
ಕವಿತೆ
ಪ್ರತಿಷ್ಠೆ ಬದಿಗಿಟ್ಟರೆ ಬಾಳು

ಲಕ್ಷ್ಮೀದೇವಿ ಕಮ್ಮಾರ

ಮನೆ ಮಿಡಿದರೂ ಪ್ರತಿಷ್ಟೆ ಗಡಿ
ಅಡ್ಡಿಯಾಗಿದೆ ನನಗೂ ನಿನಗೂ
ಅಕ್ಕಪಕ್ಕದ ಲ್ಲಿದ್ದರೂ ಅಹಂನ ಅಡ್ಡಗೋಡೆ ಅರಿಯಲಾರೆ ನನ್ನ ನೀನು ,ನಿನ್ನ ನಾನು
ಬೇಕು ಬೇಕೆನಿಸಿರೂ ಸಾಕು ಮಾಡಿದ್ದೆವೆ ಮಾತು
ಕುಹಕಿಗಳಿಂದಾಗಿದೆ ಬಿರುಕು
ಒಡೆದು ಹೋಗುತ್ತಿದೆ ಪ್ರೀತಿ ಸೇತು
ಒಲವದಾರೆ ಹರಿಸಲು ಬಂದುದರ ಕುರುಹು
ಅರಿಯದೆ ನಮ್ಮ ಸ್ವಾರ್ಥದ ಪರದಿಯಲಿ ಬಂದಿಯಾಗುಳಿದವರು ನಾವು
***********************************