ಮಹಿಳಾದಿನದ ವಿಶೇಷ

ವ್ಯಾಖ್ಯಾನ ಬೇಕೇ?

Image result for logos of womansday

ಪದ್ಮಜಾ ಜೋಯಿಸ್

Image may contain: 1 person, smiling

ಯತ್ರ ನಾರ್ಯಾಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’

ಹೆಣ್ಣಿಗೊಂದು ವ್ಯಾಖ್ಯಾನ ಬೇಕಾಗಿಲ್ಲ,
ಹೆಣ್ಣೆಂದರೆ ಹೆಣ್ಣಷ್ಟೇ..
ಕೋಪ, ಅಸೂಯೆ, ಜಗಳ ಎಲ್ಲದರ ಹಿಂದೆಯೂ ಆಕೆಗಿರುವುದು ತನ್ನವರಿಗಾಗಿ ತಾನೆರೆವ ಮತ್ತು ತನಗಾಗಿ ತಾನು ಬಯಸುವ ನೈಜ ಪ್ರೀತಿ ಅಷ್ಟೇ…

ಹೆಣ್ಣಾಗಿ ಹುಟ್ಟಿದ್ದೇ ನಮ್ಮ ಹಿರಿಮೆ
ಇದೇ ನಮ್ಮ ಹೆಮ್ಮೆ…

ವಿಶ್ವ ಮಹಿಳಾ ದಿನಾಚರಣೆಯ ಶುಭಕಾಮನೆಗಳು..

ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನ .. ಒಂದಿಷ್ಟು ಅಂತರಂಗದ ಆತ್ಮಾವಲೋಕನ…
ಇನ್ನೊಬ್ಬರನ್ನು ಮುಕ್ತರಾಗಿಸಲು ಹಂಬಲಿಸುವ ನಾವೆಷ್ಟು ಮುಕ್ತರು ???
ಹೆಜ್ಜೆಜ್ಜೆಗೂ ಇದಿರಾಗುವ ಹಿತಶತೃಗಳು ..
ಪ್ರತಿಷ್ಠೆಗಾಗಿ ಹೆಂಗಸರ ಸ್ವಂತಿಕೆ, ನೈತಿಕ ಸ್ಥೈರ್ಯ, ಆತ್ಮಾಭಿಮಾನ , ಪುಡಿರೌಡಿಗಳಿಗೆ ಬಲಿಯಿಟ್ಟು ದರ್ಪ ದೌರ್ಜನ್ಯ ಮೆರೆಯುವವರ ನಡುವಲ್ಲಿ ಈ ವ್ಯವಸ್ಥೆಯ ಚೌಕಟ್ಟಿನಲ್ಲಿ ಬದುಕುವ ನಾವೆಷ್ಟು ಸ್ವತಂತ್ರರು ???
ಹೆಣ್ಣಿಗೆ ಹೆಣ್ಣೇ ಶತೃ ಇದೂ ಬಹುಭಾಗ ಯಾಕೆ ನಿಜವಾಗತ್ತೆ…
ಇವರುಗಳಿಗಿಂತ ಪ್ರಾಣಿಗಳು ಮೇಲಲ್ಲವೇ ??

“ಶ್ರೀಲಕ್ಷ್ಮೀ ಅವತಾರ ಎಂದೇ ಕರೆಸಿಕೊಳ್ಳುವ ತನ್ನ ಜನ್ಮ ರಹಸ್ಯವೇ ಯಾರರರಿವಿಗೂ ಬಾರದ಼ಂತೆ ಕಾಪಿಟ್ಟುಕೊಂಡು ಬೆಳೆದ ಮನೆಯಲ್ಲೂ ಪರಕೀಯಳಾಗಿ ಕಟ್ಟಿಕೊಂಡವನಿಂದ ಸದಾ ಒಂದಲ್ಲೊಂದು ಕಾರಣಕ್ಕೆ ದೂರವಾಗಿಯೇ ಕಾಲ ಹಾಕುವ ಸೀತಾಮಾತೆ , ಬೀದಿ ಬಸವನೊಬ್ಬನ ಅಯೋಗ್ಯ ಮಾತುಗಳಿಗೆ ಬಲಿಯಾಗಿ ಸ್ವಪ್ರತಿಷ್ಠೆಗಾಗಿ ವ಼ಂಶದ ಕುಡಿ ಹೊತ್ತ ತುಂಬು ಗರ್ಭಿಣಿ ಧರ್ಮಪತ್ನಿಯ ಹೇಳದೇ ಕೇಳದೇ ಗಡಿಪಾರು ಮಾಡಿ ಕಾಡುಪಾಲು ಮಾಡುವ ರಾಮಚಂದ್ರನ ಆದರ್ಶವಾಗಿ ಮಾಡುವ ಈ ಸಮಾಜ ಈ ಸಂಬಂಧಗಳಿಂದ ಏನನ್ನ ತಾನೆ ನಿರೀಕ್ಷಿಸಬಹುದು ??? ಬೇಲಿಯೇ ಎದ್ದು ಹೊಲ ಮೇಯ್ದಂತಲ್ಲವಾ ?? ಇಂದಿಗೂ ಈ ಪರಿಪಾಠ ಬದಲಾಗೋಲ್ಲ ಎಲ್ಲ ಸಂಬಂಧಗಳಲ್ಲೂ.. ಹಚ್ಚಿಹಾಕೋ ಮನೆಹಾಳರಿದ್ದಷ್ಟು ಕಾಲ ಹೊರಹಾಕೋ ಮನೆಮ಼಼ಂದಿಯಿರ್ತಾರೆ,
“ಪದೇ ಪದೇ ಅವಮಾನಿಸಿ ಹೊರಹಾಕುವ ಮತ್ತೆ ಕರೆಯುವ ಶ್ರೀರಾಮನ ನಡೆಯಿಂದ ಬೇಸತ್ತು ತಾಯ ಒಡಲಿಗೆ ಮರಳುವ
ಸೀತೆಯೇ ನಮಗೆ ಆದರ್ಶವಾದರೇ….
ಮೊನ್ನೆ ಯಾರೋ ಕೇಳಿದ್ರು ಅದೇನು ಆಶ್ರಮ ??
ಅಬಲಾಶ್ರಮ ಮಾಡ್ತೀರಾ ?? ಯಾವುದೋ ಕಾಲದಲ್ಲಿ
ಇದ್ದಿರಬಹುದು ಅಬಲೆ ಎಂಬ ಅನ್ವರ್ಥನಾಮದ ಹೆಣ್ಣು.. ಕಾಲಮಾನಕ್ಕೆ ತಕ್ಕಂತೆ ಪರಿಸ್ಥಿತಿಗನುಗುಣವಾಗಿ
ಇಂದು ಹೆಣ್ಣು ತನ್ನ ದುಡಿಮೆ ತನ್ನ ಬದುಕು ತಾನೇ
ನೋಡ್ಕೊಂಡು. ಬೇರೊಬ್ಬರ ಬದುಕಿಗೂ ಊರುಗೋಲಾಗಿದ್ದಾಳೆ.. ತಾನೂ ದುಡಿದು ನಾಲ್ವರ ದುಡಿಮೆಗೆ ದಾರಿಯಾಗೋ ಲಕ್ಷಾಂತರ ಮ಼ಂದಿ ಹೆಣ್ಮಕ್ಕಳು ನಮ್ಮ ನಡುವಿದ್ದಾರೆ… ಇಂಥವರು ಕಟ್ಟುವ ಸಂಸ್ಥೆಯಾಗಲೀ ಅದು ನೀಡುವ ನೆಲೆಯಾಗಲೀ ಅಬಲಾಶ್ರಮವಲ್ಲ ಸಬಲಾಶ್ರಮ ಅಲ್ಲವೆ ??
ನಂಗೆ ಕೆಲವರು ಯಾವಾಗಲೂ ಹೇಳ್ತಿದ್ರು ನೀನು ಧಿಕ್ಕರಿಸಿ ನಿಂತಂದು ನಿನ್ನ ಬದುಕು ನಿನ್ನದು… ಹೌದು ಬದುಕಿನಲ್ಲಿ ಇದುವರೆಗೂ ಮಾಡಬಾರದೆಂದುಕೊಂಡ ಒ಼ಂದು ಕೆಲಸ ..
ಅದೇ ಕಾರಣಕ್ಕೆ ಪದೇ ಪದೇ ಶೋಷಣೆ ಅವಮಾನಕ್ಕೊಳಗಾಗುವ ಹಿಂಸೆ …. ನೋವು ನುಂಗಿ ನಗುವ ಯತ್ನ …. ಇಂದು ಮಗ ಹದಿನೆಂಟರ ಹೊಸ್ತಿಲಲ್ಲಿ ನಿಂತಿದ್ದಾನೆ..
ಬದುಕಿನುದ್ದಕ್ಕೂ ಉರಿದ ಹೆತ್ತ ತಾಯಿಯ ನೋವಿಗೆ ಅವಮಾನಕ್ಕೆ ಪ್ರತಿರೋಧಿಸುವ ಹಂತ ತಲುಪಿದ್ದಾನೆ… ಇದನ್ನು ಸರಿಯೆನ್ನಲಾ ತಪ್ಪೆನ್ನಲಾ ?? ಒಂದು ವೇಳೆ ಅಲ್ಲಗೆಳೆದರೇ ಶೋಷಣೆಯ ಒಪ್ಪಿಕೊಂಡಂತಾಗುವುದಿಲ್ಲವೆ ?? ಸ್ವಾವಲಂಬನೆಯ ಸ್ವಂತಿಕೆಯ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲೆತ್ನಿಸುವ ಸಾವಿರಾರು ತಾಯಂದಿರಿಗೆ ಇದು ಅವಮಾನವಲ್ಲವೆ ??
ಈ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಈ ಮಾನಸಿಕ ನೋವಿನಿಂದ ಮುಕ್ತಳಾಗಲು ಏಕಾಂತದ ಬದುಕನ್ನಾಯ್ದುಕೊಂಡು ನಂಗೂ ತನ್ನ ನಡವಳಿಕೆಯಿಂದ ನಿನ್ನ ಪಾಡಿಗೆ ನೀ ಬದುಕು ಎಂದು ತೋರಿಸಿದ , ತನ್ನ ಗಂಡನ ಆಸ್ತಿಯಲ್ಲಿ ತನಗೆ ಬಂದದ್ದರಲ್ಲಿ ನನಗೂ ಹಂಚಿ ನನ್ನ ಸ್ವಂತಿಕೆ ಸ್ವಾಭಿಮಾನದ ಬದುಕಿಗೆ ಊರುಗೋಲಾದ ನನ್ನ ಹೆತ್ತಮ್ಮ ಸ್ವರ್ಣರಿಗೆ ಮೊತ್ತ ಮೊದಲ ಮಹಿಳಾ ದಿನಾಚರಣೆಯ ಹಾರ್ಧಿಕ ಶುಭಾಶಯಗಳು…
ಇಂದಿಗೆ ಈ ಹಿತಶತೃವಿನಂಥ ಸಾಮಾಜಿಕ ವ್ಯವಸ್ಥೆಯಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ನನ್ನಮ್ಮನ ಭಿಕ್ಷೆ..
ಅಲ್ಲದೇ ಬೇರೇನೂ ಅಲ್ಲ… ಪ್ರತೀ ಹಂತದಲ್ಲೂ ನನ್ನನ್ನು ಇದರಿಂದ ವಿಮುಖಳಾಗಿಸುವ ಸಂಚು ನಡೀತಾನೇ ಇದೆ.. ಸಾಮಾಜಿಕವಾಗಿ ಅವಮಾನಿಸುವ ಕಂಗೆಡಿಸುವ ತುಳಿಯುವ ಕಾರಣಗಳಿಗಾಗಿ ಕಾದಿರುವ ಕೆಲವರು ಹೋದಲ್ಲಿ ಬಂದಲ್ಲಿ ನಿರಂತರ ಕಿರುಕುಳ ನೀಡುತ್ತಿದ್ದಾರೆ… ನಾನು ಬೇಸತ್ತು ಬೆನ್ನು ಹಾಕಲೀ ಎಂಬುದೇ ಅವರ ಉದ್ದೇಶ , ಇದು ತಾವೇನನ್ನೂ ಮಾಡಲು ಯೋಗ್ಯತೆಯಿಲ್ಲದ ಹೆಂಗಸರ ಜಾತಿಗೆ ಅಪವಾದವಾದವರು ಇಂಥವರನ್ನು ಚಮಚಾಗಳಾಗಿಸಿಕೊಂಡು ವ್ಯವಸ್ಥಿತ ಬಲೆ ಹಣೆಯಲು ಪ್ರೇರೇಪಿಸುತ್ತಿದ್ದಾರೆ..
ರೋಸಿ ದೂರ ಹೋಗುತ್ತೇನೋ ಧಿಕ್ಕರಿಸಿ ಬದುಕುತ್ತೇನೋ ಭಗವಂತನಿಗೇ ಗೊತ್ತು.. ಆದರೇ ., ಇದು ಅಂತ್ಯವಲ್ಲ ಆರಂಭ ನಾನಲ್ಲದಿದ್ದರೂ ಇನ್ನೊಬ್ಬ ಮಹಿಳೆ ತಲೆ ಎತ್ತುತ್ತಾಳೆ .. ಸಾವಿರಾರು ಹೆಂಗಸರು ಜೊತೆಯಾಗುತ್ತಾರೆ ಪ್ರಬಲ ರಾಜಕಾರಣದ ಬೆಂಬಲದ ತಗೊಂಡು ಮೆರೆಯುವವರನ್ನೂ ಮಣ್ಣುಮುಕ್ಕಿಸುತ್ತಾರೆ…
ಅಪ್ಪನನ್ನ ಕಳಕೊಂಡಾಗಲೇ ಅನಾಥತೆಯ ತೀವ್ರ ಅನುಭವ ಕಂಡುಂಡ ಜೀವಕ್ಕೀಗ ಬೀದಿಗೆ ಬೀಳುವ ತಿರುಪೆ ಎತ್ತುವ ಭಯವಿಲ್ಲ , ಯಾಕಂದರೇ ದುಡ್ಡಿಲ್ಲದೇ ಯಾರದೇ ಕೃಪಾಶ್ರಯವಿಲ್ಲದೇ ಸ್ವಂತ ಶ್ರಮದಿಂದ ಬದುಕುವ ಕಲೆ ಕರಗತವಾಗಿದೆ.. ಹೆತ್ತಮ್ಮನ ಕೃಪಾಶೀರ್ವಾದವಿದೆ…. ದಣಿವಾದರೇ ಒರಗಲು ಹೆತ್ತ ಮಗನ ಹೆಗಲಿದೆ…
ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ ಎಂದು ಹೇಳುವ ಎಡೆಯಲ್ಲಿಯೇ ನಿರ಼ಂತರ ಕಣ್ಣೀರಿಟ್ಟ ಕಂಗಳೀಗ ಕಂಬನಿಯಿಲ್ಲದೇ ಬರಡಾಗಿದೆ… ಸಂಸ್ಕಾರದ ಹೆಸರಲ್ಲಿ ಸದಾ ಅವಮಾನ ಶೋಷಣೆಯ ದಬ್ಬಾಳಿಕೆಗೊಳಗಾದ ಮನವೀಗ ಹೊಸ ಹಾದಿಯತ್ತ ಹೆಜ್ಜೆಯೆತ್ತಿದೆ ,
ಸಹಿಸಿದಷ್ಟೂ ತುಳಿಯುವ… ಸುಮ್ಮನಿದ್ದಷ್ಟೂ ಶೋಷಿಸುವ ಪರಿಧಿಯಾಚೆಗೆ ಬದುಕಿದೆ… ಇದು ಬಹುಶಃ ಸಾವಿರಾರು ಮಹಿಳೆಯರ ಮಾತಾಗಲಾರದ ಧ್ವನಿ ಇರಬಹುದು….
ಬನ್ನಿ ನಮ್ಮ ಬದುಕ ಸ್ವಾಭಿಮಾನದಿಂದ ಬದುಕೋಣ ಸ್ವಾವಲಂಬಿಯಾಗೋಣ… ಕೊಲ್ಲುವವನೊಬ್ಬನಿದ್ದರೇ ಕಾಯೋನೊಬ್ಬನಿರುತ್ತಾನೆ..

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ಧಿಕ ಶುಭಾಶಯಗಳು.ನಿಷ್ಕಲ್ಮಷತೆಯಿಂದ ಏನನ್ನಾದರೂ ಒಳ್ಳೇದ ಬಯಸೋ ಹೆಣ್ಮನಗಳಿಗೆ ವರ್ಷಪೂರ್ತಿ ಮಹಿಳಾ ದಿನಾಚರಣೆ..

ನನ್ನಬದುಕು #ನನ್ನಆದರ್ಶ #ನನ್ನಅಮ್ಮ

ಅಂತರ ರಾಷ್ಟೀಯ ಮಹಿಳಾ ದಿನಾಚರಣೆಯ ಹಾರ್ಧಿಕ ಶುಭಾಶಯಗಳು,

******************************

Leave a Reply

Back To Top