ಕವಿತೆ
ಧ್ಯಾನಿಸುವ ಹೃದಯ
ಡಾ.ಸುಜಾತಾ.ಸಿ
ದೂರ ಸರಿದು ಸತಾಯಿಸಬೇಡಾ
ದಾರಿ ಉದ್ದಕ್ಕೂ ನಾಲ್ಕಹೆಜ್ಜೆ ಇಟ್ಟು ನೋಡು
ಬೆಳದಿಂಗಳ ನಡಿಗೆಗೆ ಕಾರ್ಮೊಡ ಕಟ್ಟಬೇಡಾ
ಹಾಲ್ದೆನೆ ಇರುಳ ಸರಿಸಿ ಸವಿದು ನೋಡು
ಸುರಿದ ಮಳೆಯಲಿ ಕಣ್ಣ ಹನಿ ಹುಡುಕ ಬೇಡಾ
ಕಣ್ಣಾವಲಿಯಲಿ ಅರಳಿದ ನಿಂತ ಮುಖ ನೋಡು
ಗಾಯದ ಮೆಲೆ ಉಸಿರು ಹರಡಿಬಿಡು ಒಮ್ಮೆ
ಎದೆಭಾರ ತಂಗಾಳಿಯಾಗಿ ಬಿಡದು ನೋಡು
ಕಣ್ಣು ರೆಪ್ಪೆ ಹಾಗೇ ಕಾಪಿಟ್ಟುಕೊ ಅಲುಗಿಸಬೇಡಾ
ಕಂಡ ಕನಸಿಗೆ ಘಾಸಿಯಾದಿತು ನೋಡು
ಮನಸುಗಳ ಸೇತುವೆಯ ಏಣಿ ಏರಿ ಬಿಡು ಒಮ್ಮೆ
ನಿನ್ಮನ್ನೇ ಧ್ಯಾನಿಸುತ ಕುಳಿತ ಹೃದಯ ಮತ್ತೆ ಸಿಕ್ಕರೆ ಸಿಗಬಹುದು ಒಮ್ಮೆ
*************************
ಚಂದದ ಭಾವ !!
Very nice