ಮುಂಜಾವಿನ ಬೆರಗು

ಮುಂಜಾವಿನ ಬೆರಗು

ಕವಿತೆ ಮುಂಜಾವಿನ ಬೆರಗು ಡಾ.ಪ್ರೀತಿ ಕೆ.ಎ. ಅದೊಂದು ತಿಳಿ ಮುಂಜಾವುಎದ್ದಿದ್ದೆ ನಿನ್ನ ನೆನಪುಗಳಿಂದಕಣ್ಣ ಮೇಲಿನ ಮುಂಗುರುಳನ್ನುಹಗೂರಕ್ಕೆ ಹಿಂದೆ ಸರಿಸಿಬೆಚ್ಚಗಿನ ಚಹಾವನ್ನು ಇಷ್ಟಿಷ್ಟೇಹೀರುತ್ತಾ ಬಾಲ್ಕನಿಯಲ್ಲಿ ನಿಂತಿದ್ದೆ ನಿನ್ನೆವರೆಗೆ ಮೊಗ್ಗಾಗಿದ್ದಕೆಲವೇ ಕೆಲವು ಗಳಿಗೆಗಳಹಿಂದಷ್ಟೇ ಹೂವಾಗಿ ಬಿರಿದಆ ಸೇವಂತಿಗೆಯ ಮೃದು ಪಕಳೆಗಳಿಗೆನಿನ್ನದೇ ಮೈಯ ಘಮ ಚೀವ್ ಚೀವ್ ಗುಬ್ಬಿಮರಿಗಳಜೊತೆ ಸೇರಿದ ಹೊಸ ಹಕ್ಕಿಗಳಸಂಗೀತ ಸುಧೆಯಲ್ಲಿನಿನ್ನದೇ ನಾದ ಮೆಲ್ಲನೇ ಬೀಸುತ್ತಿರುವತಂಗಾಳಿಗೆ ಸಾಥ್ ಕೊಡುವಂತೆಅತ್ತಿಂದಿತ್ತ ಓಲಾಡುತ್ತಿರುವಆ ಎಳೇ ಸಂಪಿಗೆ ಗಿಡಕ್ಕೆನಿನ್ನದೇ ಲಯ ನೀಲಾಕಾಶದಲ್ಲಿ ತುಸುವೇಮೊಗವನ್ನು ತೋರುತ್ತಿದ್ದಇದೀಗ ಬಂಗಾರದ ಬಣ್ಣದಿಂದಮಿರಿ ಮಿರಿ ಹೊಳೆಯುತ್ತಿರುವ ಸೂರ್ಯನಿಗೆನಿನ್ನ ಕಣ್ಣುಗಳಲ್ಲಿದ್ದಷ್ಟೇ […]

ದ್ವಿಪದಿಗಳು

ದ್ವಿಪದಿಗಳು ಸಿದ್ಧರಾಮ ಕೂಡ್ಲಿಗಿ ಖಾಲಿಯಾದ ಕಣ್ಣುಗಳಲಿ ತೇಲುತ್ತವೆ ಕಂಬನಿದುಂಬಿದ ಮೋಡಗಳು ಒಮ್ಮೊಮ್ಮೆ ಭೋರ್ಗರೆಯುತ್ತವೆ ಒಮ್ಮೊಮ್ಮೆ ಕಣ್ಣಂಚಿನಲೇ ನಿಲ್ಲುತ್ತವೆ – ಬಂಜೆ ನೆಲಕೂ ಆಗಾಗ ಕನವರಿಕೆ ಒಡಲು ತುಂಬುವ ಸರದಾರ ಬರಬಹುದೆಂದು – ಬರಿದಾದ ತಲೆಯಲಿ ಚಿಂತೆಯ ಹದ್ದುಗಳದೇ ಗಲಾಟೆ ಬೇಟೆ ಸಿಕ್ಕರೆ ಭೂರಿ ಭೋಜನ ಇಲ್ಲದಿರೆ ಬರೀ ಗಾನ ಬಜಾನ – ಮತ್ತೊಬ್ಬರ ಬೂಟಿನಲಿ ಮೂಗು ತೂರಿಸುವ ಹೆಜ್ಜೆಗಳು ತಮಗೊಂದು ಅಸ್ತಿತ್ವವಿದೆಯೆಂದು ಎಂದೂ ಯೋಚಿಸವು – ಮುಗುಳ್ನಗೆಗಳು ಹಾರಾಡುತ್ತವೆ ಚಿಟ್ಟೆಯಂತೆ ಪ್ರೀತಿ ಇದ್ದಲ್ಲಿ ಕೂರುತ್ತವೆ ಇಲ್ಲದಿದ್ದಲ್ಲಿ ಮುಂದೆ […]

ಗಜಲ್

ಗಜಲ್ ಅಕ್ಷತಾ ಜಗದೀಶ ಬಾಳಲ್ಲಿ ಆನಂದದ ಹೊಳೆ ಹರಿಸಿದೆ ನೀ ಕಂದಸಾಗರದ ಆಳದಲಿ ದೊರಕಿದ ಮುತ್ತಿನಂತೆ ಆನಂದ ನೀ ಅತ್ತರು ಅದು ಸಂಗೀತದ ನಾದ ಕಂದನಕ್ಕಾಗ ಅದುವೇ ಮಾತ್ರ ಸ್ವರ್ಗದಾನಂದ ತೊದಲು ನುಡಿಯಲಿ ನುಡಿವೆ ನೀ ಕಂದನಿನ್ನೊಡನಾಟವದುವೇ ಎನಗೆ ಚಂದ ಬಾಳಲ್ಲಿ ನಂದಾದೀಪವಾದೇ ನೀ ಕಂದಸಂತೋಷದ ಅಲೆಯಾಗಲಿ‌ ಈ‌ ಅನುಬಂಧ ಪುಟ್ಟ ಪುಟ್ಟ ಹೆಜ್ಜೆ ನೀ ಇಡುವಾಗ‌ ಕಂದಮನೆ ಆಗಿದೆ ಮಂತ್ರಾಲಯದಂತೆ ಮಹದಾನಂದ. ************************

ಕ್ಷಮಿಸಿ ಬಿಡು ಬಸವಣ್ಣ

ಕವಿತೆ ಕ್ಷಮಿಸಿ ಬಿಡು ಬಸವಣ್ಣ ಡಾ.ಶಿವಕುಮಾರ್ ಮಾಲಿಪಾಟೀಲ ನೀ ಹಾಕಿದ ಸಮಾನತೆಯಭದ್ರ ಬುನಾದಿ ಮೇಲೊಂದುಅಸಮಾನತೆಯ ಸೋರುವ ಗುಡಿಸಲು ಹಾಕಿದ್ದೇವೆ— ಕ್ಷಮಿಸಿಬಿಡು ಬಸವಣ್ಣ. ನೀನು ಗಳಿಸಿದ ನೈತಿಕಆಸ್ತಿಯ ಮಾರಿಮಹಾಮನೆಯ ಜಂತಿಮುರಿದು ಉರುವಲಾಗಿಬಳಸುತ್ತಿದ್ದೇವೆ— ಕ್ಷಮಿಸಿಬಿಡು ಬಸವಣ್ಣ. ನಿನ್ನ ಜನ್ಮದಿನದಂದೆಆಸ್ತಿ, ಬಂಗಾರ ಖರೀದಿಸಿಅಕ್ಷಯ ನಿಧಿ ತುಂಬಿಸಿಕೃತಕ ಜಗತ್ತು ಕಟ್ಟುತ್ತಿದ್ದೇವೆ–ಕ್ಷಮಿಸಿಬಿಡು ಬಸವಣ್ಣ ದೇಶ ವಿದೇಶಗಳಲಿ ನಿನ್ನ ಮೂರುತಿ ಸ್ಥಾಪಿಸಿ,ನಿನ್ನ ವಚನಗಳನ್ನುಎಲ್ಲಾ ಭಾಷೆಗಿಳಿಸಿ,ಕಲ್ಯಾಣ ನಾಡನ್ನೆಕಟ್ಟುವುದ ಮರೆತಿದ್ದೇವೆ— ಕ್ಷಮಿಸಿಬಿಡು ಬಸವಣ್ಣ ನಿನ್ನ ವಚನಗಳನ್ನು ಹೇಳುತ್ತ ಕೇಳುತ್ತ ವಚನ ಭ್ರಷ್ಟರಾಗಿ,ಕಾಯಕವೇ ಕಷ್ಟವೆಂದುನಿನ್ನನ್ನು ಕೂಡಲಸಂಗಮದಲ್ಲಿ ದಿನವೂ ಮುಳುಗಿಸುತ್ತಿದ್ದೇವೆ–ಕ್ಷಮಿಸಿಬಿಡು ಬಸವಣ್ಣ […]

ಯುವ ಗಜಲ್ ಕವಿ ಚೇತನ್ ನಾಗರಾಳ ಹೆಸರು : ಚೇತನ್ ನಾಗರಾಳ.ವಯಸ್ಸು : ೨೫ಶಿಕ್ಷಣ : ಬಿ‌.ಕಾಮ್ವೃತ್ತಿ : ಖಾಸಗಿ ಬ್ಯಾಂಕ್ ಉದ್ಯೋಗಿಪ್ರಕಟಿತ ಕೃತಿಗಳು: ೧) ಹೀಗೊಂದು ಯುದ್ಧ ಬುದ್ಧನೊಂದಿಗೆ (ಕವನ ಸಂಕಲನ)೨) ಖಾಲಿ ಕೋಣೆಯ ಹಾಡು (ಗಜಲ್ ಸಂಕಲನ) ವಿಳಾಸ :ಚೇತನ್ ನಾಗರಾಳ204 , ವಾರ್ಡ್ ನಂ 1ಬಸವ ವೃತ್ತದ ಹತ್ತಿರಬೀಳಗಿ – 587116ಜಿಲ್ಲೆ : ಬಾಗಲಕೋಟಮೊ :8861888130 —————————– ಸಂಗಾತಿಯ ಓದುಗರಿಗೆ ಇವರದೊಂದು ಗಜಲ್ ಒಮ್ಮೆ ಉಳಿಸಿಕೊ ನೀನು ಈ ರಾತ್ರಿ ಮತ್ತೆ ಬರುವುದಿಲ್ಲನೆನಪಿರಲಿ […]

ಅಂಕಣ ಬರಹ “ಸಿಕ್ಕಿತಾ ಎಂದರೆ ಸಿಕ್ಕಿಲ್ಲ ಎಂಬುದೇ ಉತ್ತರ…” ಆಗಾಗ ಕೆಲವರು ಬರಹವನ್ನೂ ಮತ್ತು ಬರೆದ ಬರಹಗಾರನನ್ನೂ ಒಂದೆನ್ನುವಂತೆ ಭಾವಿಸಿ ಅನುಮಾನದಿಂದ ನೋಡುವುದನ್ನು ನೋಡುತ್ತಿರುತ್ತೇವೆ. ಗೆಳೆಯರು ಇದನ್ನು ಬಾರಿ ಬಾರಿ ಹೇಳಿಕೊಳ್ಳುತ್ತಿರುತ್ತಾರೆ. ಅಲ್ಲದೆ ಇದು ಪ್ರತಿಯೊಬ್ಬ ಬರಹಗಾರನಿಗೂ ಒಂದಲ್ಲಾ ಒಂದು ಬಾರಿ ಎದುರಿಸಬೇಕಾಗಿ ಬರುವ ಸಾಮಾನ್ಯ ಸನ್ನಿವೇಶವೂ ಆಗಿರುತ್ತದೆ. ಆದರೆ ಓದುಗರು ಒಂದು ಮಾತನ್ನು ನೆನಪಿನಲ್ಲಿಡಬೇಕು. ಅವನು ಬರಹಗಾರ… ತನಗೆ ಕಂಡ, ಅನುಭವಿಸಿದ, ಇರರ ಅನುಭವದಿಂದ ಅರಿತ ಎಲ್ಲವನ್ನೂ ಒಂದಾಗಿಸಿ ಬರಹದ ಮೂಲತತ್ವದ ಅಚ್ಚಿಗೆ ಸುರಿದು ಓದುಗರಿಗೆ […]

ಅಂಕಣ ಬರಹ ಹೊಸ ದನಿ ಹೊಸ ಬನಿ ೧೬ ಹುಚ್ಚು ಆದರ್ಶಗಳಿಲ್ಲದ ಭಾವ ಭಿತ್ತಿಯ ಸಹಜ ನಿರೂಪಣೆ ನಾಗರೇಖಾ ಗಾಂವಕರ್ ಕವಿತೆಗಳು ಅವಳ ಮಾಂಸ ಮಜ್ಜೆಯ ನೆರಳು, ಮುಟ್ಟಿನ ವಾಸನೆಬಡಿಯದೇ, ಪೊಗರಿದ ಅವನೆಂಬವನ  ಹುಡುಕಿ ಸೋತಿದ್ದೇನೆ, ಹುಡುಕಿ ಕೊಡು ಹೇ! ಪ್ರಭು. ಎಂದು ಗಟ್ಟಿಯಾಗಿ ಪ್ರಶ್ನಿಸುತ್ತಲೇ ಸುರುವಾಗುವ ಈ ಕವಿತೆ ಗಂಡಿನ ಅಹಮ್ಮನ್ನು ಗುರಾಯಿಸುತ್ತಲೇ ಕಡೆಗೆ ಆದರವನ ದೇವರಿಗೆ ಅವಳ ಮಾಂಸ ಮಜ್ಜೆಯ ನೆರಳು, ಮುಟ್ಟಿನ ವಾಸನೆ ಮೈಲಿಗೆಯಂತೆ. ಆ ದೇವನೆಂಬವನ ಹುಡುಕಿ ಕೊಡು ಹೇ! ಪ್ರಭು […]

ಅಂಕಣ ಬರಹ–02 ಶಾಂತಿ ವಾಸು ಹೋದ ಅಂಕಣದಲ್ಲಿ ರೇಡಿಯೋ ನಮ್ಮ ಜೀವನವನ್ನು ಆಕ್ರಮಿಸಿದ ಕಾಲ ಹಾಗೂ ರೀತಿಯನ್ನು ನೋಡಿದೆವು. ನಮ್ಮನ್ನು ಆಧುನಿಕ ಕಾಲದ ಪ್ರತಿನಿಧಿಗಳನ್ನಾಗಿಸಿದ ರೇಡಿಯೋ ಬಗ್ಗೆ ಈಗ ಇನ್ನಷ್ಟು ವಿಷಯಗಳನ್ನು ತಿಳಿಯೋಣ ಬನ್ನಿ. ಸಂಶೋಧನೆಗಾಗಿ ನೋಬಲ್ ಪ್ರಶಸ್ತಿ ಪಡೆದ ಇಟಲಿಯ  ಗೂಗ್ಮಿಯೆಲ್ಮೋ ಮಾರ್ಕೋನಿಯಿಂದ 1885 ರಲ್ಲಿ ತಂತಿರಹಿತ ಸಂದೇಶ ರವಾನಿಸುವ ಮೂಲಕ ಕಂಡುಹಿಡಿಯಲ್ಪಟ್ಟ ರೇಡಿಯೋ ಎಂಬ ಒಂದು ಅದ್ಭುತವನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದ ಭೌತವಿಜ್ಞಾನಿ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ, ದೂರಸಂಪರ್ಕ ಹಾಗೂ ರೇಡಿಯೋ ವಿಜ್ಞಾನಿ […]

ಅಂಕಣ ಬರಹ ಮೆಹಬೂಬ್ ಮುಲ್ತಾನಿ ಪರಿಚಯ: ಮೆಹಬೂಬ್ ಮುಲ್ತಾನಿ ಬೆಳಗಾವಿ ಜಿಲ್ಲೆಯ ಖಾನಾಪುರ ‌ತಾಲೂಕಿನ‌ ಚಿಕ್ಕನದಿಕೊಪ್ಪ‌ ಶಾಲೆಯಲ್ಲಿ ‌ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಕಾಲಿನ ಓದು ಬರಹ ವೇದಿಕೆ ಕಟ್ಟಿಕೊಂಡು ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಹಿಂದಿ,ಉರ್ದು, ಮರಾಠಿ, ಆಂಗ್ಲ ಭಾಷೆಯ ಸಾಹಿತ್ಯ ಅನುವಾದ, ವಿಶೇಷವಾಗಿ ಕವಿತೆಗಳ ಅನುವಾದ ಇವರ ಇಷ್ಟದ ಕೆಲಸ. ಕವಿತೆ ಬರೆಯಲು ಪ್ರಾರಂಭಿಸಿದ್ದಾರೆ. ತುಂಬಾ ಜೀವನ ಪ್ರೀತಿಯ ಮನುಷ್ಯ ನಮ್ಮ ಮೆಹಬೂಬ್ ಮುಲ್ತಾನಿ ಈ ವಾರದ ಮುಖಾಮುಖಿಯಲ್ಲಿ ಕವಿ ಮೆಹಬೂಬ್ ಮುಲ್ತಾನಿಯನ್ನು ಮಾತಾಡಿಸಿದ್ದಾರೆನಾಗರಾಜ ಹರಪನಹಳ್ಳಿ ” ನನ್ನ […]

ಅಂಕಣ ಬರಹ ಹೂಕೊಂಡ ಹೂಕೊಂಡತಮಿಳು ಮೂಲ : ಪೆರುಮಾಳ್ ಮುರುಗನ್ಅನುವಾದ : ನಲ್ಲತಂಬಿಪ್ರ : ಲಂಕೇಶ್ ಪ್ರಕಾಶನಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೧೨೫ಪುಟಗಳು : ೧೪೪ ಪುರುಷ ಪ್ರಧಾನ ಸಮಾಜದಲ್ಲಿ ಸ್ತಿçಯು ಶೋಷಣೆಗೊಳಗಾಗುವ ದುರಂತ ಕಥಾವಸ್ತುವನ್ನು ಹೊಂದಿದ ಕಾದಂಬರಿ ಇದು. ಜಾತಿ ಸಮಸ್ಯೆಯೂ ಇದರ ವಿನ್ಯಾಸದ ಇನ್ನೊಂದು ಮುಖ. ಅಲ್ಲದೆ ಸರಳ ಸ್ವಭಾವದ ಮಂದಿ ಎಂದು ಎಲ್ಲರೂ ಭಾವಿಸುವ ಗ್ರಾಮೀಣರಲ್ಲೂ ಎಂಥ ಕ್ರೌರ್ಯವಿರಬಹುದು ಎನ್ನುವ ಕಹಿ ಸತ್ಯವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ. ಮದುವೆಯಾಗಿ ಕೇವಲ ಎರಡು […]

Back To Top