ಕವಿತೆ
ಗುಲಾಬಿ ಮುಖ
ಡಾ.ಕಾತ್ಯಾಯಿನಿ ಕುಂಜಿಬೆಟ್ಟು
ಚೆನ್ನ ಮಲ್ಲಿಕಾಜು೯ನನ
ಮುರಿದ ಅಲುಗು ಎದೆಯಲ್ಲಿ
ನರಳುವ ನೋವು ಎಂದ ಅಕ್ಕನ ನೋವು ನೋಯದವರೆತ್ತ ಬಲ್ಲರು ?
ನಿನ್ನ ಪದ ಪದಗಳು
ಹೆಜ್ಜೆ ಹೆಜ್ಜೆಗೂ ನನ್ನ ಊರು ಪಾದಗಳನ್ನು ಬಗೆದು
ಎದೆಯಲ್ಲಿ ಮುರಿದ ಅಲುಗುಗಳಾದರೂ
ನೆತ್ತರು ಸುರಿಯುವ ಹೃದಯದಲ್ಲಿ ನೀನು ಹೂವಂತೆ ಅರಳುತ್ತಿರುತ್ತಿ
ನನ್ನ ಕವನಗಳ ಒಳಗಿಂದಲೇ ಪದ ಪದಗಳ ಮುಳ್ಳುಗಳನ್ನೊಡೆದು ಗುಲಾಬಿ
ಮುಖವರಳಿಸಿ ಮುಗುಳು ನಗುತ್ತಲೇ ಇರುತ್ತಿ …
ನಿನ್ನ ನಾಲಗೆ ಚೂರಿಯಾದರೂ
ನನ್ನ ಹೃದಯ ಕೇಕಾಗಿಯೇ ಇರುತ್ತದೆ
ತುಂಡು ತುಂಡುಗಳು ಬಾಯ್ತೆರೆದು
ನೀನು ನನ್ನ ಎದೆಯಲ್ಲಿ ಹುಟ್ಟಿದ
ದಿನವನ್ನು ನೆನಪಿಸಿಕೊಳ್ಳುತ್ತ
ನಿನ್ನ ಮುಂದೆ
‘ಹ್ಯಾಪಿ ಬತ್೯ಡೇ ಟೂ ಯೂ..’ ಹಾಡುತ್ತ
ಮೇಣದ ಬತ್ತಿ ಊದಿ ಆರಿಸುವ ನಿನ್ನ ಹಿಂದೆ ಕತ್ತಲಿಗೆ ಮುಖ ಮಾಡಿ ಎದೆಯು ಒಳಗೊಳಗೇ ಬಿಕ್ಕಿಬಿಕ್ಕಿ ಅಳುವ ಕಂಬನಿಗಳನ್ನು
ಆಗಸದ ಒಂದು ತುಂಡು ಕಚೀ ೯ಫಲ್ಲಿ ಒರಸಿಕೊಂಡು
ಅವು ಕಾಮೋ೯ಡಗಳಾಗಿ
ಮಳೆ ಸುರಿಯುವುದನ್ನೇ ನೋಡುತ್ತ…
ಬೆನ್ನು ತಿರುವಿ ನಡೆದ ನಿನ್ನ ನೆರಳನ್ನು
ದೀಪ ಹಿಡಿದು ಹಿಂಬಾಲಿಸುತ್ತ
ಒಳಗಿನ ಕತ್ತಲಲ್ಲಿ ಕುಳಿತ ನನ್ನನ್ನು
ಆತ್ಮದಲ್ಲೇ ಸಂತೈಸಿಕೊಳ್ಳುತ್ತ…
*****************************************
ಬೆನ್ನು ತಿರುವಿ ಹೊರಡುವರಿಗೇನೂ ಕೊರತೆಯಿಲ್ಲ, ಕವನದ ಧ್ವನಿ