ಶಾವಾತ್ಮ ಪದಗಳು

ಶಾವಾತ್ಮ ಪದಗಳು

ಕವಿತೆ ಮಡಿಕೆಯಡಿಯ ಬೆಳಕು ಶಾಂತಿವಾಸು ಮಡಚಿಡು ಮಡಿಕೆಯಾಗಿ…ಅಣುವು ಕೂಡಾ ಅನುವಾಗೆರಗಿದ ಅನುಭವವ ನಾಳೆಗಾಗಿ…. ಮಡಚಿಡು ಸಂತಸದಿಂದ…ಕದಡಿದ ನಿನ್ನ ಮನದ ಕತ್ತಲೆಯೊಳು, ರವಿ ಸಂಚಯಿಸಿದ್ದನ್ನು ಜತನದಿಂದ…. ಮಡಚಿಡು ಇಂದಿನ ನಿರಾಶೆಯ…ಇರಲದರಲಿ, ದುಃಖ ಅಲ್ಪಾಯುವೆಂದು ಸಾರುವ ಸಂದೇಶದ ಸದಾಶಯ… ಮಡಚಿಡು ಸೋಲುಗಳ ಸರಮಾಲೆ…ತೆರೆದು ನೋಡಲದುವೇ ಏಣಿ ಗೆಲುವಿಗೆ, ಗಟ್ಟಿಹೆಜ್ಜೆ ಇಟ್ಟು ಏರಲು ಮೇಲೆ ಮೇಲೆ… ಮಡಚಿಡು ಈಜಿ ಗೆದ್ದ ಜಯವನ್ನು …ವಿಧಿಯಾಟದ ದಾಳವಾಗುರುಳುವಾಗ ನೀನೇ ಅರಿಯಲು ನಿನ್ನಿರಿಮೆಯನ್ನು.. ಮಡಚಿಡು ಅಡಿಯಲ್ಲಿ ಸೋಲುಗಳ, ಸದಾ ಸುಳಿದಾಡಿ ಸೊಲ್ಲೆತ್ತದಂತೆ…ಎಲ್ಲಕ್ಕಿಂತ ಮೇಲೆ ಮಡಚಿಡು, ಸೋಲನ್ನು […]

ಅಂಕಣ ಬರಹ ಮರಿಕಪ್ಪೆ ಹಾರಿತು ಬಾವಿಯ ಹೊರಗೆ ಚಾವಣಿಯ ಹೊರೆ ಕಳೆದು ಶಿಥಿಲವಾದರೂ ನಿಂತೇ ಇದ್ದ ಗೋಡೆಯದು.  ಆ ಮೋಟುಗೋಡೆಯ ಮಗ್ಗುಲಲ್ಲಿ  ಕಪ್ಪೆಯಂತೆ ಹಾರಿ ಆ ಬದಿಯ ಕಿಟಕಿಯ ಚೌಕಟ್ಟಿಗೆ ಒಂದು ಕಾಲುಕೊಟ್ಟು  ಬಲಗೈಯಿಂದ ಕಿಟಕಿಯ ಸರಳು ಹಿಡಿದು ಮೇಲೇರಿ ಎಡಗಾಲು ಎತ್ತಿ ಆ ಅರ್ಧಗೋಡೆಯ ಮೇಲೆ ಇಟ್ಟು ದೇಹವನ್ನು ನಿಯಂತ್ರಣಕ್ಕೆ ತಂದುಕೊಳ್ಳುತ್ತ ಕೈಗಳನ್ನೂ ಗೋಡೆಯ ಬೋಳುತಲೆ ಮೇಲೆ ಊರಿ ಪುಟ್ಟ ಲಗಾಟೆ ಹೊಡೆದು ಗೋಡೆ ಏರಿ ಕುಳಿತುಕೊಳ್ಳುತ್ತಿದ್ದೆವು. ನಮ್ಮ  ಸಿಂಹಾಸನವದು. ಏರಿ ಕೂತವಳು ಮಹಾರಾಣಿ. ಉಳಿದವರು […]

ಕತ್ತಲೆ,ಬೆಳಕಿನೊಂದಿಗೆ

ಆಸ್ವಾದಿಸುವಾಸೆ ಇತ್ತೀಚೆಗೆ ಯಾಕೋ…
ಒಳ ಗೋಡೌನಿನಲಿ ಹೆಚ್ಚೆಚ್ಚು ಕತ್ತಲ
ದಾಸ್ತಾನು ಮಾಡುವಾಸೆ….

ಗಜಲ್

ಅವನೊಲವೇ ಉಚ್ಛ್ವಾಸ ನಿಶ್ವಾಸಕೆ ಪ್ರಾಣವಾಯುವಾಗಿತ್ತು
ಪ್ರಶ್ನೆಗಳ ಬಲೆಯಲ್ಲಿ ಉಸಿರುಗಟ್ಟಿಸಿದ ಕಾರಣ ತಿಳಿಯಲಿಲ್ಲ

ಕಾನೂನು, ಮಹಿಳೆ ಮತ್ತು ಅರಿವು

ಅಂಜಲಿ ರಾಮಣ್ಣ ಬರೆಯುತ್ತಾರೆ
ಇದು ನನಗೆ ಕಲಿಸಿದ್ದು ಎರಡು ಪಾಠ. ಒಂದು ಹೆಂಗಸು ಮನಸ್ಸು ಮಾಡಿದರೆ, ಬುದ್ಧಿಯ ಮೂಲಕ ಗಳಿಸಿಕೊಂಡ ಆತ್ಮವಿಶ್ವಾಸ ಇದ್ದರೆ ಯಾರದ್ದೇ ಆಗಿರಲಿ, ಯಾವುದೇ ರೀತಿಯ ಮುಜುಗರವನ್ನು ಹೋಗಲಾಡಿಸಬಲ್ಲಳು

ಯಾಕೆ ಬಂದೆ ಸುಮ್ಮನೆ..

ಜಯಶ್ರೀ ಭಂಡಾರಿ
ಆರಕ್ಕೆರದ ಮೂರಕ್ಕಿಳಿಯದ ಬದುಕ ತೇರು
ಸಂಭ್ರಮ ಸಾಂಗತ್ಯ ನನಗೀಗ ಬೇಜಾರು

ನೀರು ಕುಡಿಯಿರಿ

ಲೇಖನ ನೀರು ಕುಡಿಯಿರಿ ಆಶಾ ಸಿದ್ದಲಿಂಗಯ್ಯ ಜನರು ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ನೀರನ್ನು ಕುಡಿಯುವುದೇ ಮರೆತಿದ್ದಾರೆ ಆದರೆ ನೀರು ಆರೋಗ್ಯಕ್ಕೆ ಅತ್ಯವಶ್ಯಕ.. ನಮ್ಮ ಉಳಿವಿಗಾಗಿ ನೀರು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಬಾಯಾರಿಕೆಯನ್ನು ನೀಗಿಸುವುದಕ್ಕೆ ಮಾತ್ರವಲ್ಲ, ದೇಹ ಸರಿಯಾಗಿ ಕೆಲಸ ಮಾಡಲು ಹಾಗೂ ರೋಗ ಮುಕ್ತವಾಗಿಡಲು ನೀರು ಅಗತ್ಯ. ದೇಹದ ತೂಕ ಇಳಿಸಲು ಸಹ ನೀರು ಕುಡಿಯುವುದು ಸಹಾಯಕಾರಿ. ಬಿಸಿನೀರು ಕುಡಿದರೆ ದೇಹದ ತೂಕ ಕಡಿಮೆ ಆಗಲು ಸಹಾಯ ಆಗುತ್ತಾ? ನಮ್ಮ ದೇಹದ ಸುಮಾರು 70% […]

ಅಂಕಣ ಬರಹ ಜೀವ ಜಂತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಥೆ ಹುಟ್ಟುತ್ತದೆ “ ಸುರೇಶ್ ಹೆಗಡೆ ಪರಿಚಯ: ಸುರೇಶ್ ಹೆಗಡೆ  ಹೊನ್ನಾವರದ ಕರ್ಕಿ ಗ್ರಾಮದವರು‌ .1952 ಜನನ. ಇವರ ತಂದೆ ಚಂದ್ರ ಮಾಸ್ತರ ಇವರ ಗುರು. ಹೊನ್ನಾವರ ಕಾಲೇಜಿನಿಂದ ವಿಜ್ಞಾನದ ವಿಷಯದಲ್ಲಿ ಪದವಿ ಪಡೆದರು. 1973 ರಲ್ಲಿ ಕರ್ನಾಟಕ ವಿದ್ಯುತ್  ನಿಗಮದಲ್ಲಿ 38 ವರ್ಷ ನೌಕರಿ ಮಾಡಿ ನಿವೃತ್ತರಾಗಿದ್ದಾರೆ. ಕತೆ ಬರೆಯುತ್ತಿದ್ದ ಇವರು ,ಅವುಗಳನ್ನು ಪ್ರಕಟಿಸಿದ್ದು, ನಿವೃತ್ತಿ ನಂತರ. 2020 ರಲ್ಲಿ ಇವರ ಮೊದಲ ಕಥಾ ಸಂಕಲನ ಇನಾಸ […]

ಪ್ರತಿಫಲ

ಮಕ್ಕಳ ಕಥೆ ಪ್ರತಿಫಲ ಬಸವರಾಜ ಕಾಸೆ ದಿನವೂ ಏನಾದರೂ ಒಂದು ಒಳ್ಳೆಯ ಕೆಲಸ ಮಾಡಿ ಅದನ್ನು ಬರೆದುಕೊಂಡು ಬರಬೇಕು ಎಂದು ಕ್ಲಾಸ್ ಟೀಚರ್ ಹೇಳುತ್ತಿದ್ದರು. ಆದರೆ ಅವಕಾಶ ಇದ್ದಾಗಲೂ ಅಂತಹ ಕೆಲಸವನ್ನು ಯಾವ ಮಕ್ಕಳು ಮಾಡುತ್ತಿರಲಿಲ್ಲ. ಅದರಲ್ಲಿ ವಿಶೇಷವಾಗಿ ಚೂಟಿ ಮಾಡುತ್ತಾನೆ ಇರಲಿಲ್ಲ. ಆದರೆ ದಿನವೂ “ಇಂದು ರಸ್ತೆಯಲ್ಲಿ ಬಿದ್ದ ಮುಳ್ಳು ತೆಗೆದು ಹಾಕಿದೆ”, “ಕಲ್ಲು ತೆಗೆದು ಹಾಕಿದೆ”, “ವೃದ್ಧರಿಗೆ ರಸ್ತೆ ದಾಟಲು ಸಹಾಯ ಮಾಡಿದೆ”, “ಮನೆ ಕಸ ಗುಡಿಸಿದೆ”, “ಅಮ್ಮನಿಗೆ ಅಡುಗೆಯಲ್ಲಿ ನೆರವಾದೆ” ಹೀಗೆ ಸುಮ್ಮಸುಮ್ಮನೆ […]

Back To Top