ಕವಿತೆ
ಅಷ್ಟೇನೂ ಅಂತರವಿರಲಿಲ್ಲ

ನಾಗರಾಜ ಮಸೂತಿ
ಅಷ್ಟೇನೂ ಅಂತರವಿರಲಿಲ್ಲ,
ಆದರೂ
ನೆರಳು ತಾಗುತ್ತಿರಲಿಲ್ಲ
ಅಷ್ಟೇನೂ ಅಂತರವಿರಲಿಲ್ಲ,
ಆದರೂ
ಹೋಟೆಲ್ಲಿನ ಚೆಂಬು ಲೋಟಗಳಿಗೆ
ನಮ್ಮ ಸ್ಪರ್ಶದ ಅರಿವಿರಲಿಲ್ಲ
ಅಷ್ಟೇನೂ ಅಂತರವಿರಲಿಲ್ಲ,
ಆದರೂ
ನಮ್ಮ ಕರಗಳು ಕರ್ಪುರದ ಕಾವು
ಕಂಡಿರಲಿಲ್ಲ
ಅಷ್ಟೇನೂ ಅಂತರವಿರಲಿಲ್ಲ,
ಆದರೂ
ನಮ್ಮ ಆವಾಸಗಳು ಊರಂಚಿನಲ್ಲಿ ಮಿಂಚುತ್ತಿದ್ದವು
ಆದರೆ ಮನಸ್ಸುಗಳು
ಇದೇ ಅಂತರದ ಅಗ್ನಿಯ
ಸ್ಪರ್ಶದಿಂದ ಕರಕಲಾಗಿದ್ದವು…
************************************