ಕವಿತೆ
ಬಿಕ್ಕಳಿಸಿದ ಅವ್ವ
ಡಾ.ಸುಜಾತಾ.ಸಿ
ನವ ಮಾಸ ಹೊತ್ತು
ರಕ್ತ ಮಾಂಸ ತುಂಬಿ
ಆಕಾರ ಕೊಟ್ಟ
ಗರ್ಭಕ್ಕೆ ಕಪ್ಪನೆ
ಕಾರ್ಮೊಡ ಕವಿದು
ಬದುಕಿನ ಕ್ಷಣ ಕ್ಷಣವು
ದುರ್ರಗಮನವಾಗಿ
ಸಂಚಾರಿಸುತ್ತಿರಲು
ಬೇಡಾ ತಾಯಿ
ಸಾಕು ಮಾಡು
ಗರ್ಭಧರಿಸಿ
ಧರೆಯನ್ನು ಕಾಣಿಸುವುದು
ಹಾಲುಣಿಸುವಾಗ
ಕಚ್ಚಿ ಕಚ್ಚಿ ಹೀರಿದ ಮೊಲೆ ತೊಟ್ಟು
ಆಕಾಶಕ್ಕೆ ಬಾಯ್‌ತೆರೆದು
ನಿಂತರು ಹಸಿದ ಹೊಟ್ಟೆಗೆ
ಮಾಂಸದ ಹಾಲುಣಿಸಿ
ನಗುವ ಹಾಗೆ ಮಾಡಿದ
ನಿನಗೆ ಇವತ್ತು ಬೀದಿಗೆ
ತಂದಿಕ್ಕಿದ್ದಾರೆ ಮರುಳರು
ನೆತ್ತಿಯ ಬಡಿತ ಹೆಚ್ಚಸಬಾರದೆಂದು
ಗAಧ ಮಿಶ್ರಿತ ದ್ರವ್ಯವನ್ನು
ಸವರಿ ಮುದ್ದಗಿ ತಿಡಿದ
ನಿನ್ನ ಕೊಮಲ ಬೆರಳಿಗೆ
ಹಾದಿ ಬೀದಿ ಕಸಗುಡಿಸಲು
ಹಚ್ಚಿ ಮೆರೆಯುತ್ತಿದ್ದಾರೆ
ಸಾಕು ತಾಯಿ ಧರೆಗೆ
ಎಂದು ಕರೆಯಬೇಡ
ಮೆತ್ತನೆಯ ಹಾಸಿಗೆ ಹೊದಿಕೆ ಮಾಡಿ
ಮಲಗಲೆಂದು ಕೈಯನ್ನೆ ದಿಂಬವಾಗಿಸಿ
ಪಕ್ಕಕ್ಕೆ ಜಾರಿ ನಿದ್ರೆ ಮಾಡಿದ ನಿನಗೆ
ಸ್ವಾರ್ಥ ತುಂಬಿದ ಮನುಜ
ಹುಚ್ಚಿ ಪಟ್ಟ ಕಟ್ಟಿ
ರೈಲ್ವೆ ಬಸ್ಸಸ್ಟಾಂಡಗಳಲ್ಲಿ
ದಿನ ನಿತ್ಯ ಮಲಗುವಂತೆ
ಮಾಡಿ ಹೆಂಡರ ಮಕ್ಕಳ ಜೊತೆ
ಕುರ್ಲಾನ ಹಾಸಿಗೆಯಲ್ಲಿ
ಮೂಢತ್ವದಿಂದ ಕಾಲು ಚಾಚಿ
ಮಲಗಿದ್ದಾನೆ ತಾಯೇ
***********************************
ಹಾಲುಂಡ ಎದೆಗೆ
ಚೂರಿ ಇರಿಸಿದ ಮನುಷ್ಯ
ಇನ್ನೆಂದು ಬದಲಾದಾನು
ದಯವಿಟ್ಟು ಬಿಕ್ಕಳಿಸಬೇಡ
ಮತ್ತೆ ಮರುಕಳಿಸುತ್ತೆ
ಬಿಕ್ಕಳಿಕೆಯ ನಾದ
ಹೊರ ಬರುವ ಕಾಲ
************************************
Nice poem
ಅರ್ಥಪೂರ್ಣ ಪದ್ಯ ಮೇಡಮ್
Thank you
Super
Thank you sir
ತುಂಬಾ ಚೆನ್ನಾಗಿದೆ ಮೇಡಮ್. ಇವತ್ತಿನ ಸನ್ನಿವೇಶಕ್ಕೆ ತಕ್ಕಂತೆ ಬರೆದಿದ್ದಿರಾ…
ವಾವ್ ಸುಪರ್ …ಹೃದಯಪೂರ್ವಕ ಅಭಿನಂದನೆಗಳು …