ಅಂಕಣ ಬರಹ ಒಮ್ಮೊಮ್ಮೆ ಪಾತ್ರೆ ತಿಕ್ಕುವಾಗಲೂ ಕವಿತೆಯ ಹೊಳಹುಗಾಣುತ್ತದೆ ಹೇಮಲತಾ ವಸ್ತ್ರದ. ಪರಿಚಯ: ಎಂಎ, ಎಂಇಡಿ, ಪಿಜಿ ಡಿಪ್ಲೋಮಾ ಇನ್ ಇಂಗ್ಲಿಷ್. ವಿಜಯಪುರ ಗ್ರಾಮೀಣ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿದ್ದಾರೆ. ಊರು: ಸಿಂದಗಿ.  ಜಿಲ್ಲೆ: ವಿಜಯಪುರ. ಕೃತಿಗಳು: ಅವ್ವನಿಗೊಂದು ಪತ್ರ (ಕವನಸಂಕಲನ). ಪೃಥ್ವಿಯೊಡಲು(ಕಥಾಸಂಕಲನ)(ಅಚ್ಚಿನಲ್ಲಿದೆ). ಗಜಲ್ ಸಂಕಲನಅಚ್ಚಿನಲ್ಲಿದೆ. ಅಕ್ಕನಾಗಮ್ಮ (ನಾಟಕ)(ಅಚ್ಚಿನಲ್ಲಿ) ಶೈಕ್ಷಣಿಕ, ಸಾಹಿತ್ಯಕ ಲೇಖನಗಳು. ಮಕ್ಕಳ ಕಥೆಗಳು, ಕವನಗಳು. ಕ್ರೀಯಾಸಂಶೋದನೆ (ಬಾಲಕಾರ್ಮಿಕಪದ್ಧತಿ). ಗುಲ್ಬರ್ಗಾ ವಿಶ್ವವಿದ್ಯಾಲಯ ದ ಎಂಎ ಮೂರನೇ ಸೆಮ್ (ಆಧುನಿಕ ಕಾವ್ಯ ಸಂಗ್ರಹ-೨೦೧೨) ಗೆ ಕನ್ನಡಗಜಲ್ಗಳು, ಕವನಗಳು ಪಠ್ಯವಾಗಿವೆ. […]

ಕವಿತೆ ಜಗ… ಸೋಜಿಗ ವಿದ್ಯಾಶ್ರೀ ಅಡೂರ್ ಯಾರು ಇಲ್ಲ ಎಂಬ ಭಾವಬಿಟ್ಟುಬಿಡಿರಿ ಎಲ್ಲ ಬೇಗದೇವನೊಬ್ಬ ಸಲಹುತಿಹನುಹೆಜ್ಜೆ ಹೆಜ್ಜೆಗೇ ಗೋಡೆ ಸಂಧಿಲಿರುವ ಜೇಡಮರಳಿ ಕಟ್ಟಿ ತನ್ನ ಗೂಡಗೊಡವೆಯಿರದೆ ಬದುಕುತಿಹುದುಹೊಟ್ಟೆಪಾಡಿಗೇ ಮೊಟ್ಟೆಯಿಟ್ಟು ಮಾಯವಾಗೋಅಟ್ಟಿಉಣುವ ಜೀವಗಳಿಗೆಹುಟ್ಟುಸಾವು ಮೂಲವರುಹೋಶಕ್ತಿಯಾವುದು ಬಾಯಿಬರದೆ ಇರುವ ಮೂಕಹಸುವು ಕೂಡ ತನ್ನ ಪ್ರಸವಹಲ್ಲುಕಚ್ಚಿ ಸಹಿಸಿ ಕರುಳಬಳ್ಳಿ ಹರಿವುದೂ ಎಷ್ಟು ಕಡಿದರೂನು ಚಿಗುರಿಮತ್ತೆ ಮತ್ತೆ ಟಿಸಿಲು ಒಡೆದುಬದುಕೋ ಭರವಸೆಯ ಗಿಡಕೆಯಾರು ಕೊಟ್ಟರೂ ಇಟ್ಟಜಾಗದಲ್ಲಿ ತನ್ನಬೇರನಿಳಿಸಿ ಗಟ್ಟಿಗೊಳುವಪುಟ್ಟಬೀಜಕಿಹರೆ ಸಾಟಿಯಾರು ದಿಟ್ಟರೂ ಅಕ್ಕಿಬೆಂದು ಅನ್ನವಾಗಿನಿನ್ನೆದಿಂದು ಹಳಸಿಹೋಗಿಭವದಬದುಕು ಇಷ್ಟೇ ಎಂದುಸಾರುತಿರುವುದು ಅರಿವ ಸೊಡರು ಹಚ್ಚಿ […]

ಕವಿತೆ ನತಭಾವ ಶಾಲಿನಿ ಆರ್ ಒಡಲಾಳದಲಿ ಒಡಮೂಡಿದತಪ್ತತೆಯ ಪ್ರಶ್ನೆಗಳ ಸುರಿಮಳೆ/ಉತ್ತರ ಹುಡುಕುವಿಕೆ ಬೈಗು ಜಾವದ ಸರಹದ್ದಿನ ಅಂಚಿನಲಿ ಈ ಇಳೆ// ಕಳಚುವ ಹುನ್ನಾರು ಒದೊಂದೆ ಭಾವಗಳು ಬೆತ್ತಲಾಗಿ ಬಯಲಿಗೆ/ಸೊಬಗಿನ ಪಾತರಗಿತ್ತಿ ನೋವಿನ   ಹುಳುವಾಗಿ  ಮತ್ತೆ ಗೂಡಿಗೆ// ಉಕ್ಕಿದ ಕಡಲಾಳದಿ ನೂರು ಭಾವಗಳಸಮಾಧಿ ಪಳೆಯುಳಿಕೆಯಂತೆ/ಬಿಚ್ಚಿಡುವ ತವಕದಲಿ ಕಾಲ ಸರಿದಿದೆ ದಡಕಪ್ಪಳಿಸದ ಅಲೆಯಂತೆ// ಮಂಜಿನ ಮುಸುಕಿನ ಚಳಿಯ ಕುರ್ಳಿಗಾಳಿ ಸುಳಿದು ಬಳಿಗೆ/ತುಂಬಿದ ಎನ್ನೆದೆಗೆ ಮೋಹದ ಮುತ್ತನೊತ್ತಿದೆ ಒಲವ ಸುಳಿಗೆ// ಜನುಮವಿದು ಬರಿದಾಗಬೇಕುಮತ್ತೆ ಮತ್ತೆ ಚಿಗುರ ಹಡೆಯಲು/ಒಳಬೇಗುದಿಗಳ ಬಿಕ್ಕು ನಿಲ್ಲಬೇಕುಮತ್ತೆ ಮತ್ತೆ […]

ಪುಸ್ತಕ ಪರಿಚಯ ಗಾಯದ ಹೂವುಗಳು  “ಗಾಯದ ಹೂವುಗಳು ”  2015 ರ  ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ” ಪಡೆದ ಕೊಡಗಿನ ಯುವಕವಿ  ಕಾಜೂರು ಸತೀಶ್ ರವರ ಮೊದಲ ಸಂಕಲನ ಎಂಬುದು ನಮ್ಮಲ್ಲರಿಗೂ ಹೆಮ್ಮೆಯ ವಿಷಯ.  ಫಲ್ಗುಣಿ ಪ್ರಕಾಶನದಲ್ಲಿ ಪ್ರಕಟಣೆಗೊಂಡು ಖ್ಯಾತ ಕವಿಗಳಾದ ಶ್ರೀ ವಾಸುದೇವ ನಾಡಿಗ್  ರವರ ಮುನ್ನುಡಿ ಬರೆಸಿಕೊಂಡು ಶ್ರೀ ಪ್ರವೀಣ ಕುಮಾರ ದೈವಜ್ಞಾಚಾರ್ಯ ರವರ ಭರವಸೆಯ ಬೆನ್ನುಡಿ ಲೇಪಿಸಿಕೊಂಡಿರುವ ಕವನ ಹೊತ್ತಿಗೆ.                                  […]

ಕವಿತೆ ಧ್ಯಾನಿಸುವ ಹೃದಯ ಡಾ.ಸುಜಾತಾ.ಸಿ ದೂರ ಸರಿದು ಸತಾಯಿಸಬೇಡಾದಾರಿ ಉದ್ದಕ್ಕೂ ನಾಲ್ಕಹೆಜ್ಜೆ ಇಟ್ಟು ನೋಡು ಬೆಳದಿಂಗಳ ನಡಿಗೆಗೆ ಕಾರ್ಮೊಡ ಕಟ್ಟಬೇಡಾಹಾಲ್ದೆನೆ ಇರುಳ ಸರಿಸಿ ಸವಿದು ನೋಡು ಸುರಿದ ಮಳೆಯಲಿ ಕಣ್ಣ ಹನಿ ಹುಡುಕ ಬೇಡಾಕಣ್ಣಾವಲಿಯಲಿ ಅರಳಿದ ನಿಂತ ಮುಖ ನೋಡು ಗಾಯದ ಮೆಲೆ ಉಸಿರು ಹರಡಿಬಿಡು ಒಮ್ಮೆಎದೆಭಾರ ತಂಗಾಳಿಯಾಗಿ ಬಿಡದು ನೋಡು ಕಣ್ಣು ರೆಪ್ಪೆ ಹಾಗೇ ಕಾಪಿಟ್ಟುಕೊ ಅಲುಗಿಸಬೇಡಾಕಂಡ ಕನಸಿಗೆ ಘಾಸಿಯಾದಿತು ನೋಡು ಮನಸುಗಳ ಸೇತುವೆಯ ಏಣಿ ಏರಿ ಬಿಡು ಒಮ್ಮೆನಿನ್ಮನ್ನೇ ಧ್ಯಾನಿಸುತ ಕುಳಿತ ಹೃದಯ ಮತ್ತೆ […]

ಕಥೆ ಋಣ ಎಂ. ಆರ್. ಅನಸೂಯ ಗಿರಿಜಮ್ಮ ತೋಟದಲ್ಲಿ ಮಾವಿನ ಫಸಲನ್ನು ನೋಡುತ್ತಾ “ಈ ಸತಿ ಮಾವಿನ ಫಸಲು ಚೆನ್ನಾಗಿ ಬಂದೈತೆ ಅಲ್ವೇನೋ ನಾಗ” “ಹೂನ್ರಮ್ಮ, ಈ ಸತಿ ಕಾಯಿ ಜಗ್ಗಿ ಹಿಡಿದೈತೆ. ಹಂಗೇನೆ ಹಲಸಿನ ಗಿಡಗಳು, ಹುಣಸೇಗಿಡ ಎಲ್ಲಾದ್ರೂಗನೂ ಚೆನ್ನಾಗಿ ಕಾಯಿ ಹಿಡಿದೈತೆ “ ತೋಟದ ಗೇಟ್ ಬಳಿ ಮೋಟರ್ ಬೈಕ್ ನ ಹಾರ್ನ್ ಸೌಂಡ್ ಕೇಳಿದ ಇಬ್ಬರೂ ಆ ಕಡೆ ನೋಡಿದರೆ ರಾಜಣ್ಣ ಕೈಯಲ್ಲಿ ಕಾಫಿ ಪ್ಲಾಸ್ಕ್ ಹಾಗೂ ಒಂದು ಸಣ್ಣ ಬ್ಯಾಗ್ ನ್ನು […]

ಹಾಯ್ಕುಗಳು ಭಾರತಿ ರವೀಂದ್ರ ಸ್ವರ್ಗ ತಾಯಿ ಸ್ವರೂಪ :ಅಕ್ಕನ ಮಡಿಲದು,ಇದುವೇ ಸ್ವರ್ಗ. ಮನ ಹಸಿದ ಹೊಟ್ಟೆ :ನಿದ್ರೆಗೆ ಜಾಗವೆಲ್ಲಿ,ಜಾಗ್ರತ ಮನ. ನೆಮ್ಮದಿ ಇರೆ ನೆಮ್ಮದಿ :ಒಬ್ಬರಿಗೊಬ್ಬರದು,ಚಿಂತೆ ಮಾತೆಲ್ಲಿ. ಹೃದಯ ಶಿಲೆ ಹೃದಯ :ಈ ಜಗ, ಮಮತೆಯಸೆಲೆ ಸಿಗದು. ಸ್ನೇಹ ತುಂಟು ಮನಸ್ಸು :ಬಳಲಿದ ತೃಷೆಗೆ,ಸ್ನೇಹ ಸಿಂಚನ. *************************

ಅಂಕಣ ಬರಹ ದಂಗೆಯ ದಿನಗಳುಇಂಗ್ಲಿಷ್ ಮೂಲ : ಮನೋಹರ ಮಳಗಾಂವ್‌ಕರ್ ಕನ್ನಡಕ್ಕೆ : ರವಿ ಬೆಳಗೆರೆಪ್ರ : ಭಾವನಾ ಪ್ರಕಾಶನಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೧೮೫ಪುಟಗಳು : ೩೦೪ ಪ್ರಸಿದ್ಧ ಭಾರತೀಯ ಆಂಗ್ಲ ಲೇಖಕ ಮನೋಹರ ಮಳಗಾಂವ್‌ಕರ್ ಅವರ ಐತಿಹಾಸಿಕ ಕಾದಂಬರಿಯ ಅನುವಾದವಿದು. ಬ್ರಿಟಿಷರು ಭಾರತವನ್ನು ಆಕ್ರಮಿಸಿಕೊಂಡ ನಂತರ ಈಸ್ಟ್ ಇಂಡಿಯಾ ಕಂಪೆನಿಯು ವ್ಯಾಪಾರದ ಹೆಸರಿನಲ್ಲಿ ಭಾರತದ ಒಂದೊಂದೇ ರಾಜ್ಯಗಳನ್ನು ಕಬಳಿಸಿಯಾದ ಮೇಲೆ ಭಾರತೀಯರನ್ನು ಹಿಂಸಿಸ ತೊಡಗಿದಾಗ ಅವರ ವಿರುದ್ಧ ಸೇಡು ತೀರಿಸಿ ಅವರನ್ನು ಭಾರತದಿಂದ […]

ಕವಿತೆ ಗೆಜ್ಜೆನಾದ ಅಕ್ಷತಾ ಜಗದೀಶ್ ಸಾವಿರ ಸಾಲಿನ ಪದಗಳಲಿಅಡಗಿ ಕುಳಿತವಳು….ಯಾರಿಗೂ ಕಾಣದಂತೆನಾ ಬರೆವ ಕವನಗಳಲಿ ಮೂಡುತಿರುವಳು…….. ಕವನದ ಸಾಲುಗಳುಅವಳ ಗೆಜ್ಜೆಯನಾದದಹೆಜ್ಜೆಯ ಗುರುತುಗಳು..ಹಾಡಿನ ಪಲ್ಲವಿಯೂಅವಳು ಬಿರುವ ಕಿರುನಗೆಯೂ….ಆಕೆಯ‌ ಸಿಹಿ ಮುತ್ತುಗಳೇ..ಮಳೆಯ‌ ಆ ತುಂತುರು ‌ಹನಿಗಳು.. ಬಾನಲ್ಲಿ ಬಂದು‌ ಹೋಗುವಕಾಮನಬಿಲ್ಲಿನಂತೆ ನೀನು..ಬಣ್ಞಬಣ್ಣದ ನೆನಪು ಬಿತ್ತಿ ಹೋದೆಯೇನು….? ನನ್ನ ಹಾಡಿನ‌ ಅಂತರಾಳ ಅವಳುನನ್ನ ಬಾಳಿನ ಒಡತಿ ಇವಳು..ಹಾಡಿಗೆ ಸ್ಪೂರ್ತಿಯಾಗಿ….ಪದಗಳಿಗೆ ಭಾವವಾಗಿ…ನನ್ನೊಡನೆ ಸೇರು‌ ಮೆಲ್ಲಗೆ.. *********************************

ಅಂಕಣ ಬರಹ ದೇವರಮನೆಯಲ್ಲಿ ಕುರಿಂಜಿ (ಬಿಸಿಲನಾಡಾದ ಬಳ್ಳಾರಿ ಸೀಮೆಯಲ್ಲೂ ಕುರಿಂಜಿಯಿದೆ ಎಂಬ ಖಬರಿಲ್ಲದೆ,ಎರಡು ವರ್ಷದ ಹಿಂದೆ ಬರೆದ ಲೇಖನವಿದು.) ತರೀಕೆರೆ ಸೀಮೆಗೆ ಸೇರಿದ ಕೆಮ್ಮಣ್ಣುಗುಂಡಿ, ಬಾಬಾಬುಡನಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕಲ್ಹತ್ತಿಗಿರಿ ಮುಂತಾದ ಶೋಲಾ ಬೆಟ್ಟಗಳಲ್ಲಿ ಬಾಲ್ಯದಿಂದಲೂ ಅಲೆದಿದ್ದೇನೆ. ಆಗ ಕಳೆಯಂತೆ ಬೆಳೆದಿರುತ್ತಿದ್ದ ಅನಾಮಿಕವಾದ ಹಸಿರು ಗಿಡಗಳು ಕಣ್ಣಿಗೆ ಬೀಳುತ್ತಿದ್ದವು. ಆದರೆ ಅವು 12 ವರ್ಷಕ್ಕೊಮ್ಮೆ ಹೂಬಿಟ್ಟು ಗಿರಿಕಣಿವೆಗಳನ್ನು ಹೂವಿನ ತೊಟ್ಟಿಲಾಗಿ ಮಾಡಬಲ್ಲ ಕುರಿಂಜಿಗಳೆಂದು ಗೊತ್ತಿರಲಿಲ್ಲ. ತಿಳಿಯುತ್ತ ಹೋದಂತೆ, ನಮ್ಮ ಆಸುಪಾಸಿನಲ್ಲೇ ಇರುವ ಅವನ್ನು ಗಮನಿಸದೆ ಹೋದೆನೆಲ್ಲ ಎಂದು […]

Back To Top