ಉಡ್ಡಾಣ

ಉಡ್ಡಾಣ

ಕಥೆ ಉಡ್ಡಾಣ ಹೇಮಾ ಸದಾನಂದ್  ಅಮೀನ್   ಎಡೆಬಿಡದೆ ಅಳುವ ಆ ಮಗುವಿನ  ತಾಯಿಯ ಬೇಜವಾಬ್ದಾರಿತನವನ್ನು ನೋಡಿ ಯಾರೂ ಸಿಡಿಮಿಡಿಗೊಳ್ಳುವದು ಸಹಜವೇ. ಆದರೆ ಇದು  ಫಸ್ಟ್ ಕ್ಲಾಸ್ ಕಂಪಾರ್ಟ್ಮೆಂಟಿನಲ್ಲಿ  ಆಗಿರುವುದರಿಂದ ಕೇವಲ ಮುಖ ಸಿಂಡರಿಸಿ, “  ತಾನು ಡಿಸ್ಟರ್ಬ್ ಆಗಿದ್ದೇನೆ. ದಯಮಾಡಿ ನಿಮ್ಮ ಸಮಸ್ಯೆಯನ್ನು  ಆದಷ್ಟು ಬೇಗ ಬಗೆಹರಿಸಿಕೊಳ್ಳಿ “ ಎಂದು ವಕ್ರ ದೃಷ್ಟಿಯಿಂದಲೇ ಎಚ್ಚರಿಕೆ ಕೊಡುವ ಮನಸ್ಥಿತಿಯುಳ್ಳವರ ಮಧ್ಯ ಮೂರೂ ತಿಂಗಳ ಗರ್ಭಿಣಿಯಾಗಿದ್ದ  ಸಮೀಕ್ಷಳ ಮನಸ್ಸು  ತೀರ ವಿಚಲಿತಗೊಂಡಿತ್ತು. ಆಕೆ ಆ ತಾಯಿ ಮಗುವನ್ನು ಒಂದೇ […]

ನೀ ಬಂದ ಘಳಿಗೆ

ಕವಿತೆ ನೀ ಬಂದ ಘಳಿಗೆ ಅನ್ನಪೂರ್ಣಾ ಬೆಜಪ್ಪೆ ಮಲಗು ಮಲಗೆನ್ನ ಕಂದಮಲಗೆನ್ನ ಹೆಗಲಿನಲಿಕಾಯುವೆನು ಅನವರತ ಭಯಬೇಡ ಮಗುವೆಸವಿಯುತಿರು ಪ್ರತಿ ಕ್ಷಣವನಲುಗದೆಯೆ ಕೊರಗದೆಯೆಬಾಳ ಹಾದಿಯಲೆನಗೆ ಬಲವದುವು ನಿನ್ನ ನಗುವೆ ರವಿಯು ಉದಿಸುವ ವೇಳೆನಲಿವ ಇಳೆಯದೆ ಸುಖವುನೀ ನನ್ನ ಮಡಿಲ ತುಂಬುತಲಿ ಬಂದ ಘಳಿಗೆಎಳೆಯಬೆರಳಿನ ಸ್ಪರ್ಶದಲಿನೂರು ತಂತಿಯು ಮಿಡಿದುಎದೆಯ ನೋವೆಲ್ಲ ಮರೆಯಾದಂತೆ ಮರೆಗೆ ಮುಪ್ಪು ಕಾಡುವವರೆಗೆತಪ್ಪು ಒಪ್ಪುಗಳ ಅರುಹಿತೆಪ್ಪವಾಗುತ ಬರುವೆ ಬಾಳ ಯಾನದಲ್ಲಿಕಪ್ಪು ಮೋಡವು ಸರಿದುತುಪ್ಪದಂತೆಯೆ ಘಮಿಸಿಒಪ್ಪವಾಗಿರಲಿ ಬದುಕು ಸವಿ ನಗುವ ಚೆಲ್ಲಿ **********************

ತಲ ಷಟ್ಪದಿಯಲ್ಲೊಂದು ಶಿಶುಗೀತೆ

ಪುಟ್ಟನ ಮನೆ ತೇಜಾವತಿ ಹೆಚ್.ಡಿ. ಒಮ್ಮೆ ಪುಟ್ಟಅಮ್ಮನೊಡನೆಸಾಗರ ನೋಡಲೋದರಾಶಿ ರಾಶಿಉಸುಕು ಕಂಡುಕುಣಿದು ಕುಣಿದು ಹಿಗ್ಗಿದ || ಪುಟ್ಟ ನುಣುಪುಉಸುಕಿನಲ್ಲಿಚಂದ ಮನೆಯ ಕಟ್ಟಿದಅಲೆಯು ಬಂದುಕೊಚ್ಚಿ ಹೊಯ್ದುಅಮ್ಮಾ! ಎಂದು ಕೂಗಿದ || ಅಮ್ಮ ಬಂದುಹೇಳು ಕಂದಏಕೆ ಅಳುವೆ ಎನ್ನಲುನೋವಿನಿಂದಉರುಳಿ ಬಿದ್ದಮನೆಯ ತೋರಿ ಹಲುಬಿದ || ಕೇಳು ಮಗನೆಏಕೆ ಅಳುವೆಮರಳ ಮನೆಯು ಕ್ಷಣಿಕವುನೀನು ಕಟ್ಟುಮನದ ಮನೆಯಆತ್ಮ ಛಲವು ಜೊತೆಗಿದೆ || ಒಡನೆ ಪುಟ್ಟಎದ್ದು ನಿಂತುಅಮ್ಮನಪ್ಪಿ ಹೇಳಿದಬಿಡೆನು ನಾನುನಿನ್ನ ಮಾತಒಪ್ಪಿಕೊಂಡೆ ಎಂದನು || ಮಗನ ನುಡಿಯಕೇಳಿ ಅಮ್ಮಪ್ರೀತಿ ಧಾರೆ ಎರೆದಳುಮಿಂದ ಪುಟ್ಟಮಡಿಲ ಸುಖದಿಹೊಸತು […]

ಗಜಲ್

ಗಜಲ್ ಕೆ.ಸುನಂದಾ ನಿನ್ನ ಕಂಡ ಕ್ಷಣದಿಂದ ಆನಂದದ ಭಾಷ್ಪಗಳು ಸುರಿಯುತಿದೆ ಗೆಳೆಯಆಡಿದ ಮಾತುಗಳೆಲ್ಲ ಮಧುರ ಸಂಗೀತದಂತೆ ಸೆಳೆಯುತಿದೆ ಗೆಳೆಯ ಅದೆಷ್ಟೋ ವರ್ಷಗಳಿಂದ ಕದಲದೆ ಕಾಯುತ್ತಿರುವೆ ನೀನು ಬರುವೆ ಎಂದುವಸಂತನ ಆಗಮನದ ಆನಂದವಿಂದು ನಮ್ಮಲಿ ಉಲಿಯುತಿದೆ ಗೆಳೆಯ ಮೌನವೆ ಎನ್ನ ಬದುಕೆಂದು ದೂಡುತ್ತಲಿದ್ದೆ ಕಹಿಯಾದ ಕ್ಷಣಗಳನ್ನುಬರಡಾದ ಭೂವಿಗೆ ವರ್ಷಧಾರೆ ಬಂದಂತೆ ಹರ್ಷ ಮೆರೆಯುತಿದೆ ಗೆಳೆಯ ಪವಿತ್ರ ಪ್ರೇಮಕೆ ಆತಂಕಗಳು ಹೆಚ್ಚು ಕೊನೆಗೆ ಜಯ ಸಿಕ್ಕೇಸಿಗುವುದುಅಂತರಂಗದ ಖುಷಿಗೆ ಅಂತರಾತ್ಮದ ನಂದಾದೀಪ ಉರಿಯುತಿದೆ ಗೆಳಯ ಸರ್ವಸ್ವವೂ ನೀನೆ ಎಂದು ನಂಬಿದ್ದ “ನಂದೆ”ಗೆ […]

ಬಂಡಾರ ಬಳೆದ ಹಣಿ

ಕವಿತೆ ಬಂಡಾರ ಬಳೆದ ಹಣಿ ಡಾ.ಸುಜಾತಾ ಸಿ. ಬಂಡಾರ ಬಳೆದ ಹಣಿಬಾಯಿತುಂಬ ಎಲೆ ಅಡಿಕೆಜೋತು ಬಿದ್ದ ಗುಳಿ ಕೆನ್ಯೆಜಿಡ್ಡು ಗಟ್ಟಿದ ಜಟಾಧರಿಕೈ ತುಂಬಾ ಹಸಿರ ಬಳಿಎದೆ ತುಂಬಾ ಕವಡೆ ಸರಮೈ ತುಂಬಾ ಹಸಿರುಟ್ಟುಪಡಲಗಿ ಹಿಡಿದುಓಣಿ ಓಣಿ ತಿರುಗುವಳುಜೋಗತಿ ಎಂದು ಹೆಸರಿಟ್ಟುಕೂಗುವರೆಲ್ಲರೂಕತ್ತಲೆಯ ಬದುಕಲ್ಲಿಸದಾ ಬುಡ್ಡಿ ಚಿಮಣದಬೆಳಕಾಗಿಸಿ ಹಂಬಲಿಸಿಸೂರ್ಯನ ಬೆಳಕಿಗೆಜೋಗಕ್ಕೆ ಜೊಗತಿಊಧೋ ಉಧೋ ಎಂದುಹೋರಟಳು ಮಕ್ಕಳ ಸಲುವಲೆಂದುಕಂಡ ಕಣ್ಣು ಉರಿ ಕೆಂಡವಾಗಿಗೈಯ್ಯಾಳಿ ಎಂದುಕೊಟ್ಟುಬಿಟ್ಟರು ಪಟ್ಟವಒಣ ರೊಟ್ಟಿ ಜೊಳಕೆಕೈ ಚಾಚಿ ಜೋಳಿಗೆ ಬಾಯಿತೆರೆದಾಗ ಮೂಗು ಮುರಿಯುತ್ತಲೇಒಳಹೋದ ಹೆಣ್ಣುವಟಗುಟ್ಟಿ ತಂದಾಕಿದಹಳಸಲು ಜೊಳಿಗೆ ಬಟ್ಟೆಅವಳ […]

ಅಂಕಣ ಬರಹ ರಾಮಕೃಷ್ಣ ಗುಂದಿ ಆತ್ಮಕತೆ–03 ಅಕ್ಷರ ಬೀಜದ ಬೆಳಕಿನತ್ತ….. ಗುಂದಿ ಹಿತ್ತಲಿನ ಎರಡೂ ಕುಟುಂಬಗಳು ಗೇಯ್ದು ಉಣ್ಣುವ’ ಬದುಕಿನಲ್ಲಿ ಸಂತೃಪ್ತಿ ಕಂಡಿದ್ದವು. ಅಕ್ಷರ ದಾರಿದ್ರö್ಯದ ದಟ್ಟ ಬಡತನವೊಂದು ಅವರಿಗೆ ಬಡತನವೇ ಅನ್ನಿಸಿರಲಿಲ್ಲ. ಅಂಥ ಕುಟುಂಬಗಳಲ್ಲಿ ಗಣಪು ಎಂಬ ಹುಡುಗನೊಬ್ಬ ಹೇಗೋ ಅಕ್ಷರ ಕಲಿಕೆಗೆ ಆಸೆಪಟ್ಟು ಅಕ್ಷರ ಬೀಜದ ಬೆಳಕಿನ ಬೆನ್ನು ಹತ್ತಿದ. ಸಮೀಪದ ಹೆಗ್ರೆ ಶಾಲೆಯಲ್ಲಿ ಅ, ಆ ಕಲಿಕೆಯ ಹಂತದಲ್ಲೆ ತಾಯಿ ತೀರಿಕೊಂಡಳು. ಶಾಲೆ ಕಲಿಯುವ ಹಂಬಲಕ್ಕೆ ಮತ್ತುಷ್ಟು ತೊಡಕುಗಳಾದವು. ಮತ್ತೆ ಕೆಲವು ದಿನಗಳ […]

ಗಜಲ್

ಗಜಲ್ ಅರುಣಾ ನರೇಂದ್ರ ಬಾನು ಬಂಜೆಯಾಗಿದೆ ನಿಲ್ಲು ಮೋಡ ಕಟ್ಟಲಿ ನವಿಲಾಗಿ ಬಿಚ್ಚಿಕೊಳ್ಳುತ್ತೇನೆಭೂಮಿ ಬರಡಾಗಿದೆ ನಿಲ್ಲು ಸೋನೆಸುರಿಯಲಿ ಮಳೆ ಬಿಲ್ಲಾಗಿ ಬಿಚ್ಚಿಕೊಳ್ಳುತ್ತೇನೆ ಹಿಗ್ಗಿರದ ಮೊಗ್ಗಿನೆದೆಯಲಿ ಅದೆಂಥ ಕಠೋರ ಅಡಗಿದೆ ಸಜನಾನಗೆ ಮಿಂಚನ್ನೊಮ್ಮೆ ಮುಡಿಸು ತುಟಿ ಬಿರಿದು ಹೂವಾಗಿ ಬಿಚ್ಚಿಕೊಳ್ಳುತ್ತೇನೆ ಬಿಡಿಸಲಾಗದ ಬಂಧದ ಸಾವಿರಾರು ಎಳೆಗಳು ಸಿಕ್ಕುಗಟ್ಟಿವೆಒಂದೊಂದೇ ಗಂಟು ನಾಜೂಕಾಗಿ ಬಿಡಿಸು ಭಾವವಾಗಿ ಬಿಚ್ಚಿಕೊಳ್ಳುತ್ತೇನೆ ಧಗಧಗಿಸುವ ಬಿಸಿಲ ಝಳಕಿಂತ ಒಡಲ ಬೇಗೆಯೇ ಹೆಚ್ಚು ಸುಡುತ್ತಿದೆನೋವಿರಲಿ ಕಾವಿರಲಿ ಜೊತೆಗೆ ನೀನಿರಲು ಕೊಡೆಯಾಗಿ ಬಿಚ್ಚಿಕೊಳ್ಳುತ್ತೇನೆ ಕಾಲ ಮರೆವೆಂಬ ಮುಲಾಮು ಸವರಿ ಮನದ […]

ನೀಲ ಮೋಹ.

ಕವಿತೆ ನೀಲ ಮೋಹ. ನಂದಿನಿ ವಿಶ್ವನಾಥ ಹೆದ್ದುರ್ಗ ಪ್ರೀತಿ ನೆರೆನುಗ್ಗಿದಾಗೆಲ್ಲಾನಾನವನ ನಿನ್ನ ಹೆಸರಲ್ಲೇಕರೆಯುವೆ,ಬಲ್ಲೆಯಾ?ನನ್ನ ಉತ್ಕಟತೆಗೆ ಒದಗುತ್ತಿ ನೀನುಆಗಾಗ ಚಲುವ.ನವುರಾಗಿ ನಿನ್ನ ಉಸುರುವಾಗೆಲ್ಲಾಅಂಗುಲಂಗುಲದಲ್ಲೂಸಂಗಕ್ಕೆ ಅರಳುವಬಂಗಾರದ ಹೂವು ನಾನು. ಆಗೆಲ್ಲಾ ಬೆಚ್ಚಿ ಬೀಳುತ್ತಾನೆಇವನು.ಮತ್ತ ಮತ್ಸರದಲಿ ಪ್ರೇಮದ ಹೊಸಸಂವತ್ಸರ ಶುರುವಾಗುತ್ತದೆಇಲ್ಲಿ.ಬಿಗಿ ಕಳೆದುಕೊಂಡಿದ್ದ ನನ್ನಹಳೆಯ ಒಲವಿಗೆಸಿಹಿಹಗೆಯಿಂದಲೆ ಸೊಗ ನೀಡುತಾನೆಮತ್ತೆ. ಅಡಿಗಡಿಗೆ ಬಣ್ಣ ಬದಲಿಸುವನಭದ ಮೋಹನನೇನೆಲ ಮುಗಿಲ ಹೊಲೆಯುವಚತುರ ಚಮ್ಮಾರನೇನೇವರಿಕೆಯೂ ಇರದೆ ನೆನಪಿಗೇನಲುಗುವಾಗೆಲ್ಲಾನೀನಾರೆಂದು ತಿಳಿವ ಕುತೂಹಲನನಗೆ. ಅವಳಾರೋ ನಿತ್ಯ ಕನ್ನೆಬಿಚ್ಚಿ ಬಿಸುಟ ಸೀರೆಯೆನಿಸುತ್ತಿನಕಾಶೆ ನಕ್ಷೆ ಹೆಸರು ವಿಳಾಸವಿರದಊರೆನಿಸುತ್ತಿ.ಆಕಾರವಿರದ ಮಳೆಯ ತತ್ತಿಗಳಹೊತ್ತು ನಡೆವ ಬಟಾಬಯಲೆನಿಸುತ್ತಿ.ನೆಲದ ನೀರೆಲ್ಲಾ […]

ಯಾರಿಗೂ ನಾವು ಕಾಯುವುದಿಲ್ಲ

ಕವಿತೆ ಯಾರಿಗೂ ನಾವು ಕಾಯುವುದಿಲ್ಲ ನೂತನ ದೊ ಶೆಟ್ಟಿ ಕುಂಡದಿಂದೆದ್ದು ಚಿಗುರಿದ ಗಿಡದಲ್ಲಿಕಡುಕೆಂಪಾಗಿ ಜೀವ ತುಂಬಿಕೊಂಡಿತ್ತುಆ ಗುಲಾಬಿ ಹೂ ಎಳೆಯ ಹೊನ್ನ ಕಿರಣಗಳುಮಲಗಿದ್ದ ಇಬ್ಬನಿಗೊಂದುಹೂ ಮುತ್ತನಿಕ್ಕಿದಾಗನಾಚುತ್ತಲೇ ಸುಖಿಸಿತ್ತು. ಮುಳ್ಳುಗಳ ಸಂಗವೇಕೆಂದುದೂರ ನಿಂತಕರಗಳಿಗಾಗಿ ಕಾತರಿಸುತ್ತತಂಗಾಳಿಯಲಿ ತೂಗಿ ಸಂದೇಶ ಕಳಿಸಿತ್ತು ಏರಿದ ಬಿಸಿಲಲ್ಲಿ ಕಿರುಗಣ್ಣಾಗಿಈಗ ಬರಬಹುದೇ?ಕೇಳಿದ ಪ್ರಶ್ನೆಗೆಇಬ್ಬನಿಯ ನಿರುತ್ತರ ಹೊನ್ನ ಕಿರಣಗಳ ತೆಕ್ಕೆಯಲ್ಲಿಸೇರಿ ಹೋದ ಇಬ್ಬನಿಯ ಕಂಡುಗುಲಾಬಿಗೂ ತವಕಎಲ್ಲಿ ನನ್ನ ತಬ್ಬುವ ಕೈಗಳು ಬೆಳಕು ಕರಗಿದ ಸಂಜೆಯಲಿರಾತ್ರಿ ರಾಣಿಗಳು ನಕ್ಕು ಕೇಳಿದೆವುಏಕೆ ಕಾಯುವೆ? ಕಿರಣ, ಇಬ್ಬನಿ, ಸಂದೇಶಯಾರಿಗೂ ನಾವು ಕಾಯುವುದಿಲ್ಲಅರಳುತ್ತೇವೆ, […]

ಕೊಡವಿ ( ಕನ್ಯೆ )

ಕವಿತೆ ಕೊಡವಿ ( ಕನ್ಯೆ ) ಭಾಮಿನಿ ಷಟ್ಪದಿ ಅಭಿಜ್ಞಾ ಪಿ ಎಮ್ ಗೌಡ ಕೊಡವಿ ಕಂಗಳ ಕಾಂತಿ ಹೆಚ್ಟುತಬಡವಿ ಹೆಣ್ಣಲಿ ಕಾಶ ತುಂಬಿದೆನಡುವೆ ನೊಸಲದ ನಲಿವ ಹೆರಳದು ನಿತ್ಯ ಜೀಕುತಿದೆಕೊಡುಗೆ ನೀಡುವ ಮನದ ಬಿಂಬದಿಗಡನೆ ಹೊಳೆಯುವ ಹೃದಯ ಸಾಕ್ಷಿಯುಜಡಿಪ ಕೂಜನ ಕಂಪಿನಲೆಯಲಿ ಕುಣಿದು ಜಿಗಿಯುತಿದೆ|| ಮೊಗದ ಭಾಷೆಯು ಕೂಗಿ ಹೇಳಿದೆನಗುವ ಮನಸಿನ ನೂರು ಭಾವವಮಗುವ ಮುಗ್ದತೆ ಮೀರಿ ನಿಂತಿದ ಭವ್ಯ ಕೌಮಾರಿಜಗದ ಚೆಲುವದು ತುಂಬಿ ಕೊಂಡಿದೆಗಗನ ಚುಂಬಿತ ವೃಕ್ಷ ರಾಶಿಯುಸುಗುಣ ಸದ್ಗುಣಿ ನಿತ್ಯ ಶೋಭಿತ ಚೆಲ್ವಿ […]

Back To Top