ಕವಿತೆ
ಮತ್ತೆ ಹುಟ್ಟಲಿ ದುರ್ಗಿ…
ಮಹಿಷನ ಪೂಜಿಸಿದರೇನಂತೆ
ತ್ರಿಲೋಕ ದಹಿಸೆಂದು ಅವನು ಹೇಳಲಿಲ್ಲ
ಬ್ರಹ್ಮನಿಂದ ವರಪಡೆದರೇನಂತೆ
ಅಬಲೆಯ ಬಲಾತ್ಕರಿಸೆಂದು ಅವನು ಹರಸಲಿಲ್ಲ
ಹುಣ್ಣಿಮೆಯೋ ಮಹಾಲಯವೋ
ಮಹಿಷಾಸುರನ ಕ್ರೌರ್ಯಕ್ಕೆ ಎಣೆಯಿಲ್ಲ ,
ಬಗೆ ಬಗೆಯ ಛಧ್ಮವೇಶವೂ ರಕ್ಷಿಸಲಿಲ್ಲ
ಕೊನೆಗೆ
ಮಹಿಳೆಯೋರ್ವಳ ರೋಷಕ್ಕೆ
ಪುರುಷನೊಬ್ಬನ ಅಹಂಕಾರಕ್ಕೆ
ಅಲಂಕಾರಿಕ ಅಂತ್ಯ…
ಕರುಳು ಚೆಲ್ಲಿತ್ತು ತ್ರಿಶೂಲ ಹೊಕ್ಕಿತ್ತು
ಮೂಜಗದ ಶಾಪಕ್ಕೆ ದುರ್ಗೆಯ ಕೋಪಕ್ಕೆ
ಮಹಿಷಾಸುರನ ಪ್ರಾಣ ಹಾರಿತ್ತು….
ಹಾಗೆಂದು ಬದಲಾಯಿಸಿಬಿಟ್ಟಿತೇ ಕಾಲ?
ಬಣ್ಣ,ವೇಷ, ವಾಸನೆಗಳ ಈಜಗ?
ಇಲ್ಲ ಇಲ್ಲ ಆಗಾಗ ಮತ್ತೊಮ್ಮೆ ಮಗದೊಮ್ಮೆ
ಮತ್ತೆ ಮತ್ತೆ ನಗ್ನವಾಗುತ್ತಲೇ ಇದೆ
ಪುರುಷನೊಳಗಿನಮೃಗ
ಮರಳಿ ಬಾ ದುರ್ಗಾಮಾತೆ …
ರಕ್ತ ಬೀಜಾಸುರರಿವರು
ಅಬಲೆಯರ ಹುಡುಕುವರು
ಹೇಡಿಗಳಂತೆ ಹೊಂಚುವರು,
ಒಬ್ಬಳ ಮೇಲೆ ಹಲವು ಹತ್ತು ಜನರು
ಕಾಮಾಂಧರಾಗಿ ಎರಗಿ ಭೋಗಿಸಿ
ಸಾಯಿಸಿ,ಅಡಗುತ್ತ ತೇಕುವರು
ಕಾಲ ಇಂದಿಗೂ ಬದಲಾಗಿಲ್ಲ…
ಉಧ್ಬವಿಸಲಿ ಸಾವಿರದಿ ಕಾಳಿಯರು,
ದುರ್ಗೆಯರು,ಶುಭಾಂಕರಿಯರು
ರಕ್ಕಸರಠಕ್ಕತೆಗೆ ಆಗಿಉತ್ತರ
ಮೀರಿಜಗದೆತ್ತರ
ಮಾಟದಮೈಯಕೋಮಲಾಂಗಿಯರು
ಹಣೆತುಂಬರಕ್ತಕಾರಿ
ಬಿರುಬಿರುಸಿನಕೇಶಕೆದರಿ
ಸಾವಿರ ಮಹಿಷರ ಮರ್ದನಕ್ಕೆ ನಾಂದಿ ಹಾಡಿ
ಕತ್ತಲೆಗೆ-ಬೆಳಕಿನ ದಾರಿತೋರಿ
ದುರ್ಗೆಯಾಗಲಿ ಇಂದಿನಮಹಿಳೆ
( ಮಹಿಷಾಸುರ ಮಹಿಷ ದೇವರನ್ನು ಪೂಜಿಸುತ್ತಿದ್ದ ಅಸುರ.ಆತನಿಗೆ ಕೋಣನ (ಮಹಿಷ) ತಲೆಯಿದೆಯಿತ್ತು ಎನ್ನಲಾಗಿದೆ.ಭ್ರಮ್ಹನಿಂದ ವರವನ್ನು ಪಡೆದಿದ್ದವನು).
**************************
ಡಾ.ಪ್ರೇಮಲತ ಬಿ.