ಅಂಕಣ ಬರಹ  ದುಗುಡದ ನೆನಪು (ಕಲಬುರ್ಗಿಯವರು ಕೊಲೆಯಾದಾಗ ಬರೆದ ಬರೆಹ) ಕರ್ನಾಟಕ ವಿಶ್ವವಿದ್ಯಾಲಯದ ಶ್ರೇಷ್ಠ ಅಧ್ಯಾಪಕರಲ್ಲಿ ಎಂ.ಎಂ.ಕಲಬುರ್ಗಿಯವರೂ ಒಬ್ಬರೆಂದು ಅವರ ಶಿಷ್ಯರ ಮೂಲಕ ಕೇಳುತ್ತಿದ್ದೆವು. ಅವರ ಸಂಶೋಧನ ಬರೆಹಗಳಲ್ಲಿ ವ್ಯಾಪಕ ಅಧ್ಯಯನ ಮತ್ತು ಆಳವಾದ ವಿದ್ವತ್ತಿರುವುದೂ ತಿಳಿದಿತ್ತು. ಆದರೆ ಅವರ ವೈಯಕ್ತಿಕ ಒಡನಾಟವಿರಲಿಲ್ಲ. ನನಗೆ ಈ ಒಡನಾಟವು ಮೊದಲ ಸಲ ಒದಗಿದ್ದು ನನ್ನ ಪಿಎಚ್.ಡಿ., ಪ್ರಬಂಧದ ಮೌಲ್ಯಮಾಪಕರಾಗಿ ಅವರು ಮೌಖಿಕ ಪರೀಕ್ಷೆಗೆ ಬಂದಾಗ. 1987ರಲ್ಲಿ. ಪ್ರಬಂಧದಲ್ಲಿ ವಚನಸಾಹಿತ್ಯದ ಮೇಲೆ ನಾನು ಮಾಡಿದ್ದ `ಸೋಲು’ ಎಂಬ ಟೀಕೆಯ ವಿಷಯದಲ್ಲಿ […]

ಅಂಕಣ ಬರಹ ನರವಾನರ ನರವಾನರಮರಾಠಿ ಮೂಲ : ಶರಣಕುಮಾರ ಲಿಂಬಾಳೆಕನ್ನಡಕ್ಕೆ : ಪ್ರಮೀಳಾ ಮಾಧವಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ. ೧೬೫ಪುಟಗಳು : ೧೯೨ ಭಾರತದಾದ್ಯಂತ ಅಂಬೇಡ್ಕರ್ ದಲಿತರ ಪರವಾಗಿ ಮಾಡಿದ ಚಳುವಳಿಯ ಕುರಿತಾದ ಕಾದಂಬರಿ ಇದು. ಮನುಸ್ಮೃತಿಯಲ್ಲಿ ಶೂದ್ರರು ಮತ್ತು ದಲಿತರ ಕುರಿತಾಗಿರುವ ಉಲ್ಲೇಖಗಳಿಂದ ದಲಿತರ ಬದುಕು ನರಕವಾಗಿ ಬಿಟ್ಟು ಅವರಿಗಾದ ಅನ್ಯಾಯಗಳ ವಿರುದ್ಧ ಕೆರಳಿ ಕೆಂಡವಾದ ಅಂಬೇಡ್ಕರ್ ವರ್ಣವ್ಯವಸ್ಥೆಯಿಂದಾಗಿ ಹಿಂದೂ ಸಮಾಜದಲ್ಲಿ ಮೇಲು ಜಾತಿಯವರು ನಿಮ್ನ ಜಾತಿಯವರನ್ನು ಶೋಷಿಸಿದ್ದರ […]

ಮಣ್ಣಿನ ಕಣ್ಣು ವರ್ತಮಾನದ ರಾಜಕೀಯ,ಸಾಮಾಜಿಕ, ಆಗುಹೋಗುಗಳ ಬಗೆಗಿನ ಬರಹಗಳು ರೈತರ ಆತ್ಮಹತ್ಯೆ: ತಡೆಯಬಲ್ಲಂತಹ ಒಂದಷ್ಟು ಯೋಜನೆಗಳ ಬಗ್ಗೆ!          ರೈತನ ಆತ್ಮಹತ್ಯೆ ಎನ್ನುವುದು ಈಗೀಗ ಮಾಮೂಲಿಯಾದ ಸುದ್ದಿಯಾಗಿಬಿಟ್ಟಿದೆ ಪ್ರತಿ ವರ್ಷವೂ ಒಂದೋ ಬರಗಾಲ ಎದುರಾಗುತ್ತದೆ, ಇಲ್ಲ ಅತಿವೃಷ್ಠಿಯ ಭೂತ ಬಂದೆರಗುತ್ತದೆ. ಬೆಳೆನಷ್ಟವಾಗಿ ಬೀದಿಗೆ ಬೀಳುವ ರೈತ ವಿಧಿಯಿಲ್ಲದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ.. ವಿರೋಧಪಕ್ಷಗಳು ಆಡಳಿತ ಪಕ್ಷದವರ ವೈಫಲ್ಯದ ಬಗ್ಗೆ ಹೇಳಿಕೆ ನೀಡಿ, ತೀರಾ ಮನಸ್ಸು ಬಂದರೆ  ಸದರಿ ರೈತನ ಮನೆಗೆ ಟಿ.ವಿ.ಕ್ಯಾಮೆರಾದೊಂದಿಗೆ ಬೇಟಿ ನೀಡಿ ಒಂದಿಪ್ಪತ್ತು ಸಾವಿರದ […]

ಎರಡು ಪತ್ರಗಳು

ಎರಡು ಪತ್ರಗಳು ಪತ್ರ ಒಂದು [6:27 pm, 18/10/2020] NAGRAJ HARAPANALLY: ಸಂಗಾತಿಯ ನೆನೆಯುತ್ತಾ…. ಹಿರಿಯ ಸಂಗಾತಿ ಮಧುಸೂದನ್ ಸರ್ ಗೆ ನಮಸ್ಕಾರಗಳು.. ಸಂಗಾತಿ ಕನ್ನಡ ವೆಬ್ ಒಂದು ವರ್ಷ ಪೂರೈಸಿ, ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ನಾನು ಸಂಗಾತಿಯ ಭಾಗವಾದುದು ಈ ವರ್ಷದ ಮಾರ್ಚನಲ್ಲಿ. ಮಧುಸೂದನ್ ಸರ್ ನನ್ನ fb ಗೆಳೆಯರು.ಹಿರಿಯರು‌ .‌ಆದರೆ ಕನ್ನಡ ವೆಬ್ ಮಾಡಿದ್ದು ಗೊತ್ತಿರಲಿಲ್ಲ. ನನ್ನ ಪತ್ರಿಕೆ ಕೆಲಸ ,ಪತ್ರಕರ್ತ ವೃತ್ತಿ ಕಾರಣವಾಗಿ‌ .ಗೆಳೆಯ ಮೋಹನ್ ಗೌಡನ ಬರಹ ಸಂಗಾತಿಯಲ್ಲಿ ಪ್ರಕಟವಾಗಿತ್ತು. ಕುತೂಹಲದಿಂದ […]

ನಿಮ್ಮೊಂದಿಗೆ

ಸಂಪಾದಕೀಯ ಇವತ್ತಿಗೆ ಸಂಗಾತಿಗೆ ವರ್ಷ ತುಂಬಿತು. ಈ ಪಯಣದಲ್ಲಿ ಜೊತೆ ನೀಡಿದ    ನನ್ನೆಲ್ಲ ಓದುಗಮತ್ತು ಬರಹಗಾರ ಮಿತ್ರರುಗಳಿಗೆ ದನ್ಯವಾದಗಳು. ಸಂಗಾತಿಯ ಸಾಧನೆಯೇನು? ಕೇಳಿದವರಿಗೆ ನನ್ನ ಉತ್ತರ: ಒಂದು ವಿನಮ್ರ ಮುಗುಳ್ನಗುವಷ್ಟೆ! ಹೆಚ್ಚೇನು ಹೇಳಲಿ? ಸಾಕ್ಷಿಗೆ ಸಂಗಾತಿಯಬರಹಗಳೇ ಇವೆ. ** ಆದರೂ ಕೆಲವನ್ನು ನಿಮಗಾದರೂ ಹೇಳಲೇಬೇಕು: ಮುನ್ನೂರ ಅರವತ್ತೈದು ದಿನಗಳು, ಮುನ್ನೂರ ಐವತ್ತಕ್ಕೂ ಅಧಿಕ ಲೇಖಕರು, ಮೂರು ಸಾವಿರಕ್ಕೂ ಹೆಚ್ಚಿನ  ಬರಹಗಳು ಹದಿನೈದಕ್ಕೂ ಹೆಚ್ಚು ಅಂಕಣಗಳು ಅಮೇರಿಕಾದ ಅಶ್ವಥ್ ರಿಂದ ಹಿಡಿದು ಚಾಮರಾಜನಗರದ  ಮಾಲತಿ ಯವರವರೆಗು ಹರಡಿದ ವಿಶಾಲ […]

ಹಸಿವು

ಕವಿತೆ ಹಸಿವು  ಗಂಗಾಧರ ಬಿ ಎಲ್ ನಿಟ್ಟೂರ್ ಹಸಿದು ಬಸವಳಿದವರಿಗೆ  ಪ್ರಾಣ ಹೋಗುವ ಸಂಕಟ ಉಳ್ಳವರಿಗೆ ಬರೀ ಚೆಲ್ಲಾಟ ಅನ್ನ ಚೆಲ್ಲುವ ಮಂದಿಗೆ ಅರ್ಥವಾದೀತೆ ಹಸಿದ ಕರುಳಿನ ಆಕ್ರಂದನ ಎದೆಯೊಳಗೆ ನಡುಕ  ಕರುಳು ಹಿಂಡುವ ಕಥನ  ಜಗದಿ ಹಸಿವಿನ ಮರಣ ಮೃದಂಗ  ಪ್ರಕೃತಿಗೆ ಕಣ್ಣಿಲ್ಲ ಕರುಣೆಯೂ ಇಲ್ಲ ಗಂಜಿಗೂ ಗತಿ ಇಲ್ಲದೆ ಸಾಯುವ ಕಂದಮ್ಮಗಳ ಸಂಖ್ಯೆ  ನಿತ್ಯ 20 ಸಾವಿರಕೂ ಅಧಿಕ ಹಿಡಿ ಅನ್ನ ಬೊಗಸೆ ನೀರಿಗೂ ತತ್ವಾರ  ಅಪೌಷ್ಟಿಕತೆ – ಸಾಂಕ್ರಾಮಿಕಗಳ ಪ್ರಹಾರ  ಎಂಥಾ ವಿಚಿತ್ರ […]

ಮತ್ತೆ ಹುಟ್ಟಲಿ ದುರ್ಗಿ…

ಕವಿತೆ ಮತ್ತೆ ಹುಟ್ಟಲಿ ದುರ್ಗಿ… ಮಹಿಷನ ಪೂಜಿಸಿದರೇನಂತೆತ್ರಿಲೋಕ ದಹಿಸೆಂದು ಅವನು ಹೇಳಲಿಲ್ಲಬ್ರಹ್ಮನಿಂದ ವರಪಡೆದರೇನಂತೆಅಬಲೆಯ ಬಲಾತ್ಕರಿಸೆಂದು ಅವನು ಹರಸಲಿಲ್ಲಹುಣ್ಣಿಮೆಯೋ ಮಹಾಲಯವೋಮಹಿಷಾಸುರನ ಕ್ರೌರ್ಯಕ್ಕೆ ಎಣೆಯಿಲ್ಲ ,ಬಗೆ ಬಗೆಯ ಛಧ್ಮವೇಶವೂ ರಕ್ಷಿಸಲಿಲ್ಲಕೊನೆಗೆಮಹಿಳೆಯೋರ್ವಳ ರೋಷಕ್ಕೆಪುರುಷನೊಬ್ಬನ ಅಹಂಕಾರಕ್ಕೆಅಲಂಕಾರಿಕ ಅಂತ್ಯ…ಕರುಳು ಚೆಲ್ಲಿತ್ತು ತ್ರಿಶೂಲ ಹೊಕ್ಕಿತ್ತುಮೂಜಗದ ಶಾಪಕ್ಕೆ ದುರ್ಗೆಯ ಕೋಪಕ್ಕೆಮಹಿಷಾಸುರನ ಪ್ರಾಣ ಹಾರಿತ್ತು…. ಹಾಗೆಂದು ಬದಲಾಯಿಸಿಬಿಟ್ಟಿತೇ ಕಾಲ?ಬಣ್ಣ,ವೇಷ, ವಾಸನೆಗಳ ಈಜಗ?ಇಲ್ಲ ಇಲ್ಲ ಆಗಾಗ ಮತ್ತೊಮ್ಮೆ ಮಗದೊಮ್ಮೆಮತ್ತೆ ಮತ್ತೆ ನಗ್ನವಾಗುತ್ತಲೇ ಇದೆಪುರುಷನೊಳಗಿನಮೃಗಮರಳಿ ಬಾ ದುರ್ಗಾಮಾತೆ …ರಕ್ತ ಬೀಜಾಸುರರಿವರುಅಬಲೆಯರ ಹುಡುಕುವರುಹೇಡಿಗಳಂತೆ ಹೊಂಚುವರು,ಒಬ್ಬಳ ಮೇಲೆ ಹಲವು ಹತ್ತು ಜನರುಕಾಮಾಂಧರಾಗಿ ಎರಗಿ ಭೋಗಿಸಿಸಾಯಿಸಿ,ಅಡಗುತ್ತ […]

ಇಲ್ಲೆ ಎಲ್ಲಾ..

ಕವಿತೆ ಇಲ್ಲೆ ಎಲ್ಲಾ.. ಜ್ಯೋತಿ ಡಿ.ಬೊಮ್ಮಾ ಬಿಡು ಮನವೆ ಕೊರಗುವದುನಿನಗಾರಿಲ್ಲ ಇಲ್ಲಿ ಆಪ್ತ ನಿನಗೆ ನೀನೆ ಶತ್ರು ನಿನಗೆ ನೀನೆ ಮಿತ್ರನಿನಗೆ ನೀನೆ ಆಗು ಪರಮಾಪ್ತ ಆಪೇಕ್ಷಿಸಿ ಕಾತರಿಸಿದಷ್ಟು ಹೆಚ್ಚುವದು ದುಃಖನೀರಿಕ್ಷಿಸದಿರು ಯಾರಿಂದ ಎನನ್ನೂ ,ಅದೇ ಸುಖ ಅಲೆಯದಿರು ಹುಡುಕುತ್ತಾ ಹೊರಗೆಲ್ಲೂ ಮುಕ್ತಿಬಾಹ್ಯದಲ್ಲೆಲ್ಲೂ ದೊರಕದದು ಅರಿ ನೀ, ಅದೇ ಯುಕ್ತಿ ನೆಮ್ಮದಿಯ ಬೆಂಬತ್ತಿ ಓಡೋಡದಿರುದ್ಯಾನದಲ್ಲೆ ಅಡಗಿರುವದದು ಮರೆಯದಿರು ಕೋಪ ಅಸೂಯೆಗಳು ಚಿಗುರದಂತೆ ತಡೆಪ್ರೀತಿ ಕರುಣೆಗಳು ಹಂಚುತ್ತ ನಡೆ ಸ್ವರ್ಗ ನರಕಗಳು ಮತ್ತೆಲ್ಲೂ ಇಲ್ಲತನ್ನ ತಾ ಅರಿತವನಿಗೆ ಇಲ್ಲೆ […]

ನಡುವೆ ಸುಳಿಯುವ ಆತ್ಮ!

ಕವಿತೆ ನಡುವೆ ಸುಳಿಯುವ ಆತ್ಮ! ನಡುವೆ ಸುಳಿಯುವ ಆತ್ಮಗಂಡೂ ಅಲ್ಲ ಹೆಣ್ಣೂ ಅಲ್ಲ!ಜೇಡರ ದಾಸಿಮಯ್ಯ ನೆನಪಾದ…ಗೋಡೆಯಲ್ಲಿದ್ದ ಗೌಳಿಹಲ್ಲಿ ಲೊಚಲೊಚ ಲೊಚ್ಚಲೊಚಗುಟ್ಟಿತುಪಚಪಚ ಪಚ್ಚ ಕಾಯಿ ಕಡೆಯುತ್ತಿದ್ದ ಬೋಳಜ್ಜಿಥತ್! ಅಪಶಕುನ! ಎಂದಳು.ಹೊಟ್ಟೆಗಂಟಿಕೊಂಡ ಬಿಳಿ ಮೊಟ್ಟೆಯನ್ನು ಹೊತ್ತಹೆಣ್ಣು ಜೇಡವುಗೋಡೆಯ ಮೇಲಿಂದವರಹಾವತಾರ ಕ್ಯಾಲೆಂಡರಿನ ಭೂಮಂಡಲದಮರೆಗೆ ಸರಿಯಿತು! ದಾಸಿಮಯ್ಯನ ಈ ವಚನ ಕಂಠಪಾಠ ಅವನಿಗೆ!ಪ್ರತಿ ಭಾಷಣದಲ್ಲೂ ಸ್ತ್ರೀ… ಸ್ತ್ರೀ… ಎಂದು ಸಂವೇದನೆಯಇಸ್ತ್ರೀ ಸೀರೆಸೀರೆಗಳಿಗೆ ಜೋರಲ್ಲೇ ಎಳೆಯುತ್ತಿರುತ್ತಾನೆವೇದಿಕೆಯಲ್ಲಿ!ಮನೆಯಲ್ಲಿ ‘ನಸ್ತ್ರೀ ಸ್ವಾತಂತ್ರ್ಯಂ ಅರ್ಹತಿ!’ಇಸ್ತ್ರಿಯೇ ಇಲ್ಲದ ಹರಕು ಸೀರೆಯಲ್ಲಿಬಾಯಿ ಮುಚ್ಚಿಕೊಂಡೇ ಹೆಂಡತಿಯೋಜನಗಂಧಿಯರ ಮೀನು ಹೂವು ಮೂರಿಗಂಧ ಬೆರೆತುಬೆಂತರಾದಅವನ ಶರ್ಟ್ […]

ಹೊರಗೋಡೆ

ಪ್ರಬಂಧ ಹೊರಗೋಡೆ ಗೋಡೆ ಎಂಬುದು ಹಲವಾರು ವಸ್ತುಗಳು, ವಿಶೇಷಗಳು ಹಾಗೂ ವಿಷಯಗಳನ್ನು ಮುಚ್ಚಿಡಬಹುದಾದ ಇಟ್ಟಿಗೆ, ಮರಳು, ಸುಣ್ಣ, ಬೆಲ್ಲ, ಸಿಮೆಂಟುಗಳಿಂದ ಕಟ್ಟಿದ ಒಂದು ರಚನೆ ಎಂದುಕೊಳ್ಳುವುದು ಒಂದು ಬಗೆಯಲ್ಲಿ ಒಪ್ಪಬಹುದಾದ ವಿಷಯವಾದರೂ, ಹಲವಾರು ಕಾರಣಗಳಿಂದ ಗೋಡೆಗಳು ನಮ್ಮನ್ನು ಪೂರ್ವಜರೊಂದಿಗೆ ಬೆಸೆಯುತ್ತಲೇ ಪ್ರಸ್ತುತ ಜೀವನದಲ್ಲಿ ಆಸಕ್ತಿ ಮೂಡಿಸುತ್ತಾ ಹೋಗುತ್ತವೆ. ಪ್ರತಿಯೊಂದು ಗೋಡೆಯನ್ನು ಕಟ್ಟಲು ಆರಂಭಿಸಿದ ಕೂಡಲೇ ಹೊರಗೋಡೆ ಹಾಗೂ ಒಳಗೋಡೆ ಎರಡೂ ಜೊತೆ ಜೊತೆಗೆ ನಿರ್ಮಾಣವಾಗುತ್ತಾ ಸಾಗುತ್ತದೆ. ನಾಗರೀಕತೆಯ ಆರಂಭವನ್ನು ನಾವು ಅರಿಯಲು ಹಾಗೂ ನಮ್ಮ ಪೂರ್ವಜರ ಇರುವನ್ನು […]

Back To Top