಮಹಿಳೆಯರ ದಿನಾಚರಣೆ– ಪ್ರತಿ ವರ್ಷ ಮಾರ್ಚ್ ೮ ರಂದು ವಿಶ್ವದೆಲ್ಲೆಡೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ… ಈ ಮಹಿಳಾ ದಿನಾಚರಣೆಯ ಇತಿಹಾಸ ಮತ್ತು ಮಹತ್ವ– ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ “ಅಂತರಾಷ್ಟ್ರೀಯ ಮಹಿಳೆಯರ ದಿನ”ವನ್ನು ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ , ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲು ತಮ್ಮದೆ ಆದ ಛಾಪನ್ನು ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನು ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. […]