ಗಜಲ್

ಗಜಲ್

ಗಜಲ್ ಅರುಣಾ ನರೇಂದ್ರ ಅವನು ನನ್ನದೆಯಲ್ಲಿ ದೀಪ ಹಚ್ಚಿಟ್ಟಿದ್ದಾನೆ ಸಖಿಮುಚ್ಚಿದ ಕದ ತೆರೆದು ಕತ್ತಲೆ ಬಚ್ಚಿಟ್ಟಿದ್ದಾನೆ ಸಖಿ ನಮ್ಮಿಬ್ಬರ ಪ್ರೀತಿಯನು ಮುಗಿಲೆತ್ತರಕ್ಕೆ ಹಿಡಿದಿದ್ದಾನೆತುಟಿದೆರೆಯದೆ ಒಲವಿನ ಮಾತುಗಳ ಬಿಚ್ಚಿಟ್ಟಿದ್ದಾನೆ ಸಖಿ ಮೊಗ್ಗುಗಳಿಗೆ ನಗುವ ಕಲಿಸುವ ಖಯಾಲಿ ಅವನದುಒಡಲ ಹೊದರಿನಲಿ ನೋವುಗಳ ಮುಚ್ಚಿಟ್ಟಿದ್ದಾನೆ ಸಖಿ ಅಂಗಳದ ಹಣತೆಗಳಿಗೆ ಅವನದೇ ಕಣ್ಣ ಹೊಳಪುಚುಚ್ಚುವ ಮುಳ್ಳುಗಳ ಲೆಕ್ಕಿಸದೆ ಹೂವ ಮುತ್ತಿಟ್ಡಿದ್ದಾನೆ ಸಖಿ ಬೆಳ್ಳಗಿರುವ ಬೆಳಕಿಗೂ ಬಣ್ಣ ಬಳಿಯುತ್ತಾರಲ್ಲ ಅರುಣಾಬರುವ ಬೇಸರಿಕೆಗಳನು ತಡೆದು ಅಲ್ಲಲ್ಲೇ ಹತ್ತಿಟ್ಟಿದ್ದಾನೆ ಸಖಿ **************************

ಅಂಕಣ ಬರಹ ಡಾ ಶ್ರೀಧರ್ ಗೌಡ ಉಪ್ಪಿನ ಗಣಪತಿ ಲೇಖಕರ ಪರಿಚಯ : ಡಾ ಶ್ರೀಧರ್ ಗೌಡ ಉಪ್ಪಿನ ಗಣಪತಿ ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ.ಸಾಹಿತ್ಯ ಬರಹ ಹವ್ಯಾಸ.“ಕಡಲಿಗರ ಸಂಸ್ಕೃತಿ” ಸಂಶೋಧನ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರ್ ಪ್ರದಾನ ಮಾಡಿದೆ. ಡಾಕ್ಟರ್ ಸೈಯದ್ ಜಮೀರುಲ್ಲಾ ಷರೀಫ್ ಮಾರ್ಗದರ್ಶಕರು.ಸಂಶೋಧನಾ ಮಹಾಪ್ರಬಂಧ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಕುಮಟಾತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆಮೂರು ತಾಲೂಕು ಸಾಹಿತ್ಯ ಸಮ್ಮೇಳನ ಸಂಘಟನೆಪ್ರತಿ ತಾಲ್ಲೂಕು ಸಾಹಿತ್ಯ ಸಮ್ಮೇಳನವನ್ನು ಎರಡು ದಿನಗಳ ಕಾಲ ಸಂಘಟಿಸಿ ದ್ದು […]

ಜಾನ್ ಮಿಲ್ಟನ್ ಕವಿತೆಯ ಅನುವಾದ

ಅಂಧಕಾರದೊಳಗಿಂದ ಇಂಗ್ಲೀಷ್ ಮೂಲ: ಜಾನ್ ಮಿಲ್ಟನ್ ಕನ್ನಡಕ್ಕೆ ವಿ.ಗಣೇಶ್ ನನ್ನ ಬದುಕಿನ ಬೆಳಕ ಹೇಗೆ ಸವಿದಿಹೆನೆಂದುಬಾಳ ಪುಟಗಳ ತಿರುವಿದರೆ ಬರಿ ಕತ್ತಲುಬೆಳಕು ಕತ್ತಲೆ ಮಧ್ಯೆ ಕಳೆದ ಬಾಳನು ಈಗಬೆಳಗಿಸಲು ಛಲ ಹೊತ್ತು ನಿಂತೆ ನಾನು ನನ್ನ ಭಕ್ತಿಗೆ ಮೆಚ್ಚಿ ನೀನಿತ್ತ ವರವೆನಗೆಕಾಣಿಕೆಯ ರೂಪದಲಿ ನಾನು ಪಡೆದಿರುವೆಅದನು ಬಳಸುವ ರೀತಿ ನನಗೆ ತಿಳಿದಿದೆ ಗುರುವೆಬೇರೆ ರೂಪದಿ ಕೊಡಲು ಮುಡುಪನಿಡುವೆ. `ಕಷ್ಟವೇನೇ ಇರಲಿ ಕಾಯಕವ ನೀ ಮಾಡುಅದಕೆ ಫಲ ನೀಡುವುದು ನನ್ನ ಇಚ್ಛೆ’ ಎಂದರಿತೂಅದನು ಮರೆತಿಹ ನಾನು ಬರಿದೆ ಕಾಲವ […]

ಗಜಲ್

ಗಜಲ್ ವಿ.ಹುಸೇನಿ ವಲ್ಲೂರು ಜಿಂದಗಿ ತುಂಬಾ ಬರಿ ಇರುಳ ತುಂಬಿದೆ ನಿನ್ನ ಬಿಟ್ಟು ಹೇಗೆ ಇರಲಿ ಸಖಿ!ಮೊಹಬತ್ತಿನ ತುಂಬಾ ಅರಳಿದ ಇರಳು ಓಡಿಸಬೇಕು ಇಲಾಲು ಹಿಡಿದು ಬಾ ಸಖಿ!! ಹಗಲು ನಾಚಿತು ಮೈ ಬಾಚಿತು ಸೆರಗ ತುಂಬ ಗಂಟು ಕಟ್ಟಿಕೊಂಡು!ಜೀವದೊಳಗ ಜೀವ ನೀನು ಹುಡುಕುತ್ತಿದೆ ಮನಸು ಸನಿಹಕ್ಕೆ ಬಾ ಸಖಿ!! ತುಟಿ ಕಚ್ಚಿ ಹೇಳಬೇಕೆಂದ ಒಂದು ಮಾತು ನನ್ನ ಮನಸಲ್ಲೇ ಉಳಿಯಿತು!ನಾ ಹೋದರು ಮಸಣದ ಗೋರಿ ಮೇಲಿನ ಮರಕ್ಕೊಂದು ಹಾಡು ಕಲಿಸು ಬಾ ಸಖಿ!! ಎಷ್ಟೊಂದು ಆಶೆಗಳು […]

ಬಿಕ್ಕಳಿಸಿದ ಅವ್ವ

ಕವಿತೆ ಬಿಕ್ಕಳಿಸಿದ ಅವ್ವ ಡಾ.ಸುಜಾತಾ.ಸಿ ನವ ಮಾಸ ಹೊತ್ತುರಕ್ತ ಮಾಂಸ ತುಂಬಿಆಕಾರ ಕೊಟ್ಟಗರ್ಭಕ್ಕೆ ಕಪ್ಪನೆಕಾರ್ಮೊಡ ಕವಿದುಬದುಕಿನ ಕ್ಷಣ ಕ್ಷಣವುದುರ್ರಗಮನವಾಗಿಸಂಚಾರಿಸುತ್ತಿರಲುಬೇಡಾ ತಾಯಿಸಾಕು ಮಾಡುಗರ್ಭಧರಿಸಿಧರೆಯನ್ನು ಕಾಣಿಸುವುದು ಹಾಲುಣಿಸುವಾಗಕಚ್ಚಿ ಕಚ್ಚಿ ಹೀರಿದ ಮೊಲೆ ತೊಟ್ಟುಆಕಾಶಕ್ಕೆ ಬಾಯ್‌ತೆರೆದುನಿಂತರು ಹಸಿದ ಹೊಟ್ಟೆಗೆಮಾಂಸದ ಹಾಲುಣಿಸಿನಗುವ ಹಾಗೆ ಮಾಡಿದನಿನಗೆ ಇವತ್ತು ಬೀದಿಗೆತಂದಿಕ್ಕಿದ್ದಾರೆ ಮರುಳರು ನೆತ್ತಿಯ ಬಡಿತ ಹೆಚ್ಚಸಬಾರದೆಂದುಗAಧ ಮಿಶ್ರಿತ ದ್ರವ್ಯವನ್ನುಸವರಿ ಮುದ್ದಗಿ ತಿಡಿದನಿನ್ನ ಕೊಮಲ ಬೆರಳಿಗೆಹಾದಿ ಬೀದಿ ಕಸಗುಡಿಸಲುಹಚ್ಚಿ ಮೆರೆಯುತ್ತಿದ್ದಾರೆಸಾಕು ತಾಯಿ ಧರೆಗೆಎಂದು ಕರೆಯಬೇಡ ಮೆತ್ತನೆಯ ಹಾಸಿಗೆ ಹೊದಿಕೆ ಮಾಡಿಮಲಗಲೆಂದು ಕೈಯನ್ನೆ ದಿಂಬವಾಗಿಸಿಪಕ್ಕಕ್ಕೆ ಜಾರಿ ನಿದ್ರೆ ಮಾಡಿದ […]

ಯೋಗ್ಯತೆಯಲ್ಲ ಯೋಗ ಬೇಕು

ಲೇಖನ ಯೋಗ್ಯತೆಯಲ್ಲ ಯೋಗ ಬೇಕು ಜ್ಯೋತಿ ಬಾಳಿಗಾ “ಯಾಕೆ ಒಳ್ಳೆ ಇಡ್ಲಿ ಹಿಟ್ಟು ಊದಿಕೊಂಡಹಾಗೆ ಮುಖ ಮಾಡಿ ಕೂತಿದ್ದೀಯಾ… ಏನಾಯಿತು ?” ಎಂದು ನನ್ನವರು ಕೇಳಿದಾಗ “ಯಾಕೋ ಮನಸ್ಸು ಸರಿಯಿಲ್ಲ ಕಣ್ರಿ.. ಅಳು ಬರುವ ಹಾಗಿದೆ…” ಎಂದು ನನ್ನ ಮನದ ಬೇಗುದಿಯನ್ನು ತಿಳಿಸದೇ ಮಾತನ್ನು ತಳ್ಳಿ ಹಾಕಿದೆ. “ವಿಷಯ ಏನೂಂತ ಹೇಳಿದ್ರೆ ನನಗೂ ಗೊತ್ತಾಗುತ್ತದೆ, ಅದು ಬಿಟ್ಟು ಮನಸ್ಸು ಸರಿಯಿಲ್ಲಾಂತ ಹೇಳಿದ್ರೆ ಹೇಗೆ …? ಇಡೀ ದಿನ ಓದುವುದು, ಬರೆಯೋದೆ ಆಯಿತು. ಯೋಚನೆ ಮಾಡಿ ಮಾಡಿ ತಲೆ ಹಾಳು ಮಾಡಿಕೊಳ್ಳೋದು […]

ನೀನೊಂದು ಕಾವ್ಯ

ಕವಿತೆ ನೀನೊಂದು ಕಾವ್ಯ ಆನಂದ ಆರ್.ಗೌಡ ತಾಳೇಬೈಲ್ ನೀನೊಂದು ಕಾವ್ಯಭಾವ ಮನದ ಧರೆಯಲಿನಿನ್ನ ನಡಿಗೆಯೊಳಗಿನ ಮಿಲನತೆನಿಗೂಢ ಬೆಳಕು ಬೀರಿದೆ ನಗುವಿನ ಕೆನ್ನೆ ಗುಳಿ ನಕ್ಷತ್ರ ಕಡ್ಡಿಯಹೊಳಪಿನ ವದನ ಆಗಾಗ ಸಹನೆಯಿಂದಜಾರುವ ಕಣ್ಣಹನಿ ಆರಾಧನೆಯ ಹೃನ್ಮನತಬ್ಬಿಕೊಂಡಾಗಿನ ಧನ್ಯತೆನನ್ನ ತೆಕ್ಕೆಯಲ್ಲಿ ಹಾಗೇಹುದುಗುವ ಪರಿ ಎಲ್ಲವೂ ಮೊದಲಿನಂತೆ ಮಧ್ಯಾಹ್ನದ ನೆರಳಿನಂತೆನನ್ನೊಳಗೆ ನೀನಿದ್ದೆಬೆವೆತ ಎದೆ ಮೇಲಿನ ನಿನ್ನ ಮೊಗನನ್ನ ನಿದಿರೆ ಕದ್ದು ಮೆರೆಯುತ್ತಿದ್ದುಮೊದಲ ಸಲುಗೆ ಅಪ್ಪುಗೆಯ ದಾಹಎಲ್ಲವನ್ನೂ ತಣಿಸಿದ ಪರಿಒಲುಮೆಯ ಕಾವ್ಯದಂತೆ ನಿನ್ನ ಮುನಿಸಿನ ಸನಿಹದಸ್ಪರ್ಶದಲಿ ಯಾವುದೇ ಗಾಯವಿಲ್ಲಮಡಿಕೆಯಲಿ ತುಂಬಾನೇಬೇಸಿ ಉಂಡ ನೆನಪು […]

ಅಂಕಣ ಬರಹ ಸೋತು ಗೆದ್ದ ಮನುಷ್ಯ ಸೋತು ಗೆದ್ದ ಮನುಷ್ಯತೆಲುಗು ಮೂಲ : ಮಲ್ಲಾರೆಡ್ಡಿಅನುವಾದ : ಕಸ್ತೂರಿಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೧೦೪ ¥ಪುಟಗಳು :೧೫೨ ಇದು ತೆಲುಗು ಮೂಲದ ಮಲ್ಲಾರೆಡ್ಡಿಯವರ ಆತ್ಮಕಥೆ. ವಿಷಮ ಪರಿಸ್ಥಿತಿಗಳು ತಂದ ನೋವು-ಸಂಕಷ್ಟಗಳಿಂದಾಗಿ ಮಾನಸಿಕವಾಗಿ ನೊಂದು ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡು ಮಾನಸಿಕವಾಗಿ ಅಸ್ವಸ್ಥನಾದ ವ್ಯಕ್ತಿಯೊಬ್ಬ ತನ್ನ ಎಲ್ಲಾ ಅನುಭವಗಳನ್ನು ಇಲ್ಲಿ ವಿವರವಾಗಿ ಮನಮುಟ್ಟುವಂತೆ ಹೇಳುತ್ತಾನೆ. ತೀರಾ ಎಳೆಯ ಹುಡುಗನಾಗಿದ್ದಾಗಲೇ ಸೂಕ್ಷ್ಮ ಸಂವೇದನೆಯುಳ್ಳವನಾಗಿದ್ದರಿಂದ ತನ್ನ ಸುತ್ತ ಮುತ್ತ […]

ಗಜಲ್

ಗಜಲ್ ಅಲ್ಲಾಗಿರಿರಾಜ್ ಕನಕಗಿರಿ. ನೀವು ಒಂದು ದಿನ ನನಗೆ ಒಪ್ಪಿಗೆ ಕೊಟ್ಟರೆ ನನ್ನ ಕಬ್ರ್ ನಾನೇ ತೋಡಿಕೊಳ್ಳುತ್ತೇನೆ.ನನ್ನ ಗೋರಿ ಕಟ್ಟಲು ತಂದ ಈ ಬಂಡೆಗಲ್ಲಿನ ಮೇಲೆ ನಾ ಹಿಂದೂಸ್ತಾನಿ ಎಂದು ನಾನೇ ಕೆತ್ತಿಕೊಳ್ಳುತ್ತೇನೆ. ನೀವು ಸುಮ್ಮನಿದ್ದರೆ ನನ್ನ ಮಸಣ ನಾನೇ ನಿರ್ಮಿಸಿಕೊಳ್ಳುತ್ತೇನೆ.ನಾಳೆ ನನ್ನ ಗಜಲ್ ಓದುವಾಗ ಯಾರೂ ಧರ್ಮ ಹುಡುಕಬಾರದೆಂದು ಬೇಡಿಕೊಳ್ಳುತ್ತೇನೆ. ನೀವು ದೂರವಿದ್ದರೆ ನನ್ನ ಗೋರಿ ಮೇಲೆ ಬಿಳಿ ಹೂ ಹುಟ್ಟಲು ಕೇಳಿಕೊಳ್ಳುತ್ತೇನೆ.ನನ್ನ ಗೋರಿ ಬಳಿ ಯಾವ ಧರ್ಮದ ಝಂಡಾ ಹಾರದಿರಲಿಯೆಂದು ವಿನಂತಿಸಿಕೊಳ್ಳುತ್ತೇನೆ. ನೀವು ಬರುವುದಾದರೆ […]

ಕಾದಂಬರಿ ಕುರಿತು ಸು ನಾನು ಪ್ರತಿ ಪುಸ್ತಕ ಓದಿದಾಗಲೂ ಅದರಲ್ಲಿ ಬರುವ ಒಂದು ಪಾತ್ರ ನಾನೇ ಎನ್ನಿಸಿಬಿಡುವಷ್ಟು ಕೆಲವೊಂದು ಪಾತ್ರಗಳು ಕಾಡುತ್ತವೆ. ಇಲ್ಲಿ ಸು ಕಥಾನಾಯಕನಾದರೂ ನನಗ್ಯಾಕೊ ಪ್ರಕಾಶ್ ಪಾತ್ರ ಬಹಳ ಹಿಡಿಸಿತು. ಇಡೀ ಸು ಕಾದಂಬರಿ ಪ್ರಕಾಶ್ ಪಾತ್ರವೇ ನಿರೂಪಣೆ ಮಾಡಿದ್ದು ಅಂತ ನನಗೆ ಭಾಸವಾಯಿತು. ಇದನ್ನ ಕಾದಂಬರಿ ಅನ್ನೋದಕ್ಕಿಂತ ಒಂದು ಅನುಭವ ಕಥನ ಅಂತ ಕರೆಯೋದು ಹೆಚ್ಚು ಸೂಕ್ತ ಅನ್ನಿಸಿತು ನನಗೆ. ಕಡೆಯ ಎರಡು ಅಧ್ಯಾಯಗಳಲ್ಲಿ ಸು ಮತ್ತು ಪ್ರಕಾಶ್ ಮನಸ್ಸಿನ ತಳಮಳಗಳು ಬಹಳ […]

Back To Top