ಅಂಕಣ ಬರಹ ಕಬ್ಬಿಗರ ಅಬ್ಬಿ ಸೌಂದರ್ಯ ಲಹರಿ ಆ ಅಜ್ಜ ತನ್ನ ಮನೆಯ ಅಂಗಳದಲ್ಲಿ ಕುಳಿತು ನೋಡುತ್ತಲೇ ಇದ್ದರು. ದಿನಾಲೂ ನೋಡುತ್ತಿದ್ದರು. ಚಿಟ್ಟೆಯನ್ನು! ಬಣ್ಣದ ಚಿಟ್ಟೆಯನ್ನು. ಅದರ ಎಡ ಬಲದ ರೆಕ್ಕೆಗಳು ಒಂದಕ್ಕೊಂದು ಕನ್ನಡಿ ಹಿಡಿದ ಬಿಂಬಗಳ ಹಾಗೆ. ಆಗಷ್ಟೇ ರವಿ ವರ್ಮ, ತನ್ನ ಕುಂಚದಿಂದ ಬಳಿದು ಬಿಡಿಸಿದ ತೈಲವರ್ಣಚಿತ್ರದ ರೇಖೆಗಳ ಹಾಗೆ ನಾಜೂಕು ವರ್ಣ ರೇಖೆಗಳು ಆ ರೆಕ್ಕೆಗಳಲ್ಲಿ!. ಅದು ಹಾರೋದಂದರೆ! ಲಪ್..ಟಪ್.. ಎಂದು ರೆಕ್ಕೆಯನ್ನು ನಯ ನಾಜೂಕಿನಿಂದ ತೆರೆದು ಮಡಿಸಿ ವಿಶ್ವಾಮಿತ್ರನ ತಪಸ್ಸು ಭಂಗಕ್ಕೆ […]
ಅಂಕಣ ಬರಹ ಜೀವಕ್ಕಿಂತಲೂ ಹೆಚ್ಚಾಗಿ ಅಂಧಶ್ರದ್ಧೆಯಲ್ಲಿ ನಂಬಿಕೆ ಇಟ್ಟಿರುವುದು ನನಗೆ ಹೆಚ್ಚುಕಾಡುವ ವಿಷಯ” ಈ ಸಲದ ಮುಖಾಮುಖಿ ಯಲ್ಲಿ ನಾಗರಾಜ್ ಹರಪನಹಳ್ಳಿ ಸಂದರ್ಶಿಸಿದ್ದಾರೆ ಕವಿ,ಕತೆಗಾರ ಹುಬ್ಬಳ್ಳಿಯ ಕುಮಾರ ಬೇಂದ್ರೆ ಅವರನ್ನು.……….ಪರಿಚಯ :ಸಂಯುಕ್ತ ಕರ್ನಾಟಕ, ಉದಯವಾಣಿ, ಗೌರಿಲಂಕೇಶ್ ಪತ್ರಿಕೆಗಳು ಸೇರದಂತೆ ೧೪ ವರ್ಷಗಳ ಕಾಲ ಪತ್ರಕರ್ತನಾಗಿ ಕೆಲಸ. ಸಧ್ಯ ಚಲನಚಿತ್ರ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರಕಲೆಯಲ್ಲಿ ಡಿಪ್ಲೋಮಾ, ಕನ್ನಡ ಎಂ.ಎ. ಪದವಿಧರ. ಸುಮಾರು ಎರಡು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರು. ಮಾದಪ್ಪನ ಸಾವುಅದೃಶ್ಯ ಲೋಕದ ಮಾಯೆ ನಿರ್ವಾಣಗಾಂಧಿ ವೃತ್ತದ ದಂಗೆ […]
ಒಂದು ಫ್ಯಾಷನ್ ಬೊಂಬೆಯೇ ಬಾರ್ಬಿ ಕತೆ
ಒಂದು ಫ್ಯಾಷನ್ ಬೊಂಬೆಯೇ ಬಾರ್ಬಿ ಕತೆ ಆಶಾ ಸಿದ್ದಲಿಂಗಯ್ಯ ಅಮೆರಿಕಾದ ಗೊಂಬೆ-ತಯಾರಿಕಾ ಕಂಪೆನಿ ಮಾಟೆಲ್ ಇಂಕ್ 1959ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ ಒಂದು ಫ್ಯಾಷನ್ ಬೊಂಬೆಯೇ ಬಾರ್ಬಿ. ಅಮೆರಿಕಾದ ಮಹಿಳಾ ಉದ್ಯಮಿ ರುತ್ ಹ್ಯಾಂಡ್ಲರ್ (1916-2002) ಬಿಲ್ಡ್ ಲಿಲ್ಲಿ ಎಂಬ ಜರ್ಮನ್ ಗೊಂಬೆಯಿಂದ ಸ್ಪೂರ್ತಿ ಪಡೆದು ಬಾರ್ಬಿಯನ್ನು ರೂಪಿಸಿದರು.ಐವತ್ತು ವರ್ಷಗಳಲ್ಲಿ ಗೊಂಬೆ ಮಾರುಕಟ್ಟೆಯಲ್ಲಿ ಹಲವು ವಿವಾದ ವ್ಯಾಜ್ಯಗಳನ್ನು ಹುಟ್ಟುಹಾಕುತ್ತಲೇ ಟೀಕೆಗೆ ಒಳಗಾಗುತ್ತಲೇ ಬೆಳೆಯಿತು ಬಾರ್ಬಿ ಹಾಗೂ ಆಕೆಯ ಜೀವನ ಶೈಲಿ. ಇತ್ತೀಚಿನ ದಿನಗಳಲ್ಲಿ ಬಾರ್ಬಿಗೆ ಪ್ರತಿಸ್ಪರ್ಧಿಯಾಗಿ ಬ್ರಾಜ್ಸರಣಿಯ […]
ಗಜಲ್
ಗಜಲ್ ಅರುಣಾ ನರೇಂದ್ರ ಮತ್ತೇರಿಸುವ ಮಧು ಇಂದು ನೆತ್ತರಿನ ಬಣ್ಣವಾಯಿತೇಕೆತುಟಿ ಸೋಕುವ ಮುಂಚೆ ಬಟ್ಟಲು ಉರುಳಿ ಹೋಯಿತೇಕೆ ಹೃದಯ ಒಡೆದು ಚೂರಾದರಾಗಲಿ ಮಧುಶಾಲೆ ಕೈ ಮಾಡಿ ಕರೆದಿದೆತುಂಬಿ ತುಳುಕುವ ಹೂಜಿ ಎದುರಿಗಿದೆ ಮುಖದ ನಗು ಮಾಯವಾಯಿತೇಕೆ ಯಾರೇನೇ ಅಡಿಕೊಳ್ಳಲಿ ಬಿಡು ನೋವು ಮರೆಸುವ ಔಷಧಿ ಜೊತೆಗಿದೆ ಗಾಲಿಬ್ಸಾಕಿ ಸುರಿದು ಕೊಟ್ಟ ಸಂಜೀವಿನಿ ಕೈ ಸೇರುವ ಮುನ್ನ ನೆಲದ ಪಾಲಾಯಿತೇಕೆ ಎಲ್ಲರೂ ನನ್ನ ನೋಡಿ ದೂರ ಸರಿಯುತ್ತಾರೆ ಸಜನಿ ಎದೆಯ ಬೇನೆ ನಿನಗಷ್ಟೇ ಗೊತ್ತುದರ್ದಿಗೆ ಮುಲಾಮು ಸವರಿ ಕೈಗಿತ್ತ […]
ಗೃಹಬಂಧ
ಕೊರೊನಾ ಕಾಡಿದ ವರ್ಷಾಂತ್ಯದಲ್ಲಿ ನಿಂತು ಗೃಹಬಂಧ ರೇಶ್ಮಾ ಗುಳೇದಗುಡ್ಡಾಕರ್ ಕರೋನಾ ಎಂಬ ಅಂತಕದ ಅಲೆ ಹೊತ್ತು ಬಂದ ವರ್ಷ ಇಗ ಕಳೆಯುವ ದಿನದಲ್ಲಿ ನಾವು ಇದ್ದೇವೆ .ಹೊಸ ವರ್ಷದ ಬಳಿ ಸಾಗುತ್ತಾ ಇದ್ದೇವೆ . ಆಪಾರ ಭರವಸೆಗಳೊಂದಿಗೆ ಇಡೀ ಭೂಮಂಡಲವನ್ನೆ ತಲ್ಲಣಿಸಿದ ವರ್ಷವಿದು .ನಾವು ಕಂಡು ಕೇಳಿರದ ಸಂಗತಿಗಳು ನಮಗೆ ಎದುರಾದವು .ಸಂಕ್ರಾಮಿಕ ರೋಗದ ಅಬ್ಬರ ಓದಿದ್ದೆವು .ಅದರಲ್ಲೂ ಬಂಕಿಮ ಚಂದ್ರ ಚಟರ್ಜಿ ಅವರ ಆನಂದ ಮಠ ಓದಿದಾಗ ಸಂಕ್ರಾಮಿಕ ರೋಗದ ಕ್ರೂರ ,ಭೀಕರ , ಓದುಗರಿಗೆ […]
2020 ಎಂಬ ‘ಮಾಯಾವಿ ವರ್ಷ’
ಕೊರೊನಾ ಕಾಡಿದ ವರ್ಷಾಂತ್ಯದಲ್ಲಿ ನಿಂತು 2020 ಎಂಬ ‘ಮಾಯಾವಿ ವರ್ಷ’ ಚಂದ್ರ ಪ್ರಭಾ.ಬಿ. . 2020 ಎಂಬ ‘ಮಾಯಾವಿ ವರ್ಷ’ ಕುದುರೆಯಂತೆ ಕೆನೆಯುತ್ತ ಆಗಮಿಸಿ ವ್ಯಾಘ್ರನಾಗಿ ಮನುಕುಲವನ್ನು ನುಂಗಿ ಆಪೋಶನ ತೆಗೆದುಕೊಂಡುದು ಇಷ್ಟರಲ್ಲೇ ಇತಿಹಾಸದ ಪುಟ ಸೇರಲಿದೆ. ಆಗಮನಕ್ಕೂ ಮುನ್ನ ಆ ಕುರಿತು ಒಬ್ಬೊಬ್ಬರಲ್ಲಿ ಒಂದೊಂದು ಬಗೆ ವಿಸ್ಮಯಕಾರಿ ನಿರೀಕ್ಷೆ ಇದ್ದುದು ನಿಜ. T20 ಎಂಬ ಚುಟುಕು ಕ್ರಿಕೆಟ್ ಮೂಡಿಸಿದ ಸಂಚಲನ ಅದಕ್ಕೆ ಕಾರಣ. T20 ಮನೆ ಮನ ಮೈದಾನ ಪ್ರವೇಶಿಸಿದ ಹೊಸತರಲ್ಲಿ ಇಷ್ಟು ಕಡಿಮೆ ಓವರ್ […]
ಹೊಸ ಭರವಸೆಯೊಂದಿಗೆ..
ಕೊರೊನಾ ಕಾಡಿದ ವರ್ಷಾಂತ್ಯದಲ್ಲಿ ನಿಂತು ಹೊಸ ಭರವಸೆಯೊಂದಿಗೆ.. ಜ್ಯೋತಿ ಡಿ.ಬೊಮ್ಮ. ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹಿಂದಿರುಗಿ ನೋಡಿದಾಗ ನಿಟ್ಟುಸಿರಿನೊಂದಿಗೆ ವಿಷಾದದ ವಿಷಣ್ಣ ನಗೆಯೊಂದು ಮೂಡುತ್ತದೆ ಕಂಡು ಕಾಣದಂತೆ. 2020 ನೆಯ ವರ್ಷವನ್ನು ಕೂಡ ಒಂದು ಹೊಸ ಭರವಸೆಯಿಂದಲೆ ಬರಮಾಡಿಕೊಂಡಿದ್ದೆವು.ಹಿಂದೊಂದು ಕಾಣದ ಸಾಂಕ್ರಾಮಿಕ ಪಿಡುಗಿನ ಭಯಾನಕ ರೂಪ ಇಡೀ ಮನಕುಲವನ್ನೆ ತಲ್ಲಣಿಸಿಬಿಟ್ಟಿತು. ಎಂಥ ಅನಿಶ್ಚಿತತೆಯ ವಾತಾವರಣ ,ಇಡೀ ಜಗತ್ತೇ ಸ್ಥಬ್ದವಾದಂತಹ ಅಸಹಾಯಕ ಸ್ಥಿತಿ.ರೋಗದ ಭಯ ಎಷ್ಟು ವ್ಯಾಪಿಸಿಬಿಟ್ಟಿತೆಂದರೆ ವೈದ್ಯಕೀಯ ಕ್ಷೇತ್ರವು ಕಂಪಿಸಿತು. ಯಾರಿಗೆ ಯಾವಾಗ ರೋಗ […]
ಕೆಂಪು ತೋರಣ ಕಟ್ಟುತ್ತೇವೆ
ಕೆಂಪು ತೋರಣ ಕಟ್ಟುತ್ತೇವೆ ಅಲ್ಲಾಗಿರಿರಾಜ್ ಕನಕಗಿರಿ ಈಗ ನಾವುಕಿರು ದಾರಿಯಿಂದ ಹೆದ್ದಾರಿಗೆ ಬಂದಿದ್ದೇವೆ.ರಾಜಧಾನಿಯ ಸಾಹುಕಾರರ ಮನೆಯ,ಕುಂಡಲಿಯಲ್ಲಿ ಕೆಂಪು ಗುಲಾಬಿ ಬಾಡಿಹೋಗಿವೆಯಂತೆ.ಹೂ ಗಿಡದ ಬೇರಿಗೆ ರಕ್ತ ಕುಡಿಸಲು ಹೊರಟಿದ್ದೇವೆ. ಈಗ ನಾವುಊರು ಕೇರಿ ಧಿಕ್ಕರಿಸಿ ಬಂದಿದ್ದೇವೆ.ನಮ್ಮ ಅನ್ನ ಕಸಿದು ಧಣಿಗಳಾದವರ,ಮನೆಯ ತಲ ಬಾಗಿಲು ತೋರಣ ಒಣಗಿ ಹೋಗಿವೆಯಂತೆ.ನಮ್ಮ ತೊಡೆ ಚರ್ಮ ಸುಲಿದುಕೆಂಪು ತೋರಣ ಕಟ್ಟಲು ಹೊರಟಿದ್ದೇವೆ. ಈಗ ನಾವುಜೀವದ ಹಂಗು ತೊರೆದು ಬಂದಿದ್ದೇವೆ.‘ಮರಣವೇ ಮಹಾನವಮಿಯೆಂದು’ದಿಲ್ಲಿ ಗಡಿ ಮುಚ್ಚಿಕೊಂಡವರ ಮನೆ ಮುಂದೆನಮ್ಮ ಹೋರಾಟದ ಹಾಡು ಬರೆಯಲು,ಕಳ್ಳು ಬಳ್ಳಿ ಕಟ್ಟಿಕೊಂಡು ಹೊರಟಿದ್ದೇವೆ. […]
ಶವ ಬಾರದಿರಲಿ ಮನೆ ತನಕ
ಕವಿತೆ ಶವ ಬಾರದಿರಲಿ ಮನೆ ತನಕ ಎ. ಎಸ್. ಮಕಾನದಾರ ನಿನ್ನ ಮನೆಯ ಅಂಗಳ ತನಕವೂನನ್ನ ಶವದ ಡೋಲಿ ಬಾರದಿರಲಿ ಹೂವಿನ ಚದ್ದರಿನ ತುಂಬಾ ಗುಲಾಬಿ ಅಂಟಿಸಿತರಾವರಿ ಜರದ ರೀಲು ಸುತ್ತಿ ಮೇಲಷ್ಟು ಇತ್ತರ್ ಸುರಿಯದಿರಲಿ ಆತ್ಮ ಸಾಕ್ಷಿ ನ್ಯಾಯಾಲಯಕೆಶರಣಾಗಿದ್ದೇನೆ. ಶಿಕ್ಷೆಗೆ ಗುರಿಯಾಗಿದ್ದೇನೆ ಅವಳಿಗೆ ಪ್ರೀತಿಸಿದ್ದು ನನ್ನ ತಪ್ಪಾದರೆನನ್ನನ್ನೂ ಪ್ರೀತಿಸಿದ ಅವಳ ತುರುಬು ತುಂಬಾ ಹೂ ಆರಡಿ ಜಾಗೆ ಮೂರು ಹಿಡಿ ಮಣ್ಣಿಗಾಗಿಕಾಲುಗೆರೆ ಸವೆದಿವೆ ಮೊಣಕಾಲು ಚಿಪ್ಪು ಒಡೆದಿದೆವಚನ ಭ್ರಷ್ಟನಲ್ಲ. ದೇಶ ಭ್ರಷ್ಟನೂ ಅಲ್ಲದಅವಳ ನಲ್ಲನಿಗೆ ಪುಟ […]
ಹಾಯ್ಕುಗಳು
ಹಾಯ್ಕುಗಳು ಭಾರತಿ ರವೀಂದ್ರ ಹೃದಯ ಕಣ್ಣೀರು ಕೊನೆ:ಹೃದಯವು ನಿಂತಿತುದುಃಖದ ಭಾರ. ಮನಸ್ಸು ಮನಸೇ ಜೋಕೆಕದ್ದಾರು ಆತ್ಮವನುಪ್ರೀತಿ ಹೆಸರು. ಅಮ್ಮ ತೊಗಲು ಬೊಂಬೆ :ಜೀವ ಕೊಟ್ಟ ದೇವತೆಅಮ್ಮನು ತಾನೇ. ಲಜ್ಜೆ ಸಂಜೆ ಕಡಲುಬಾನು ಭೂಮಿ ಮಿಲನಲಜ್ಜೆಯ ಕೆಂಪು. ಮೌನ ಮಾತು ಮೌನಕ್ಕೆಸೋತು ಶರಣಾಯಿತುಕಣ್ಣ ಭಾಷೆಲಿ. ಶಿಲೆ ಶಿಲೆಗೂ ಪ್ರೀತಿಸುರಿಯೋ ಸೋನೆಯಲಿಕರಗೋ ಮನ ಜಾತ್ರೆ ಮಾಯೆಯ ಜಾತ್ರೆಯಾರು ಯಾವ ಪಾಲಿಗೆಸಿಕ್ಕಿದ್ದೇ ಸಿರಿ. ಬಾಳು ಬಾಳ ಹಾದಿಲಿಮುಳ್ಳು ಕೂಡಾ ಹೂವಂತೆತೃಪ್ತಿ ಮನಕೆ. ಹೂವು ಮುಳ್ಳಿನ ಭಾಸಹೂಗಳು ಚುಚ್ಚಿದಾಗಪ್ರೀತಿಯೇ ಹೀಗೆ. ಕವಿ ಕವಿ […]