ಹೊರಗಿನವ

ಕವಿತೆ

ಹೊರಗಿನವ

ಡಾ. ಅರಕಲಗೂಡು ನೀಲಕಂಠ ಮೂರ್ತಿ.

ನಾನೀಗ ಹೊರಗಿನವ
ಇದ್ದ ಹಾಗೆ.
ಒಳಗೂ ಇಲ್ಲದವನು
ಹೊರಗೂ ಹೋಗದವನು–
ಪೂರ್ತಿ
ಆದರೂ…
ನಾನೀಗ ಹೊರಗಿನವ
ಇದ್ದಂತೆ.

ಎಷ್ಟರಮಟ್ಟಿಗೆ ಹೊರಗಿನವನು
ಅಥವ ಎಷ್ಟು ಇನ್ನೂ ಒಳಗಿನವನು
ಈ ಅಂದಾಜು ನನಗೇ ಸಿಗದವನು!

ಹೆಜ್ಜೆಯೊಂದ ಹೊಸ್ತಿಲಾಚೆ
ಇಟ್ಟವನಿರಬಹುದು
ಆದರೆ ವಾಸ್ತವವೆಲ್ಲ
ಒಳಗೇ ಇನ್ನೂ…

ಊರಿಗೆ ಹೊರಟಂತೆ
ರೆಡಿಯಾಗಿ ಕೂತವನಂತೆ–
ಅಂತೂ…
ಯಾವ ಗಳಿಗೆಯಲ್ಲೂ ಗಾಡಿ
ಬಂದು ನಿಲ್ಲಬಹುದು…

ಹೌದು–
ಸಂಜೆಯ ಮಬ್ಬು ಗಾಢ
ವಾಗುವ ಹಾಗೆ
ಕಣ್ಣ ಹರಿತ ಮೊಂಡಾದ
ಹೊತ್ತು…
ನಾನೀಗ ಹೊರಗಿನವ
ಇದ್ದಹಾಗೆ…
ಇನ್ನೆಷ್ಟು ಹೊತ್ತು–
ಹೊರಗಿನವನೇ ಪೂರ್ತಿ
ಆಗಲು ಅನಾಮತ್ತು…!

***************************************

10 thoughts on “ಹೊರಗಿನವ

  1. I heartily thank everyone for your opinions. Thanks especially for Dr. Prasnna Kumar, Dr. Ramesh,
    Nikhitha and Laxmeesh.

  2. ಯಶವಂತ ಚಿತ್ತಾಲರ “ಪಯಣ” ಕತೆಯನ್ನು ನೆನಪಿಸಿತು ಈ ಕವಿತೆ, ಥ್ಯಾಂಕ್ಸ್..

Leave a Reply

Back To Top