ನಿನ್ನನೇ ಪ್ರೀತಿಸುವೆ

ಕವಿತೆ

 ನಿನ್ನನೇ ಪ್ರೀತಿಸುವೆ

ಜಯಶ್ರೀ ಭ.ಭಂಡಾರಿ

https://media.istockphoto.com/photos/heart-on-the-beach-picture-id615750186?b=1&k=6&m=615750186&s=170x170&h=md-2F9jJ97I_kGAQJMNsbyVR_miVUWxo-H2XT9JVchs=

ಒರಟು ಸ್ವಭಾವ ಸಖ ನಿನ್ನದು
ನೋಡಲು ಅಷ್ಟೇನೂ ಸ್ಪುರದ್ರೂಪಿಯಲ್ಲ
ಬೇಗನೆ ಸ್ಪಂದಿಸುವ ಜಾಯಮಾನವಲ್ಲ
ಆದರೂ ನಾ ನಿನ್ನ ಪ್ರೀತಿಸುವೆನಲ್ಲ

ಸರಿದಾರಿಗೆ ಬಾರೆಂದರೂ ಬರಲ್ಲ
ಕೈಯಲ್ಲಿದ್ದ ಕೆಲಸದಲೆ ಗಮನ
ಇಡೀ ದಿನ ದೇಹ ದಣಿದರೂ ಬಿಡಲ್ಲ
ಆದರೂ ನಾನಿನ್ನ ಪ್ರೀತಿಸುವೆನು ನಲ್ಲ

ಅವಾಗವಾಗ ಮೊಗೆಮೊಗೆದು ಕೊಟ್ಟ
ಈಟೀಟು ಒಲವು ನನ್ನ ಕಾಡುತಿದೆ ಕಟ್ಟಿ
ಮರೆಯಲು ಮಾಡಿದ ಯತ್ನ ಬಲುತುಟ್ಟಿ
ಆದರೂ ನಾನಿನ್ನ ಪ್ರೀತಿಸುವೆ ತುಟಿ ಕಚ್ಚಿ

ನಾನೇನು ಅಂದರೂ ಸಹಿಸುವೆ
ನಸುನಕ್ಕು
ನಿನ್ನ ಮೌನವನೇ ನಾ ತಿಳಿದಿರುವೆ ಸೊಕ್ಕು
ಅತಿಯಾದ ಕೆಲಸದ ಒತ್ತಡದಲ್ಲಿ ನೀ ಸಿಕ್ಕು
ಆದರೂ ನಿನ್ನನೇ ಪ್ರೀತಿ‌ಸುವೆ ಕನಸು ಕಟ್ಟಿ

ಯಾವಾಗಲೋ ನನ್ನ ನೆನಪಿಸಿ ಕರೆಮಾಡಿ
ನಿನ್ನ ಧ್ವನಿಯ ಮೋಡಿಗೆ ನಾನೆಲ್ಲ ಮರೆತು.
ನಿನ್ನ ಆಂತರ್ಯದ ಸಿಹಿಜೇನಲಿ ಬೆರೆತು
ನಾನಿನ್ನು ಪ್ರೀತಿಸುತಿರುವೆ ನಿನ್ನನೇ ಬಯಸಿ

ಹೇ ಮೌನಿಯೇ ನೀ ಹೇಗಿದ್ದರೂ ಗುಣ ಚಿನ್ನವು
ನಿನ್ನ ಮರೆಯದಂತೆ ಬಂಧಿಸಿಹುದು ದೈವವು
ದೇವರಂಥ ಗೆಳೆಯ ಮನ್ನಿಸು ನೂರೆಂಟು ತಪ್ಪು
ಎಂದಿಗೂ ಮರೆಯಲಾರೆ ನಿನ್ನ ದೂರಲಾರೆ

*************************

One thought on “ನಿನ್ನನೇ ಪ್ರೀತಿಸುವೆ

  1. ಅದುವೇ ಪ್ರೀತಿಯ ನಾಟಿಗೆ.ಚಿಗುರಬೇಕು ಅನುದಿನದ ಬದುಕಿನ ಹಸಿರು.ಸ್ವೀಕೃತಿಯಾಗುತ್ತಲೆ ಇರಬೇಕು ಪ್ರೀತಿಯ ಸಂಕೇತಗಳು.

Leave a Reply

Back To Top