ಅನುವಾದಿತ ಕವಿತೆ
ವೈನ್ಇಲ್ಲವೇಇಲ್ಲ
ರಘುಪತಿ ಸಹಾಯ್ ಫಿರಾಖ್ ಗೋರಖ್ ಪುರಿ
ಕನ್ನಡಕ್ಕೆ : ಆರ್.ವಿಜಯರಾಘವನ್
ಆಮಿಶಕ್ಕೊಳಪಡುವ ಖಾಲಿಯಾಗದ ಯಾವ ಮಧುವೂ ಇಲ್ಲ
ಓ, ಹೂಬಿಡುವ ನಾರ್ಸಿಸಸ್ಸನ ನೋಟವೇ! ನಿನಗೆ ಯಾವ ಪ್ರತಿಸ್ಪರ್ಧಿಯೂ ಇಲ್ಲ.
ನರಕಸದೃಶ ಸ್ಥಿತಿಯಲ್ಲಿರುವವನು ಸಂಪೂರ್ಣವಾಗಿ ಅಂಥ ಸ್ಥಿತಿಯಲ್ಲಿಲ್ಲ
ಇದು ನರಕಗಳು ವಿಧಿಸಿದ ಶಿಕ್ಷೆ. ಆ ಶಿಕ್ಷೆ ಬಂದುದು ಪ್ರಿಯಕರನಿಂದ ಅಲ್ಲ
ಪ್ರತಿ ಅಣುವೂ ನಿದ್ರಿಸದಿರುವ ನಿಶೆಯೇ ಇಂದಿನಿರುಳು
ನಾಳೆ ಒಂದು ಕ್ರಾಂತಿ ನಡೆಯಲಿದೆ, ಭೂಮಿ ಎಚ್ಚರದಿಂದಿದೆ
ಜೀವನವು ನೋವಾಗಿ ಬದಲಾಗುತ್ತಲೇ ಇದೆ. ಈಗ ಏನಾಗಲಿದೆ?
ಈಗ, ಆ ನೋಟ, ಪ್ರಾರ್ಥನೆಗಳಿಂದ ಯಾವುದೇ ಪ್ರಯೋಜನವಾಗದಿದೆ
ಕಾರವಾನಿಗೆ ಚಂಡಮಾರುತ, ಗುಡುಗು ಮಿಂಚಿನ ಸೂಚನೆಗಳಿವೆ
ಸಾವಿನ ಆತಂಕಗಳು ಅದರ ಮೇಲೆ ಯಾವುದೇ ನಿರ್ಬಂಧ ಹೇರದಿದೆ
ಮಧು ಮತ್ತಿನೌಷಧಗಳ ಭಾರವಿರದಿಹ ಮಧುಶಾಲೆಗಳೆಲ್ಲಿಹವು?
ವಿಶ್ವದ ಪಾರಮೇರೆಯ ಮೇಲೆ ಹರಡದಿರುವುದು ಒಂದು ಮೋಡವಲ್ಲದಿದೆ.
ನಿನ್ನ ಪ್ರೀತಿ ನೀನೆಣಿಸಿದಂತೆ ಅಷ್ಟೊಂದು ಕೆಟ್ಟದ್ದಲ್ಲ
ಅದಕ್ಕೆ ನೆಲವಿದೆ ಗಗನವಿದೆ ಅದು ವಿಶ್ವವನೆ ಹೊಂದಿದೆ
ನನ್ನ ನಂಬಿಕೆ “ವಿಶ್ವದ ವಿರುದ್ಧ ಸ್ವರ್ಗ”
ನಾನು ಪ್ರತಿಫಲವ ಬಯಸುತ್ತಿಲ್ಲ ದೇವರಿಗೆ ವಂದನೆಯಿದೆ
ಯಾವಾಗಿನಿಂದ ಆ ಒಂದು ಗುರಿಯಲ್ಲಿ ದುಃಖದ ಕಾರವಾನ್ನಿಂತಿದೆ?
ಯಾವಾಗಿನಿಂದ ಕ್ರಾಂತಿಯು ಕಾಲದ ಸಹ-ಪ್ರಯಾಣಿಕನಾಗದೆ ಉಳಿದಿದೆ?
ಚಿಂತೆಬೇಡ! ಶತ್ರು ರುಂಡವ ಚೆಂಡಾಡಿದ ಬಳಿಕ, ಮೇಲಕ್ಕೆತ್ತಬಾರದು ಅದನ್ನು
ಯಾವಾಗ ತಾನೇ ಹಾರುವ ಧೂಳು ಕವಿಯ ಜೊತೆಗಾರನಾಗಿರದೆ ಉಳಿದಿದೆ?
ಇಲ್ಲಿ ನಿಮ್ಮ ನೋವಿನಿಂದ ವಂಚಿತರಾದವರು ನಮಗೆ
ಕೇಳಿಸುವ ವಿಶ್ವಪ್ರೀತಿಯ ಯಾವುದೇ ದುಃಖವನ್ನು ಹೊಂದದಿರಲಿ
ಈಗಲೀಗಲೇ, ಮನುಷ್ಯನ ರಕ್ತ ನೀರಂತೆ ಹರಿಯಬಹುದು
ಈಗಲೀಗಲೇ ಜೀವನದ ಮುಖದಲ್ಲಿ ಹೊಳಪು ಮಾಸಬಹುದು
ಪ್ರಪಂಚವ ಕುರಿತು ಪಾಪಿ ಜನಗಳು ಹೇಳುತ್ತಿದ್ದಾರೆ ಇಂತು
ಏರುತ್ತಿರುವ ಅಲೆ ತುಂಬಿದ ಈ ನದಿಯು ಮರೀಚಿಕೆಯಲ್ಲವೆಂದು
************************************
ತುಂಬ ಚನ್ನಾಗಿದೆ ಸರ್.