ಕವಿತೆ

ನತಭಾವ

ಶಾಲಿನಿ ಆರ್

Meera Krishna | Yashoda krishna, Krishna radha painting, Radha krishna art

ಒಡಲಾಳದಲಿ ಒಡಮೂಡಿದ
ತಪ್ತತೆಯ ಪ್ರಶ್ನೆಗಳ ಸುರಿಮಳೆ/
ಉತ್ತರ ಹುಡುಕುವಿಕೆ ಬೈಗು ಜಾವದ ಸರಹದ್ದಿನ ಅಂಚಿನಲಿ ಈ ಇಳೆ//

ಕಳಚುವ ಹುನ್ನಾರು ಒದೊಂದೆ ಭಾವಗಳು ಬೆತ್ತಲಾಗಿ ಬಯಲಿಗೆ/
ಸೊಬಗಿನ ಪಾತರಗಿತ್ತಿ ನೋವಿನ   ಹುಳುವಾಗಿ  ಮತ್ತೆ ಗೂಡಿಗೆ//

ಉಕ್ಕಿದ ಕಡಲಾಳದಿ ನೂರು ಭಾವಗಳ
ಸಮಾಧಿ ಪಳೆಯುಳಿಕೆಯಂತೆ/
ಬಿಚ್ಚಿಡುವ ತವಕದಲಿ ಕಾಲ ಸರಿದಿದೆ ದಡಕಪ್ಪಳಿಸದ ಅಲೆಯಂತೆ//

ಮಂಜಿನ ಮುಸುಕಿನ ಚಳಿಯ ಕುರ್ಳಿಗಾಳಿ ಸುಳಿದು ಬಳಿಗೆ/
ತುಂಬಿದ ಎನ್ನೆದೆಗೆ ಮೋಹದ ಮುತ್ತನೊತ್ತಿದೆ ಒಲವ ಸುಳಿಗೆ//

ಜನುಮವಿದು ಬರಿದಾಗಬೇಕು
ಮತ್ತೆ ಮತ್ತೆ ಚಿಗುರ ಹಡೆಯಲು/
ಒಳಬೇಗುದಿಗಳ ಬಿಕ್ಕು ನಿಲ್ಲಬೇಕು
ಮತ್ತೆ ಮತ್ತೆ ನಿನ್ನ ಪಡೆಯಲು//

ಸೂತ್ರವಿದು ಬಾಳ ಭವಣೆಗೆ ನೀತಿ ಮಂತ್ರದ ಪಾಠ/
ಬಿದ್ದ ಎಲೆಯಲು ಸಾವಿರಾರು ಕನಸಿದೆ
ಮತ್ತೆ ಅನುಭವದ ರಸದೂಟ//

ಶರದೃತುವಿನ ಮಾಧುರ್ಯವಿದೆ ನತಭಾವ ಆದಿಯಲಿ/
ಒದೊಂದೆ ಎಲೆಗಳು ಕಳಚಿ ಬೀಳುವ
ವಿಸ್ಮಯದ ಬಾಳ ಪಯಣದಲಿ//

*************************

2 thoughts on “

Leave a Reply

Back To Top