ಕಾವ್ಯಯಾನ

ಕವಿತೆ

ನನ್ನ ನೋವು

ಸಾತುಗೌಡ ಬಡಗೇರಿ

ಕಣ್ಣೀರ ಹನಿಯೊಂದು
ಹೇಳುತ್ತಿದೆ ಹೊರಬಂದು
ನೊಂದ ಹೃದಯದ ತನ್ನ ವ್ಯಥೆಯ.
ಸೂತ್ರವು ಹರಿದಂತಹ
ಪಟದಂತೆ ಬಾಳಾಗಿ
ಕಥೆಯಾಗಿ ಹೇಳುತ್ತಿದೆ ಬೆಂದು ಹೃದಯ.

ಜೊತೆಯಾಗಿ ಉಸಿರಾಗಿ
ನಿನಗಾಗಿ ನಾನಿರುವೆ..
ಮಾತು ಕೊಟ್ಟನು ನಲ್ಲನಂದು.
ಮರೆತು ಹೊರಟಿಹನು
ತಬ್ಬಲಿಯ ನನಮಾಡಿ
ಕಂಬನಿ ಮಿಡಿಯುತ್ತಿದೆ ಕೇಳಿಯಿಂದು.

ನಿನಬಾಳು ಬೆಳಕಾಗಿ
ನಗುತಲಿರು ಓ ಗೆಳೆಯಾ…
ನಿನ್ನಮೊಗ ತೋರದಿರು ಮುಂದೆ ಎಂದು.
ಕಹಿ ನೆನಪ ನಾಹೊತ್ತು
ಬಾಳುವೆ ನಾನಿಲ್ಲಿ
ಕಣ್ಣೀರಧಾರೆ ಸುರಿಸುತ್ತಾ ಮುಂದು

****************************

10 thoughts on “ಕಾವ್ಯಯಾನ

  1. ನೋವಿನ ಸೆಳಕೊಂದು ಎದೆಯಲ್ಲಿ ಮೂಡಿಸಿ ಆರ್ದ್ರಗೊಳಿಸುವ ಕವಿತೆ..

  2. ನಲ್ಲನಿಂದ ದೂರಾದರೂ ಅವಳ ಹೃದಯ ಆತನ ಏಳ್ಗೆ ಬಯಸಿ ನೋವು ನನಗೇ ಇರಲಿ ನೀ ಚೆನ್ನಾಗಿರು ಎಂದು ಹೇಳುವ ಕವನ ಮನಸ್ಸಿಗೆ ನಾಟುತ್ತದೆ ಕವಿ ಚೆನ್ನಾಗಿ ಕವನ ಹೆಣೆದಿರುತ್ತಾರೆ ಅಭಿನಂದನೆಗಳು ಸರ್

  3. ಹೃದಯದ ಅಂತರಾಳದೊಳಗಿಂದ ಚಿಮ್ಮಿದ ಕಣ್ಣೀರ ಕವಿತೆ
    ತುಂಬಾ ಚೆನ್ನಾಗಿದೆ ಸರ್

  4. ನೊವಿನ ಕಥೆಯನ್ನು ಸಾರುವ ಕವನ ತುಂಬಾ ಚೆನ್ನಾಗಿದೆ.

  5. ಹೆಂಗರುಳಿನ ಕವಿ ಮನವು ನೊಂದ ಹೆಣ್ಣಿನ ದನಿಯಾಗಿ ಕಾವ್ಯವಾಗಿದೆ.

Leave a Reply

Back To Top