ಗೊಲ್ಲರ ರಾಮವ್ವ

ಗೊಲ್ಲರ ರಾಮವ್ವ

ಅನುವಾದಿತ ಕಥೆ ಗೊಲ್ಲರ ರಾಮವ್ವ(ಭಾಗ- ಒಂದು) ಮಾಜೀ ಪ್ರಧಾನ ಮಂತ್ರಿ ಶ್ರೀ ಪಿ.ವಿ. ನರಸಿಂಹರಾವ್ ಅವರ ಕಥೆಯ ಕನ್ನಡಾನುವಾದ ಪಿ.ವಿ.ನರಸಿಂಹರಾವ್ ತಮ್ಮ ಮಾತೃಭಾಷೆಯಾದ ತೆಲುಗಿನಲ್ಲೇ ಅಲ್ಲದೇ ಹಿಂದಿ, ಉರ್ದು, ಮರಾಠಿ ಭಾಷೆಗಳಲ್ಲಿ ಪರಿಣತಿ ಹೊಂದಿದ್ದರು. ತೆಲುಗಿನಲ್ಲಿ ಜ್ಞಾನ ಪೀಠ ಪ್ರಶಸ್ತಿ‌ ಪಡೆದ ವಿಶ್ವನಾಥ ಸತ್ಯನಾರಾಯಣ ಅವರವೇಯಿ ಪಡಗಲು (ಸಾವಿರ ಹೆಡೆ) ಕಾದಂಬರಿಯನ್ನು ಹಿಂದಿಗೆ “ಸಹಸ್ರ ಫಣ್” ಎಂಬ ಹೆಸರಲ್ಲಿ ಅನುವಾದ ಮಾಡಿದ್ದಾರೆ. ಮತ್ತೆ ಮರಾಠಿಯ ಹರಿನಾರಾಯಣ ಆಪ್ಟೆಯವರ ” ಪಣ್ ಲಕ್ಷ್ಯತ್ ಕೋಣ್ ಘೇತೊ ಕಾದಂಬರಿಯನ್ನು ತೆಲುಗಿಗೆ […]

ಉಳಿದ ಸಾರ್ಥಕತೆ!

ಕವಿತೆ ಉಳಿದ ಸಾರ್ಥಕತೆ! ಸುಮನಸ್ವಿನಿ ನೀ ಅರ್ಧ ನಕ್ಕು ಉಳಿಸಿದಸಣ್ಣನಗು ನಾನು,ಸ್ವಲ್ಪ ಓದಿ ಕಿವಿ ಮಡಚಿಟ್ಟಹಳೇ ಪುಸ್ತಕ.. ನೀ ಅಷ್ಟುದ್ದ ನಡೆದು ಮಿಗಿಸಿದಕಾಲುಹಾದಿ ನಾನು,ಚೂರೇ ಅನುಭವಿಸಿ ಎದ್ದುಹೋದಸಂಜೆ ಏಕಾಂತ.. ನೀ ತುಸು ಹೊತ್ತೇ ಕೈಯಲಿಟ್ಟುನಲಿದ ಹೂ ನಾನು,ತೃಪ್ತಿಯಾದಷ್ಟು ಸವಿದು ಇರಿಸಿದದೇವಳದ ಪ್ರಸಾದ. ನಿನ್ನೇ ಧೇನಿಸುತ್ತೇನೆ ಈ ಕ್ಷಣಕ್ಕೂದಾರಿಬದಿಯ ಮೈಗಲ್ಲಿನಂತೆಮಿಕ್ಕುಳಿದ ಸಾರ್ಥಕತೆಯತುಂಬಿಕೊಳುವ ನಿರೀಕ್ಷೆಯಲಿ! ****************

ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ

ಅಂಕಣ ಬರಹ ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮತ್ತು ಕೊಲೆ! ಪ್ರತಿನಿತ್ಯ ಇಂತಹ ಅಸಂಖ್ಯ ಸುದ್ದಿಗಳು ಸರ್ವೆ ಸಾಮಾನ್ಯ ಎನಿಸುವಷ್ಟು ಬರುತ್ತಿರುತ್ತವೆ. ಓದುವುದಕ್ಕೇ ಆಗದಂಥ ವಿಚಿತ್ರ ಸಂಕಟ… ನಿರ್ಲಕ್ಷಿಸುವುದು ಸಾಧ್ಯವಿಲ್ಲ, ಏನಾದರೂ ಮಾಡುವಾ ಎಂದರೆ ಮಾಡಲಾಗದ ಅಸಹಾಯಕತೆ… ಹಿಂದೆಯೇ ಇಂಥವನ್ನ ಎಷ್ಟು ದಿನ ಅಂತ ಸಹಿಸಿಕೊಳ್ಳುವುದು ಎನ್ನುವ ಬೆಂಬಿಡದ ಪ್ರಶ್ನೆ… ಇನ್ನೂ ಅರಳದ ಮೊಗ್ಗನ್ನ ತಮ್ಮ ಕೆಟ್ಟ ದಾಹಕ್ಕೆ ಬಳಸಿ ಬಿಸಾಡುತ್ತಾರಲ್ಲ, ರಕ್ತ ಕುದಿಯುತ್ತದೆ. ಎಲ್ಲೋ ಕೆಲ ಕಂದಮ್ಮಗಳಿಗೆ ಒಂದಷ್ಟು ಸಂತಾಪವಾದರೂ […]

ಅಂಕಣ ಬರಹ ” ಹೆಣ್ಣೆಂಬ ತಾರತಮ್ಯವೇ ಪದೆ ಪದೆ ಕಾಡುವ ವಿಷಯ “ ಇಂದುಮತಿ ಲಮಾಣಿ ಪರಿಚಯ; ಇಂದುಮತಿ ಲಮಾಣಿ. ಬಿಜಾಪುರದವರು. ೧೯೫೯ ಜನನ. ಓದಿದ್ದು ಪಿಯುಸಿ.ಕತೆ ,ಕವನ ಸಂಕಲನ ,ಸಂಪಾದನಾ ಕೃತಿ ಸೇರಿ ೧೮ ಕೃತಿಗಳನ್ನು ಪ್ರಕಟಿಸಿದ್ದಾರೆ. ನನ್ನ ಆಸೆ ಎಂಬ ಕವನ ೯ ನೇ ತರಗತಿ ಕನ್ನಡ ಪಠ್ಯದಲ್ಲಿ ಸೇರಿದೆ. ಅತ್ತಿಮಬ್ಬೆ,ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದಿದ್ದಾರೆ.‌ ಬಿಜಾಪುರದ ಬಂಜಾರ ಸಮಾಜ ಸೇವಾ ಸಂಘದ ಅಧ್ಯಕ್ಷೆಯಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಬಿಜಾಪುರಮಹಿಳಾ ಸೇನಾ ಸಾಹಿತ್ಯ ಸಂಗಮದ […]

ಮೋಹದ ಬೆನ್ನು ಹತ್ತಿದರೆ . . . . .

ಲೇಖನ ಮೋಹದ ಬೆನ್ನು ಹತ್ತಿದರೆ ಜಯಶ್ರೀ.ಜೆ. ಅಬ್ಬಿಗೇರಿ  ಹೊಸದಾಗಿ ಮದುವೆಯಾದ ದಿನಗಳಲ್ಲಿ ಬಾಳ ಸಂಗಾತಿಯ ಮೋಹ ಅತಿಯೆನಿಸುವಷ್ಟು ಇರುತ್ತದೆ ಎಂದು ವಿಶೇಷವಾಗಿ ಹೇಳಬೇಕಿಲ್ಲ. ಈ ಮೋಹವೆಂಬುದು ಲೋಕಾರೂಢಿ. ಅದರಲ್ಲೇನು ವಿಶೇಷವಿದೆ ಎಂದು ಮನಸ್ಸು ಪ್ರಶ್ನೆ ಹಾಕಿ ನಗುವುದುಂಟು. ಮೋಹದ ಕುರಿತಾಗಿ ಪುಂಖಾನುಪುಂಖವಾಗಿ ಘಟನೆಗಳನ್ನು ಉಲ್ಲೇಖಿಸಬಹುದು. ಅದರಲ್ಲೂ ತುಳಸಿದಾಸರ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದ್ದದ್ದೇ ಇದೆ. ಅದನ್ನು ಹಾಗೆ ಒಮ್ಮೆ ಮೆಲಕು ಹಾಕುವುದಾದರೆ ಹೀಗೆ ಸಾಗುತ್ತದೆ. ತುಳಸಿದಾಸರಿಗೆ ತಮ್ಮ ಪತ್ನಿಯಲ್ಲಿ ಅಪಾರ ಆಸಕ್ತಿ. ಆಕೆಯನ್ನು ಬಿಟ್ಟಿರಲು ಮನಸ್ಸು ಒಪ್ಪುತ್ತಲೇ […]

ಕೊನೆಯ ಬೇಡಿಕೆ

ಪೂರ್ಣಿ ಹೋಟೆಲ್‌ನಿಂದ ಹೊರಬಂದಂತೆ ಕಂಡ ಅಜ್ಜ ಕತ್ತಲ ಕಾಲದ ಜೊತೆ ಮಲಗಿ ಮಿಲನ್ ಕ್ಲಾತ್ ಶಾಪ್ ಕಟ್ಟಿ ಹೊರಗ ನಿದ್ದೆ ಹೋಗಿದ್ದ.

“ಬೊಪ್ಪ ನನ್ನನ್ನು ಕ್ಷಮಿಸು”

ಉದಯ ಕುಮಾರ ಹಬ್ಬು ಅವರು ಈ ಆತ್ಮ ಕಥನದ ಮೂಲಕ ಒಂದು ಸಮೃದ್ಧ ಬಾಲ್ಯದ ಅಂತರಂಗವನ್ನು ಆ ಮೂಲಕ ಸಮಾಜದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಿತ್ರಣದ ಉಣಿಸನ್ನೂ ನೀಡಿರುವುದು ಓದುಗರಿಗೆ ಪ್ರಿಯವಾಗುವ ಸಂಗತಿ.

ಆನೆ ಸಾಕಲು ಹೊರಟವಳು

“ ಕಲ್ಲು ಹೃದಯ ಮಾಡಿ ಜೀಪಿಗೆ ಕಟ್ಟಿದ್ದ ಹಗ್ಗ ಬಿಚ್ಚಿದೆ. ಕರು ನನ್ನ ಮುಖ ನೋಡಿತು , ‘ ಹೋಗಿ ಬರುತ್ತೇನೆ ‘ ಎನ್ನುವಂತೆ . ಅಷ್ಟೆ. ಮರುಕ್ಷಣ ಜೀಪಿನಿಂದ ಹಾರಿತು. ಕಣ್ಣಿಗೆ ಕಾಣದಂತೆ ದಟ್ಟ ಕಾಡಿನೊಳಗೆ ಮರೆಯಾಯಿತು. ‘ ಮೇದು ಹೊಟ್ಟೆ ತುಂಬಿಸು . ಕ್ಷಮಿಸು ‘ ಮನದಲ್ಲಿ ಹೇಳಿಕೊಂಡೆ.

ಕಾವ್ಯಯಾನ

ದುಃಖವ ನೇವರಿಸುವೆನೊಮ್ಮೆ ನಾಗರಾಜ್ ಹರಪನಹಳ್ಳಿ ನಿನ್ನ ಬೆರಳ ಹಿಡಿದು ಮಾತಾಡಿಸುವೆಅವುಗಳಿಗೆ ಅಂಟಿದ ದುಃಖವಸಂತೈಸಿ ನೇವರಿಸುವೆನೊಮ್ಮ ಉಸಿರೇ ನೀ ನನ್ನವಳು ನಿನ್ನ ಮುಂಗುರುಳ ಮೂಗಿನ ಮೇಲಿಂದ ಹಿಂದೆ ಸರಿಸಿ, ಕಿವಿಯ ಸಂದಿಯಲಿ ಸಿಕ್ಕಿಸಿ, ತಂಟೆ ತಕರಾರು ಮಾಡಬೇಡಿ ಎಂದು ವಿನಂತಿಸುವೆನಾವಿಬ್ಬರೂ ಮಾತಾಡುವಾಗ ಬೆಳಕೇ ನೀ ನನ್ನವಳು ನಿನ್ನ ಕಿವಿಯೋಲೆಯ ವೈಯ್ಯಾರವ-ನೊಮ್ಮೆ ಹಿಡಿದು ಮಾತಾಡಿಸುವೆನಮ್ಮಿಬ್ಬರ ಮಾತಿನ ಮಧ್ಯೆನೀವೇಕೆ ಇಣುಕುವುದೆಂದುಜೋರು ಮಾಡುವೆ ..ನಾವಿಬ್ಬರೂ ಪಿಸುಮಾತುನಾಡುವ ಮಧ್ಯೆಅವುಗಳ ಪ್ರಶ್ನಿಸುವೆ ಒಲವೇ ನೀ ನನ್ನವಳು ನಿನ್ನ ಕೈ ಬಳೆ ಸದ್ದಿಗೆ ಪ್ರೀತಿಯಿಂದ ಎಚ್ಚರಿಸುವೆಅಪ್ತ ಮಾತಿನ […]

ಈಗಲೂ ನನಗೆ ತಾಯಪ್ರೀತಿ ಅಂದಾಗ ಮಹಾ ನಿಷ್ಠುರಿಯಾಗಿದ್ದ, ಸಂಸಾರ ಸಂಭಾಳಿಸುತ್ತ ಸಿಡುಕಿಯಾಗಿದ್ದ ನನ್ನಮ್ಮ ನೆನಪಾಗುವುದಿಲ್ಲ. ಮಕ್ಕಳಿಲ್ಲದೆ ನನ್ನಂತಹವರನ್ನು ಸಾಕಿದ ಪಾರ್ವತಕ್ಕ ನೆನಪಾಗುತ್ತಾಳೆ. ಕೆಂಪನೆಯ ನಕ್ಕಾಗ ನಿರಿಗೆಗಟ್ಟುವ ಅವಳ ಮುಖ ನೆನಪಾಗುತ್ತದೆ.

Back To Top