ಸ್ಮಿತಾಭಟ್ ಕಾವ್ಯಗುಚ್ಛ
ಸ್ಮಿತಾಭಟ್ ಕಾವ್ಯಗುಚ್ಛ ನಿರಂತರ ಈಗೀಗ ಒಲವಾಗುವದಿಲ್ಲಅವನ ಮೇಲೆಮುನಿಸು ಕೂಡಾ,, ಹೇಗಿದ್ದೀ ಎಂದು ಕೇಳದಿರೂಕೇಳದೇ ಹೋದರೂಅಂತಹ ವ್ಯತ್ಯಾಸವೇನಿಲ್ಲ, ಸಿಡಿಮಿಡಿ ಬಹಳ-ದಿನ ಉಳಿಯುವುದಿಲ್ಲಪ್ರೀತಿ ಆಗಾಗ-ಹುಟ್ಟಿದ್ದು ಗೊತ್ತೇ ಆಗುವದಿಲ್ಲ. ಇಣುಕಿಣುಕಿ ನೋಡುವ ರಸಿಕತೆಯಿಲ್ಲತಿರುಗಿ ನೋಡುವ ಆತುರವೂ ಇಲ್ಲಉಪಸ್ಥಿತಿ ಅನುಪಸ್ಥಿತಿಯಲ್ಲಿಬದಲಾವಣೆ ಇಲ್ಲ. ಎತ್ತಿಟ್ಟ ಸಾಲೊಂದುಓದದೇ ಹೋಗುತ್ತಾನವ,ಬರೆಯದೇ ಇಟ್ಟ ಹಾಡಿಗೆರಾಗ ಹುಡುಕಿ ಗುನುಗಿಕೊಳ್ಳುವಾಗಕದ್ದು ಕೇಳುವ ನವಿರುಅರಿತೂ ಅರಿಯದೇ ಆತುಕೊಳ್ಳುವ ಬೆರಗು ನೀ ನನ್ನೊಳಗಿರುವದಕ್ಕೆನಾ ನಿನ್ನೊಳಗಿರುವದಕ್ಕೆಸಾಕ್ಷಿ ಆಗಾಗ ಸಿಗುತ್ತದೆಮತ್ತದು ಅಧಿಕಾರವೂಮಾತೊಗೆದು ಹೋಗುವಾಗ ಸಣ್ಣ ಮೌನಮರಳಿ ಬರುವಾಗ ಎಲ್ಲ ದಮನ ಸವೆದ ದಾರಿಯಲೂ ಗರಿಕೆತಲೆಯೆತ್ತುತ್ತಲೇ ಇರುತ್ತದೆ.ಸಂಪೂರ್ಣ ಸಮ್ಮೋಹನಗೊಂಡ […]
ತೇಜಾವತಿ ಕಾವ್ಯಗುಚ್ಚ
ತೇಜಾವತಿ ಕಾವ್ಯಗುಚ್ಚ ಕಾರಣ ಕೇಳದಿರಿ ನೀವು.. ! ಸಪ್ಪೆ ಮೊಗದ ಹಿಂದಿನ ಕಾರಣ ಕೆಳದಿರಿ ನೀವುದುಃಖದ ಕಟ್ಟೆಯೊಡೆದುನೋವಿನ ಕೋಡಿಹರಿದುಕಂಬನಿಯ ಪ್ರವಾಹ ಹರಿದೀತು….! ಕ್ಷೇಮ ಕುಶಲೋಪರಿಯ ವಿಚಾರಿಸದಿರಿ ನೀವುಮುಳ್ಳುಹಾಸಿನ ಮೇಲೆ ನಡೆದುಬೆಂಕಿಯ ಕೆನ್ನಾಲಿಗೆಯಲಿ ಸಿಲುಕಿಅರೆಬೆಂದಿರುವ ಪಾದಗಳಲಿ ನೆತ್ತರು ತುಳುಕಾಡೀತು…! ಭವಿಷ್ಯದ ಗುರಿಯೇನೆಂದು ಪ್ರಶ್ನಿಸದಿರಿ ನೀವುತಮದ ಕೂಪದಲಿ ಮಿಂದುಕಣ್ಣೆದುರು ಹರಿದಾಡಿದ ನೆರಳು ಕಂಡುಮನಸು ಮತಿಭ್ರಮಣೆಗೆ ಒಳಗಾದೀತು.. ! ಕಲ್ಪನೆಯಾಚೆಗಿನ ವಾಸ್ತವವ ನೆನಪಿಸದಿರಿ ನೀವುಭರವಸೆಯ ಬೆಟ್ಟ ಕುಸಿದುನೆಮ್ಮದಿಯ ಕಣಿವೆ ಸವೆದುಕಂಡ ಕನಸುಗಳು ಕೊಚ್ಚಿ ಹೋದಾವು…! ಎಷ್ಟು ದಿನ ಅಂತ ಉಪ್ಪಿನಕಾಯಿ ಆಗಿರಲಿ […]
ನಿನ್ನ ನಿರೀಕ್ಷೆಯಲ್ಲೇ..
ಕವಿತೆ ನಿನ್ನ ನಿರೀಕ್ಷೆಯಲ್ಲೇ.. ನೀ.ಶ್ರೀಶೈಲ ಹುಲ್ಲೂರು ಜೊತೆಯಿದ್ದವರೆಲ್ಲಹೋದರು ಮುಂದೆ ಮುಂದೆನಾನುಳಿದೆ ನಿನ್ನ ನಿರೀಕ್ಷೆಯಲ್ಲೇ…ನೀನು ಬಂದೇ ಬರುವೆ ಎಂಬಭಾಷೆ ಇತ್ತಲ್ಲ ಹೇಗೂ.. ನಿರ್ಗಮಿಸಿದ ದಿನಕರಇಣುಕಿದ ಚಂದ್ರ ನೀಲಾಗಸದಿನಕ್ಷತ್ರಗಳೆಲ್ಲ ಸಾಕ್ಷಿಯಾದವುಮಿನುಗಿತು ಬೆಳ್ಳಿಚುಕ್ಕಿಯೂಹುಂಜಗಳೆಲ್ಲ ಕೂಗು ಹೊಡೆದವುಕೋಗಿಲೆಯ ಕುಹೂ ಕುಹೂಆಗಲೂ ನಾ ನಿನ್ನ ನಿರೀಕ್ಷೆಯಲ್ಲೇ.. ದೇವ , ದೇವಲೋಕದಯೆ ತೋರಲಿಲ್ಲನಿಜಕ್ಕೂ ನೀ ಬರಲೇ ಇಲ್ಲಇಳೆಯಲಿ ಮೈದಳೆಯಿತುಹೊಸತು ಹೊಂಬೆಳಕುನಿನ್ನ ನೆನಪಲಿ ಮೊಳೆತುಕುಡಿಯೊಡೆದವು ಕಂಬನಿ ತುಂಬಿದೆದೆಯ ಶಿಖರಾಗ್ರದ ಮೇಲಿಂದಿಳಿದ ಕಣ್ಣಹನಿ ಕಣಿವೆಯ ದಾಟಿನೆಲವನಪ್ಪಿತು ಥಟ್ಟನೆಎದೆ ಮೇಲೊರಗಿದಸೆರಗಿಗೂ ತೇವ ಭಾಗ್ಯಆಗಲೂ ನೀನು ಬರಲಿಲ್ಲ ಆಗಸದಿ ಹೊಳೆಯತೊಡಗಿತು ಮಿಂಚು […]
ಅಂಕಣ ಬರಹ ಸರಳತೆಯ ಘನತೆ ನಾನು ಭೇಟಿಮಾಡಿದ ಅಪರೂಪದ ವ್ಯಕ್ತಿಗಳಲ್ಲಿ ಬನ್ನೂರು ನಿವಾಸಿ ಅದೀಬ್ ಅಖ್ತರ್ ಅವರೂ ಒಬ್ಬರು. ಅದೀಬರ ಲಘು ಬರೆಹಗಳನ್ನು ಪತ್ರಿಕೆಗಳಲ್ಲಿ ಓದಿದ್ದೆ. ಒಂದು ಲೇಖನದಲ್ಲಿ ಅವರು ತಾನೊಬ್ಬ ಉರ್ದು ಮಾಧ್ಯಮದ ವಿದ್ಯಾರ್ಥಿಯೆಂದೂ, ನಡುಪ್ರಾಯದಲ್ಲಿ ಕನ್ನಡ ಕಲಿತು ಬರೆಯಲು ಆರಂಭಿಸಿದವನೆಂದೂ ಹೇಳಿಕೊಂಡಿದ್ದರು. ಇದು ಕುತೂಹಲ ಹುಟ್ಟಿಸಿತು. ಅವರೂ ನನ್ನನ್ನು ನೋಡಬಯಸಿ ಪತ್ರ ಬರೆದರು. ಅಂಗಡಿ ಬಿಟ್ಟು ಹೋಗಲು ಸಾಧ್ಯವಾಗದೆ ಇರುವುದರಿಂದ ನಾನೇ ಬರಬೇಕೆಂದು ತಿಳಿಸಿದ್ದರು. ಬನ್ನೂರಿಗೆ ಹೋದೆ. ಅದೀಬರ ವಿಳಾಸ ಬಹಳ ಸುಲಭ- ಬಸ್ಸುನಿಲ್ದಾಣ […]
ಕವಿತೆಯೆಂದರೆ…
ಕವಿತೆ ಕವಿತೆಯೆಂದರೆ… ವಿದ್ಯಾಶ್ರೀ ಎಸ್ ಅಡೂರ್ ಕವಿತೆಯೆಂದರೆ ಮನದೊಳಗೊಂದುಚುಚ್ಚುವ ನೋವು….ಕವಿತೆಯೆಂದರೆ ಉಕ್ಕಿಹರಿವಮನಸಿನ ನಲಿವು…. ಕವಿತೆಯೆಂದರೆ ಮೌನಮನಸಿನಸ್ವಚ್ಚಂದ ಆಕಾಶಕವಿತೆಯೆಂದರೆ ಗಿಜಿಗುಡುವಏಕತಾನತೆಯ ಆಕ್ರೋಶ ಕವಿತೆಯೆಂದರೆ ಸುಮ್ಮನೆನಿಡುಸುಯ್ದ ನಿಟ್ಟುಸಿರುಕವಿತೆಯೆಂದರೆ ನೀರು-ಗೊಬ್ಬರಹಾಕಿ ಬೆಳೆಸಿದ ಹಸಿರು ಕವಿತೆಯೆಂದರೆ ರಂಗುರಂಗಿನಬಣ್ಣ ಬಣ್ಣದ ಕಾಮನಬಿಲ್ಲುಕವಿತೆಯೆಂದರೆ ಗಾಢಾಂಧಕಾರದಿಬಿಡುಗಡೆಯ ಸೊಲ್ಲು ಕವಿತೆಯೆಂದರೆ ಮೌನಮನಸ್ಸಿನ ಟಿಪ್ಪಣಿಕವಿತೆಯೆಂದರೆ ಕೂಗಿ ಕರೆಯುವಹಾರಿ ಸಾರುವ ಪುರವಣಿ ಕವಿತೆಯೆಂದರೆ ಜಗಕ್ಕೆ ಬೆನ್ನು ಮಾಡಿಉಪ್ಪಿ ಅಪ್ಪಿದ ಮೌನಕವಿತೆಯೆಂದರೆ ಅಂಗೈಯಲ್ಲಿಮೊಗೆಮೊಗೆದು ಅನುಭವಿಸುವ ಜೀವನ ಕವಿತೆಯೆಂದರೆ ಹೆಪ್ಪುಗಟ್ಟಿದಭಾವಗಳ ಕಾರ್ಮುಗಿಲುಕವಿತೆಯೆಂದರೆ ಧುಮ್ಮಿಕ್ಕಿ ಸುರಿಯುವಮನಸಿನ ದಿಗಿಲು ಕವಿತೆಯೆಂದರೆ ಬಿದ್ದಾಗಆಸರೆ ಕೊಡುವ ನೆಲಕವಿತೆಯೆಂದರೆ ಸದಾ ಹಸಿರುತೆನೆಗಳಿಂದ […]
ಕಾಡ ಸೆರಗಿನ ಸೂಡಿ
ಪುಸ್ತಕ ಪರಿಚಯ ಕಾಡ ಸೆರಗಿನ ಸೂಡಿ ಕಾಡ ಸೆರಗಿನ ಸೂಡಿಕಾದಂಬರಿಮಂಜುನಾಥ್ ಚಾಂದ್ಅಕ್ಷರ ಮಂಡಲ ಪ್ರಕಾಶನ ಮಂಜುನಾಥ್ ಚಾಂದ್ ಅವರು ಪತ್ರಕರ್ತರು. ನಾಡಿನ ಹಲವು ಪತ್ರಿಕೆಗಳ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವ ಚಾಂದ್ ‘ ಓ ಮನಸೇ’ ಪಾಕ್ಷಿಕದಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೂಲತಃ ಕುಂದಾಪುರ ಸಮೀಪದ ಮರವಂತೆಯ ಮಗ್ಗುಲಲ್ಲಿ ಇರುವ ತ್ರಾಸಿ ಎಂಬ ಪುಟ್ಟ ಹಳ್ಳಿಯವರು. ‘ಅಮ್ಮ ಕೊಟ್ಟ ಜಾಜಿ ದಂಡೆ, ಕದ ತೆರೆದ ಆಕಾಶ’ ಅವರ ಪ್ರಮುಖ ಕೃತಿಗಳು. ‘ಕಾಡ ಸೆರಗಿನ ಸೂಡಿ’ ಅವರ ಪ್ರಥಮ […]
‘ಕಾಗೆ ಮುಟ್ಟಿದ ನೀರು’
ಪುಸ್ತಕ ಪರಿಚಯ ನಾನುಕಂಡಂತೆ– ‘ಕಾಗೆಮುಟ್ಟಿದನೀರು’ ಆಫೀಸಿನ ಕೆಲಸ ಮುಗಿಸಿ, ಬರುತ್ತಾ ದಾರಿಯ ನಡುವೆ ಸಿಗುವ ‘ನವಕರ್ನಾಟಕ’ದಲ್ಲಿ ಪುಸ್ತಕ ಖರೀದಿಸಿದವಳೇ ಮನೆಗೆ ಬಂದೆ. ಮನೆವಾರ್ತೆ, ಮಕ್ಕಳ ಉಸಾಬರಿ, ಊಟ ಮತ್ತೆಲ್ಲಾ ಮುಗಿಸಿ ಪುಸ್ತಕ ಕೈಯಲ್ಲಿ ಹಿಡಿದೆ. ಅದೇನು ಪುಸ್ತಕ ಓದಿದೆನಾ ಅಥವಾ ‘ಬೆಟ್ಟದ ಹೂ’ ಸಿನೆಮಾ ಪುನಃ ಕಂಡೆನಾ ಗೊತ್ತಾಗದಂತಹ ಭಾವ! ಪುಸ್ತಕದ ಆರಂಭ ಇರುವುದೇ ಹಾಗೆ. ಬಹಳ ಆಪ್ತವಾಗುವಂತೆ. ಕಾಡು, ಮನೆ, ಇಲಿ-ಹಾವು, ಅಪ್ಪ-ಅಮ್ಮ, ಶಾಲೆ, ಗುರುಗಳು, […]
ಸಂಗಾತಿ ಬುದ್ದ
ಕವಿತೆ ಸಂಗಾತಿ ಬುದ್ದ ನಳಿನ ಡಿ ಬುದ್ಧನಿಗೊಂದು ಪ್ರೇಮದ ಕೋರಿಕೆ ಸಲ್ಲಿಸಿದ್ದೆ,ಒಪ್ಪಿರುವ ಎನಿಸಿದಾಗ,ಸುಖವ ಉಂಡು ಹೃದಯ ಉಬ್ಬಿಹೋಗಿ ಮನೆಗೆ ಮರಳಿದ್ದೆ.. ಕಡೆಗೋಲು ಕಡೆದು ಬೆಣ್ಣೆ ಎತ್ತಿಡುವಾಗ,ಬುದ್ಧ ಬಂದಿದ್ದ ಬಾಲಕನಾಗಿ,ಅಂಗಳದಿ ಸಗಣಿ ಸಾರಿಸಿ ರಂಗೋಲಿ ಚುಕ್ಕಿ ಇಡುವಾಗ,ಬುದ್ಧನಿದ್ದ ಸಾಲು ಸಾಲುಗಳ ಬಣ್ಣಗಳಲಿ,ನಡುವೆ ಆಯಾಸದಿ ನಿದ್ದೆಎಳೆದೊಯ್ದಾಗ,ತಂಪು ಹಳ್ಳದ ಏರಿಯ ಮೇಲೆಕರೆದು ಕೂಗಿದಾಗ ಹೇಳಿದಂತಾಯ್ತು ‘ಸಿಗು ಆಮೇಲೆ’..ಹಣಹಣಿಸಿ ಸೆಣಸುತಿರುವ ಉಭಯ ಬಣಗಳ ನಡುವೆಇರುವಾಗಲೇ ಬುದ್ಧ ಕೈಹಿಡಿದು ಕರಗಿಸಿದ, ಪ್ರೇಮಮಯಿ, ಕ್ಷಮೆಯಾಧರಿತ್ರಿ ಈ ಸುಂದರಿ ಎಂದವರೆಲ್ಲಾ ಎದುರೇ ಒಂದಾಗಿ ಅತ್ತು ಕರೆದು ಮಾಯವಾದರು,ಜನನಿಬಿಡ […]
ಯಾರೊಬ್ಬರಾದರೂ…
ಕವಿತೆ ಯಾರೊಬ್ಬರಾದರೂ… ಅನುರಾಧಾ ಪಿ. ಎಸ್ ಒಂದಷ್ಟು ಸಾಲು ಹುಟ್ಟುತ್ತವೆ ಅವರ ಹೆಸರಲ್ಲಿ,ಗಾಳಿಗೊಪ್ಪಿಸುತ್ತೇನೆ.ವಿಳಾಸ ಹುಡುಕಿ ತಲುಪಿಸುತ್ತದೆ ಗಾಳಿಯೂ ಅಷ್ಟೇ ನಿಷ್ಠೆಯಲ್ಲಿ. ಅವರ ಕಣ್ಣು ಬೆಳಗುತ್ತವೆ,ಆ ಕ್ಷಣ ನಾನು ಹೊಳಪುಂಡ ತಾರೆಯೆನಿಸುತ್ತೇನೆಹೊರನಿಂತು ಮೂಲಸ್ರೋತವನಕ್ಕರೆಯಲಿ ಮೆಲ್ಲ ತಡವುತ್ತೇನೆಕಣ್ಮುಚ್ಚಿ ಮೃದುವೊಂದು ಮಗುವಂತೆಅದು ಮಗ್ಗುಲು ಹೊರಳುತ್ತದೆ ನನಗೋ ಸುಖದ ಅಮಲುಒಳಗೂ ಆ ಅಮಲಡರಿದ ಘಮಲುಅವರುದ್ಗರಿಸುತ್ತಾರೆ,“ಎಂಥ ಭಾಷೆ, ಎಂಥ ಜೀವಭಾವ, ಎಷ್ಟು ಕಾವ್ಯ ನಿನ್ನ ಬರಹದಲ್ಲಿ!” ತಟ್ಟನೆಕಾಲಡಿಯ ನೆಲ ತುಸು ಚುಚ್ಚಿ ಎಚ್ಚರಿಸುತದೆ-‘ನೀನಿನ್ನೂ ತಾಕುವುದಾಗಿಲ್ಲ’ನಾನೆಚ್ಚೆತ್ತುಕೊಳುತೇನೆ,ಒಳಗೆ ಅರಳಿ ನಿಂತಿದ್ದ ಮೌನ ನರಳುತ್ತದೆ- ‘ಸ್ರೋತವವರಿಗೆ ಕಾಣುವುದಿಲ್ಲಮೂಲವನಾರೂ ತಲುಪುವುದಿಲ್ಲ‘ಎಷ್ಟು […]
ಶ್ರೀದೇವಿ ಕೆರೆಮನೆ ಕಾವ್ಯಗುಚ್ಛ
ಶ್ರೀದೇವಿ ಕೆರೆಮನೆ ಕಾವ್ಯಗುಚ್ಛ ಚೆಕ್‌ಮೇಟ್ ಜೀವನವೇ ಒಂದು ಚದುರಂಗಎಂದು ಭಾವಿಸಿದಾಗಲೆಲ್ಲ ಕಣ್ಣೆದುರಿಗೆ ಬರೀಕಪ್ಪು ಬಿಳುಪಿನ ಚೌಕದ ಸಾಲು ಸಾಲುಹಾಸಿನ ಮೇಲೆ ಕಪ್ಪು ಸೈನ್ಯಕ್ಕೆ ಎದುರಾಗಿಶತಮಾನಗಳಿಂದಲೂ ಎಲ್ಲವನ್ನೂ ನಿಯಂತ್ರಿಸುತ್ತಕಾವಲು ಕಾಯುತ್ತ ನಿಂತ ಬಿಳಿಯ ಸೈನ್ಯ ಕಪ್ಪು ಆನೆ ಒಂಟೆ ಕುದುರೆಗಳನ್ನೆಲ್ಲದ್ವಂಸಗೈದ ಬಿಳಿಯ ಸೈನ್ಯವನ್ನುಬರೀ ಪದಾತಿದಳವೊಂದರಿಂದಲೇಕಟ್ಟಿಹಾಕಿ ನಿಯಂತ್ರಿಸುವುದೂ ಒಂದು ಕಲೆಚಕ್ರವ್ಯೂಹಕ್ಕೂ ಒಂದು ತಿರುಮಂತ್ರವಿದೆಎಂಬುದನ್ನು ಮರೆತಿರೋ ಬದುಕು ಮೂರಾಬಟ್ಟೆ ಮಿಸುಕಲೂ ಆಗದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂಆನೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡುಬದುಕಲೆಂದೇ ಇದೆ ಕ್ಯಾಸ್‌ಲಿಂಗ್ರಾಜನೊಬ್ಬ ಬದುಕಿದರೆ ಸಾಕುಆತನ ಸೈನ್ಯಕ್ಕೇಕೆ ಅಂತಹ ಲೆಕ್ಕ? ಒಬ್ಬ ರಾಜನನ್ನುಳಿಸಲುಸೈನ್ಯದ ಪ್ರತಿಯೊಬ್ಬನೂಜೀವದ […]