ಮಹಿಳಾ ದಿನಾಚರಣೆ
ಕೆ.ಶಿವುಲಕ್ಕಣ್ಣವರ
ಅಂತರಾಷ್ಟ್ರೀಯ ಮಹಿಳೆಯರ ದಿನಾಚರಣೆ–
ಪ್ರತಿ ವರ್ಷ ಮಾರ್ಚ್ ೮ ರಂದು ವಿಶ್ವದೆಲ್ಲೆಡೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ…
ಈ ಮಹಿಳಾ ದಿನಾಚರಣೆಯ ಇತಿಹಾಸ ಮತ್ತು ಮಹತ್ವ–
ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ “ಅಂತರಾಷ್ಟ್ರೀಯ ಮಹಿಳೆಯರ ದಿನ”ವನ್ನು ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ , ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲು ತಮ್ಮದೆ ಆದ ಛಾಪನ್ನು ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನು ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. ೧೯೭೫ರ “ಅಂತರಾಷ್ಟ್ರೀಯ ಮಹಿಳೆಯರ ದಿನ”ದ ಸಮಯದಲ್ಲಿ, ಮಾರ್ಚ್ ೮ ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನು ಆಚರಿಸಲು ಆರಂಭಿಸಿದವು…
ಎರಡು ವರ್ಷದ ನಂತರ,೧೯೭೭ರಲ್ಲಿ, “ದಿ ಜನರಲ್ ಅಸ್ಸೆಂಬ್ಲಿ” ಮಹಿಳೆಯರ ಹಕ್ಕು ಮತ್ತು ಶಾಂತಿ ಸ್ಥಾಪನೆಯನ್ನು ಆಯಾ ದೇಶದ ಸದಸ್ಯರು ಗಮನಿಸಿ ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು. ಹೀಗೆ ಕರೆನೀಡುವಾಗ ಮಹಿಳೆಯ ಪಾತ್ರ ಹಾಗೂ ಅವರ ಮೇಲೆ ನಡೆಯುತ್ತಿರುವ ಪಕ್ಷಪಾತವನ್ನು ಗಮನಿಸಿ ಅವರಿಗೆ ಸ್ಪರ್ಧಿಸುವ ಪೂರ್ತಿ ಅವಕಾಶವನ್ನು ನೀಡುವಂತೆ ಘೋಷಿಸಿತು…
“ಅಂತರಾಷ್ಟ್ರೀಯ ಮಹಿಳೆಯರ ದಿನ” ಮೊದಲ ಬಾರಿಗೆ ಹೊರಹೊಮ್ಮಿದ್ದು ಕೂಲಿ ಚಳುವಳಿ(ಲೇಬರ್ ಮೊವ್ಮೆಂಟ್ಸ್) ಚಟುವಟಿಕೆ ಉತ್ತರ ಅಮೆರಿಕ ಮತ್ತು ಯೂರೋಪ್ ಪ್ರದೇಶಗಳಲ್ಲಿ ನಡೆದಾಗ.
೧೯೦೯ರಲ್ಲಿ ಸಂಯುಕ್ತ ಸಂಸ್ಥಾನಗಳಲ್ಲಿ ಮೊದಲ “ಅಂತ ರಾಷ್ಟ್ರೀಯ ಮಹಿಳೆಯರ ದಿನ”ಫೆಬ್ರವರಿ ೨೮ ರಂದು ಕಂಡು ಬಂತು…
ಅಮೇರಿಕಾದ ಸಮಾಜವಾದಿ ಪಕ್ಷ ಈ ದಿನವನ್ನು ಕೆಲಸದ ಪರಿಸ್ಥಿತಿಯನ್ನು ವಿರೋಧಿಸಿ ನ್ಯುಯಾರ್ಕ್ ನಗರದಲ್ಲಿ ನಡೆದ “ಸರ್ಕಾರಿ ಕಾರ್ಮಿಕರ ಚಳುವಳಿ”ಯಲ್ಲಿ ಪ್ರತಿಭಟಿಸಿದ ಮಹಿಳೆಯರಿಗೆ ಅರ್ಪಿಸಲಾರಿತು. ೧೯೧೦ರಲ್ಲಿ ಅಂತರಾಷ್ಟ್ರೀಯ ಸಮಾಜವಾದಿ ಕೊಪೆಂಹಗೆನ್ ನಲ್ಲಿ ನಡೆದ ಚರ್ಚೆಯಲ್ಲಿ ಅದಿಷ್ಟಿತಗೊಳಿಸಲಾಯಿತು. ಈ ಪ್ರಸ್ಥಾಪವನ್ನು ಅವಿರೋಧವಾಗಿ ೧೦೦ ಮಹಿಳೆಯರು ೧೭ ದೇಶಗಳಿಂದ ಸಹಕರಿಸಿದರು, ಇದು ಫಿನ್ನಿಷ್ ಪಾರ್ಲಿಮೆಂಟ್ ಗೆ ಆಯ್ಕೆಯಾದ ಮೊದಲ ಮೂವರು ಮಹಿಳೆಯರನ್ನೂ ಸಹ ಒಳಗೊಂಡಿತ್ತು…
೧೯೧೧ರಲ್ಲಿ ಕೊಪೆಂಹಗೆನ್ ನ ಮೊದಲ ಹೆಜ್ಜೆಯ ಫಲಿತಾಂಶವಾಗಿ, ಅಂತರಾಷ್ಟ್ರೀಯ ಮಹಿಳೆಯರ ದಿನವನ್ನ ಮೊದಲ ಬಾರಿಗೆ ಮಾರ್ಚ್ ೧೯ ರಂದು ಆಸ್ಟ್ರೇಲಿಯ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಡ್ಜರ್ಲ್ಯಾಂಡ್ ದೇಶಗಳು ಗುರುತಿಸಿದವು…
ಅಂದು ಒಂದು ಮಿಲಿಯನ್ ಗಿಂತಲೂ ಹೆಚ್ಹು ಮಹಿಳೆಯರು ಹಾಗೂ ಪುರುಷರು ಈ ಚಳುವಳಿಯಲ್ಲಿ ಭಾಗವಹಿಸಿದರು…
ಇದಲ್ಲದೇ ಮತಚಲಾಯಿಸುವ ಹಕ್ಕು, ಸಾರ್ವಜನಿಕ ಕಛೇರಿ, ಮಹಿಳೆಯರಿಗೆ ಕೆಲಸ ಮಾಡುವ ಹಕ್ಕು ಹಾಗೂ ಉದ್ಯೋಗ ತರಬೇತಿಯನ್ನು ಜಾರಿಗೆ ತರಲು ಬೇಡಿಕೆಯಿಟ್ಟಿದ್ದಲ್ಲದೇ ಕೆಲಸದಲ್ಲಿನ ತಾರತಮ್ಯವನ್ನು ವಿರೋಧಿಸಿ ಪ್ರತಿಭಟಿಸಿದರು…
೧೯೧೩-೧೯೧೪ರಲ್ಲಿ ಅಂತರಾಷ್ಟ್ರೀಯ ಮಹಿಳೆಯರ ದಿನದ ಆಚರಣೆ “೧ನೇ ವಿಶ್ವ ಯುದ್ಧ”ವನ್ನು ತಡೆಗಟ್ಟುವ ಯಾಂತ್ರಿಕ ಕೌಶಲ್ಯವಾಗಿ ಮಾರ್ಪಟ್ಟಿತು…
ಇದೇ ವೇಳೆಯಲ್ಲಿ ಶಾಂತಿ ಚಳುವಳಿಯ ಅಂಗವಾಗಿ ರಷ್ಯಾದ ಮಹಿಳೆಯರು ಫೆಬ್ರವರಿಯ ಕೊನೆಯವಾರದಲ್ಲಿ ವಿಶ್ವ ಮಹಿಳಾ ದಿನವನ್ನು ಆಚರಿಸಿ ಗಮನಸೆಳೆದರು. ಅತ್ತ ಯುರೋಪಿನಲ್ಲಿ ಅದೇ ಸಾಲಿನ ಮಾರ್ಚಿ ೮ ರಂದು ಮಹಿಳೆಯರು ಯುದ್ಧನೀತಿಯನ್ನು ವಿರೋಧಿಸಿ, ಐಕ್ಯಮತವನ್ನು ಸಹಕರಿಸಿ ಬೃಹತ್ ಚಳುವಳಿ ನಡೆಸಿದರು…
೧೯೧೭ರಲ್ಲಿ ಮತ್ತೆ ಯುದ್ಧ ನೀತಿಯನ್ನು ವಿರೋಧಿಸಿ ರಷ್ಯಾದ ಮಹಿಳೆಯರು ಊಟ ಮತ್ತು ಶಾಂತಿ ಚಳುವಳಿಯನ್ನು ಫೆಬ್ರವರಿ ತಿಂಗಳ ಕೊನೆಯ ಭಾನುವಾರದಲ್ಲಿ. ಇದು ಗ್ರೆಗೊರಿಯನ್ ಕ್ಯಾಲೆಂಡರಿನ ಪ್ರಕಾರ ಮಾರ್ಚಿ ೮) ನಡೆಸಿದರು…
ನಾಲ್ಕು ವಾರಗಳ ನಂತರ ರಾಜ ಮನೆತನದ ಆಳ್ವಿಕೆಯನ್ನು ನಿಲ್ಲಿಸಿ ಮತಚಲಾಯಿಸುವ ಅಧಿಕಾರವನ್ನು ಸರ್ಕಾರ ನೀಡಿತು. ಅಂದಿನ ದಿನಗಳಲ್ಲಿ ಮಹಿಳಾ ದಿನಾಚರಣೆ ಮುಂದುವರೆದ ಮತ್ತು ಮುಂದುವರೆಯುತ್ತಿರುವ ದೇಶಗಳಲ್ಲಿ ಹೊಸ ಆಯಾಮವನ್ನು ಪಡೆಯಿತು…
ಬೆಳೆಯುತ್ತಿದ್ದ ಅಂತರಾಷ್ಟ್ರೀಯ ಮಹಿಳಾ ಚಳುವಳಿ, ಅವುಗಳ ಸಾಮರ್ಥ್ಯವನ್ನು ಹೆಚ್ಹಿಸಿದ ನಾಲ್ಕು “ಜಾಗತಿಕ ಸಂಯುಕ್ತ ರಾಷ್ಟ್ರೀಯ ಮಹಿಳಾ ಸಮಾಲೋಚನೆ”, ಮಹಿಳಾ ಹಕ್ಕು, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಭಾಗವಹಿಸುವ ಹಕ್ಕನ್ನು ಪಡೆಯಲು ಪೋಷಿಸಿದವು.
ದಿನಕಳೆದಂತೆ ಅಂತರಾಷ್ಟ್ರೀಯ ಮಹಿಳೆಯರ ದಿನ ಬೆಳವಣಿಗೆಯ ಪ್ರತಿಬಿಂಬದ ಜೊತೆಗೆ ಸಾಧರಣ ಮಹಿಳೆಯ ಧೀರತನ ಮತ್ತು ಧೃಡತೆ, ದೇಶ ಹಾಗೂ ಸಮುದಾಯದ ಇತಿಹಾಸದಲ್ಲಿ ವಹಿಸಿದ ಅಸಾಧಾರಣ ಪಾತ್ರವನ್ನು ಬಿಂಬಿಸುತ್ತಾ ಬದಲಾವಣೆಯ ಕರೆಯನ್ನು ನೀಡುತ್ತದೆ…
ಸಂಯುಕ್ತ ರಾಷ್ರಗಳು ಮತ್ತು ಲಿಂಗ ಸಮಾನತೆಗಾಗಿ–
೧೯೪೫ ರಲ್ಲಿ ಸಹಿ ಮಾಡಿದ ಸಂಯುಕ್ತ ರಾಷ್ಟ್ರಗಳ ಅಂತರಾಷ್ಟ್ರೀಯ “ಲಿಂಗ ಸಮಾನತಾ ತತ್ವ” ಅಂಗೀಕಾರಕ್ಕೆ ಬಂತು. ಅಲ್ಲಿಯ ನಂತರ ವಿಶ್ವವ್ಯಾಪ್ಯ ಒಪ್ಪಂದ ನೀತಿ, ನಿರ್ದಿಷ್ಟಮಾನ, ಮಹಿಳಾಭಿವ್ರುದ್ದಿ ಕಾರ್ಯಕ್ರಮ ಹಾಗೂ ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಕೆಲವರ್ಷಗಳ ನಂತರ ಸಂಯುಕ್ತ ರಾಷ್ರಗಳು ಮತ್ತು ಅದರ ತಾಂತ್ರಿಕ ಏಜೆನ್ಸ್ಸಿಗಳು ಮಾನವ ಹಕ್ಕುಗಳನ್ನು ಅಭಿನಂದಿಸಿ ಮಹಿಳೆಯರು ಭಾಗವಹಿಸುವುದನ್ನು ಪ್ರೋತ್ಸಾಹಿಸಿದವು. ಮಹಿಳೆಯರನ್ನು ಪ್ರಭಲಗೊಳಿಸುವ ಸಂಯುಕ್ತ ರಾಷ್ರಗಳ ಕಾರ್ಯ ವಿಶ್ವದಾದ್ಯಂತ ಇಂದು ಮುಂದುವರೆಯುತ್ತದೆ..!
ಇದಿಷ್ಟು ಮಹಿಳಾ ದಿನದ ಇತಿಹಾಸ ಮತ್ತು ಮಹತ್ವ…
***************************