ಹಿಮದೊಡಲ ಬೆಂಕಿ
ಪುಸ್ತಕ ಪರಿಚಯ ಹಿಮದೊಡಲ ಬೆಂಕಿ ಹಿಮದೊಡಲ ಬೆಂಕಿ.ಗಜ಼ಲ್ ಸಂಕಲನ.ಬೆಲೆ:- 80/-ಲೇಖಕರು :-ಅರುಣಾ ನರೇಂದ್ರಸಿದ್ಧಾರ್ಥ ಪ್ರಕಾಶನ ,ನಂದಿ ನಗರ , ಕೊಪ್ಪಳ. ಅರುಣಾ ನರೇಂದ್ರ ಅವರ ಹಿಮದೊಡಲ ಬೆಂಕಿ ಗಜ಼ಲ್ ಸಂಕಲನದ ಒಳಗೊಂದು ಸುತ್ತು… ಅರುಣಾ ನರೇಂದ್ರ ರವರು ಕೊಪ್ಪಳ ಜಿಲ್ಲೆಯವರಾಗಿದ್ದು ಈ ನಾಡಿನ ಹೆಸರಾಂತ ಮಹಿಳಾ ಸಾಹಿತಿಗಳಲ್ಲಿ ಇವರೂ ಒಬ್ಬರು. ಮುಖತಃ ನೋಡಿಲ್ಲದ, ಮಾತನಾಡಿಲ್ಲದ ಕೇವಲ ವಾಟ್ಸ್ ಆಪ್ ಗ್ರೂಪ್‌ನಿಂದಲೇ ಅಕ್ಷರಗಳ ಮುಖೇನ ಇವರೊಂದಿಗೆ ಅನುಸಂಧಾನ ಮಾಡುತ್ತಿರುವ ನಾನು ಇವರು ಉದಯೋನ್ಮಖ ಬರಹಗಾರರ ಬರಹಗಳಿಗೆ ಮನಬಿಚ್ಚಿ ಬೆನ್ನುತಟ್ಟುವ […]
ಗಝಲ್
ಗಝಲ್ ಸುಜಾತಾ ರವೀಶ್ ಬಾಳಿನ ಪಥದಲಿ ಬೀಸಿದ ತಂಗಾಳಿ ನೆನಪುಗಳ ಹಸಿಯಾಗಿಸಿತು ನಾಳಿನ ಕನಸಿನ ಕಲ್ಪನೆ ಹಾದಿಯು ಮೆಲುಕುಗಳ ಬಿಸಿಯಾಗಿಸಿತು ಧುತ್ತನೆ ಕವಿದಿಹ ಕಾರ್ಮೋಡ ಬಾನನು ಮಂಕಾಗಿಸಿತು ಒಮ್ಮೆಲೆಯೇ ಮೆತ್ತನೆ ಬರುತಿಹ ಹೊಂಗಿರಣ ನಗುವಿನ ಹೂಬಿಸಿಲಲಿ ಸೊಗಸಾಗಿಸಿತು ಮಾರ್ದವ ಭಾವವ ಮುಳ್ಳಿನ ಮೊನೆಯೊಲು ಚುಚ್ಚ ತೊಡಗಿತು ಚಿಂತೆಯು ಹಾರ್ದಿಕ ಆಶಯ ಹೃದಯವ ಮುಟ್ಟುತ ಶಂಕೆಗಳನು ಮರೆಯಾಗಿಸಿತು ಜೀವನ ನೌಕೆಯು ಸಿಲುಕಿ ಬಿರುಗಾಳಿಗೆ ಹೊಯ್ದಾಡುತಿದೆ ಹೀಗೇಕೆ? ದೇವನ ಒಲುಮೆ ಭದ್ರತೆ ನೀಡುತ ಭರವಸೆಯಲಿ ಖುಷಿಯಾಗಿಸಿತು ಹಂಬಲ ಕಾಮನೆ ಮನುಜನ ಬದುಕಲಿ ನನಸಾದರೆನಿತು ಒಳಿತು ನಂಬಿದ ದೈವದ […]
ಪುಸ್ತಕ ಪರಿಚಯ
ಅಲೆವ ನದಿ ಅಲೆವ ನದಿಗಜಲ್ ಗಳುಕವಿ :- ಕಿರಸೂರ ಗಿರಿಯಪ್ಪಪ್ರಕಾಶನ :- ಸನ್ಮತಿ ಪ್ರಕಾಶನ ಬಾಗಲಕೋಟೆಬೆಲೆ:- ೮೦ಪುಟಗಳು :- ೫೮ ಗಜಲ್ ಎಂದಾಕ್ಷಣ ನೆನಪಿಗೆ ಬರುವುದುಪ್ರೇಮಿಗಳ ಸರಸ ಸಲ್ಲಾಪ ,ಮನದಾಳದ ಸುಕೋಮಲ ಭಾವನೆಗಳು, ಹೆಂಗಳೆಯರ ಪಿಸು ನುಡಿಗಳು , ಒಳಹೊಕ್ಕು ಹೊರ ನೋಡುವ ತೀಕ್ಷ್ಣಮತಿ ಸೂಕ್ಷ್ಮವಾದ ಭಾವನೆಗಳ ಪೂರಣ, ಗಜಲ್ನಸಾಮಾನ್ಯ ಲಕ್ಷಣಗಳು ಕಾಫಿಯಾ ,ರದೀಪ್,ಮತ್ಲಾ,ಮಕ್ತಾ, ಕಾಣಬಹುದು ನೆರಳು-ಬೆಳಕಿನಾಟದಂತೆ ಇವುಗಳನ್ನು ಹೊಂದಾಣಿಕೆ ಮಾಡಿದರೆ ಮಾತ್ರ ಗಜಲ್ ಆಗಲ್ಲ ಸಹಜವಾಗಿ ಮೇಳೈಸಿಕೊಂಡು ಹೃದಯವನ್ನು ತಟ್ಟಿ ಬಡಿದೆಬ್ಬಿಸಬೇಕು. ಗಜಲ್ಗಳು ಮನಸೂರೆಗೊಂಡು ಒನ್ಸ್ […]
ವೈನ್ ಇಲ್ಲವೇ ಇಲ್
ಅನುವಾದಿತ ಕವಿತೆ ವೈನ್ಇಲ್ಲವೇಇಲ್ಲ ರಘುಪತಿ ಸಹಾಯ್ ಫಿರಾಖ್ ಗೋರಖ್ ಪುರಿ ಕನ್ನಡಕ್ಕೆ : ಆರ್.ವಿಜಯರಾಘವನ್ ಆಮಿಶಕ್ಕೊಳಪಡುವ ಖಾಲಿಯಾಗದ ಯಾವ ಮಧುವೂ ಇಲ್ಲಓ, ಹೂಬಿಡುವ ನಾರ್ಸಿಸಸ್ಸನ ನೋಟವೇ! ನಿನಗೆ ಯಾವ ಪ್ರತಿಸ್ಪರ್ಧಿಯೂ ಇಲ್ಲ. ನರಕಸದೃಶ ಸ್ಥಿತಿಯಲ್ಲಿರುವವನು ಸಂಪೂರ್ಣವಾಗಿ ಅಂಥ ಸ್ಥಿತಿಯಲ್ಲಿಲ್ಲಇದು ನರಕಗಳು ವಿಧಿಸಿದ ಶಿಕ್ಷೆ. ಆ ಶಿಕ್ಷೆ ಬಂದುದು ಪ್ರಿಯಕರನಿಂದ ಅಲ್ಲ ಪ್ರತಿ ಅಣುವೂ ನಿದ್ರಿಸದಿರುವ ನಿಶೆಯೇ ಇಂದಿನಿರುಳುನಾಳೆ ಒಂದು ಕ್ರಾಂತಿ ನಡೆಯಲಿದೆ, ಭೂಮಿ ಎಚ್ಚರದಿಂದಿದೆ ಜೀವನವು ನೋವಾಗಿ ಬದಲಾಗುತ್ತಲೇ ಇದೆ. ಈಗ ಏನಾಗಲಿದೆ?ಈಗ, ಆ ನೋಟ, ಪ್ರಾರ್ಥನೆಗಳಿಂದ […]
ಮರಕುಟಿಕ
ಕವಿತೆ ಮರಕುಟಿಕ ಡಾ. ಅರಕಲಗೂಡು ನೀಲಕಂಠ ಮೂರ್ತಿ ಒಂದು ಮರಕುಟಿಕ ಕುಕ್ಕುತ್ತಿದೆಕಾಯಕದಂತೆ ಕಾಯದೆಯಾರಿಗೂ ಎಡೆಬಿಡದೆಗುಕ್ಕು ಗುಕ್ಕು ಚಕ್ಕೆಯಷ್ಟೇಎಬ್ಬುತ್ತಿದೆ ಲೆಕ್ಕವಿಡದೆಮರದ ಕಾಂಡ-ಕೊಂಬೆಗಡುಸಾಗಿದೆ ವೀರ ಎದೆಯ ಹಾಗೆ! ಎಷ್ಟೊಂದು ಮರಕುಟಿಕಗಳುಬಂದು ಬಂದು ಕುಟಿಕಿ ಹೋಗಿದ್ದಾಗಿದೆಅರಿವು ಮಂಕಾಗುವಷ್ಟು ದಿನಗಳಿಂದಬರುತ್ತಲೇ ಇವೆ ಇಂದಿಗೂಸರದಿಯಲ್ಲೋಜಾತ್ರೆಯ ಜಂಗುಳಿಯಲ್ಲೋ… ಬಂದೇ ಬರುತ್ತವೆ ತಪ್ಪದೆ ಮುಂದೂ–ಮರವಿರುವಷ್ಟು ದಿನಅದರ ತಿರುಳು ತೊನೆವಷ್ಟು ದಿನಬಂದೇ ಬರುತ್ತವೆ… ಮರಕ್ಕೆ ನೋವಾಗುವುದೋ ಬಿಡುವುದೋಕುಟುಕುವ ಕೊಕ್ಕಿಗೇಕೆ ಉಸಾಬರಿ!ಕೆಲವೊಮ್ಮೆ ಮರ ಒಂದೇ…ಮರಕುಟಿಕಗಳನೇಕನೋವು ಮಾತ್ರ ನಿಶಬ್ದ ತದೇಕ!ಚಿಂತೆ ಕಂಬನಿ ಯಾರಿಗೆ…ಏಕೆ! ಮರ ಉರುಳಿ ಅಳಿದಮೇಲೆಎಲ್ಲಿಯ ಮರಕುಟಿಕಎಲ್ಲಿಯ ಕುಕ್ಕುವಿಕೆ…!
ಗಜಲ್
ಗಜಲ್ (ಗಾಂಧಿ:ಇನ್ನೊಂದು ನೋಟ) ಡಾ. ಗೋವಿಂದ ಹೆಗಡೆ ಚರಕ ನೂಲು ಕೋಲುಗಳಲ್ಲೇ ಅವನ ಕಂಡಿದ್ದೇವೆಕನ್ನಡಕವನ್ನು ಮರೆಯದೇ ಜೇಬಿಗೆ ಇಳಿಸಿದ್ದೇವೆ ಸ್ವರಾಜ್ಯ ಸತ್ಯಾಗ್ರಹ ಸ್ವದೇಶಿ- ದುಡಿಯುತ್ತ ಹೋದ ಅವನುನಾವು ಪುರಸೊತ್ತಾಗಿ ಕೂತು ಅವನ ಟೀಕಿಸುತ್ತೇವೆ ಒಂದೇ ಮಗ್ಗುಲ ಚಿತ್ರಗಳೆಂದರೆ ನಮಗೆ ಬಹಳ ಪ್ರೀತಿಒಂದು ಕಣ್ಣು ಮುಚ್ಚಿಯೇ ಎಲ್ಲವನ್ನೂ ಅಳೆಯುತ್ತೇವೆ ಕಪ್ಪು-ಬಿಳುಪುಗಳ ಆಚೆ ಲೋಕವೆಷ್ಟು ಸಂಕೀರ್ಣವಿದೆಕರಿಯ ಕನ್ನಡಕದಲ್ಲಿ ಕಂಡದ್ದು ಮಾತ್ರ ನಿಜವೆನ್ನುತ್ತೇವೆ ತಪ್ಪು ತೊಡರು ನೆರಳುಗಳನ್ನು ನೋಡುತ್ತ ನೀಡಿ ತೀರ್ಪುಬೆಳಕಿನೊಡನೆಯ ಮುಖಾಮುಖಿಗಳ ಬೇಕೆಂದೇ ಮರೆಯುತ್ತೇವೆ ಸಂಕೇತ-ಸಂಗತಿ, ಭಜನೆ-ಭಂಜನೆಗಳಲ್ಲಿ ನಮ್ಮ ನಡೆ […]
ದ್ವಿಪದಿಗಳು
ದ್ವಿಪದಿಗಳು ವಿ.ಹರಿನಾಥ ಬಾಬು ಯಾರನ್ನಾದರೂ ಏನ ಕೇಳುವುದಿದೆ?ಕೇಳಲು ಉಳಿದಿರುವುದಾದರೂ ಏನು ನೀನೇ ಇಲ್ಲದ ಮೇಲೆ! ಹತ್ತು ದಿಕ್ಕಿಗೂ ಹುಡುಕಾಡಿದೆ ಹುಚ್ಚನಂತೆಹಿಡಿದ ಹುಚ್ಚು ಮತ್ತಷ್ಟು ಗಟ್ಟಿಯಾಯಿತು ನೀ ಕಾಣದೆ ಎದುರಾದವರೆಲ್ಲಾ ದಿಟ್ಟಿಸಿ ನೋಡಿ ಹೋಗುತ್ತಿದ್ದಾರೆನೀನು ನನ್ನ ಕಣ್ಣೊಳಗೇನಾದರೂ ಅವಿತುಕೊಂಡಿರುವೆಯಾ?? ರೆಪ್ಪೆ ಮುಚ್ಚಿದರೆ ಕಡಲು ಉಕ್ಕಿ ಹರಿವುದುಹಾಯಿ ದೋಣಿಯ ಬಟ್ಟೆ ಆಕಾಶವ ಹೊದ್ದಿದೆ ಮರಗಿಡಗಳೂ ಮೌನ ತಾಳಿವೆಜೀವವಿರದ ಈ ದೇಹ ದಿಗಿಲುಗೊಂಡಿದೆ ಬೆಳ್ಳಕ್ಕಿ ಯಾಕೋ ಮುಗಿಲಕಡೆ ನೋಡುತಿದೆಈಗತಾನೇ ನೀನು ನಭಕೆ ಹಾರಿಕೊಂಡಂತೆ ಕಾಣುತಿದೆ ಒಂಟಿತನಕೆ ಯಾಕಿಷ್ಟು ಆತಂಕ?ನೀನು ಕೊಟ್ಟ ಪ್ರೀತಿಯ […]
ಪ್ರತಿಷ್ಠೆ ಬದಿಗಿಟ್ಟರೆ ಬಾಳು
ಕವಿತೆ ಪ್ರತಿಷ್ಠೆ ಬದಿಗಿಟ್ಟರೆ ಬಾಳು ಲಕ್ಷ್ಮೀದೇವಿ ಕಮ್ಮಾರ ಮನೆ ಮಿಡಿದರೂ ಪ್ರತಿಷ್ಟೆ ಗಡಿಅಡ್ಡಿಯಾಗಿದೆ ನನಗೂ ನಿನಗೂ ಅಕ್ಕಪಕ್ಕದ ಲ್ಲಿದ್ದರೂ ಅಹಂನ ಅಡ್ಡಗೋಡೆ ಅರಿಯಲಾರೆ ನನ್ನ ನೀನು ,ನಿನ್ನ ನಾನು ಬೇಕು ಬೇಕೆನಿಸಿರೂ ಸಾಕು ಮಾಡಿದ್ದೆವೆ ಮಾತುಕುಹಕಿಗಳಿಂದಾಗಿದೆ ಬಿರುಕುಒಡೆದು ಹೋಗುತ್ತಿದೆ ಪ್ರೀತಿ ಸೇತು ಒಲವದಾರೆ ಹರಿಸಲು ಬಂದುದರ ಕುರುಹುಅರಿಯದೆ ನಮ್ಮ ಸ್ವಾರ್ಥದ ಪರದಿಯಲಿ ಬಂದಿಯಾಗುಳಿದವರು ನಾವು ***********************************
ಪ್ರೀತಿಯ ಬಿತ್ತಿ ಬೆಳೆಯಲು
ಕವಿತೆ ಪ್ರೀತಿಯ ಬಿತ್ತಿ ಬೆಳೆಯಲು ನಾಗರಾಜ ಹರಪನಹಳ್ಳಿ ನಾನು ಹೆಣ್ಣಾಗುವೆಗಾಂಧಿಯಂತಹ ಮಗನ ಹೆರಲು ಹೌದು,ಗಾಂಧಿಯಂಥ ಮಗ ಬೇಕುಈ ನೆಲಕ ದಿಕ್ಕು ತೋರಿಸಲು ಸಹನೆ ,ಸತ್ಯ ಅಹಿಂಸೆ ಹಂಚುವಗೋಡ್ಸೆ ಮನದ ಬಂದೂಕುಕಸಿದು, ಭೂಮಿ ಮೇಲಿನ ಗಡಿರೇಖೆ ಅಳಿಸಿಮನುಷ್ಯರೆಲ್ಲಾ ಒಂದೇ ಎಂದು ಮನದಟ್ಟು ಮಾಡಲುಗಾಂಧಿಯಂಥ ಮಗನ ಹೆರಬೇಕು ಗೋಡ್ಸೆ ಮನದ ಗಡಿಗಳ ಅಳಿಸಿಅವನ ಕಣ್ಣಿಗೆ ಕರುಣೆ ತುಂಬಿಅವನ ದೇಹದ ಅಣು ಅಣುವಿನಲಿ ದಯೆಯ ಬಿತ್ತಿಬೆಳೆಯಲು ಗಾಂಧಿಯಂತಹ ಮಗ ಬೇಕು ಹರಿದ ನೋಟು ,ಬೀದಿ ಕಸದ ಸ್ವಚ್ಛತೆಗೆ ಮೀಸಲಿಟ್ಟ ನನ್ನ ದೇಶದ […]
ಅಷ್ಟೇನೂ ಅಂತರವಿರಲಿಲ್ಲ
ಕವಿತೆ ಅಷ್ಟೇನೂ ಅಂತರವಿರಲಿಲ್ಲ ನಾಗರಾಜ ಮಸೂತಿ ಅಷ್ಟೇನೂ ಅಂತರವಿರಲಿಲ್ಲ,ಆದರೂನೆರಳು ತಾಗುತ್ತಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂಹೋಟೆಲ್ಲಿನ ಚೆಂಬು ಲೋಟಗಳಿಗೆನಮ್ಮ ಸ್ಪರ್ಶದ ಅರಿವಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂನಮ್ಮ ಕರಗಳು ಕರ್ಪುರದ ಕಾವುಕಂಡಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂನಮ್ಮ ಆವಾಸಗಳು ಊರಂಚಿನಲ್ಲಿ ಮಿಂಚುತ್ತಿದ್ದವು ಆದರೆ ಮನಸ್ಸುಗಳುಇದೇ ಅಂತರದ ಅಗ್ನಿಯಸ್ಪರ್ಶದಿಂದ ಕರಕಲಾಗಿದ್ದವು… ************************************