ಕವಿತೆ
ಮರಕುಟಿಕ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಒಂದು ಮರಕುಟಿಕ ಕುಕ್ಕುತ್ತಿದೆ
ಕಾಯಕದಂತೆ ಕಾಯದೆ
ಯಾರಿಗೂ ಎಡೆಬಿಡದೆ
ಗುಕ್ಕು ಗುಕ್ಕು ಚಕ್ಕೆಯಷ್ಟೇ
ಎಬ್ಬುತ್ತಿದೆ ಲೆಕ್ಕವಿಡದೆ
ಮರದ ಕಾಂಡ-ಕೊಂಬೆ
ಗಡುಸಾಗಿದೆ ವೀರ ಎದೆಯ ಹಾಗೆ!
ಎಷ್ಟೊಂದು ಮರಕುಟಿಕಗಳು
ಬಂದು ಬಂದು ಕುಟಿಕಿ ಹೋಗಿದ್ದಾಗಿದೆ
ಅರಿವು ಮಂಕಾಗುವಷ್ಟು ದಿನಗಳಿಂದ
ಬರುತ್ತಲೇ ಇವೆ ಇಂದಿಗೂ
ಸರದಿಯಲ್ಲೋ
ಜಾತ್ರೆಯ ಜಂಗುಳಿಯಲ್ಲೋ…
ಬಂದೇ ಬರುತ್ತವೆ ತಪ್ಪದೆ ಮುಂದೂ–
ಮರವಿರುವಷ್ಟು ದಿನ
ಅದರ ತಿರುಳು ತೊನೆವಷ್ಟು ದಿನ
ಬಂದೇ ಬರುತ್ತವೆ…
ಮರಕ್ಕೆ ನೋವಾಗುವುದೋ ಬಿಡುವುದೋ
ಕುಟುಕುವ ಕೊಕ್ಕಿಗೇಕೆ ಉಸಾಬರಿ!
ಕೆಲವೊಮ್ಮೆ ಮರ ಒಂದೇ…
ಮರಕುಟಿಕಗಳನೇಕ
ನೋವು ಮಾತ್ರ ನಿಶಬ್ದ ತದೇಕ!
ಚಿಂತೆ ಕಂಬನಿ ಯಾರಿಗೆ…ಏಕೆ!
ಮರ ಉರುಳಿ ಅಳಿದಮೇಲೆ
ಎಲ್ಲಿಯ ಮರಕುಟಿಕ
ಎಲ್ಲಿಯ ಕುಕ್ಕುವಿಕೆ…!
ಮರಕ್ಕೆ ನೋವಾಗುವುದೋ ಬಿಡುವುದೋ
ಕುಟುಕುವ ಕೊಕ್ಕಿಗೇಕೆ ಉಸಾಬರಿ!
ಕೆಲವೊಮ್ಮೆ ಮರ ಒಂದೇ…
ಮರಕುಟಿಕಗಳನೇಕ
ನೋವು ಮಾತ್ರ ನಿಶಬ್ದ ತದೇಕ!
ಚಿಂತೆ ಕಂಬನಿ ಯಾರಿಗೆ…ಏಕೆ!
ಮರ ಉರುಳಿ ಅಳಿದಮೇಲೆ
ಎಲ್ಲಿಯ ಮರಕುಟಿಕ
ಎಲ್ಲಿಯ ಕುಕ್ಕುವಿಕೆ…!
ಮರವಿಲ್ಲದೆ ಎಲ್ಲಿಯ (ಮರ)ಕುಟುಕ
ಧನ್ಯವಾದಗಳು, ಜಗದೀಶ್ರವರೇ.
ಕವಿತೆ ಚೆನ್ನಾಗಿದೆ. ಅಭಿನಂದನೆಗಳು
ಧನ್ಯವಾದಗಳು, ರಮೇಶ್…
Jeevanada Nithya sathya….super ..please continue…
ಧನ್ಯವಾದಗಳು ನಿಮಗೆ
Beautiful poem like previous poems