ಎಲ್ಲವೂಬರೀನೆನಪು
ಆ ವರ್ಷದ ಮಳೆಗಾಲದಾರಂಭ. ”ಇನ್ನೊಂದೇ ವಾರದ ಗಡುವು” ಇಲಾಖೆಯವರ ಘೋಷಣೆ. ಆಯಿತಲ್ಲ!! ಈ ನೆಲದ ಋಣ ತೀರಿತು. ಆಗಲೇ ಕೆಲವರು ಹೊಸ ಊರು ಸೇರಿದ್ದರು. ಸಂಭ್ರಮವಿಲ್ಲ. ಅಲ್ಲೊಂದು ಇಲ್ಲೊಂದು ಮನೆ, ತೆರಳುಳಿದ ಜನ. ಹಳ್ಳಿಯೆಲ್ಲ ಖಾಲಿ ಖಾಲಿ, ತಿಮ್ಮಕ್ಕನ ಮನಸ್ಸಿನಂತೆ.
ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ” ಪಡೆದ ಇವರು ರಂಗಭೂಮಿಹಾಗೂಕಿರುತೆರೆಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿಭಾಷೆಯಸಿನೇಮಾಗಳಲ್ಲಿಅಭಿನಯ. ಕೊಂಕಣಿಸಿನೇಮಾ ” ಅಂತು” ವಿನಅಭಿನಯಕ್ಕೆರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿಪ್ರಸ್ತುತಿ 30 ಯಶಸ್ವೀಪ್ರದರ್ಶನಕಂಡಿದೆ.ಮಂಗಳೂರುವಿಶ್ವವಿದ್ಯಾನಿಲಯದಕೊಂಕಣಿಅಧ್ಯಯನಪೀಠದಸದಸ್ಯೆ. ಪ್ರಸ್ತುತರಾಜ್ಯಕೊಂಕಣಿಸಾಹಿತ್ಯಅಕಾಡಮಿಸದಸ್ಯೆ. “ಅಮೋಘಎಂಬಸಂಸ್ಥೆಹುಟ್ಟುಹಾಕಿಸಾಹಿತ್ಯಿಕಹಾಗೂಸಾಂಸ್ಕೃತಿಕಕಾರ್ಯಕ್ರಮಗಳಆಯೋಜನೆ. ಆಕಾಶವಾಣಿಕಲಾವಿದೆ.ಇದುವರೆಗೆ 3 ಕವನಸಂಕಲನಸೇರಿದಂತೆ 6 ಪುಸ್ತಕಗಳುಪ್ರಕಟಗೊಂಡಿವೆ. GSS ಕಾವ್ಯಪ್ರಶಸ್ತಿ,ಕನ್ನಡಸಾಹಿತ್ಯಪರಿಷತ್ತಿನದತ್ತಿಪ್ರಶಸ್ತಿ,GS Max ಸಾಹಿತ್ಯಪ್ರಶಸ್ತಿ. ಹಲವಾರುಕವಿಗೋಷ್ಠಿಯಲ್ಲಿಭಾಗವಹಿಸುವಿಕೆ
ಪಡಸಾಲೆ
ಕವಿತೆ ಪಡಸಾಲೆ ಮಂಜೇಶ್ ದೇವಗಳ್ಳಿ ಹಟ್ಟಿ ಮುಂದೆ ಹಜ್ಜಾರದಗಲ ಸೂರಡಿ ನೆಲೆಕಂದಯ್ಯನ ಬಳಗ ಬೆರೆತು ಬೆಳೆದ ಜಗ್ಗುಲಿಮನೆಯೊಡೆಯಗೆ ನೆರಳಾಗಿ ತುಸು ನೆಮ್ಮದಿನೆರೆಹೊರೆ ಜನರ ಜೊತೆಗೂಡಿ ಕಳೆದ ಇರುಳುನೆತ್ತಿ ಬಿಸಿಲಿಗೆ ಜಡಿ ಮಳೆಗೆ ಆಸರೆಯ ಗೂಡುಕಣ್ಣಾಮುಚ್ಚಾಲೆ ಚೌಕಬಾರ ಆಣೆಕಲ್ಲ ಆಟವುಕಡ್ಡಿ ಬಳಪದಲಿ ಗೀಜಿ ಸುಣ್ಣದ ಕಲ್ಲ ಅಕ್ಷರವುಬೀಸೊಕಲ್ಲ ಬೀಸಿ ಸೇರ ತುಂಬಿ ಅಳೆದ ಜೋಳಪಡಸಾಲೆಯೊಂದು ಬದುಕ ಕಟ್ಟಿದ ಶಾಲೆಯು ! ************************************
ಸಾವು…!
ಕವಿತೆ ಸಾವು…! –ಕಾಂತರಾಜು ಕನಕಪುರ ……ರವರು ತೀರಿಹೋದರುಹಾಗೆಂದು ಅವರುಬಹುದಿನದಿಂದ ಚಿಕಿತ್ಸೆ ಪಡೆಯುತ್ತಿದ್ದಬಹು ಬೆಲೆಕೇಳುವ ಆಸ್ಪತ್ರೆಯಮುಖ್ಯ ವೈದ್ಯರಿಂದ ಹೇಳಿಕೆ…! ಮಾಧ್ಯಮಗಳಲಿ…..ರವರು ಬಹು ಅಂಗಾಂಗಳವೈಫಲ್ಯದ ಕಾರಣ ಮರಣ ಹೊಂದಿದರುಎಂಬ ಎಕ್ಸ್ಲೂಸೀವ್ ಸುದ್ದಿ…! ಸುದ್ದಿವಾಹಿನಿಗಳು ಮತ್ತು ದಿನಪತ್ರಿಕೆಗಳ ತುಂಬಾ…..ರವರ ಇರದಿದ್ದ ಗುಣಗಾನದ ಜಡಿಮಳೆಜೊತೆಯಲ್ಲಿ…..ರವರ ಸಹವರ್ತಿಗಳಿಂದ ನೆನಪುಗಳಮೆಲುಕು ಹಾಕುವಿಕೆಯ ಹಿಮ್ಮೇಳ…! ನಮಗೆ ತಿಳಿದಿರುವಂತೆ…..ರವರ ಬಹು ಅಂಗಗಳು ವಿಫಲಗೊಂಡು….ರವರು ಸತ್ತು ಬಹುಕಾಲವಾಯಿತಲ್ಲ…! ಅಧಿಕಾರದಮಲಿನಲಿ ತೇಲಾಡುತಿರುವಾಗಸಂಕಟದ ಆರ್ತನಾದ ಕೇಳದ ….ರವರಕಿವಿಗಳು ಕಿವುಡಾಗಿ ಬಹುಕಾಲ ಸಂದಿತಲ್ಲ…! ಕಡು ಕಷ್ಟ ಪಡುವವರ ಕಡೆಗೆಕಿರುನೋಟವನ್ನೂ ಹರಿಸದ …..ರವರಕಣ್ಣುಗಳು ಇಂಗಿಹೋಗಿ ಬಹಳ […]
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಅದ್ಭುತ ನಿರ್ದೇಶಕ
ಹಣೆಯ ಮೇಲೆ ಪುಟಗಟ್ಟಲ್ಲೆ ಚಿತ್ರಕಥೆ ಬರೆಯುವ,
ದೇವರೇ ನಿನ್ನೆಂತ ಅದ್ಭುತ ನಿರ್ದೇಶಕ!
ನಿನ್ನಾಜ್ಞೆಯಂತೆ ನಟಿಸುವುದಷ್ಟೆ ನಮ್ಮೆಲ್ಲರ ಕಾಯಕ!!
ಲಂಕೇಶರ ಅವ್ವ ಕವಿತೆ –
ಇಡೀ ಕವಿತೆಯ ಶರೀರ …ರಚನೆ, ಅದರ ಹೂರಣ ,ತರ್ಕ, ವಾದ, ಪ್ರೀತಿ, ಹೋಲಿಕೆ, ಅವ್ವನ ಪರ ಸಮರ್ಥನೆ…ಎಲ್ಲವೂ ಭಿನ್ನ. ಅವ್ವನನ್ನು ಅವಳ ಪ್ರತಿಭೆ, ಶಕ್ತಿ, ಕಸುವು, ಪ್ರೀತಿ, ಸಿಟ್ಟು, ದೌರ್ಬಲ್ಯ, ಕಣ್ಣೀರು, ಸಿಟ್ಟು, ಬಂಡಾಯ ಎಲ್ಲವನ್ನು ಕವಿ ಲಂಕೇಶ್ ಹಿಡಿದಿಡುತ್ತಾರೆ. ಕನ್ನಡದ ಕವಿತಾ ರಚನೆಗೆ , ವ್ಯಕ್ತಿಯ ಮೂರ್ತಿಯನ್ನು ಕಟೆದು ನಿಲ್ಲಿಸಿ, ಜೀವ ತುಂಬುವುದು ಹೇಗೆ , ನಮ್ಮೆದುರಿನ ಜೀವವನ್ನು , ಜೀವನವನ್ನು ಬದುಕಿ ಓಡಾಡಿದಂತೆ ಚಿತ್ರಿಸುವ ಕಲಾತ್ಮಕತೆ ಸಾಧಿಸಿ ಗೆಲ್ಲುವುದು ಪಿ.ಲಂಕೇಶರಂಥ ಪ್ರತಿಭೆಗೆ ಸಾಧ್ಯ
ನಿನ್ನನೇ ಪ್ರೀತಿಸುವೆ
ಯಾವಾಗಲೋ ನನ್ನ ನೆನಪಿಸಿ ಕರೆಮಾಡಿ
ನಿನ್ನ ಧ್ವನಿಯ ಮೋಡಿಗೆ ನಾನೆಲ್ಲ ಮರೆತು.
ನಿನ್ನ ಆಂತರ್ಯದ ಸಿಹಿಜೇನಲಿ ಬೆರೆತು
ನಾನಿನ್ನು ಪ್ರೀತಿಸುತಿರುವೆ ನಿನ್ನನೇ ಬಯಸಿ
ಸತ್ತು ಹೋಗುವುದೇ ಸಾವಲ್ಲ!
ಜೀವವೇ ಆಗಿರುವ ಪ್ರಾಣಸಖಿ
ತಾತ್ಸಾರದಲಿ ಬೆನ್ನ ತಿರುಗಿಸಿ
ಮಾತು ಬಿಡುವುದೂ…
ಸಾವೇ.
ಕರ್ತವ್ಯಕ್ಕೆ ಬೇಕು ಪ್ರೀತಿಯ ಕೀಲೆಣ್ಣೆ
ಕರ್ತವ್ಯದ ಬೀಜ ಬಿತ್ತಿ ಜೀವನದ ಪರಮೋಚ್ಛ ಗುರಿಯಾದ ಮುಕ್ತಿಯ ಬೆಳೆಯನ್ನು ಬೆಳೆಯಬಹುದು.. ಅದಕ್ಕಾಗಿ ಕರ್ತವ್ಯಪರತೆಗೆ ಮನದ ಭೂಮಿಯನ್ನು ಹಸನು ಮಾಡಿ. ಹದಗೊಳಿಸಬೇಕು. ಕರ್ತವ್ಯಪರತೆಯು ಸಾಧಕರ ಎದೆಗಿಳಿದಿರುವ ಫಲವಾಗಿಯೇ ಅಮೂಲ್ಯ ಮಾನವ ಜೀವನದ ಮೌಲ್ಯವನ್ನು ಎತ್ತಿ ಹಿಡಿಯಲು ಸಾಧ್ಯವಾಗಿದೆ ಅಲ್ಲವೇ