ಒಲವಧಾರೆ

ಜಯಶ್ರೀ.ಭ.ಭಂಡಾರಿ.

Heart-shaped Red Neon Signage

ಬದುಕು‌ ಅದ್ಹೇಗ್ಹೆಗೊ ಸಾಗಿತ್ತು ತನ್ನ ಪಾಡಿಗೆ
ಮಧ್ಯರಾತ್ರಿ ಫೋನ ರಿಂಗಣಿಸಿ ಹಾಡಿತು
ಭಯದಲಿ ಕಣ್ಣುಜ್ಜುತ್ತಾ ಹಲೋ ಎಂದೆ
ಕಂಗ್ಲೀಷಿನಲ್ಲಿ‌ ಏನೋ ಉಲಿಯಿತು
ಒರಟು ದನಿ..

ಮತ್ತೆ ಮತ್ತೆ ಫೋನ ರಿಂಗುಣಿಸಿ ಹೇಗೋ
ನಂಟಿನ ಗಂಟು ಶುರುವಾಯಿತು
ಹೀಗೆ‌ ಬಂದ ನೀನು ಹಾಗೆ ಹೋಗುವೆ
ಅಂದುಕೊಂಡಿದ್ದೆ ಆದರೆ ಆದದ್ದೆ ಬೇರೆ.

ಮನದ ಕಾಮನ ಬಿಲ್ಲು ಕಮಾನು ಕಟ್ಟೀತು
ಅಂದುಕೊಂಡಿರಲಿಲ್ಲ ಆಗಂತುಕನೆ..
ನೀನು ಗೆಳೆಯನೇ ನೂರು ಬಾರಿ ಯೋಚಿಸಿದೆ
ನಿನ್ನ ನಿನ್ನೆಗಳ ಬಗ್ಗೆ ನನಗ್ಯಾವ ಆಸಕ್ತಿಯಿಲ್ಲ.

ನನ್ನ ನಾಳೆಗಳು ಏನಾಗುತ್ತವೆಯೋ ತಿಳಿದಿಲ್ಲ.
ನಾವಿಬ್ಬರೂ ಒಂದಾಗಿ ಪಯಣಿಸಲು ಸಾದ್ಯವೆ
ಒಂದೇ ದೋಣಿಯಲಿ ಸಾಗುವದು ಸಾಧುವೆ.
ಹಂಬಲದ ಹರಿಗೋಲು ಹಾರೈಸಲಿ ಒಲವೇ..

ಮೊದಮೊದಲು ಆಸಕ್ತಿಯಿಲ್ಲದ ಭಾವನೆಗಳು
ಈಗ ನಿನ್ನ ನೆನಪುಗಳಿಗೆ ಮುಪ್ಪು ಎನ್ನುವುದೇ ಇಲ್ಲ
ಸದಾ ನಿನ್ನ ನೆನಪಲಿ ಬೆಂದ ಹೃದಯದ ಜ್ವರಕೂ
ನಿನ್ನ ನೆನಪೆ ಮದ್ದು ಕಣೋ ಮಹಾರಾಯಾ

ಮಲಗಿದ್ದ ಭಾವನೆಗಳನ್ನು ಬಡಿದೆಬ್ಬಿಸುವ ಹಠ
ಏತಕೋ ಹೇ ಗೆಳೆಯ ಅರಿಯೆ ನಾ ಹೇಳು ನೀ
ಈ ಬದುಕನ್ನು ಎಲ್ಲಿಗೆ ಕೊಂಡೊಯ್ಯುತ್ತಿ
ಯಾವ ದಡ ಸೇರಿಸುತ್ತಿ ನದಿಯಾಗಿ ಹರಿದು ಬರಲೇ.

ನೀನಾಡಿದ ಮಾತುಗಳನ್ನೇ ಹೆಕ್ಕಿ ಹೆಕ್ಕಿ
ಕವನವಾಗಿರಿಸಿರುವೆ ನೋಡು ಬಾ ಗೆಳೆಯಾ
ಮಿಂದ ಕಣ್ಣಂಚು ಅದರುವ ಅಧರಗಳು
ಕಾಯುತ್ತಿವೆ ನಿನ್ನಾಗಮನಕ್ಕಾಗಿ …
ಪ್ರೀತಿಯಿಲ್ಲದೆ ಜಗವಿಲ್ಲ ಮತ್ತೆ ಮತ್ತೆ ಸಾಬಿತಾಗಲಿ.*

************************************

2 thoughts on “

Leave a Reply

Back To Top