ಕವಿತೆ
ಪಡಸಾಲೆ
ಮಂಜೇಶ್ ದೇವಗಳ್ಳಿ
ಹಟ್ಟಿ ಮುಂದೆ ಹಜ್ಜಾರದಗಲ ಸೂರಡಿ ನೆಲೆ
ಕಂದಯ್ಯನ ಬಳಗ ಬೆರೆತು ಬೆಳೆದ ಜಗ್ಗುಲಿ
ಮನೆಯೊಡೆಯಗೆ ನೆರಳಾಗಿ ತುಸು ನೆಮ್ಮದಿ
ನೆರೆಹೊರೆ ಜನರ ಜೊತೆಗೂಡಿ ಕಳೆದ ಇರುಳು
ನೆತ್ತಿ ಬಿಸಿಲಿಗೆ ಜಡಿ ಮಳೆಗೆ ಆಸರೆಯ ಗೂಡು
ಕಣ್ಣಾಮುಚ್ಚಾಲೆ ಚೌಕಬಾರ ಆಣೆಕಲ್ಲ ಆಟವು
ಕಡ್ಡಿ ಬಳಪದಲಿ ಗೀಜಿ ಸುಣ್ಣದ ಕಲ್ಲ ಅಕ್ಷರವು
ಬೀಸೊಕಲ್ಲ ಬೀಸಿ ಸೇರ ತುಂಬಿ ಅಳೆದ ಜೋಳ
ಪಡಸಾಲೆಯೊಂದು ಬದುಕ ಕಟ್ಟಿದ ಶಾಲೆಯು !
************************************