ಕೊರೊನಾ ಕಾಡಿದ ವರ್ಷಾಂತ್ಯದಲ್ಲಿ ನಿಂತು
ಗೃಹಬಂಧ
ರೇಶ್ಮಾ ಗುಳೇದಗುಡ್ಡಾಕರ್
ಕರೋನಾ ಎಂಬ ಅಂತಕದ ಅಲೆ ಹೊತ್ತು ಬಂದ ವರ್ಷ ಇಗ ಕಳೆಯುವ ದಿನದಲ್ಲಿ ನಾವು ಇದ್ದೇವೆ .ಹೊಸ ವರ್ಷದ ಬಳಿ ಸಾಗುತ್ತಾ ಇದ್ದೇವೆ . ಆಪಾರ ಭರವಸೆಗಳೊಂದಿಗೆ
ಇಡೀ ಭೂಮಂಡಲವನ್ನೆ ತಲ್ಲಣಿಸಿದ ವರ್ಷವಿದು .ನಾವು ಕಂಡು ಕೇಳಿರದ ಸಂಗತಿಗಳು ನಮಗೆ ಎದುರಾದವು .ಸಂಕ್ರಾಮಿಕ ರೋಗದ ಅಬ್ಬರ ಓದಿದ್ದೆವು .ಅದರಲ್ಲೂ ಬಂಕಿಮ ಚಂದ್ರ ಚಟರ್ಜಿ ಅವರ ಆನಂದ ಮಠ ಓದಿದಾಗ ಸಂಕ್ರಾಮಿಕ ರೋಗದ ಕ್ರೂರ ,ಭೀಕರ , ಓದುಗರಿಗೆ ದರ್ಶನ ನೀಡುತ್ತದೆ ಮನಕಲಕುವಂತೆ ಎಳೆ ಎಳೆಯಾಗಿ ಬದುಕಿನ ಮಜಲುಗಳನ್ನು ವಿಸ್ತಾರಿಸುತ್ತದೆ .ಆನಂದ ಮಠ ಪುಸ್ತಕ ದಲ್ಲಿರುವಂತೆ ಯೇ .ನಾವು ದಿನಗಳು ಅನುಭವಿಸಿದೆವು ಅದನ್ನು ಅನುಭವಿಸುತ್ತಲೇ ಆನಂದಮಠ ಓದಿದೆ .ಅದು ಬೇರೆ ವಿಚಾರ .
ಈ ಗೃಹಬಂಧ ಎಂಬ ವಿಶೇಷ ಶಬ್ದದ ಅರಿವು – ಆಳ.ಅದರ ಸೌಂದರ್ಯ ಎಲ್ಲವು ಸ್ತೂಲವಾಗಿ ಪರಿಚಯವಾದವು” ಸ್ವತಂತ್ರ್ಯ ” ಎಂಬ ಪದ ಬಹಳ ಕಾಡಿತು .
ಇದು ಎಲ್ಲರಿಗು ಒಂದೇ ವಿಧವಾದ ಅನುಭವ ನೀಡಿಲ್ಲ ಈ ವರ್ಷ .ವಿಧ ವಿಧವಾದ ಅನುಭವದ ಬುತ್ತಿ ಎಲ್ಲರ ಬಳಿಯು ಇದೆ .
ಕೊಡಿ ಬಾಳುವ ಹಂಚಿತಿನ್ನುವ , ಕ್ಷಣ ಕೆಲವರಿಗಾದರೆ ,ಹಸಿವಿನಿಂದ ಒದ್ದಾಡಿದ ದಿನಗಳು ಹಲವರಿಗೆ , ಅರಾಮ್ ಅಗಿ ಮನೆಯಲ್ಲೆ ಕುಳಿತು ಕೆಲಸ ಮಾಡಿ ಪಗಾರ ಎಣಿಸಿದರೆ , ಇದ್ದ ಪುಟ್ಟ ಕೆಲಸವೂ ಕಳೆದುಕೊಂಡು ಲಕ್ಷಗಟ್ಟಲೇ ಕಾರ್ಮಿಕರು ತಮ್ಮ ಸ್ವಗ್ರಾಮಕ್ಕೆ ಮರಳಿದರು ಸಗರೂಪಾದಿಯಲ್ಲಿ ….
ತಮ್ಮ ಹಸು ಮಕ್ಕಳ ಕಟ್ಟಕೊಂಡು ..
ಇನ್ನು ವಿದ್ಯಾರ್ಥಿಗಳು ಮುಗಿಯಲಾರದ ರಜೆ ಸಿಕ್ಕರು ಆಡಲು ಅಂಗಳ ಇಲ್ಲ !
ಮುಚ್ಚಿದ ರಸ್ತೆ ಬದಿಯ ಅಂಗಡಿಗಳು ,ಹಲವರ ಬಾಯಿ ಕೆಟ್ಟಿತು ..! ಹೀಗೆ ಅನೇಕ ಸಂಗತಿಗಳು ಎದುರಾದವು ಜೊತೆಗೆ .
ಈ ವರ್ಷ ಮತ್ತೊಂದು ಸಂತಸದ ಸುದ್ದಿ ಹಬ್ಬಿಸಿತು ಸರಕಾರಿ ಶಾಲೆಗಳತ್ತ ಪೋಷಕರು ಮುಖಮಾಡಿದರು ! ಎಂಬುದು .
ಆದರೆ ಇನ್ನು ಶಿಕ್ಷಣ ಯಕ್ಷ ಪ್ರಶ್ನೆ ಯಾಗಿ ಉಳಿದಿದೆ…..
ಈ ಕರೋನ ಕಲಿಸಿದ ಪಾಠ ಹಲವು ಭೋದಿಸಿದ ತತ್ವ ಹಲವು .ಬದುಕಿಗೆ ಪ್ರೀತಿ ಬೇಕೇ ಹೊರತು ಹಣ ,ಅಧಿಕಾರ ಅಲ್ಲ ಎಂಬ ಸ್ಪಷ್ಟ ನೀತಿ ತುಸು ಹೆಚ್ಚಾಗಿಯೇ ತಿಳಿಸಿದೆ .
ಮುಂದಿನ ದಿನಗಳು ಕರೋನಾ ಮತ್ರ ಅಲ್ಲ ನಮ್ಮೊಳಗಿನ
ಅಪಾರವಾದ ಈರ್ಷೆಯ ಪರ್ವತ ವು ಮರೆಯಾಗಿ ಹೋಗಲಿ ಎಂಬ ಬಹುದೊಡ್ಡ ಭರವಸೆ ಇದೆ ! ಈ ನವ ವರ್ಷದಲ್ಲಿ .
ಮರೆತ ಕೆಲಸ ಮಾಡುವಂತೆ , ಕನಸುಗಳು ಸಾಕಾರಗಳ್ಳುವಂತೆ ಜಡವಾದ ಮನಕ್ಕೆ ನವ ಚೈತನ್ಯವ ನೀಡಲಿ ಎಂದು ಮುಂಬರುವ ವರ್ಷವನ್ನು ನಾವು ಸ್ವಾಗತಿಸ ಬೇಕಿದೆ ಸರಳವಾಗಿ .
***************************************
ನಿಮ್ಮ ಮಾತು ಸತ್ಯ.. ಕೊರೋನಾ ಕಲಿಸಿದ ಪಾಠ ಮರೆತರೂ ಮರೆಯಲಾಗದು.
ನೂತನ ವರುಷದಾರಂಭ ಹೊಸ ಭರವಸೆಗಳೊಂದಿಗೆ ಶುರುವಾಗಲಿ☺️