ಗುಲಾಬಿ ಮುಖ

ಗುಲಾಬಿ ಮುಖ

ಕವಿತೆ ಗುಲಾಬಿ ಮುಖ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಚೆನ್ನ ಮಲ್ಲಿಕಾಜು೯ನನಮುರಿದ ಅಲುಗು ಎದೆಯಲ್ಲಿನರಳುವ ನೋವು ಎಂದ ಅಕ್ಕನ ನೋವು ನೋಯದವರೆತ್ತ ಬಲ್ಲರು ? ನಿನ್ನ ಪದ ಪದಗಳುಹೆಜ್ಜೆ ಹೆಜ್ಜೆಗೂ ನನ್ನ ಊರು ಪಾದಗಳನ್ನು ಬಗೆದುಎದೆಯಲ್ಲಿ ಮುರಿದ ಅಲುಗುಗಳಾದರೂನೆತ್ತರು ಸುರಿಯುವ ಹೃದಯದಲ್ಲಿ ನೀನು ಹೂವಂತೆ ಅರಳುತ್ತಿರುತ್ತಿನನ್ನ ಕವನಗಳ ಒಳಗಿಂದಲೇ ಪದ ಪದಗಳ ಮುಳ್ಳುಗಳನ್ನೊಡೆದು ಗುಲಾಬಿಮುಖವರಳಿಸಿ ಮುಗುಳು ನಗುತ್ತಲೇ ಇರುತ್ತಿ … ನಿನ್ನ ನಾಲಗೆ ಚೂರಿಯಾದರೂನನ್ನ ಹೃದಯ ಕೇಕಾಗಿಯೇ ಇರುತ್ತದೆತುಂಡು ತುಂಡುಗಳು ಬಾಯ್ತೆರೆದುನೀನು ನನ್ನ ಎದೆಯಲ್ಲಿ ಹುಟ್ಟಿದದಿನವನ್ನು ನೆನಪಿಸಿಕೊಳ್ಳುತ್ತನಿನ್ನ ಮುಂದೆ‘ಹ್ಯಾಪಿ ಬತ್೯ಡೇ […]

ಪರಿಮಳದ ಹನಿಗಳು

ಪುಸ್ತಕ ಸಂಗಾತಿ ಪರಿಮಳದ ಹನಿಗಳು “ಸಖ ಸತ್ತ ಹೃದಯ ಮಸಣ ಸೇರಿತು ನಿನ್ನ ಕುಡಿಮೀಸೆಯ ಕುಂಚ ದಿಂದ ತುಟಿಯ ಮಾಸ್ತಿಗಲ್ಲಿಗೆ ಹೆಸರು ಬರೆದುಬಿಡು ಭಗ್ನ ಪ್ರೇಮಿಗಳು ಅಧ್ಯಯನಕ್ಕೆ ಬರುತ್ತಾರೆ”. ಇದು ಎ. ಎಸ್. ಮಕಾನದಾರ ಅವರ “ಪ್ಯಾರಿ ಪದ್ಯ” ಹನಿಗವನ ಸಂಕಲನದ ಒಂದು ಹನಿ. “ ಮನಸ್ಸಿನ ಆಳದಲ್ಲಿ ಮುದಿವಯಸ್ಸಿನವರಿಗಿಂತ ಯುವ ಜನರೇ ಹೆಚ್ಚು ಏಕಾಂಗಿತನವನ್ನು ಅನುಭವಿಸುತ್ತಾರೆ” ಅನ್ನೋ  ಮಾತಿದೆ. ಆ ಏಕಾಂತಕ್ಕೆ ಸಂಗಾತಿಯೇ ಕವಿತೆ.  ಇಲ್ಲಿರುವ ಹನಿಗವನಗಳು ಪ್ರೀತಿ, ಪ್ರೇಮ ವಿರಹ ಹಾಗೂ ಶೋಷಣೆಯ ವಿರುದ್ಧ […]

ಪ್ರೀತಿಯೆಂದರೆ

ಪ್ರೀತಿಯೆಂದರೆ ಅರುಣಾ ನರೇಂದ್ರ ಪ್ರೀತಿ ಎಂದರೆಬೇರೇನೂ ಅಲ್ಲಅದು ನಿನ್ನ ನೋಟಕಣ್ಣರೆಪ್ಪೆಗಳ ಹುಡುಕಾಟ ಪ್ರೀತಿ ಎಂದರೆನಾನು ನಿನ್ನ ನೀನು ನನ್ನತಿಳಿದುಕೊಳ್ಳುವುದುಸೆಳೆದುಕೊಳ್ಳುವುದು ಪ್ರೀತಿ ಎಂದರೆಒಣಗಿದ ಮರಚಿಗುರುವುದುಹೂ ಅರಳುವುದು ಪ್ರೀತಿಯೆಂದರೆನನಗೆ ನೀನು ನಿನಗೆ ನಾನುಗಂಧ ತೇಯುವುದುಗಾಳಿಯಲಿ ತೂರುವುದು ಪ್ರೀತಿ ಎಂದರೆನಿನಗಾಗಿ ಬರೆದಕವಿತೆಯ ಸ್ವಗತಕಡಲಿನ ಮೊರೆತ *******************************

ನನ್ನ-ಅವಳು

ನನ್ನ-ಅವಳು ಸಿದ್ಧರಾಮ ಕೂಡ್ಲಿಗಿ ನನ್ನ ಅವಳು ನನ್ನೆದೆಯೊಳಗಿನ ಪುಟ್ಟ ಹಣತೆ ನೋವು, ನಿರಾಸೆ, ದು:ಖಗಳಾದಾಗಲೆಲ್ಲ ಪಟ್ಟನೆ ಬೆಳಗಿ ಕತ್ತಲೆಯ ದೂಡುವ ಒಳಬೆಳಕು – ನನ್ನ ಅವಳು ಸಾಗರದ ಅಲೆಗಳನ್ನೆಲ್ಲ ತನ್ನ ಹೆರಳೊಳಗೆ ಸುರುಳಿಯಾಗಿಸಿಕೊಂಡು ನನ್ನೆದೆಯ ತೀರಕೆ ಒಲವಿನ ಮುತ್ತಿಕ್ಕುವ ತಣ್ಣನೆಯ ಸಿಂಚನ – ನನ್ನ ಅವಳು ಪ್ರೇಮದ ಹಸಿರ ಮೇಲೆ ಒರಗಿ ಆಗಸವ ನೋಡಿದಾಗಲೆಲ್ಲ ಕಾಣಸಿಗುವ ಬೆಳ್ಮೋಡದ ಸುಂದರ ನಗೆ – ನನ್ನ ಅವಳು ದಣಿವಾದಾಗಲೆಲ್ಲ ಮೈಮನದ ತುಂಬ ಜುಳುಜುಳುನೆ ಹರಿದು ಪ್ರೀತಿಯ ಕಚಗುಳಿಯಿರಿಸಿ ನಕ್ಕುನಲಿಸುವ ಜೀವ-ನದಿ […]

ಒಲವಾಗಿ ಬಿಡೋಣ ನಳಿನ ಡಿ. ಎಲ್ಲದರಂತಲ್ಲದ ಈ ರೋಸುಆತ್ಮಕೆ ಅಂಟಿಸಿದವರ್ಯಾರು?ಗುಡಿಸಿದಷ್ಟೂ ಕಾಮದ ಕಸ,ತೊಳೆದಷ್ಟೂ ಪ್ರೇಮದ ನೊರೆ,ಉಳಿ ಪಿಡಿದು ಕೆತ್ತಿಸಿದವರ್ಯಾರು?ನಿನ್ನೆದೆಯಲಿ ನನ್ನ? ಬಹು ಜೋಕೆ ಹುಡುಗಾ,ನೀ ನಡೆಯುತಿರುವುದುಕತ್ತಿಯಂಚಿನ ಮೇಲೆ..ಸೀರೆಯ ಸೆರಗ ಮೇಲೆಲ್ಲಾ,ನಿನ್ನ ಹೆಸರಿನ ಕಸೂತಿಉಟ್ಟ ಮೈ ಜುಂ ಅಂದಾಗನಿನ್ನಲ್ಲೂ ತಲ್ಲಣ ಬುದ್ದ ಇದಿರಾದಂತೆ,ತೆವಲಿನ ಜಗತಿಗೆಪ್ರೇಮ ತೆರೆದಿದೆಕಾಮದ ಕೊರಳಿಗೆ..ಎಲ್ಲೆಲ್ಲೂ ಜಯಿಸಿದಬುದ್ದನಂತೆ,ಪ್ರೇಯ ಜಯಿಸಿರಲುನೀನೂಸುಮ್ಮನೇ ಕಾರಣ ಹೇಳದೆಬಂದುಬಿಡಬಹುದುಕಾದವಳ ಅಗ್ನಿಪರೀಕ್ಷೆಗೆವರವಾಗಿ.. ಬಲ್ಲಂಥವರ ಮಾತಲ್ಲಪ್ರೇಮ?ಮೂಗನ ಹಾಡಿನಂತೆ..ಬಾ ದೂರದ ಮರಳುನಾಡಿನಪಯಣಕೆ ಓಯಸಿಸ್ ನಂತೆನಿಂತ ಜಲವಾಗಿಒಲವಾಗಿ ಬಿಡೋಣ.. **********************************************

ಸಿನಿಮಾ ಅಲ್ಲ… ಜೀವನ

ಸಿನಿಮಾ ಅಲ್ಲ… ಜೀವನ ಮಧುರಾ ಕರ್ಣಮ್             ಬಾಲಸೂರ್ಯ ತನ್ನ ಹೊಂಗಿರಣಗಳನ್ನು ಸೂಸುತ್ತಿದ್ದಂತೆ ರಾಜರಥದ ಹೊರಭಾಗದಲ್ಲಿ ಅಂಟಿಸಿದ್ದ ಗಣೇಶನ ಚಿತ್ರದ ಮೇಲೆ ಬೆಳಕು ಪ್ರತಿಫಲಿತವಾಗಿ ಗಣೇಶ ಹೊಳೆಯತೊಡಗಿದ್ದ. ಅದೇ ತಾನೆ ತಟ್ಟೆ ಇಡ್ಲಿ ತಿಂದು ‘ಅ..ಬ್’ಎಂದು ತೇಗಿ ಮೇಲೊಂದು ಲೋಟ ಕಾಫಿ ಇಳಿಸಿ ಸಂತೃಪ್ತನಾಗಿ ಒಮ್ಮೆ ಹೊಟ್ಟೆಯ ಮೇಲೆ ಕೈಯಾಡಿಸಿಕೊಂಡೆ. “ನಿತ್ಯ ಹೊರಗೇ ಏಕೆ ತಿಂಡಿ ಮಾಡಾದು? ಮನೆಗೆ ಬಂದ್ರೆ ಒಳ್ಳೆ ತಿಂಡಿ ಹಾಕಾಕಿಲ್ವ?”ಎಂಬ ಅಮ್ಮನ ಕೋಪದ ನುಡಿಗಳು ನೆನಪಾಗಿ ನಗು ಸೂಸಿತು. ಬೆಳಿಗ್ಗೆ ಆರು ಗಂಟೆಗೆಲ್ಲ […]

ಒಲವಧಾರೆ ಜಯಶ್ರೀ.ಭ.ಭಂಡಾರಿ. ಬದುಕು‌ ಅದ್ಹೇಗ್ಹೆಗೊ ಸಾಗಿತ್ತು ತನ್ನ ಪಾಡಿಗೆಮಧ್ಯರಾತ್ರಿ ಫೋನ ರಿಂಗಣಿಸಿ ಹಾಡಿತುಭಯದಲಿ ಕಣ್ಣುಜ್ಜುತ್ತಾ ಹಲೋ ಎಂದೆಕಂಗ್ಲೀಷಿನಲ್ಲಿ‌ ಏನೋ ಉಲಿಯಿತುಒರಟು ದನಿ.. ಮತ್ತೆ ಮತ್ತೆ ಫೋನ ರಿಂಗುಣಿಸಿ ಹೇಗೋನಂಟಿನ ಗಂಟು ಶುರುವಾಯಿತುಹೀಗೆ‌ ಬಂದ ನೀನು ಹಾಗೆ ಹೋಗುವೆಅಂದುಕೊಂಡಿದ್ದೆ ಆದರೆ ಆದದ್ದೆ ಬೇರೆ. ಮನದ ಕಾಮನ ಬಿಲ್ಲು ಕಮಾನು ಕಟ್ಟೀತುಅಂದುಕೊಂಡಿರಲಿಲ್ಲ ಆಗಂತುಕನೆ..ನೀನು ಗೆಳೆಯನೇ ನೂರು ಬಾರಿ ಯೋಚಿಸಿದೆನಿನ್ನ ನಿನ್ನೆಗಳ ಬಗ್ಗೆ ನನಗ್ಯಾವ ಆಸಕ್ತಿಯಿಲ್ಲ. ನನ್ನ ನಾಳೆಗಳು ಏನಾಗುತ್ತವೆಯೋ ತಿಳಿದಿಲ್ಲ.ನಾವಿಬ್ಬರೂ ಒಂದಾಗಿ ಪಯಣಿಸಲು ಸಾದ್ಯವೆಒಂದೇ ದೋಣಿಯಲಿ ಸಾಗುವದು ಸಾಧುವೆ.ಹಂಬಲದ ಹರಿಗೋಲು […]

ಪ್ರೇಮಮೂರುತಿ ಆಶಾ ಆರ್ ಸುರಿಗೇನಹಳ್ಳಿ ಬಿಕ್ಕುತ್ತಿದ್ದವು..ಮೌನವೊದ್ದು,ಸೊರಗುತ್ತಿದ್ದ ಕನಸುಗಳು..ಹಗಲು-ರಾತ್ರಿಗಳ ಪರಿವಿಲ್ಲದೆ,ಏರುತ್ತಿದ್ದ ನಶೆಗೂ..ನಿಶೆಯ ಗಾಢ ಮೌನವೇಒಲವ ಆಲಿಂಗನ. ಮಡುಗಟ್ಟಿದ ನೋವುಗಳುಅಧರಗಳ ಕಂಪಿಸಿತೋಯಿಸುವಾಗ..ವಿರಹಕ್ಕಾಗಿ ಚಡಪಡಿಕೆಯೊ?ಸನಿಹಕ್ಕಾಗಿ ಬೇಡಿಕೆಯೊ?ಅಶ್ರುವಿಗೂ ಗೊಂದಲ ಮೂಡಿಉರುಳುರುಳಿ ಸತ್ತವು.. ನೋವುಗಳೊ? ನೆನಪುಗಳೊ?ಖಾಲಿಯಾದ ದುಃಖ,ಉಳಿಸಿದ್ದೇನೆಂಬುದೇ ಗುಟ್ಟುಬಯಸಿದ್ದು ಮಾಯಾಜಿಂಕೆಯಂತೆಸರಿಯುತ್ತಲೇ ಇತ್ತು.. ಒಲವಾಂಕುರ ಜಿನುಗುತಾಪುಟಿ ಪುಟಿದು ನೆಗೆವಾಗಅವಳ ಒದ್ದಾಟವೆಲ್ಲಾನಿರರ್ಥಕವಾಗಿ..ಒಲುಮೆಯ ಘಮಲುಬಿಡದೆ ಪಸರಿಸುತಿತ್ತು.. ಆ ನೋವು-ನಲಿವ ಮಂಥನದಲೂನೋವಿನದೆ ಮೇಲುಗೈ ಆದಾಗವಿಷಕಂಠನಂತವಳುದಿನವೂ ನೊವನುಣ್ಣುತಾಭರವಸೆಯ ದೀವಿಗೆ ಬೆಳಗುತಾಒಲವ ದೀಪವಚ್ಚುವಪ್ರೇಮಮೂರುತಿಯಾದಳು..ದೀಪದ ಬೆಳಕಲಿಬದುಕಿನ ಸತ್ಯವ ಕಂಡಳು..! ********************************

ಹರಿಯೇ ಪ್ರೇಮಗಂಗೆ…. ವಿನುತಾ ಹಂಚಿನಮನಿ ಅಂದು ನೀನೂರಿದ ಪ್ರೀತಿಯ ಬೀಜಚೆಂದದಿ ಬೇರೂರಿ ಮನದಲಿ ಬೆಳೆದಿತ್ತುಕೊಂದು ಹಾಕಿದರೂ ನೀ ಕೈಯಾರೆ ಕಿತ್ತುಮತ್ತೆ ಮತ್ತೆ ಚಿಗುರಿ ಕೊನರಿ ಕೊನೆಗೆಸತ್ತುಹೋಗುವ ಬದಲು ಜೀವ ಹಿಡಿದುಸುಪ್ತವಾಗಿದೆ ನೆಲದಾಳದಲಿ ಉಳಿದು ಅಂದು ನೀನುರಿಸಿದ ಒಲವ ದೀವಿಗೆಗೆಲುವಾಗಿ ಉರಿದು ಬೆಳಕ ಚೆಲ್ಲಿತ್ತುಬಿರುಗಾಳಿಯ ಹೊಡೆತ ಸಹಿಸಿತ್ತುನಿನ್ನ ಪ್ರೀತಿಯ ತೈಲವಿಲ್ಲದೆ ಇಂದುಉರಿಯುವ ಛಲ ಬಿಡದೆ ಮುರುಟಿಬರಿ ಬತ್ತಿ ಸುಟ್ಟು ಹೋಗುತಿದೆ ಕರಟಿ ಅಂದು ನೀ ಹರಿಸಿದ ಪ್ರೇಮಗಂಗೆರಭಸದಿಂದ ಮೈದುಂಬಿ ಹರಿದಿತ್ತುನಿನ್ನ ಸೇರುವ ಆಸೆಯಲಿ ಸಾಗಿತ್ತುಭರವಸೆ ಕಾಣದಿರಲು ತಡವರಿಸಿದೆಅಡೆತಡೆಗಳಿಗೆ ಬೇಸತ್ತು […]

ವ್ಯಾಲೆಂಟನ್ಸ ಡೇ ಹನಿಗಳು ನಾಗರಾಜ್ ಹರಪನಹಳ್ಳಿ ೧-ಅವಳ ಎದೆ ಬಗೆದುನೋಡಿಅಲ್ಲಿ ಸಿಗುವುದು ಇನಿಇನಿ ಎಂದರೆ ಬೇರಾರೂ ಅಲ್ಲಅದು ಇಬ್ಬನಿಯ ಹನಿ -೨- ಏಕಾಂತದಲಿಸುಮ್ಮನಿದ್ದರೂಪಿಸುಗುಟ್ಟಿದಂತಾಗುವುದುಪ್ರೇಮ -೩- ನೀನು dp ಕಾಣದಂತೆಮಾಡಬಹುದುಮೆಸ್ಸೆಜ್ ಸಹ ಮಾಡದಿರಬಹುದುಅಂತಿಮವಾಗಿ ನಿನ್ನ ಬಿಂಬದನೆನಹು ನಾನೇ -೪-ನಿನ್ನ ಹೃದಯವನ್ನುಕೇಳುಅದರ ಮಾತ ಆಲಿಸುಅಲ್ಲಿನ ಪಿಸುಮಾತು ಇನಿ -೫-ಏನಾದರೂ ಏನಂತೆಗೋಡೆ ಕಟ್ಟಿಆಣೆ ಮಾಡಿಸಿಕೊಂಡುತಡೆದಿರಬಹುದು ನಿನ್ನನಿನ್ನ ಮೊದಲ ಮತ್ತುಕೊನೆಯ ಆಯ್ಕೆನಾನೇ ….ಹಾಗೆಂದು ನೀ ಹೇಳಿದಮಾತುನನ್ನ ಸುತ್ತ ಗಿರಕಿ ಹೊಡೆಯುತ್ತಿದೆ -೬-ಪ್ರೇಮಿಸುವುದ ಕಲಿಸಿನೀ ಹಠಾತ್ಹೊರಟು ಹೋಗಬಹುದು ಎಂದುನಾ ಕನಸಲ್ಲೂ ಯೋಚಿಸಿರಲಿಲ್ಲಹಾಗೆ ಹೋರಟು ಹೋದಮೇಲೆಇಷ್ಟು […]

Back To Top