ಮನೆಖರೀದಿ ಪತ್ರ 2009ನೇ ಇಸವಿ. ಹೆಸರಾಂತ ರಿವಾಯತ್ ಗಾಯಕರಾದ ಕದರಮಂಡಲಗಿ ಅಲ್ಲಾಬಕ್ಷರ ಭೇಟಿ ಮುಗಿಸಿಕೊಂಡು, ಬ್ಯಾಡಗಿಯಿಂದ ಹಂಪಿಗೆ ಹಿಂತಿರುಗುತ್ತಿದ್ದೆ. ದಾರಿಯಲ್ಲಿ ಬಳ್ಳಾರಿ ಜಿಲ್ಲೆ ಪ್ರವೇಶಿಸುವಾಗ ಹಾವೇರಿ ಜಿಲ್ಲೆಯ ಕೊನೆಯ ಊರು ಗುತ್ತಲ ಸಿಕ್ಕಿತು. ಅಲ್ಲೊಬ್ಬ ಗಾಯಕ ಇದ್ದಾನೆಂದು ತಿಳಿದು ಹುಡುಕಿಕೊಂಡು ಹೊರಟೆ. ಹೆಸರು ಗೌಸ್‍ಸಾಬ್ ಹಾಲಗಿ. ಗೌಸ್‍ಸಾಬರು ಮನೆಯೊಂದರ ಜಗುಲಿಕಟ್ಟೆಯ ಮೇಲೆ ಕುಳಿತು ಮನೆಖರೀದಿ ಪತ್ರ ಬರೆಯುತ್ತಿದ್ದರು. ಈ ಕೆಲಸಕ್ಕೆ ರೆವಿನ್ಯೊ ಇಲಾಖೆಯಲ್ಲಿ `ಬಿಕ್ಕಲಂ’ ಎನ್ನುವರು. ಪ್ರಾಮಿಸರಿ ನೋಟಿನ ಬರೆಹ ಮುಗಿದ ಬಳಿಕ ಅವರಿಂದ ರಿವಾಯತ್ ಹಾಡನ್ನೂ […]

ಶ್ವಾನೋಪಾಖ್ಯಾನ

ಹಾಸ್ಯ ಲೇಖನ ಶ್ವಾನೋಪಾಖ್ಯಾನ ಚಂದಕಚರ್ಲ ರಮೇಶ ಬಾಬು ನಮಗೆಲ್ಲಾ ಗೊತ್ತಿರುವ ಹಾಗೆ ನಾಯಿಗಳು ಅಥವಾ ಮರ್ಯಾದೆಪೂರ್ವಕವಾಗಿ ಕರೆಯುವುದಾದರೇ ಶುನಕಗಳು ಅಥವಾ ಶ್ವಾನಗಳು, ನಮ್ಮ ಸಮಾಜದ ಗಣ್ಯ ಜೀವಿಗಳಾಗಿವೆ.  ನಾನು ಮುಂಚಿನಿಂದಾ ಮನೆಯಲ್ಲಿ ನಾಯಿ ಸಾಕಾಣಿಕೆಯ ವ್ಯತಿರೇಕಿ.   ಬಹುಶ ನನ್ನ ಬಾಲ್ಯದಲ್ಲಿ ನನ್ನನ್ನಟ್ಟಿಸಿಕೊಂಡು ಬಂದ ನಾಯಿ ಅದಕ್ಕೆ ಕಾರಣವಿರಬಹುದು. ಅದು ಹಿಂದೆ ಬೀಳಲು ಕಾರಣ ನಾನು ಅದರ ಬಾಲ ತುಳಿದದ್ದು ಅಂತ ಹೇಳಿದ್ರೇ ಈ ನನ್ನ ನಿಲುವು ಸ್ವಲ್ಪ ಸಡಿಲವಾಗುತ್ತದೆ ಅಂತ ಮುಂಚೆನೇ ಹೇಳಲಿಲ್ಲ ಅಂತಿಟ್ಕೊಳ್ಳಿ. ಅದು ಬೇರೇ […]

ಹೊರಗಿನವ

ಕವಿತೆ ಹೊರಗಿನವ ಡಾ. ಅರಕಲಗೂಡು ನೀಲಕಂಠ ಮೂರ್ತಿ. ನಾನೀಗ ಹೊರಗಿನವಇದ್ದ ಹಾಗೆ.ಒಳಗೂ ಇಲ್ಲದವನುಹೊರಗೂ ಹೋಗದವನು–ಪೂರ್ತಿಆದರೂ…ನಾನೀಗ ಹೊರಗಿನವಇದ್ದಂತೆ. ಎಷ್ಟರಮಟ್ಟಿಗೆ ಹೊರಗಿನವನುಅಥವ ಎಷ್ಟು ಇನ್ನೂ ಒಳಗಿನವನುಈ ಅಂದಾಜು ನನಗೇ ಸಿಗದವನು! ಹೆಜ್ಜೆಯೊಂದ ಹೊಸ್ತಿಲಾಚೆಇಟ್ಟವನಿರಬಹುದುಆದರೆ ವಾಸ್ತವವೆಲ್ಲಒಳಗೇ ಇನ್ನೂ… ಊರಿಗೆ ಹೊರಟಂತೆರೆಡಿಯಾಗಿ ಕೂತವನಂತೆ–ಅಂತೂ…ಯಾವ ಗಳಿಗೆಯಲ್ಲೂ ಗಾಡಿಬಂದು ನಿಲ್ಲಬಹುದು… ಹೌದು–ಸಂಜೆಯ ಮಬ್ಬು ಗಾಢವಾಗುವ ಹಾಗೆಕಣ್ಣ ಹರಿತ ಮೊಂಡಾದಹೊತ್ತು…ನಾನೀಗ ಹೊರಗಿನವಇದ್ದಹಾಗೆ…ಇನ್ನೆಷ್ಟು ಹೊತ್ತು–ಹೊರಗಿನವನೇ ಪೂರ್ತಿಆಗಲು ಅನಾಮತ್ತು…! ***************************************

ಕಾವ್ಯಯಾನ

ಕವಿತೆ ನನ್ನ ನೋವು ಸಾತುಗೌಡ ಬಡಗೇರಿ ಕಣ್ಣೀರ ಹನಿಯೊಂದುಹೇಳುತ್ತಿದೆ ಹೊರಬಂದುನೊಂದ ಹೃದಯದ ತನ್ನ ವ್ಯಥೆಯ.ಸೂತ್ರವು ಹರಿದಂತಹಪಟದಂತೆ ಬಾಳಾಗಿಕಥೆಯಾಗಿ ಹೇಳುತ್ತಿದೆ ಬೆಂದು ಹೃದಯ. ಜೊತೆಯಾಗಿ ಉಸಿರಾಗಿನಿನಗಾಗಿ ನಾನಿರುವೆ..ಮಾತು ಕೊಟ್ಟನು ನಲ್ಲನಂದು.ಮರೆತು ಹೊರಟಿಹನುತಬ್ಬಲಿಯ ನನಮಾಡಿಕಂಬನಿ ಮಿಡಿಯುತ್ತಿದೆ ಕೇಳಿಯಿಂದು. ನಿನಬಾಳು ಬೆಳಕಾಗಿನಗುತಲಿರು ಓ ಗೆಳೆಯಾ…ನಿನ್ನಮೊಗ ತೋರದಿರು ಮುಂದೆ ಎಂದು.ಕಹಿ ನೆನಪ ನಾಹೊತ್ತುಬಾಳುವೆ ನಾನಿಲ್ಲಿಕಣ್ಣೀರಧಾರೆ ಸುರಿಸುತ್ತಾ ಮುಂದು ****************************

ಗಝಲ್

ಗಝಲ್ ಎ.ಹೇಮಗಂಗಾ ಮಧುಶಾಲೆಗಿನ್ನು ಮರಳಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲುನೆನಪ ಗೋರಿಯನಿನ್ನು ಅಗೆಯಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಏಕಾಂಗಿ ಜೀವದ ತಾಪ ತಣಿಸಲೆಂದೇ ಏಕಾಂತದಿ ಮೈ ಮರೆತವನುನೋವ ಕುಲುಮೆಯಲ್ಲಿನ್ನು ಬೀಳಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಸಾವಿರ ಟೀಕೆಗಳ ಕತ್ತಿ ಇರಿತಕೆ ಬಲಿಯಾಗಿಸಿದರು ಕುಹಕಿ ಗೆಳೆಯರುನಾಲಿಗೆಗಿನ್ನು ಆಹಾರವಾಗಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಮಂದ ಬೆಳಕಿನ ನಿಶೆಯ ನಶೆ ಲೋಕ ಬಲೆಯಾಗಿ ಉಸಿರುಗಟ್ಟಿಸಿದೆಬೇಡುತ ಮದಿರೆಗಿನ್ನು ದಾಸನಾಗಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಬದುಕಿನ ಗಮ್ಯ ಸಾರ್ಥಕತೆಯತ್ತ ಸೆಳೆಯಲು ಕೈ ಬೀಸಿ ಕರೆಯುತ್ತಿದೆಅವನತಿ ಹಾದಿಯನಿನ್ನು […]

ಕಾಂಕ್ರೀಟ್ ಬೋಧಿ

ಕವಿತೆ ಕಾಂಕ್ರೀಟ್ ಬೋಧಿ ಪೂಜಾ ನಾರಾಯಣ ನಾಯಕ ಯಾವ ಹಕ್ಕಿ ಎಸೆಯಿತೋ, ನನ್ನ ಬೀಜವನಿಲ್ಲಿಅದರ ಪರಿಣಾಮವೇ ಬೆಳೆದೆನಾಯಿಲ್ಲಿಸಿಮೆಂಟ್ ಗಾರೆಯ ಬಿರುಕಿನಾ ಕಿಂಡಿಅದುವೇ ನನ್ನ ಬದುಕಿನಾ ಮೊದಲನೆಯ ಬಂಡಿಗೆದ್ದುಬರುತ್ತಿದ್ದೆ ಆ ಬಿರುಕ ಇನ್ನೂ ಸರಿಸಿಆದರೆ ನೀ ಬರದೇ ಇರಲಾರೆ, ಕೀಳಲು ನನ್ನರಸಿ ಕರವೊಡ್ಡಿ ಬೇಡುವೇ, ಕೀಳಬೇಡವೋ ಮನುಜಕೀಳದಿದ್ದರೆ ನಾ ನೀಡುವೆ, ಔಷಧೀಯ ಕಣಜನಿನಗಷ್ಟೇ ಎಂದು ತಿಳಿಬೇಡವೋ ಅಣ್ಣಾಖಗಗಳಿಗೂ ನೀಡುವೆನೋ ತಿನ್ನಲು ಹಣ್ಣಾನಿಮ್ಮಿಬ್ಬರಿಗೆ ಎಂದು ತಿಳಿಯದಿರು ಮತ್ತಣ್ಣಮೃಗಗಳಿಗೂ ನೀಡುವೆನೋ ನನ್ನ ಮೇವಣ್ಣ ನೀನಾಗಿಹೆ ಇಂದು ಕ್ರೋಧದಾ ಬಂಧನಕೇಳಿಸುತ್ತಿಲ್ಲವೇನೋ ನಿನಗೆ, ನನ್ನ […]

ವಾರದ ಕವಿತೆ

ವಾರದ ಕವಿತೆ ಮೋಹ ಮಾಲತಿ ಶಶಿಧರ್ ಅಕಸ್ಮಾತಾಗಿ ಸಿಕ್ಕಿಬಿದ್ದೆಮೋಹದ ತೆಕ್ಕೆಯೊಳಗೆಮೋಹನರಾಗವ ಆಲಿಸುತಅದರ ಜಾಡು ಹಿಡಿದು ಹೊರಟಿರುವೆಮೂಲ ಹುಡುಕುತ್ತ ನಮ್ಮೂರಿನಾಚಿನ ಗುಡ್ಡದ ಬಂಡೆಯಮೇಲೆ ಯಾವತ್ತೋ ಗೀಚಿದ್ದನೆಚ್ಚಿನ ನಟನ ಹೆಸರು, ಅಲ್ಲೇಮುರಿದು ಬಿದ್ದ ಪಾಳು ಮಂಟಪನೂರು ಕನಸು ಅದರೊಳಗೆಸುತ್ತಲೂ ಘಮ್ಮೆನ್ನುವ ಹೂಗಳು ಇವೆಲ್ಲವಕ್ಕೂ ಸರಿದೂಗುವನೀನು ಕಣ್ಮುಂದೆ ನಿಂತಾಗಬಾಯಿ ಪೂರ್ಣವಾಗಿ ಒಣಗಿಮೈ ಬೆವರಿನಿಂದ ತೊಯ್ಯುತ್ತದೆತೊಟ್ಟಿಕ್ಕುವ ಬೆವರ ಹನಿಗೆನನ್ನೊಳಗಿನ ಬಿಂಕಕ್ಕೊಂದುಹೊಸ ನಾಮಕರಣ ಮಾಡುವಹಂಬಲ.. ಮೆಲ್ಲಗೆ ಕಾಲು ಜಾರುವೆ ಹೊಸಮೋಹದ ತೆಕ್ಕೆಗೆ ನನ್ನೊಳಗಿನಸೊಕ್ಕನ್ನೆಲ್ಲ ಒಂದೆಡೆ ಅಡಗಿಸಿನಿನ್ನ ನಸೆಯ ನೋಟ ಅಂಕುಡೊಂಕು ಹಾದಿ ತುಂಬಾಓಡಾಡುವಾಗ ಕಣ್ಮುಚ್ಚಿಕಳೆದುಹೋಗುವೆ. […]

ಜಗವನೇ ಗೆಲುವೆನು ನಿನ್ನೊಲವೊಂದಿದ್ದರೆ.

ಅನುವಾದ ಜಗವನೇ ಗೆಲುವೆನು ನಿನ್ನೊಲವೊಂದಿದ್ದರೆ. ಇಂಗ್ಲೀಷ್ ಮೂಲ: ವಿಲಿಯಂ ಶೇಕ್ಸ್ ಪಿಯರ್ ಕನ್ನಡಕ್ಕೆ: ವಿ.ಗಣೇಶ್ ಹುಟ್ಟಿನ ಮದದಲಿ ಬೀಗುವರು ಕೆಲರು ಬುದ್ಧಿಮದದಲಿ ಕೆಲರು ಸಿರಿತನದ ಮದದಲಿ ಕೆಲರು, ರೂಪದ ಮದದಲಿ ಮತ್ತೆ ಕೆಲರು ದೇಹದಾಡ್ಯದಲಿ ಕೆಲರು, ಕೆಲರು ಉಡುಗೆತೊಡುಗೆಯಲಿ ಮೆರೆವರು ಗಿಡುಗ ಸಾಕುವ ಹುಚ್ಚು ಕೆಲರಿಗೆ, ಕುದುರೆ ಸಾಕುವ ಹುಚ್ಚು ಕೆಲರಿಗೆ ಅವರವರ ಮನಸಿನಣತಿಗೆ ಅವರವರ ಹುಚ್ಚು ಮೆರೆವುದು ಅಂತೆಯೇ ಈ ಕ್ಷಣಿಕ ಆಸೆ ಆಕಾಂಕ್ಷೆಗಳ ಹುಚ್ಚೊಂದೂ ನನ್ನ ಮನದೊಳಗಿನಿತಿಲ್ಲ ಅದಕಿಂತ ಮಿಗಿಲಾದ ಹುಚ್ಚೊಂದು ಕಾಡುತಿದೆ ಈ […]

ಅಳುವನ್ನು ಅನುಸರಿಸಿ ಹೋಗುವವನೇ ಕವಿ

ಪ್ರಬಂಧ ಅಳುವನ್ನು ಅನುಸರಿಸಿ ಹೋಗುವವನೇ ಕವಿ ಸರಿತಾಮಧು ಹಕ್ಕಿಯಂಥ ಸಣ್ಣ ಜೀವಿಯೊಂದರ ಅಳುವಿಗೂ ಕಿವಿಯಾಗಬಲ್ಲವನೇ ಕವಿ ಎಂಬ ಮಾತು ಅಕ್ಷರಶಃ ಸತ್ಯ. “ರುದಿತಾನುಸಾರಿ ಕವಿಃ ” ಎಂಬುದಾಗಿ ಮಹರ್ಷಿ ವಾಲ್ಮೀಕಿಯನ್ನು ಕಾಳಿದಾಸ ಕವಿ ಹೆಸರಿಸಿ, ಹಕ್ಕಿಯ ಶೋಕ ಹಾಗೂ ಸೀತೆಯ ಪ್ರಲಾಪ ಎರಡನ್ನೂ ಹೃದ್ಯವಾಗಿಸಿಕೊಂಡ ಮಹಾನ್ ಕವಿ , ಅಂದರೆ ಅಳುವನ್ನು ಅನುಸರಿಸಿ ಹೋಗುವವನೇ ಕವಿ ಎಂದರ್ಥ. ನವರಸಗಳಲ್ಲಿ ಕರುಣ ರಸವೊಂದೇ ಇರುವುದು ಎಂಬ ಮೀಮಾಂಸೆಗೂ ಪಾತ್ರನಾದ ಕವಿ ವಾಲ್ಮೀಕಿ.      ಸ್ವತಃ ಬೇಡ ನಾಗಿದ್ದು ರತ್ನಾಕರ […]

ಹೇಗೆ ಉಸಿರಾಗಲಿ

ಕವಿತೆ ಹೇಗೆ ಉಸಿರಾಗಲಿ ಲಕ್ಷ್ಮೀ ಪಾಟೀಲ್ ಹಾಡಿಗೆ ನಿಲುಕದ ಕವಿತೆಗಳಿವುಭಾವ ರಾಗದ ಕೊಂಡಿ ಎಲ್ಲಿ ಜೋಡಿಸಲಿಸತ್ತಂತೆ ಸುಪ್ತಬಿದ್ದಭಾವಗಳಿವುತಾಳ ಮೇಳ ಲಯಗಳಹೇಗೆ ಮೀಟಲಿ ಗಂಡಿನ ಅಟ್ಟಹಾಸ ಹಿಸುಕುವಕವಿತೆಗಳಿವುಹೆಣ್ಣಿನ ಕೋಮಲ ಎಲ್ಲಿ ಚಿತ್ರಿಸಲಿಕಾವ್ಯದ ಮಾಧುರ್ಯ ನಲುಗಿಸುವಕವಿತೆಗಳಿವುಮುದದ ನಂದನವನ ಎಲ್ಲಿ ತೋರಿಸಲಿ ಅಂತೆ ಕಂತೆಗಳಲಿ ನಿತ್ಯ ರೋದಿಸುವಳೀಕವಿತೆಭಾವ ಬದಲಿಸಿಭಾವವೀಣೆಎಲ್ಲಿ ನುಡಿಸಲಿಆಕ್ಸಿಜನ್ನಳಿಕೆ ಕಟ್ಟಿಕೊಂಡು ತೀವ್ರನಿಗಾಘಟಕದಲ್ಲಿ ನನ್ನ ಕವಿತೆಗಳುನಾನೇ ಹಾಡಾದಹಾಡಿಗೆ ಹೇಗೆ ಉಸಿರಾಗಲಿ ***************************************

Back To Top