ಒಂದು ತಪ್ಪು ಗಂಟು

ಒಂದು ತಪ್ಪು ಗಂಟು

ಒಂದು ತಪ್ಪು ಗಂಟು ಎಸ್.ನಾಗಶ್ರೀ ಅದು ಕಾರ್ತೀಕ ಮಾಸದ ಪ್ರಾರಂಭದ ದಿನಗಳು. ಸಂಜೆ ಬೇಗ ಕಳೆದು ರಾತ್ರಿಯ ಚಾದರ ಹೊದ್ದು ಸುತ್ತಲೂ ಕತ್ತಲು. ಪ್ರತಿಮನೆಯ ಮುಂದೂ ಬೆಳಗುವ ಹಣತೆಗಳು. ಪ್ರಕಾಶ್ ರೆಡ್ಡಿ ಅಂದೂ ಸಂಜೆ ಏಳರ ಸಿಗರೇಟ್ ಹಚ್ಚಿ ಮನೆಯ ಮುಂದೆ ಕುರ್ಚಿ ಹಾಕಿ ಕುಳಿತಿದ್ದ. ಚಳಿ ಏಕೋ ಮೂಳೆಗಿಳಿಯುವಷ್ಟು ಏರಿದೆ ಎನಿಸಿ ಬಿಸಿ ಕಾಫಿಗೆ ಸೈಲೂ ಎಂದು ಕೂಗಿ, ಅರೆಘಳಿಗೆ ಹಿಂದಕ್ಕೆ ಒರಗಿದ. ಬೇಡಬೇಡವೆಂದರೂ ಪ್ರತಿ ಕಾರ್ತೀಕದಲ್ಲಿ ನೆನಪಾಗಿ ಹೃದಯ ಭಾರವಾಗುವ ಆ ಘಟನೆಯ ಕಿಡಿ […]

ತಮಟೆ ಬೇಕಾಗಿದೆ

ಕವಿತೆ ತಮಟೆ ಬೇಕಾಗಿದೆ ಎನ್.ರವಿಕುಮಾರ್ ಟೆಲೆಕ್ಸ್ ನನ್ನ ತಮಟೆ ಹರಿದು ಹೋಗಿದೆ ಎದೆಯಗಲ ಚರ್ಮ ಬೇಕಾಗಿದೆಸತ್ತ ದನದ್ದು…. ತಮಟೆ ಸದ್ದಿನೊಳಗೆದುಃಖ ದೂರುಗಳ ಜಗಕೆಆಡಿ ಹಗುರಗೊಳ್ಳಬೇಕಿದೆ ಜುಂಗು ಕಿತ್ತು ರಂಪಿಗೆ ಆಡಿಸಿಅಡಗಲ್ಲಿನಲ್ಲಿತಟ್ಟಿ ಹದ ಮಾಡಿಹದಿನಾರು ಎಳೆ ಬಿಗಿದುಎಳೆ ಬಿಸಿಲಿಗಿಡಿದುಅಲುಗು ಅಲುಗಿಗೂ…ಕಂಟ ಕಾವು ರಣಬಾಜಿ,ಹುಲಿ ಹೊಡೆತಎರಡೇಟು…ಗಸ್ತಿನೋವು ನೀಗಿಸಿಕೊಳ್ಳಬೇಕಿದೆಶತಮಾನಗಳದ್ದುಈಗೀಗ ವರ್ತಮಾನದ್ದೂ…. ಸತ್ತದನವೊಂದಿದ್ದರೆಕೊಟ್ಟು ಬಿಡಿನನ್ನ ತಮಟೆ ಹರಿದು ಹೋಗಿದೆ.// ಕಾಡುಕತ್ತಲೆಬಿಳಿಯ ತೊಗಲ ದೊರೆ ದೇಶ ತೊಲಗಿದಕರಿಯ ತೊಗಲ ಬಿಳಿಯ ಬಟ್ಟೆದೇಶ ಜನರ ಬಗೆ ಬಗೆದುಸುಲಿತಿದೆ ಹಾಡಹಗಲೆಸುಳ್ಳು ಮಾತು ಕಳ್ಳನಡೆಪೊಳ್ಳು ಧರ್ಮದ ಇಷವಯ್ಯಸತ್ತಂತಿಹರನು ಬಡಿದೆಚ್ಚರಿಸಲುತಮಟೆಯೊಂದು […]

ಹೊಸ ಅಂಕಣ ಧಮ್ಮಲಾಲ್ ಛೋಪ್ರಾ ತೆಲುಗು ಮೂಲ : ಮಧುರಾಂತಕಂ ನರೇಂದ್ರಕನ್ನಡಕ್ಕೆ : ಕುಂ. ವೀರಭದ್ರಪ್ಪಪ್ರ : ಆಕೃತಿ ಪುಸ್ತಕ, ಬೆಂಗಳೂರುಪ್ರಕಟಣೆಯ ರ್ಷ : ೨೦೧೭ಬೆಲೆ : ರೂ.೧೦೦ಪುಟಗಳು : ೧೧೨ ವಿಶಿಷ್ಟ ಕಥಾವಸ್ತು, ತಂತ್ರ ಮತ್ತು ವಿನ್ಯಾಸಗಳಿರುವ  ಈ ಕಾದಂಬರಿಯಲ್ಲಿ  ನಡೆಯುವ ಹೆಚ್ಚಿನೆಲ್ಲ ಘಟನೆಗಳು ಮತ್ತು ಪಾತ್ರಗಳು ಎದುರಾಗುವ ಸನ್ನಿವೇಶಗಳು ಆಮ್‌ಸ್ಟರ್‌ಡಾಂ ನಗರದ ವಿಮಾನ ನಿಲ್ದಾಣದಲ್ಲಿ ನಡೆಯುತ್ತವೆ . ಕಥೆಯ ನಿರೂಪಕ ವಿಚಿತ್ರ ಹೆಸರಿನ ಗರ‍್ರಂಕೊಂಡ ಗರ‍್ರಂ ಪುರೌತು. ಜೈಸಲ್ಮೇರ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ.  ಆತ ಮೆಕ್ಸಿಕೋದಲ್ಲಿ […]

ಎಲೆಗಳ ಬಲೆಯಲ್ಲಿ…

ಲಲಿತ ಪ್ರಬಂಧ ಎಲೆಗಳ ಬಲೆಯಲ್ಲಿ…                                                             ಟಿ.ಎಸ್.ಶ್ರವಣಕುಮಾರಿ ಈ ಹದಿಮೂರು ಎಲೆಗಳಿಗೊಂದು ವಿಶಿಷ್ಟ ಆಕರ್ಷಣೆಯಿದೆ, ಸೆಳೆತವಿದೆ. ಕೆಲವರು ರಮ್ಮಿ, ಬ್ರಿಡ್ಜ್‌, ಮೂರೆಲೆ ಎನ್ನುತ್ತಾ ಇಸ್ಪೀಟಿನ ಹಿಂದೆ ಬಿದ್ದರೆ, ಇನ್ನು ಕೆಲವರು ಸಾಲಿಟೇರ್‌, ಫ್ರೀಸೆಲ್‌ ಎನ್ನುತ್ತಾ ಕಂಪ್ಯೂಟರಿನಲ್ಲಿ ಅದೇ ಹದಿಮೂರು ಎಲೆಗಳಲ್ಲಿ ಅಡಗಿಕೊಂಡಿರುತ್ತಾರೆ. ʻಅಂದರ್‌ ಬಾಹರ್‌ ಅಂದರ್‌ ಬಾಹರ್‌ʼ ಎಂದು ಕೋರಸ್‌ನಲ್ಲಿ ಗುನುಗುತ್ತ ʻಎಕ್ಕ ರಾಜ ರಾಣಿ ನನ್ನ ಕೈಯೊಳಗೆ, ಹಿಡಿಮಣ್ಣು ನಿನ್ನ ಬಾಯೊಳಗೆʼ ಎಂದು ಹಾಡುತ್ತ ಜಾಕಿ ಚಲನಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ತನ್ನೆಲ್ಲಾ ಅಭಿಮಾನಿಗಳನ್ನೂ ವಶೀಕರಣ ಮಾಡಿಕೊಂಡಿದ್ದು […]

ಅಂಕಣ ಬರಹ ಅರಿತವರ ಮರೆತು ಸಾಗುವುದೆಂದರೆ … ನಮ್ಮನ್ನು ನಾವು ಹುಡುಕಿಕೊಳ್ಳುವುದು ಎಂದರೆ ಏನು? ನಮ್ಮೊಳಗೆ ನಾವು ಇಳಿಯುವುದು ಎಂದರೆ ಏನು? ನಮಗೇ ಕಾಣದ ನಮ್ಮನ್ನು ಕಂಡುಕೊಳ್ಳುವುದು ಎಂದರೆ ಏನು? ಮತ್ತೆ ಈ ಧಾವಂತದ ಬದುಕಲ್ಲಿ ಅದಕ್ಕೆ ತಗುಲುವ ಸಮಯವನ್ನು ಉಳಿಸಿಟ್ಟುಕೊಳ್ಳುವ ವ್ಯವಧಾನವಾದರೂ ನಮ್ಮಲ್ಲಿ ಉಳಿದಿದೆಯಾ… ಇಂತಹ ಹಲವಾರು ಉತ್ತರ ಸಿಗದ ಪ್ರಶ್ನೆಗಳು, ಗೊಂದಲಗಳು ನನ್ನನ್ನು ಸದಾ ಕಾಡುತ್ತಿರುತ್ತದೆ. ಇಂಥವಕ್ಕೆ  ನಾನೇ ನಾನು ಉತ್ತರಿಸಿಕೊಳ್ಳಬೇಕಿರುತ್ತದೆ. ಆದರೆ ಕೆಲವೊಮ್ಮೆ ಎಂತಹ ಸಂದಿಗ್ಧತೆ ಒದಗಿಬರುತ್ತದೆ ಎಂದರೆ ಉತ್ತರಿಸುವುದಿರಲಿ ಪ್ರಶ್ನೆಯನ್ನು ಎದುರಿಸುವುದೂ […]

ಬೆಳೆಸಲಾಗದ ಮಕ್ಕಳು

ಅನುವಾದಿತ ಕಥೆ ಬೆಳೆಸಲಾಗದ ಮಕ್ಕಳು ತೆಲುಗು ಮೂಲ: ಸಿ.ಹೆಚ್.ವಿ. ಬೃಂದಾವನ ರಾವು ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು ಪಾರ್ವತಿ ಹೇಳಿದ ಮಾತು ಕೇಳಿ ಸೋಜಿಗ ಗೊಂಡ ಕ್ರಿಸ್ಟಫರ್. ಮುಖ ಕೆಂಪಾಯಿತು. ಒಂದೈದು ನಿಮಿಷ ಹಾಗೇ ಇದ್ದ. ಕ್ರಮೇಣ ಆವೇಶದಿಂದ ಆಲೋಚನೆಯೆಡೆಗೆ ಬಂದ. ಏನು ಹೇಳಬೇಕೋ ಅರ್ಥವಾಗಲಿಲ್ಲ ಅವನಿಗೆ. ಗಂಡನ ಮುಖವನ್ನ ಹಾಗೇ ನೋಡ್ತಾ ಇದ್ದಳು ಪಾರ್ವತಿ. ಗಂಡ ಹಾಗೆ ಆಶ್ಚರ್ಯಗೊಳ್ಳುವುದು ಅವಳಿಗೇನೂ ವಿಚಿತ್ರವೆನಿಸಲಿಲ್ಲ. ಡಾಕ್ಟರರು ತನ್ನ ಹತ್ತಿರ ಈ ವಿಷಯದ ಪ್ರಸ್ತಾವಿಸಿದಾಗ ತನಗೂ ಇಂಥ ಆಶ್ಚರ್ಯವೇ ಆಗಿತ್ತು. […]

ಗುಪ್ತಗಾಮಿನಿ

ಕವಿತೆ ಗುಪ್ತಗಾಮಿನಿ ಸಂಗಮೇಶ್ವರ ಶಿ.ಕುಲಕರ್ಣಿ ನಿನಗೆ ನಾನ್ಯಾರು?ಕೇಳದಿರು ಹೇಳದಿರುಅಲ್ಲಿ ಕಾಡುವ ಒಗಟುಎದುರಾಗದಿರಲಿನಿನಗೆ ನನಗೆ ಇಬ್ಬರಿಗೂ…. ನನಗೆ ನೀನ್ಯಾರು?ಹೇಳುವೆ ಸಾರಿ ಸಾರಿಆತ್ಮದಲಿ ಆರೂಢವಾಗಿರುವಅಗೋಚರ ಆಕೃತಿ!ಪ್ರತಿಕ್ಷಣದ ಸ್ಮೃತಿ!! ಅಲ್ಲಿ ನೀನು ಇಲ್ಲಿ ನಾನುಅನ್ನುವ ಅಂತರದ ಮಾತೆಲ್ಲಿಆಣೆ ಮಾಡುವೆ ಬೇಕಾದರೆ;ಅಂತರಂಗ ಆಕ್ರಮಿಸಿದಮೊದಲ ದೊರೆಸಾನಿ ನೀನಿಲ್ಲಿ! ಉಬ್ಬುತಗ್ಗಿನ ಚರ್ಮದ-ಹೊದಿಕೆಯ ಮೋಹದಲ್ಲಿಮರೆತುಹೋಗುವ ಪಿಂಡವಲ್ಲ;ಎಲ್ಲ ದಾಟಿ ಅನಂತ ಹುಡುಕುವಅದಮ್ಯ ಚೇತನ! ನನಗೊಂದು ನಿನಗೊಂದುಬೇರೆಯದೇ ಕೋಳ,ಕಳಚಿ ಕೈಬಿಡುವ ಕೈಕಟ್ಟು ಅಲ್ಲ ಬಿಡು.ಇದರ ಮಧ್ಯೆ ನಮ್ಮದುಸಾವಿನಾಚೆಗೂ ಸಾಗುವ ಬಂಧ! ಈ ಜೀವಕ್ಕೆ ಅರ್ಧಜೀವ ನೀನು! ****************************

ಮಾಗಿಯ ಪದ್ಯಗಳು

ಕವಿತೆ ಮಾಗಿಯ ಪದ್ಯಗಳು ಪ್ರೇಮಲೀಲಾ ಕಲ್ಕೆರೆ ಕೌದಿ ಕವುಚಿಕಂಬಳಿ ಹುಳುವಾದರೂಅಡಗಲೊಲ್ಲದ ಚಳಿ ಬೆಳಗಾಗ ಬರುವಚುರುಕು ಬಿಸಿಲಿನ ನೆನಪೇಬಿಸಿ ಹುಟ್ಟಿಸಬಲ್ಲದುಒಳಗೆ ಉರಿಮುಖದ ಸೂರ್ಯ, ನಿನ್ನ ಆಗಮನಅದೆಷ್ಟು ಬೆಚ್ಚಗೆಜಡ ಮಾಗಿಗೆ !! 2 ತುಂಟ ಸೂರ್ಯ,ಎಲ್ಲಿ ಅಡಗಿದ್ದೆ ನೀನು ?ಇಷ್ಟೊಂದು ತಡವೇಕೆಮನೆಗೆ ಬರಲು ?? ಗುಟ್ಟೇನಿದೆ ,ಆ ನಿಶೆಯ ಜೊತೆನಿನ್ನ ಚೆಲ್ಲಾಟಜಗಕೇ ಗೊತ್ತು! ತರವಲ್ಲ ಬಿಡು,ತರವಲ್ಲ ಬಿಡು, ಆ ಕಪ್ಪುನಿಶೆಯಲಿಏನುಂಟು ಚೆಲುವು?ಬಿತ್ತಿದ್ದ ಬೆಳೆಯುವಇಳೆಗೆ ಮಿಗಿಲು?? ******************************************

ವಿಚಿತ್ರ ಆಸೆಗಳು…ಹೀಗೊಂದಷ್ಟು,

ಲಲಿತ ಪ್ರಬಂಧ ವಿಚಿತ್ರ  ಆಸೆಗಳು…ಹೀಗೊಂದಷ್ಟು, ಸಮತಾ ಆರ್. “ಕಕ್ ಕಕ್ ಕಕ್ ಕೊಕ್ಕೋಕ್ಕೊ” ಅಂತ ಒಂದು ಬಿಳಿ,ಬೂದು,ಕೆಂಪು ಬಣ್ಣದ ರೆಕ್ಕೆ ಪುಕ್ಕಗಳ,ಅಂಗೈ ಅಗಲದ ಜುಟ್ಟಿದ್ದ,ಕಮ್ಮಿ ಅಂದರೂ ನಾಲ್ಕೈದು ಕೆಜಿ ತೂಗುತ್ತಿದ್ದ ಗಿರಿರಾಜ ಹುಂಜ ವೊಂದು ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಗತ್ತಿನಿಂದ ,ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದಾಗ,ಸುತ್ತ ನಾಲ್ಕೈದು ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ಕೂರಿಸಿಕೊಂಡು ವಿದ್ಯಾಗಮ ಕಾರ್ಯಕ್ರಮದ ಅಡಿಯಲ್ಲಿ ಕಲಿಸುತ್ತಿದ್ದ ನನಗೆ ಎಷ್ಟು ಪ್ರಯತ್ನ ಪಟ್ಟರೂ ಆ ಹುಂಜನಿಂದ ಕಣ್ಣು ಕೀಳ ಲಾಗಲಿಲ್ಲ. ನನ್ನಿಂದ ಅನತಿ ದೂರದಲ್ಲಿ ಕುಳಿತಿದ್ದ […]

“ಅಂತರ್ಬಹಿರಂಗ”

ಕವಿತೆ “ಅಂತರ್ಬಹಿರಂಗ“ ಉದಯ ಧರ್ಮಸ್ಥಳ ನಿದ್ದೆಯ ಮುಂಜಾವಿನಲ್ಲಿಮುಂಜಾವಿನ ನಿದ್ದೆಯಲ್ಲಿಮಂಪರು ಭಾವಗಳೊಂದಷ್ಟುಮತಿಯ ತೋಪಿನಲ್ಲಿಗತಿ ಲಯದ ಸಾಲು ತುರುಕಿದ ಕಾಡತೂಸುಗಳಂತೆಶಬ್ದಗಳಲ್ಲದೆಮೌನ ಅಕ್ಷರದುಂಡೆಗಳು ! ಎತ್ತೆತ್ತಲೋ ಎಸೆದೆರಗುವಂತಾಗಿಧಮಿಲ್ ಧಮಿಲ್ ಧಮಿಲ್ಹೊರಗುಗುಳುವಾಗಹಿಡಿದುದಾಖಲಾಗಿಸುವಾಗಅರೆಬಿರಿದ ಕಣ್ಣೆಡೆಯಿಂದದೃಷ್ಟಿ ಕಾಣುವ ಪಂಕ್ತಿ ಪದಅದೇನೋ ಅಪರೂಪದಆಗೀಗ ಬರುವ ಅತಿಥಿಯಂತೆನಕ್ಕಣರಳಿಸಿ ಬೀಸಿದ ಓರೆನೋಟ ! ಧಿಂಗಣ‌ ಕುಣಿದ ರಂಗದಂಗಳದವೇಶಗಳಾಗಿ ಬಣ್ಣಬಣ್ಣ ಕಟ್ಟಿದೊಗಲೆ ದೊಗಲೆಯೊಳಗೆಅಂಡು ಬಿಗಿದ ಹಳೆಬಟ್ಟೆಯ ಹಿಂಡುಮೇಲೆ ಮಿರಮಿರನೆ ಝಗಮಗಿಸುವರಾಜನುಡುವ ರಂಗುರಂಗಿನ ಪೋಷಾಕಿನೊಳಗಿಂದಜೀವ ಲಕಲಕ ಲಕಾ ಭಾಷೆಯುಚ್ಛಾರ ! ಅದೇನೋ ಮೊರದಗಲತಡ್ಪೆ ಕಿರೀಟದ ಬಣ್ಣದ ವೇಶಅರಚಿ ಅರಚಿ ಬೆದರಿಸಿಅರ್ಥವಾಗದಿದ್ದರೂಅರ್ಥ ಮಾತಾಡುವಂತೆ ಕಂಡರೆಅದು […]

Back To Top