ಕವಿತೆ
ಆಯ್ಕೆ ಅವಳ ಸ್ವಾತಂತ್ರ್ಯವಲ್ಲ
ಸುರೇಖಾ. ಜಿ.ರಾಠೋಡ.
ಹೆಣ್ಣಿನ ದೇಹ ಬೇಕಿದೆ ಹೊರತಾಗಿ
ಅವಳ ಮನಸ್ಸು ಯಾರಿಗೂ ಬೇಕಿಲ್ಲ
ಹೆಣ್ಣಿನ ದುಡಿಮೆ ಬೇಕಿದೆ ಹೊರತಾಗಿ
ಅದರ ಲಾಭ ಅವಳಿಗಿಲ್ಲ
ಹೆಣ್ಣಿನ ಸೇವೆ ಬೇಕಿದೆ ಹೊರತಾಗಿ
ಅವಳ ಆರೋಗ್ಯ ಬೇಕಿಲ್ಲ
ಹೆಣ್ಣು ಕುಟುಂಬದ ಜವಾಬ್ದಾರಿ ಹೊರಲು ಬೇಕಿದೆ , ಹೊರತಾಗಿ ;
ಕುಟುಂಬದಲ್ಲಿ ಹೆಣ್ಣಾಗಿ ಹುಟ್ಟುವ ಹಾಗಿಲ್ಲ
ಹೆಣ್ಣು ವಿವಾಹವಾಗಲು ಬೇಕಿದೆ ;
ಆದರೆ ಸಂಗಾತಿ ಆಯ್ಕೆ ಅವಳ ಸ್ವಾತಂತ್ರ್ಯವಲ್ಲ
ಹೆಣ್ಣು ಮಕ್ಕಳು ಹೆರಲು ಬೇಕು ;
ಬಸಿರು ಹೊರುವ ಮನಸ್ಸಿದೆಯಾ ಎಂದು ಗಂಡು ಕಾಯುವುದೂ ಇಲ್ಲ ; ಕೇಳುವುದೂ ಇಲ್ಲ
ಹೆಣ್ಣು ಗಂಡು ಮಗು ಹೆರಲು ಬೇಕಿದೆ ; ಸೋಜಿಗವೆಂದರೆ
ಹೆಣ್ಣು ಮಗು ಹೆರುವಹಾಗಿಲ್ಲ
ಹೆಣ್ಣು ಎಲ್ಲರನ್ನೂ ನೋಡಿಕೊಳ್ಳಲು ಬೇಕಿದೆ ;
ಅವಳ ನೋಡಿಕೊಳ್ಳುವವರಿಲ್ಲ
ಹೆಣ್ಣು ಎಲ್ಲ ಕೇಳಲು ಬೇಕಿದೆ ಹೊರತಾಗಿ
ಅವಳ ಅಳಲು ಕೇಳುವವರಿಲ್ಲ
ಹೆಣ್ಣು ತನಗಾಗಿ ತಾನು ಎಂಬುದನ್ನು ಅರಿಯ ಬೇಕಿದೆ
*************************************
ನಿಜ ಹೆಣ್ಣು ಎಲ್ಲರಿಗೂ ಬೇಕು ಆದರೆ ಅವಳನ್ನು ಅರಿತು ಬಾಳುವುದು ಅನೇಕರಿಗೆ ಗೊತ್ತಿಲ್ಲ ,ಕವಿತೆ ಸೊಗಸಾಗಿದೆ