ಸಂಪ್ರೋಕ್ಷಣ
ಕನಸಿನ ಚಾದರ ಬರಹ-02 ಬಣ್ಣಗಳಂತೆಯೇ ಕನಸುಗಳದ್ದೂ ಒಂದು ಮೋಹಕ ಲೋಕ. ಕನಸು ಕಾಣದ ಅಥವಾ ಕನಸುಗಳೇ ಬೀಳದ ಮನುಷ್ಯರಿಲ್ಲ. ಕನಸು ಬೀಳುವುದು ವಿಜ್ಞಾನ ಅಥವಾ ವೈದ್ಯಕೀಯಕ್ಕೆ ಸಂಬಂಧಪಟ್ಟ ಸಂಗತಿಯಾದರೆ, ಕನಸು ಕಾಣುವುದೊಂದು ಮನಸ್ಥಿತಿ ಅಥವಾ ಭಾವನೆಗಳಿಗೆ ಸಂಬಂಧಪಟ್ಟಿದ್ದು. ರಾತ್ರಿ ಬಿದ್ದ ಕನಸೊಂದು ಬೆಳಿಗ್ಗೆ ಎದ್ದೇಳುವಷ್ಟರಲ್ಲಿ ಮರೆತುಹೋಗುವುದುಂಟು; ಬಾಲ್ಯದ ಅವೆಷ್ಟೋ ಕನಸುಗಳು ಯೌವನಾವಸ್ಥೆಯಲ್ಲಿ ಅಥವಾ ಯೌವನದ ಅವೆಷ್ಟೋ ಕನಸುಗಳು ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿ ಮರೆಯಾಗುವುದುಂಟು. ಆದರೆ ಈ ಕನಸಿನ ಪ್ರಕ್ರಿಯೆ ಮಾತ್ರ ನಿರಂತರ. ಕಾಲೇಜಿನ ದಿನಗಳಲ್ಲಿ ಕುಡಿಮೀಸೆಯಂಚಿನಲ್ಲಿ ಸೊಗಸಾಗಿ ನಕ್ಕು ಕನಸಿನಂತೆ ಮರೆಯಾಗುತ್ತಿದ್ದ ಹುಡುಗನೊಬ್ಬ ಎರಡು ಮಕ್ಕಳ ತಂದೆಯಾಗಿ ಮಾರ್ಕೆಟ್ಟಿನಲ್ಲೆಲ್ಲೋ ಎದುರಾಗಿಬಿಡಬಹುದು. ಹಳೆಯ ಕನಸೊಂದು ಇಂದಿನ ವಾಸ್ತವವಾಗಿ, ಇವತ್ತಿನ ಸುಂದರ ಬದುಕೊಂದು ನಾಳೆಯ ಕನಸಾಗಿ, ಏನೆಲ್ಲವೂ ಆಗಿಬಿಡಬಹುದು. ಮನುಷ್ಯ ದಾಖಲೆಗಳನ್ನು ಸೃಷ್ಟಿಸುವುದರಲ್ಲಿ ನಿಸ್ಸೀಮ. ಜನ್ಮದಾಖಲೆಯಿಂದ ಶುರುವಾಗುವ ಮನುಷ್ಯಜನ್ಮದ ಯಶಸ್ಸೆಲ್ಲವೂ ದಾಖಲೆಗಳ ಸುತ್ತಲೇ ಸುತ್ತುವಂಥದ್ದು. ಆದರೆ ಕನಸುಗಳೊಂದಿಗಿನ ನಮ್ಮ ಪಯಣ ಮಾತ್ರ ಇಂಥದ್ದೇ ದಿನದಂದು ಇದೇ ಸಮಯದಲ್ಲಿ ಪ್ರಾರಂಭವಾಯಿತೆಂದು ನಿಖರವಾಗಿ ದಾಖಲಿಸಲಾಗದು. ಬಾಳೆಮರದಲ್ಲಿ ತೆಂಗಿನಕಾಯಿ ಬಿಟ್ಟಂತೆ ನಿದ್ದೆಯಲ್ಲೊಮ್ಮೆ ಕನಸು ಬಿದ್ದಿರಬಹುದು ಅಥವಾ ಮುಸ್ಸಂಜೆಯಲ್ಲೊಮ್ಮೆ ಕಾಫಿ ಕುಡಿಯುತ್ತಾ ಅಂಥ ವಿಲಕ್ಷಣ ಯೋಚನೆಯೊಂದು ಕನಸಿನಂತೆ ಹಾದುಹೋಗಿರಬಹುದು. ಅಂಥದ್ದೊಂದು ಕನಸಿಗೆ ಪ್ರತಿಕ್ರಿಯೆಯಾಗಿ ಒಮ್ಮೆ ನಕ್ಕು ಸುಮ್ಮನಾಗಿಬಿಡುತ್ತೇವೆಯೇ ಹೊರತು ವಿಲಕ್ಷಣ ಕನಸುಗಳದ್ದೊಂದು, ಸುಂದರ ಕನಸುಗಳದ್ದೊಂದು ಅಥವಾ ಕನಸುಗಳೇ ಮುಗಿದುಹೋದ ಬದುಕಿನದೊಂದು ದಾಖಲೆಗಳನ್ನು ಸೃಷ್ಟಿ ಮಾಡಲಾಗದು. ನಮ್ಮೊಳಗೇ ಹುಟ್ಟಿ, ಕಸುವಿಗನುಸಾರವಾಗಿ ಬೆಳೆದು, ಒಮ್ಮೊಮ್ಮೆ ಸಂಭವಿಸಿ, ಮತ್ತೆಲ್ಲೋ ಮುಗಿದುಹೋಗುವ ಕನಸುಗಳೆಲ್ಲವೂ ಮುಖಪುಟ-ಮುನ್ನುಡಿಗಳಿಲ್ಲದ ಸ್ವಚ್ಛಂದ ಆತ್ಮಕಥನಗಳು. ಈ ಆತ್ಮಕಥನಗಳಲ್ಲೊಂದಿಷ್ಟು ವಿವರಗಳು ಕಥೆಗಳಾಗಿ ಅವರಿವರ ಕಿವಿಗಳನ್ನು ತಲುಪಿದರೆ, ಇನ್ನೆಷ್ಟೋ ಅನುಭವಗಳು ನಮ್ಮೊಳಗೇ ಉಳಿದು ಬದುಕಿಗೊಂದು ದಿವ್ಯತೆಯನ್ನು ಒದಗಿಸುತ್ತವೆ. ನಡುವೆ ಕನವರಿಸುವ ಕನಸುಗಳು ಮಾತ್ರ ಆಗಾಗ ಬಣ್ಣಗಳನ್ನು ಬದಲಾಯಿಸುತ್ತ, ತಾವೇ ಸೃಷ್ಟಿಸಿದ ತಲ್ಲಣಗಳನ್ನೆಲ್ಲ ತಮ್ಮದೇ ಜವಾಬ್ದಾರಿಯೆನ್ನುವಂತೆ ತಣ್ಣಗಾಗಿಸುತ್ತ ತಪಸ್ಸಿಗೆ ಕುಳಿತ ಆತ್ಮವೊಂದರಂತೆ ನಮ್ಮೊಳಗೊಂದು ನೆಲೆ ಕಂಡುಕೊಳ್ಳುತ್ತವೆ. ಒಳ್ಳೊಳ್ಳೆಯ ಕನಸುಗಳು ಸಂಭವಿಸಿದಾಗಲೆಲ್ಲ ಮುದಗೊಳ್ಳುವ ನಾವು, ಕೆಟ್ಟ ಕನಸುಗಳಿಗೆಲ್ಲ ಸಮಾಧಾನ ಹುಡುಕಲಿಕ್ಕೆಂದು ಆಶ್ರಯ ಹುಡುಕುವುದು ಕೂಡಾ ಇನ್ನೊಂದು ಕನಸಿನ ಮಡಿಲಿನಲ್ಲಿಯೇ. ಕೆಟ್ಟಕನಸು ಬಿತ್ತೆಂದು ಅಮ್ಮನ ಮಡಿಲು ಹುಡುಕುವ ಪುಟ್ಟ ಮಗುವಿಗೆ ಮುಂದೊಂದು ದಿನ ಅಮ್ಮನ ಮಡಿಲು ಕೂಡಾ ಕನಸಾಗಿಬಿಡುವ ಕಲ್ಪನೆ ಇದ್ದೀತೇ! ಪರ್ಯಾಯ ಕನಸೆನ್ನುವ ಪರಿಕಲ್ಪನೆಯೊಂದು ಇದ್ದಿದ್ದರೆ ಬದುಕಿನುದ್ದಕ್ಕೂ ಒಳ್ಳೊಳ್ಳೆಯ ಕನಸುಗಳು ಹೂವರಳಿ ನಿಂತ ಪಾರಿಜಾತ ಮರವೊಂದರ ನೆರಳಿನಂತೆ ನಮ್ಮನ್ನು ಪೊರೆಯುತ್ತಿದ್ದವೇನೋ; ಬಾಲ್ಯವೊಂದು ಮುಗಿದುಹೋಗುವ ದುಃಖ ಯಾರ ಎದೆಗೂ ಇಳಿಯುತ್ತಿರಲಿಲ್ಲವೇನೋ! ಬಾಲ್ಯ ಎನ್ನುವ ಸುಂದರ ಸಮಯವೊಂದು ಮುಗಿದೇ ಹೋಗಿದ್ದರೂ ಬಾಲ್ಯದ ನೆನಪುಗಳನ್ನೆಲ್ಲ ಜೋಪಾನವಾಗಿ ಗಳಿಗೆ ಮಾಡಿ ಮೂಲೆಯ ಕಪಾಟೊಂದರಲ್ಲಿ ಭದ್ರವಾಗಿ ಇಟ್ಟುಕೊಂಡಿರುತ್ತೇವೆ. ಆ ನೆನಪಿನ ನವಿಲುಗರಿಯ ನೂಲೊಂದರಲ್ಲಿ ಬಾಲ್ಯದ ಗೆಳೆಯನೊಬ್ಬನ ಚಕ್ರವೊಂದು ಕನಸಾಗಿ ಸುತ್ತುತ್ತಿರಬಹುದು; ಹೈಸ್ಕೂಲಿನ ಯೂನಿಫಾರ್ಮಿನಲ್ಲಿ ಟೀಚರಾಗಬೇಕೆಂದಿದ್ದ ಕನಸೊಂದು ಇನ್ನೂ ಹಸಿರಾಗಿದ್ದಿರಬಹುದು; ಗ್ರೀಟಿಂಗ್ ಕಾರ್ಡ್ ಒಂದು ಹೊಸವರುಷದ ಕನಸು ಕಾಣುತ್ತಿರಬಹುದು. ಒಟ್ಟಿನಲ್ಲಿ ನೆನಪುಗಳನ್ನು ನೇವರಿಸುವ ಕನಸೊಂದು ನಮ್ಮೊಳಗನ್ನು ಸದಾ ಕಾಯುತ್ತಿರುತ್ತದೆ. ಅಂಥದ್ದೇ ಒಂದು ಕನಸಿನಂತಹ ನೆನಪಲ್ಲಿ ಅಪ್ಪನ ಕೆಂಪು ಚಾದರವೊಂದು ಬೆಚ್ಚಗೆ ಕುಳಿತಿದೆ. ಆ ಚಾದರದ ಮೇಲೆ ನೀಲಿಕಣ್ಣಿನ ನವಿಲುಗರಿಯ ಚಿತ್ರವಾಗಲೀ, ಮಾವಿನ ಎಲೆಯ ಪೇಂಟಿಂಗ್ ಆಗಲೀ ಯಾವುದೂ ಇರಲಿಲ್ಲ; ಮಬ್ಬುಬಿಳುಪು ದಾರಗಳ ನೇಯ್ಗೆಗಳು ಕೆಂಪುಬಣ್ಣವೇ ತಮ್ಮದೆನ್ನುವಂತೆ ಚಾದರವನ್ನೆಲ್ಲ ಆವರಿಸಿಕೊಂಡಿದ್ದವು. ಅಪ್ಪ ನಿದ್ರೆಹೋಗಿ ಅದೆಷ್ಟೋ ಸಮಯದ ನಂತರ ಮಲಗುವ ಅಭ್ಯಾಸವಿದ್ದ ನಾನು ಗುಬ್ಬಚ್ಚಿಯೊಂದು ಗೂಡು ಸೇರಿಕೊಳ್ಳುವಂತೆ ಚಾದರದೊಳಗೆ ಸೇರಿಕೊಳ್ಳುತ್ತಿದ್ದೆ. ನಾನು ಎದ್ದೇಳುವಷ್ಟರಲ್ಲಿ ಅಪ್ಪ ತನ್ನ ದಿನನಿತ್ಯದ ಕೆಲಸದಲ್ಲಿ ನಿರತನಾಗಿರುತ್ತಿದ್ದನಾದರೂ ಚಾದರ ಮಾತ್ರ ಬೆಳಗಿನ ಜಾವದ ಕನಸುಗಳನ್ನೆಲ್ಲ ಸಲಹುತ್ತಿತ್ತು. ಕೆಟ್ಟ ಕನಸುಗಳನ್ನೆಂದಿಗೂ ತನ್ನೊಳಗೆ ಬಿಟ್ಟುಕೊಳ್ಳದ ಕೆಂಪು ಚಾದರ ಬಾಲ್ಯವನ್ನು ಸೊಗಸಾಗಿ ಪೊರೆದ ಪರಿಗೆ ಈಗಲೂ ಬೆರಗಾಗುತ್ತೇನೆ; ಅಗತ್ಯಗಳನ್ನೆಲ್ಲ ಪರಿಮಿತಿಗನುಗುಣವಾಗಿ ಒದಗಿಸುವ ಪ್ರಕೃತಿಯ ಚಮತ್ಕಾರಕ್ಕೆ ಅಚ್ಚರಿಗೊಳ್ಳುತ್ತೇನೆ. ಈ ಕನಸುಗಳ ಸಾಂಗತ್ಯದಲ್ಲಿ ಅಪ್ಪನಷ್ಟೇ ಅಲ್ಲದೇ ಅಜ್ಜನ ಪಾತ್ರವೂ ಇದೆ. ಬೇರೆಯವರಿಗೆ ತೊಂದರೆಯಾಗದ ಚಟುವಟಿಕೆಗಳೆಲ್ಲವನ್ನೂ ಕಾನೂನುಬದ್ಧವೆಂದು ಪರಿಗಣಿಸುತ್ತಿದ್ದ ಹಳ್ಳಿಗಳಲ್ಲಿ ಓಸಿ ಎನ್ನುವ ಜೂಜಾಟವೊಂದು ಪ್ರಚಲಿತದಲ್ಲಿದ್ದ ಕಾಲವದು. ನಂಬರುಗಳ ಮೇಲೆ ದುಡ್ಡು ಕಟ್ಟುವ ಈ ಆಟದಲ್ಲಿ ಕನಸಿನ ಆಧಾರದ ಮೇಲೂ ನಂಬರುಗಳನ್ನು ಹುಡುಕಿ ತೆಗೆಯುತ್ತಿದ್ದರು. ಕನಸಿನಲ್ಲಿ ಕಾಣುವ ನದಿಗೆ ಒಂದು ನಂಬರಾದರೆ, ನಾಯಿಗೆ ಇನ್ನೊಂದು, ಹಾವಿಗೊಂದು ಹೀಗೆ. ಹದಿನೈದು ಇಪ್ಪತ್ತು ಜನರು ಒಟ್ಟಿಗೇ ವಾಸಿಸುತ್ತಿದ್ದ ಹಳ್ಳಿಗಳ ಮನೆ ಜಗಲಿಗಳೆಲ್ಲ ಮಕ್ಕಳಿಂದ ತುಂಬಿರುತ್ತಿದ್ದವು. ಬೇಸಿಗೆರಜೆಗಳಲ್ಲಂತೂ ಮೊಮ್ಮಕ್ಕಳಿಂದ ತುಂಬಿಹೋಗುವ ಮನೆಯಲ್ಲೊಂದು ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿತ್ತು. ಶಿಸ್ತಿನ ಮನುಷ್ಯ ಅಜ್ಜ ಬೆಳಿಗ್ಗೆ ಎದ್ದು ಸ್ನಾನ ಮುಗಿಸಿದವನೇ ನಮ್ಮೆಲ್ಲರನ್ನೂ ಕೇಳುತ್ತಿದ್ದ ಮೊದಲ ಪ್ರಶ್ನೆಯೆಂದರೆ ರಾತ್ರಿಯೇನಾದರೂ ಕನಸು ಬಿದ್ದಿತ್ತಾ ಎಂದು. ನಮ್ಮ ಕನಸುಗಳ ಆಧಾರದ ಮೇಲೆ ಅವನ ಓಸಿ ನಂಬರೊಂದು ರೆಡಿಯಾಗುತ್ತಿತ್ತು. ಅಡುಗೆಮನೆಯಲ್ಲಿ ತಿಂಡಿಯ ತಯಾರಿಯಲ್ಲಿರುತ್ತಿದ್ದ ಅಮ್ಮ-ದೊಡ್ಡಮ್ಮಂದಿರೆಲ್ಲ ಅವರವರ ಕನಸುಗಳನ್ನು ಮಕ್ಕಳ ಮೂಲಕ ಜಗಲಿಗೆ ಕಳಿಸುತ್ತಿದ್ದರು. ಒಮ್ಮೊಮ್ಮೆ ಮನೆಯವರ್ಯಾರಿಗೂ ಕನಸೇ ಬೀಳದೇ ಅಜ್ಜ ನಂಬರಿಗಾಗಿ ಪರದಾಡುವ ಪರಿಸ್ಥಿತಿಯೂ ಎದುರಾಗುತ್ತಿತ್ತು. ಆಮೇಲಾಮೇಲೆ ಈ ಓಸಿ ಎನ್ನುವುದು ಒಂದು ಕನಸಿನ ಆಟದಂತಾಗಿ, ಮಲಗುವ ಮೊದಲು ದೇವರಿಗೆ ನಮಸ್ಕರಿಸುವ ಪರಿಪಾಠವಿದ್ದ ನಾವೆಲ್ಲರೂ ರಾತ್ರಿ ಕನಸು ಬೀಳುವಂತಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆವು. ಈಗಲೂ ಲಿಂಬೆಹಣ್ಣಿನ ಗೊಂಚಲೊಂದು ಕನಸಿನಲ್ಲಿ ತೂಗಿತೊನೆದಾಡಿದರೆ, ಹಾರರ್ ಸಿನೆಮಾದ ಪಾತ್ರವೊಂದು ಕನಸಿಗೆ ಬಂದು ಭಯಹುಟ್ಟಿಸಿದರೆ, ಓಸಿಪಟ್ಟಿಯ ನಂಬರುಗಳೊಂದಿಗೆ ಸಂತೋಷದಿಂದ ಬದುಕಿದ ಅಜ್ಜನ ನೆನಪೊಂದು ಸುಂದರವಾದ ಕನಸಾಗಿ ಮನಸ್ಸನ್ನೆಲ್ಲ ಆವರಿಸಿಕೊಳ್ಳುತ್ತದೆ. ಕ್ವಿಲ್ಟ್ ಗಳನ್ನು ಕೊಳ್ಳಲೆಂದು ಅಂಗಡಿಗೆ ಹೋದಾಗಲೆಲ್ಲ ಅಲ್ಲೆಲ್ಲಾದರೂ ಕೆಂಪುಚಾದರವೊಂದು ಮೈತುಂಬ ನೇಯ್ಗೆ ಹೊತ್ತು ಎದುರಾಗಬಾರದೇ ಎಂದುಕೊಳ್ಳುತ್ತೇನೆ. ಹುಟ್ಟಿದದಿನದಂದು ನೆಟ್ಟ ಸಂಪಿಗೆಗಿಡ ಒಂದಿಂಚು ಚಿಗುರಿದರೂ ಮೈತುಂಬ ಹೂವರಳಿಸಿ ನಿಂತ ಸಂಪಿಗೆಮರವೊಂದು ಅರಳಿಸಬಹುದಾದ ಹೊಸಹೊಸ ಕನಸುಗಳಿಗಾಗಿ ಪ್ರತಿನಿತ್ಯ ಕಾಯುತ್ತೇನೆ. ಸದಾ ಮುಗುಳ್ನಗುತ್ತ ಚಿಗುರುವ ಹೊಸ ಕನಸುಗಳೆಲ್ಲವನ್ನೂ ಅಪ್ಪನ ಕೆಂಪು ಚಾದರ ಪೊರೆಯುತ್ತಿರಬಹುದು! ************** ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
ಕಾವ್ಯಯಾನ
ಭಾವನೆಗಳು ತೇಜಾವತಿ ಹೆಚ್.ಡಿ. ಭಾವನೆಗಳೇ ಹಾಗೆತುಸು ಆಸರೆ ಸಿಕ್ಕರೆ ಸಾಕುಲತೆಯಾಗಿ ಹಬ್ಬಲುಚೂರು ಸ್ಫೂರ್ತಿ ಸಾಕುವಾಹಿನಿಯಾಗಿ ಶರಧಿಯ ಸೇರಲುಹನಿಜಲದ ಸೆಲೆ ಸಾಕುಬೀಜ ಮೊಳೆತು ಅಂಕುರಿಸಲು ನಿಖರ ಸ್ಥಳ ವೇಳೆಯ ಹಂಗಿಲ್ಲಆದಿ ಅಂತ್ಯಗಳಿಲ್ಲಬಣ್ಣ ರೂಪಗಳಿಲ್ಲಲಿಂಗ ಭೇದಗಳಿಲ್ಲ… ಮನಸು ಭಾವಗಡಲುಹೃದಯ ಮಿಡಿತದೊಡಲುಒರತೆ ಉಕ್ಕೇರಲುಹೊಂಗನಸ ಸಿಹಿಹೊನಲು.. ನಿಗ್ರಹಿಸಿದರೆ ಸತ್ತೇ ಹೋಗುವವುರೆಕ್ಕೆಬಂದರೆ ಹಾರಿ ಹೋಗುವವುಬಂದಷ್ಟು ಸಲೀಸಲ್ಲ ಹೋಗಲುಜನಿಸಿ ಮರಣಿಸುವವು ನಗಲು ಅಳಲು ************
ಕಾವ್ಯಯಾನ
ಸ್ವಯಂ ದೀಪ ವಿದ್ಯಾ ಶ್ರೀ ಎಸ್ ಅಡೂರ್ ಏನಾದರೂ ಬರೆಯಬೇಕೆಂಬ ಅಮಲು,ಮತ್ತುಸ್ವಂತಕ್ಕೆ ಸಮಯವೇ ಉಳಿಯದ ಗೃಹಸ್ತಿಕೆಯ ಭಾರ ಹೊತ್ತು,ಇತ್ತ ಪೂರ್ಣ ಗೃಹಿಣಿಯಾಗಿಯೂ ಉಳಿಯದೆ…ಅತ್ತ ಕವಿಯಾಗುವ ಆಸೆಯೂ ಅಳಿಯದೆ…. ಸಾಗಿದೆ ಜೀವನ ರಥ..ಹಲವಾರು ಸವಾಲುಗಳೆಂಬಕುದುರೆಗಳ ಲಗಾಮು ಹಿಡಿದು ….. ಪಳ್ಳನೆ ಮಿಂಚಿ ಮರೆಯಾಗುವ ಕೋಲ್ಮಿಂಚಿನಂತೆಸ್ಪುರಿಸುವ ಒಂದೆರಡು ಸಾಲು ಕವನ ,ಮರೆಯಾಗುವುದು,ಹಿಡಿಯಲಾಗದ ಚಿಟ್ಟೆಯಂತೆಬೆನ್ನಟ್ಟಲಾಗದೆ….ಆ ಕ್ಷಣ ನಿತ್ಯವೂ ಇದೇ ಕಥೆ…ಸಾಗಿದೆ ಗರ್ಭಪಾತನನ್ನ ಭಾವಗಳ ಬಸಿರು ಹರಿದು…… ಹನಿ ಸೇರಿ ಹಳ್ಳ,ಆವಿ ಘನೀಕರಿಸಿ ಮೋಡ ಆದಂತೆಬದುಕು ಉಣಿಸಿದ ಹದವಾದ ಭಾವಗಳ ಪಾಕಕಟ್ಟಿತ್ತುಬಿಸಿಯುಂಡ ಹಾಲಿನ ಮೇಲೆ ಮೃದುವಾದ ಕೆನೆ ತೇಲುವಂತೆ,ಮೈತುಂಬ ಮುಳ್ಳು ತುಂಬಿಕೊಂಡ ಗಿಡದಲ್ಲೂ ಹೂವು ಬಿಟ್ಟಿತ್ತು. ಸಾಕಿನ್ನು ವೃಥಾ ಪ್ರಲಾಪ..ಬೆಳಕಿಗಾಗಿ ಅನ್ಯರ ಕಾಯದೇನಿಂತಿರುವೆ ಕೈಯಲ್ಲೊಂದು ಪುಟ್ಟ ಹಣತೆ ಹಿಡಿದು… **************
ಕಾವ್ಯಯಾನ
ಬರಿ ಮಣ್ಣಲ್ಲ ನಾನು….! ಶಿವಲೀಲಾ ಹುಣಸಗಿ ಬಯಕೆಯೊಂದು ಮನದಲವಿತು ಕಾಡುತ್ತಿತ್ತು…ಮದ ತುಂಬಿದೆದೆಯಲಿ ಹದವಾಗಿ ನಾಟಿ ಮೀಟುತ್ತಿತ್ತುಹೃದಯ ಬಡಿತದ ಗೀಳೊಂದು ಸಂಕೋಲೆಯತೊಡರಾಗಿ,ನಿನ್ನರಸುವ ಗಾಳಿಗುಂಟ ದಿಕ್ಕಾಪಾಲುನುಸುಳಿದಾಗೆಗಲೆಲ್ಲ ಸದ್ದಿಲ್ಲದೆ ಮುಳ್ಳುಗಳು ಚುಚ್ಚಿಪರಚಿದ ಗಾಯಕ್ಕೊಂದು ಮುಲಾಮುಹಿತವಾಗಿ ಅಪ್ಪಿದ ಗಳಿಗೆಗಳು,ತೀವ್ರತೆಗೆ ಸಾಣೆ ಹಿಡಿದು ತನುವಿನೊಳಗೆ ಭಾವೋದ್ರೇಕದ ಸುಳಿಗಾಳಿಮುತ್ತಿನ ಹನಿಗಳಿಗೆ,ಬಯಲಾಗಿ ಮೈದೆಳೆದಿದೆಹೊನಲು ಬೆಳಕಿನಾರ್ಭಟದಲಿ ಪ್ರೇಮೋತ್ಸವವಿದೆಸಂಭ್ರಮಕ್ಕೊಂದು ಮಿತಿಯಿದೆ ನಿಧಾನಿಸು,ಬಿಕರಿಯಾಗದಿರಲಿ ಸೆಳೆತದಾ ಬಿಗಿ ನಂಟುಬರೀ ಮಣ್ಣಲ್ಲ ನಾನು,ನೀ ಬಿತ್ತುವ ಬೀಜಕೆಕಾಪಿಡುವ ಜೀವದುಸಿರಿನ ಆಸರೆಒಡಲೊಳು ಬಂಧಿಸಿ ನಿನ್ನ ಮರುಸೃಷ್ಟಿಗೆಎನ್ನೆದೆಯು ಯುಗಗಳಿಗೆ ಸಾಕ್ಷಿಯಾಗಿದೆನಿನಗಾಗಿ ಹಂಬಲಿಸದ ದಿನಗಳಿಲ್ಲನೀನಿಲ್ಲದೆ ಹೂ ಅರಳಿಲ್ಲ,ಗುಬ್ಬಿ ಗೂಡು ಕಟ್ಟಿಲ್ಲ,ಜಗವೆಲ್ಲ ಮಂಕಾಗಿಹುದು ನೀ ಅರಿತಿಲ್ಲಮುಂಗಾರಿನ ಅಭಿಷೇಕಕೆ ಹಾತೊರೆದುಅಮೃತ ಧಾರೆಯ ಮೊದಲ ಸ್ಪರ್ಶದಾ ಸಿಹಿಗರಿ ಬಿಚ್ಚಿ ಕುಣಿವ ಮನದಿಂಗಿತ ಚಿಗುರಿಒಂದು ಹನಿಯು ಕೈ ಜಾರದಂತೆಗುಟ್ಟಾಗಿ ಬಚ್ಚಿಡಲು ಸಿದ್ದವಿದೆ ತನುವಿಂದುಪ್ರಳಯವಾಗಲಿ,ಪ್ರವಾಹ ಬರಲಿ,ಸಾಗರವುಕ್ಕಲಿಸಂಗಮದ ಪರಮಾವಧಿಗೆ ದಿಕ್ಕೊಂದಾಗಲಿಇಂಚಿಂಚು ಭರ್ತಿಯಾಗಲಿ ಒಲವಿನ ಆಗರನನಗೊಂದು ಬಯಕೆಯ ಮಹಾಪೂರಸೀಮಂತಕೆ ಸಜ್ಜಾಗುವ ಕಾತುರದ ಗಾನಹಸಿರ ತೋರಣ ಕಟ್ಟಿ ಇಳೆಯ ಆಲಿಂಗನನಾಚಿ ನೀರಾಗಲಿ ಭವದ ಸುಖವೆಲ್ಲಭೂಮಿ ಆಕಾಶಗಳ ಮಿಲನದಾ ಅಂತ್ಯದಲ್ಲಿಮೇಘಗಳ ಸರಮಾಲೆಗೆ ಕೊರಳೊಡ್ಡಿಹೊತ್ತಿಗೊಂದು ಮುತ್ತಿನ ಸೆರಗೊಡ್ಡಿ *******
ಪ್ರಸ್ತುತ
ಜಪಾನಿನ ಕಾವ್ಯ ಪ್ರಕಾರ ತಂಕಾ, ಕನ್ನಡದ ಅಂಗಳದಲ್ಲಿ ಮನುಷ್ಯ ಭಾವನಾ ಜೀವಿ. ತನ್ನ ಭಾವನೆಗಳ ಅಭಿವ್ಯಕ್ತಿಗೆ ತನಗೆ ಅನುಕೂಲವಾದ ಭಾಷೆಯನ್ನು ಬಳಸಿಕೊಳ್ಳುತ್ತಾನೆ. ಅದುವೇ ಮುಂದೆ ಸಾಹಿತ್ಯದ ರೂಪ ಪಡೆಯಿತು. ಸಹೃದಯರಿಗೆ ಭಾಷೆಯ ಹಂಗು ಇರುವುದಿಲ್ಲ. ಅಂತೆಯೇ ಅವರು ತಮ್ಮ ಹೃದಯಕ್ಕೆ ಸ್ಪಂದಿಸುವ ಸಾಹಿತ್ಯದ ಕಡೆಗೆ ವಾಲುತ್ತಾರೆ. ಅದಕ್ಕೆ ಭಾಷಾಂತರವೂ ಒಂದು ವರವಾಗಿದೆ. ಆ ಕಾರಣಕ್ಕಾಗಿಯೇ ಎಲ್ಲಿಯೊ ಇರುವ ಜಪಾನಿನ ಹಲವು ಸಾಹಿತ್ಯ ಪ್ರಕಾರಗಳು ಕನ್ನಡಿಗರ ಮನಗೆದ್ದು, ಸ್ವತಂತ್ರವಾಗಿ ಕನ್ನಡದಲ್ಲಿಯೆ ಕೃಷಿ ಆರಂಭಿಸಿವೆ. ಅವುಗಳಲ್ಲಿ ಹೈಕು, ತಂಕಾ… ಮುಂಚೂಣಿಯಲ್ಲಿವೆ. ಭಾಷಾಂತರದ ಕಾರಣವಾಗಿ ಸಾಹಿತ್ಯ ಪ್ರಕಾರಗಳನ್ನು ಹಲವು ರೀತಿಯಲ್ಲಿ ಗುರುತಿಸಲಾಗುತ್ತಿದೆ. ಉದಾಹರಣೆಗೆ ತಂಕಾ..ಇದನ್ನು ಟಂಕಾ, ತಾಂಕಾ, ಟ್ಯಾಂಕಾ… ..ಎಂತಲೂ ಕರೆಯಲಾಗುತ್ತಿದೆ. ಇದು ಜಪಾನ್ ದಲ್ಲಿ ಏಳನೆಯ ಶತಮಾನದಲ್ಲಿಯೇ ಪ್ರವರ್ಧಮಾನದಲ್ಲಿತ್ತು. ಇದು ಎಷ್ಟು ಜನಪ್ರಿಯವಾಗಿತ್ತು ಎಂದರೆ ಅಂದಿನ ಜಪಾನಿನ ಇಂಪೀರಿಯಲ್ ನ್ಯಾಯಾಲಯದ ಗಣ್ಯರು ‘ತಂಕಾ’ ಕವನ ಸ್ಪರ್ಧೆಗಳಲ್ಲಿ ಭಾಗವಹಿಸುತಿದ್ದರಂತೆ…!!‘ಚಕಾ’ ಎನ್ನುವ ಉದ್ದನೆಯ ಸಾಹಿತ್ಯ ಪ್ರಕಾರವನ್ನು ತುಂಡರಿಸಿ ‘ತಂಕಾ’ ಸಾಹಿತ್ಯ ಪ್ರಕಾರ ಹುಟ್ಟಿಕೊಂಡಿದೆಯೆಂದು ಜಪಾನಿನ ಕವಿ ಮತ್ತು ವಿಮರ್ಶಕ ಮಸೋಕಾ ಶಿಕಿ ಅವರು ಹೇಳುತ್ತಾರೆ. ಇದು ಮೂವತ್ತೊಂದು ಉಚ್ಚರಾಂಶಗಳನ್ನು ಹೊಂದಿದ್ದು, ಮುರಿಯದ ಒಂದೇ ಸಾಲಿನಲ್ಲಿ ಬರೆಯಲಾಗುತಿತ್ತು. ಮುಂದೆ ಇಂಗ್ಲೀಷ್ ಭಾಷಾಂತರಗಳಲ್ಲಿ ಐದು ಸಾಲಿನ ರೂಪವನ್ನು ಪಡೆಯಿತು. ಮೊದಲನೆಯ ಮತ್ತು ಮೂರನೆಯ ಸಾಲುಗಳು ಐದು ಉಚ್ಚರಾಂಶ/ ಅಕ್ಷರಗಳನ್ನು ಹೊಂದಿರುತ್ತದೆ. ಇನ್ನೂ ಎರಡನೆಯ, ನಾಲ್ಕನೆಯ ಮತ್ತು ಐದನೆಯ ಸಾಲುಗಳು ಏಳು ಉಚ್ಚರಾಂಶ/ ಅಕ್ಷರಗಳನ್ನು ಹೊಂದಿರುತ್ತದೆ. ಇದಕ್ಕೆ ಕೆಲವು ಉದಾಹರಣೆಗಳನ್ನು ನೋಡಬಹುದು.. ಅಕಿ-ಸುಕೆ ಯವರ ಪ್ರಸಿದ್ಧ ತಂಕಾ ಪ್ರಕೃತಿಯ ಸುಂದರ ಚಿತ್ರಣವನ್ನು ನೀಡುತ್ತದೆ.“ನೋಡು, ಮಾಗಿಯ ಮಾರುತ ಹೇಗೆ ಓಡಿಸುತ್ತಿದೆ ಮೋಡಗಳನ್ನು ಎಡ ಬಲಕ್ಕೆ ; ಎಡಕಿನಿಂದ ಚಂದಿರ ಇಣುಕುತ್ತಾನೆ ಕಿರಣಗಳಿಂದ ಓಡಿಸುತ್ತಾ ರಾತ್ರಿಯ ಕತ್ತಲನು”ಕ್ರಿ.ಶ.670 ಮತ್ತು ಕ್ರಿ. ಶ.1235 ರ ಮಧ್ಯದ 565 ವರ್ಷಗಳಲ್ಲಿಯ ಅನುಪಮ ಕವನಗಳನ್ನು ಆಯ್ದು ಕ್ರಿ.ಶ. 1235 ರಲ್ಲಿ ನೂರು ಜನರ, ನೂರು ಕವನಗಳನ್ನು ಸಂಪಾದಿಸಿ ಪ್ರಕಟಿಸಿರುವುದು ಸದೈಯೋ ರುಜಿವಾರ ರವರ ಅಮೋಘ ಸಾಧನೆಯೆಂಬುದು ತಿಳಿದು ಬರುತ್ತದೆ. ಇದನ್ನೇ ಮುಂದೆ ವಿಲಿಯಂ ಪೋರ್ಟರ್ ರವರು ಇಂಗ್ಲೀಷಿಗೆ ತರ್ಜುಮೆ ಮಾಡಿದ್ದಾರೆ. ಈ ಕೃತಿಗಳು ಇಂದಿಗೂ ಓದುಗರನ್ನು ಸೆಳೆಯುತ್ತಿವೆ..!ಪ್ರಣಯದ ಆರಂಭದಲ್ಲಿ ಈ ತಂಕಾಗಳು ಕೋಮಲವಾಗಿರುತ್ತವೆ. ಇಬ್ಬರು ಪ್ರೇಮಿಗಳು ಒಟ್ಟಿಗೆ ಇರಲು ರಾತ್ರಿಯಲ್ಲಿ ನುಸುಳುತ್ತಾರೆ ಮತ್ತು ಮರುದಿನ ಬೆಳಿಗ್ಗೆ ಪರಸ್ಪರ ಕೃತಜ್ಞತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲು ಈ ತಂಕಾಗಳನ್ನು ಬಳಸುತಿದ್ದರು.ಜಪಾನಿನ ಸಂಸ್ಕೃತಿಯಲ್ಲಿ ತಂಕಾ ಪ್ರಮುಖ ಸಾಹಿತ್ಯ ರೂಪವಾಗಿದೆ. ಈ ತಂಕಾಗಳು ಭಾವನಾತ್ಮಕವಾಗಿ ಓದುಗನ ಕಲ್ಪನೆಗೆ ಗರಿ ಕಟ್ಟುವಂತೆ ಇರುತ್ತವೆ. ಪ್ರಾಸ, ಲಯ ಇಲ್ಲಿ ಇರುವುದಿಲ್ಲವಾದರೂ ಶ್ಲೇಷೆ ಇರುತ್ತದೆ. ಪದಗಳ ಪರ್ಯಾಯ ಅರ್ಥಗಳೊಂದಿಗಿನ ಆಟಗಳು ಇಲ್ಲಿ ಇರುತ್ತವೆ. ಇದರಲ್ಲಿ ಚೀನಿ ಪದಗಳ ಪ್ರಭಾವವಿಲ್ಲ, ಅಪ್ಪಟ ಜಪಾನಿನ ಭಾಷೆಯ ಬಳಕೆಯಾಗಿದೆ. ಜನಜೀವನದ ಸಣ್ಣಪುಟ್ಟ ದೃಶ್ಯಗಳು ತಂಕಾಗಳಾಗಿವೆ. ಇಲ್ಲಿ ರಕ್ತಪಾತ, ಅಂಧಕಾರ, ಅಪರಾಧ, ಭೂಗತ ಜಗತ್ತು, ಮೋಸ, ಕಪಟತನ, ಅತಿರೇಕದ ಭಾವ, ವಿಜೃಂಭಣೆ… ಯಾವುದು ಇರುವುದಿಲ್ಲ. ಹೃದಯಕ್ಕೆ ಮುದ ನೀಡುವಂತಿರುತ್ತವೆ. ಕವಿತೆಯ ಶಕ್ತಿ ಇರುವುದು ಕಾವ್ಯದ ನಿರ್ವಾತದಲ್ಲಿ. ಶೂನ್ಯದಿಂದ ಸಂಪಾದನೆಯೆಡೆಗೆ ಸಾಗುತ್ತಿರುತ್ತದೆ. ಇಬ್ಬರು ವ್ಯಕ್ತಿಗಳ ಅಥವಾ ಎರಡು ಚಿತ್ರಗಳು ಒಂದಕ್ಕೊಂದು ಭೇಟಿಯಾದಾಗ ಮೂಡುವ ಒಂದು ಕ್ಷಣದ ಭಾವವೇ ‘ತಂಕಾ’ ಕ್ಕೆ ಜನ್ಮ ನೀಡುತ್ತದೆ. ಮೌನದ ಘಳಿಗೆಯಲ್ಲಿ ಉದಯಿಸಿದ ಕವಿತೆಯೊಂದು ಹೀಗಿದೆ.“ಎರಡು ಎ.ಎಂನಾನು ನನ್ನ ಮಲಗುವ ಕೋಣೆ ಬಾಗಿಲು ತೆರೆದಿದ್ದೇನೆಬಿಳಿ ಬೆಕ್ಕು ಓಡಿ ಹೋಯಿತುಕ್ಲಾಂಗಿಂಗ್ ಪತನದಿಂದ ಬೆಚ್ಚಿ ಬಿದ್ದಿದೆಸತ್ಕಾರದ ಜಾರ್ನ್ ಲೋಹದ ಮುಚ್ಚಳದಲ್ಲಿ”ಇದು ತುಂಬಾ ಪ್ರಮುಖವಾದ ತಂಕಾ. ಇದರಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶವಿದೆ. ಇಲ್ಲಿಯ ಮೂರನೆ ಸಾಲನ್ನು “ಪಿವೋಟ್” ಎನ್ನುವರು. ಅಂದರೆ ಮಹತ್ವದ ತಿರುವು ಎಂದಾಗುತ್ತದೆ. ಇದು “ತಂಕಾ” ವನ್ನು ಎರಡು ವಿಭಿನ್ನ ವಿಭಾಗಗಳಾಗಿ ವಿಂಗಡಿಸುತ್ತದೆ. ಈ ತಂಕಾದಲ್ಲಿ ‘ಬಿಳಿ ಬೆಕ್ಕು ಓಡಿ ಹೋಯಿತು’ ಎಂಬ ಮೂರನೆಯ ಸಾಲು ತಂಕಾವನ್ನು ವಿಭಾಗಿಸಿ ಪ್ರತ್ಯೇಕ ಅರ್ಥವನ್ನು ನೀಡುತ್ತದೆ..!ಇಷ್ಟೆಲ್ಲ ಗಮನಿಸಿದಾಗ ನಮಗೆ ಒಂದು ಅಂಶ ತುಂಬಾ ಕಾಡುತ್ತದೆ. ‘ಈ ತಂಕಾ ಎಂಬ ಜಪಾನಿನ ಕಾವ್ಯ ಪ್ರಕಾರ ನಮಗೆ ಇಷ್ಟವಾಗುತ್ತಿರುವುದು ಯಾಕೆ’ ಎಂಬ ಪ್ರಶ್ನೆ. ಅದಕ್ಕೆ ನಾವು ಹಲವು ಕಾರಣಗಳನ್ನು ಹುಡುಕಬಹುದು. ನಮ್ಮ ಗೌತಮ ಬುದ್ಧ ಅವರನ್ನು ಜಪಾನಿನ ಜನರು ಸ್ವೀಕರಿಸಿದ್ದು, ಭಾರತೀಯರಂತೆ ಅವರೂ ಕೈ ಜೋಡಿಸಿ ನಮಸ್ಕರಿಸುವುದು, ನಮ್ಮಂತೆಯೇ ಅವರೂ ಕೂಡ ಸಂಪ್ರದಾಯಿಕ ಮನಸ್ಥಿತಿ ಹೊಂದಿರುವುದು… ಇವೆಲ್ಲ ಕಾರಣಗಳು ಆಗಿರಬಹುದು…!!ಇಲ್ಲಿಯವರೆಗೆ ನಾವು ಜಪಾನಿನ ತಂಕಾಗಳ ಬಗ್ಗೆ ಮಾಹಿತಿ ಹಂಚಿಕೊಂಡೆವು. ಇನ್ನೂ ಕನ್ನಡದ ಕೆಲವು ತಂಕಾಗಳನ್ನು ಅಧ್ಯಯನಕ್ಕಾಗಿ ಗಮನಿಸಬಹುದು. ಸ್ಮಶಾನದಲ್ಲಿಪಿಂಡ ತಿನ್ನೋರ ನೋಡಿಗೋರಿಯಲ್ಲಿಯಶವ ವೇದನೆಯಲ್ಲಿಕಿಲ ಕಿಲ ನಗ್ತಿತ್ತು .. ಸಾವಿಗೆ ಎಲ್ಲಿಮಾನದಂಡ, ಜೀವಕ್ಕೆಎಲ್ಲಿದೆ ನ್ಯಾಯ;ಬಾಳ ತಕ್ಕಡಿಯಲ್ಲಿಎಲ್ಲವೂ ಅಯೋಮಯ..! ಬುದ್ಧಿವಂತರುಸಾಕಷ್ಟು ಇರುವರುಸಮಾಜದಲ್ಲಿ ;ಹೃದಯವಂತರಿಗೆಹುಡುಕುತಿದೆ ಇಂದು ಬಿಡುವು ಇಲ್ಲಎನ್ನುವ ವ್ಯಕ್ತಿಗಳಸ್ವತ್ತಲ್ಲ ಕಾಲಪಾದರಸದಂತದ್ದುಚಲನೆಗೆ ಸ್ವಂತದ್ದು ನಂಬಿಕೆ ಜೀವತೆಗೆಯುವ ಸಾಧನಆಗಬಾರದುಬಾಳು ಮುನ್ನಡೆಸುವದಾರಿದೀಪ ಆಗಲಿ ಗೌರವಿಸುವಕಲೆ ಹೃದಯದಲ್ಲಿಮೂಡಿರುತ್ತದೆ;ಪಡೆದವರಿಗಿಂತಕೊಟ್ಟವರು ತೃಪ್ತರು.. ಕತ್ತಲೆಂದಿಗೂಅಮಂಗಳವಲ್ಲಯ್ಯನಮ್ಮ ಬಾಳಿಗೆಅದುವೇ ದೀಪವಾಗಿಮುನ್ನಡೆಸುವುದಯ್ಯ ಮಹಾಭಾರತಓದಿ ನೋಡಿ, ಬದುಕಿನಏರಿಳಿತವುಹೃದಯದಿ ಇಳಿದುದಾರಿ ತೋರಿಸುತ್ತದೆ.. ******* ಡಾ. ಮಲ್ಲಿನಾಥ ಶಿ. ತಳವಾರ
ಕಾವ್ಯಯಾನ
ನಿರ್ವಾಣದೆಡೆಗೆ ಎಮ್.ಟಿ. ನಾಯ್ಕ. ಹೆಗಡೆ ಹೋಗಿ ಬಂದವನು ನಾನುನಿರ್ವಾಣದೆಡೆಗೆಸರ್ವ ಚೈತನ್ಯ ಶೂನ್ಯದಂಚಿಗೆ ಕೋಟೆ, ಕಿರೀಟ, ಕೀರ್ತಿಗಳನೆಲ್ಲಾತೊರೆದು ಸಾಗುವ ದಾರಿಅರಸು ಆಳುಗಳನೆಲ್ಲಾ ಕೊನೆಗೆಕೂಡಿಸುವ ಕೂಡುದಾರಿ ….! ನಡೆದ ಬಸವಣ್ಣಕಲ್ಯಾಣ ಕ್ರಾಂತಿಯ ನಡುವೆ ,ತನ್ನ ಶಿಲುಬೆ ತಾ —ಹೊತ್ತು ನಡೆದ ಯೇಸುನಿರ್ವಾಣದೆಡೆಗೆ . ಕಾಲಪುರುಷನಾಣತಿಯಂತೆಲ್ಲಾತೊರೆದು ಹೊರಟಲೋಕದ ‘ ಶ್ರೀ ರಾಮ ‘ ,ಜಗನ್ನಾಟಕ ಸೂತ್ರಧಾರಿಯಗರಿಮೆ ಹೊತ್ತವ —ಕಾನನದ ನಡುವೆ ವ್ಯಾಧನ‘ ಶರಕೆ ‘ ಹೊರಟನಲ್ಲಿಂದಲೇನಿರ್ವಾಣದೆಡೆಗೆ ಕ್ಷಣಭಂಗುರದ ಬದುಕಿನಕತೆಯ ತೆರೆದಿಡುವ ಗಳಿಗೆಜೀವ ಜಗದಗಡಿಯಾರದ ಗುರುತುನಿರ್ವಾಣದ ಗಳಿಗೆ ದಾಟಿ ಉಳಿದವರಿಲ್ಲ ಆ ಗಳಿಗೆ..! **********
ಕಾವ್ಯಯಾನ
ಶಾಲ್ಮಲೆ ಉಮೇಶ ಮುನವಳ್ಳಿ ನನ್ನ ಹಿತ್ತಲದಲ್ಲಿ ಹುಟ್ಟಿದ ಶಾಲ್ಮಲೆಕೋಟೆ ಕೊತ್ತಲಗಳ ದಾಟಿಕಾಡು ಮೇಡುಗಳ ಮೀಟಿಮಲೆನಾಡಿನಲ್ಲಿ ಮೈದಳೆದಿಲ್ಲವೇ? ಎತ್ತಣ ಬಯಲುಸೀಮೆ,ಎತ್ತಣ ಮಲೆನಾಡು?ಎಲ್ಲೆ ಮೇರೆಗಳ ಮೀರಿ? ಗುಪ್ತಗಾಮಿನಿ, ಗತಿ ಹಿಡಿದು ಸಾಗಿಮತಿಯನು ಪ್ರಜ್ಞೆಯಲಿ ನೀಗಿಮಂಜುಳ ಗಾನದಲಿ ತೇಲಿಸಾಗರ ಸೆರುವ ಕಾತರದಲಿ? ಸೊಕ್ಕಿದ ಸರ್ಪದ ಭರಾಟೆಯ ಹರಿವುಉಕ್ಕಿದ ಕಡಲು, ಮಿಕ್ಕಿದ ಉನ್ಮಾದಮಿಲನದ ಸಾವಧಾನದ ಸುಮೇರು? **************
ಗಝಲ್
ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ಯಾವ ಮಾತಿನ ನೆನಪು ಮರೆತಿಲ್ಲ ಸಾಕಿಎದೆಯಲಿ ತುಂಬಿದ ನೋವು ಕಳೆದಿಲ್ಲ ಸಾಕಿ ಮೌನ ಅನುಭವಿಸಿದ ಯಾತನೆ ಸಾಕಾಗಿದೆಕಾಲನ ಲೀಲೆ ಹೇಳಲು ಏನು ಉಳಿದಿಲ್ಲ ಸಾಕಿ ಕೀವು ತುಂಬಿಕೊಂಡಿದೆ ಹೃದಯದೊಳುಅದನು ಅನುಭವಿಸಲು ಜೀವ ಬೇಕಲ್ಲ ಸಾಕಿ ಹೇಗಾದರೂ ಆಗಲಿ ಸೈರೈಸಿಕೊಂಡು ನಡೆವೆಕೊನೆಗಾಲದ ದಿನಗಳಿಗೆ ಕಾದಿರುವೆನಲ್ಲ ಸಾಕಿ ಚುಚ್ಚು ಮಾತಿಗೆ ಬೆಚ್ಚಿಬೀಳದೆ ಉಳಿದಿರುವೆಮರುಳ ಬದುಕಿರುವ ತನಕ ಮಿಡಿಯಬಲ್ಲ ಸಾಕಿ *********
ಗಝಲ್
ಗಝಲ್ ಡಾ.ಗೋವಿಂದ ಹೆಗಡೆ ಮಾಸಿಹೋದ ನಗುವಿಗೇಕೆ ಬಣ್ಣ ಮೆತ್ತುವೆಕರಗಿಹೋದ ನಲಿವಿಗೇಕೆ ಬಣ್ಣ ಮೆತ್ತುವೆ ದಾರಿ ನಡೆ ನಡೆಯುತ್ತ ಸರಿಯಿತು ಕಾಲಕಂದಿಹೋದ ಕೆನ್ನೆಗೇಕೆ ಬಣ್ಣ ಮೆತ್ತುವೆ ಏರುವ ಖುಷಿ ಮುಗಿದು ಇಳಿಜಾರು ಈಗಕಾಂತಿ ಕಳೆದ ಕಣ್ಣಿಗೇಕೆ ಬಣ್ಣ ಮೆತ್ತುವೆ ಯಾವಾಗ ಅದು ಎದೆಯಲ್ಲಿ ಬೆಳಕಾಡಿದ್ದುಅರ್ಥ ಕಳೆದ ಮಾತಿಗೇಕೆ ಬಣ್ಣ ಮೆತ್ತುವೆ ಮಾತು ಮನಸು ಕೃತಿಗಳಲ್ಲಿ ಮೇಳವೆಲ್ಲಿದೆಋಜುತೆ ಮರೆತ ನಡತೆಗೇಕೆ ಬಣ್ಣ ಮೆತ್ತುವೆ ಹೆಳವ ಹೆಜ್ಜೆಗಳಲಿ ಈಗ ಸಾಗಿದೆ ಪಯಣರೆಕ್ಕೆ ಸವೆದ ಹಕ್ಕಿಗೇಕೆ ಬಣ್ಣ ಮೆತ್ತುವೆ ಯಾವ ರಂಗು ಬಳಿದರೇನು ‘ಜಂಗಮ’ನಿಗೆಕನಸು ಹರಿದ ಬದುಕಿಗೇಕೆ ಬಣ್ಣ ಮೆತ್ತುವೆ ******
ಕಾವ್ಯಯಾನ
ಮಳೆ ಒಲವು ವಸುಂಧರಾ ಕದಲೂರು ಸಂಜೆ ಮಳೆ, ಹನಿಗಳ ಜೊತೆನೆನಪುಗಳನು ಇಳಿಸಿತುತೋಯ್ದ ಮನದಲಿ ಬಚ್ಚಿಟ್ಟನೆನಪುಗಳ ಮೊಗ್ಗು ಅಂತೆಮಣ್ಣ ಘಮಲಿನಂತೆ ಹರಡಿತು ಇರುಳ ರಾಗ ಕದಪ ಮೇಲೆನವ ಯೌವನದ ಅಲೆಗಳಲಿರಂಜಿಸಿತು ಮನವು ಮಧುರರಾಗ ಗುನುಗುವಂತೆ ಅಂತೆಹೊಸೆದು ಹೊಸತು ಹಾಡಿತು ಮನವು ತೋಯ್ದ ಪರಿಗೆತನುವು ತಾನು ನಡುಗಿತುಬಳ್ಳಿ ಚಿಗುರು ಮರವನಪ್ಪಿಬೆಚ್ಚಗಾಗುವಂತೆ ಅಂತೆನೆಚ್ಚು ಹೆಚ್ಚಿ ಬಲವಾಯಿತು ಅಧರ ಬಿರಿದು ಮಧುರನುಡಿದು ಪಿಸು ಮಾತಿನಬಿಸಿ ಎದೆಗೆ ಇಳಿದಂತೆಅಂತೆ ಒಲವು ಆವರಿಸಿತು ಮಳೆಯೆಂದರೆ ಒಲವುಒಲವೆಂದರೆ ನೆನೆದ ನೆಲದಒದ್ದೆಯಂತೆ ಅಂತೆ ಎಂದುಮತ್ತೆ ಸಾರಿತು ಮನವುಮಧುರವಾಗಿ ನಡುಗಿತು ********
