ಮಾನವೀಯತೆ ಮರೆಸುತ್ತಿದೆ ಕೊರೊನ

ಮಾನವೀಯತೆ ಮರೆಸುತ್ತಿದೆ ಕೊರೊನ

ಲೇಖನ ಮಾನವೀಯತೆ ಮರೆಸುತ್ತಿದೆ ಕೊರೊನ ರಾಧಾ ಆರ್.ಡಿ. ತವರು ಮನೆಗೆ ಹದಿನೈದು ದಿನದ ಮಟ್ಟಿಗೆ  ಹೋಗಿದ್ದ ನಾನು ಬಿಗಿ ಲಾಕ್ಡೌನ್ ಆಗುತ್ತೆ ಎಂದು ಒಂದೇ ವಾರಕ್ಕೆ ದಿಡೀರ್ ಅಂತ ವಾಪಸ್ ಹೊರಟೆ.ಊರಿಂದ ಶಿರದ ವರೆಗೂ  ನನ್ನ  ಮತ್ತು ಪಾಪುನ ಅಪ್ಪಾಜಿ ಅಣ್ಣ ಬಿಡಬೇಕು ಅಂತ ಹಾಗೆ ಅಲ್ಲಿಂದ ನಮ್ಮನೆಯವರು ಕರೆದುಕೊಂಡು ಹೋಗಬೇಕು ಅಂತ  ಹೊರಡುವ ಮುನ್ನ ತೀರ್ಮಾನ ಆಗಿತ್ತು, ಬೆಳಗ್ಗೆ ಸುಮಾರು ಆರು ಗಂಟೆಗೆ ನಮ್ಮ ಊರಿಂದ ಹೊರಟೆವು, ಮೂರು ತಾಸಿನ ಪ್ರಯಾಣದ ನಂತರ ಅಂದರೆ ಒಂಬತ್ತು […]

ಆಪ್ತೇಷ್ಟರು

ಕವಿತೆ ಆಪ್ತೇಷ್ಟರು ಪುಷ್ಪಾ ಮಾಳ್ಕೊಪ್ಪ ನರನಲ್ಲದೇ ಮರವ ನಿಂದಿಪರೇಯನ್ನ ನಿತ್ಯ ನಿಂದಿಪರು ಬೇಕುಅವರೇ ಯನ್ನ ಆಪ್ತರು ಕಾಣಾ ಅನ್ಯರನಲ್ಲದೇ ಲೋಕದಿ ತನ್ನಾಡಿಕೊಂಬರೇಅಡಿಗಡಿಗೆ ಯನ್ನ ಆಡಿಕೊಂಬರು ಬೇಕುಅವರೆನ್ನತ್ಯಾಪ್ತರು ಕಾಣಾ ಕಡುಗೋಪವಿಲ್ಲದೆಯೆ ಜಗದಿ ಜರಿಯುವರೇಯನ್ನ ಜನುಮಕಾಗುವಷ್ಟು ಜರಿಯುವರು ಬೇಕುಅವರೆನ್ನ ಜೀವಬಂಧುಗಳು ಕಾಣಾ ಹೀನಾಯದಿಂ ಕಾಣದೇ ಎನ್ನ ಹಿತವಪ್ಪುದೆ ಮರುಳೆಹಿತವಪ್ಪುದು ಅವರಿಂದೆ ಅವರೆನ್ನ ಹರಸಿದವರು ಕಾಣಾ ಛೀ ಥೂ ಎಂದರಲ್ಲವೇ ಶ್ವಾನದಿಂ ತೆರದಿಎನ್ನ ತುಚ್ಛೀಕರಿಸುವರು ಬೇಕುಅವರೆನ್ನ ತಾಳ್ಮೆಯಂ ಹೆಚ್ಚಿಸಿದವರು ಕಾಣಾ ಕುಟುಕಿದವರಲ್ಲವೇ ಎನ್ನ ಕಣ್ಣತೆರೆಸಿದವರುಕುಟುಕತನವದು ಬೇಕುಅವರೆನ್ನ ನಿದ್ದೆಯಿಂ ಎಬ್ಬಿಸಿದವರು ಕಾಣಾ ಖಂಡಿಸಿದವರೆನ್ನ […]

ನಮ್ಮ ಪೂರ್ವಜರು ನೆಲೆಸಿದ್ದ ‘ಗುಂದಿ ಹಿತ್ತಲು’ ನಮ್ಮ ಮನೆಯಿಂದ ಕೂಗಳತೆ ದೂರಮದಲ್ಲಿಯೇ ಇತ್ತಾದರೂ ಇತ್ತೀಚೆಗೆ ಅಲ್ಲಿ ನೆಲೆಸಿದ ಕುಟುಂಬಗಳು ಮಾಸ್ಕೇರಿ ಮತ್ತು ಅಗ್ಗರಗೋಣದ ಕಡೆಗೆ ವಲಸೆ ಹೋಗಿ ಸರಕಾರಿ ಭೂಮಿ ಪಡೆದು ನೆಲೆ ಕಂಡುಕೊಂಡಿದ್ದವು

ದಾರಾವಾಹಿ ಆವರ್ತನ ಅದ್ಯಾಯ-18 ಶಂಕರನ ಭಾಗೀವನದಲ್ಲಿ ಗೋಪಾಲನ ಮನೆಯನ್ನು ಸೇರಿಸಿ ಒಟ್ಟು ಮೂವತ್ತೊಂದು ಮನೆಗಳಿವೆ. ಮುಸ್ಲೀಮರು ಮತ್ತು ಕ್ರೈಸ್ತರನ್ನು ಹೊರತುಪಡಿಸಿ ಉಳಿದ ಬಹುತೇಕ ಜಾತಿಯವರು ಭಾಗಿವನದಲ್ಲಿ ಐದು, ಆರು, ಏಳು, ಹತ್ತು ಮತ್ತು ಇಪ್ಪತ್ತು ಸೆಂಟ್ಸ್‍ಗಳ ಜಾಗದ ಮಾಲಕರಾಗಿ ಹೊಸ ಮನೆಗಳ ಒಡೆಯರಾಗಿ ನೆಮ್ಮದಿಯಿಂದ ಬಾಳುತ್ತಿದ್ದಾರೆ. ಗೋಪಾಲನ ಮನೆಯ ಪಕ್ಕದ ಮನೆ ಬ್ಯಾಂಕರ್ ನಾರಾಯಣರದ್ದು. ಅವರ ಒತ್ತಿನಲ್ಲಿ ಮರದ ವ್ಯಾಪಾರಿ ಸುಂದರಯ್ಯನವರಿದ್ದಾರೆ. ಅವರಾಚೆಗಿನದ್ದು ಜೀವವಿಮಾ ಕಂಪನಿಯ ನಿವೃತ್ತ ಉದ್ಯೋಗಿ ಲಕ್ಷ್ಮಣಯ್ಯ, ಸುಮಿತ್ರಮ್ಮ ದಂಪತಿಯದ್ದು. ಅವರ ಬಳಿಕದ್ದು ಉಮೇಶಯ್ಯನದ್ದು […]

ಪ್ರಜಾಪ್ರಭುತ್ವವಾದಿ ಬಸವಣ್ಣ

ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿರುವ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ದೇಶದ ಏಕತೆ ಈಎಲ್ಲ ಅಂಶಗಳೂ ಶರಣರ , ಅವರ ನಡೆಹಾಗೂ ನುಡಿಗಳಲ್ಲಿ ಹಾಸು ಹೊಕ್ಕಾಗಿದ್ದುದನ್ನು ವಚನಗಳಲ್ಲಿ ಕಾಣುತ್ತೇವೆ.

ಸುಂಟರಗಾಳಿ

ವಿನೀತ ಭಾವವಿಲ್ಲದ
ವಿಷಾದ ಛಾಯೆಯಲ್ಲಿ,
ಅವಕಾಶಕ್ಕೆ ಹೊಂಚುಹಾಕಿ
ಕಾತುರದಲ್ಲಿ ಕಾಯುತ್ತಲಿದೆ

ಪಾಲು

“ಅರೆ, ನಾನಿಲ್ಲವೆ. ಕೂಜಳ್ಳಿಯಲ್ಲಿ ನಾನು ನಿಲ್ಲುತ್ತೇನೆ. ಗಣೇಶ ನನ್ನ ಜೊತೆಯಲ್ಲಿಯೇ ಇಲ್ಲಿ ಇರುತ್ತಾನೆ. ಇಲ್ಲಿಯ ಆಸ್ತಿಯನ್ನು ಅವನ ಹೆಸರಿಗೇ ಬರೆದರಾಯಿತು ಆಮೇಲೆ. ಅವನು ಹಿರಿಯವನಲ್ಲವೇ?” ತಮ್ಮ ಇಲ್ಲಿಯ ತನಕದ ಅಸ್ಪಷ್ಟ ಅಭಿಪ್ರಾಯಕ್ಕೆ ಮೂರ್ತ ರೂಪ ಕೊಟ್ಟರು ಹೆಗಡೆಯವರು.

ಜೊತೆ ಜೊತೆಯಲಿ

ಅಪ್ಪ ಅಮ್ಮ. ಕೋವಿಡ ಬಗ್ಗೆ ಅವರಿಗೆ ಹೇಳಿ ಅಪ್ಪನನ್ನು ಚಿತಾಗಾರಕ್ಕೆ ಬರದಂತೆ ತಡೆದಿದ್ದೆ. ನನಗೆ, ನಾನು ಮತ್ತು ನನ್ನ ಗಂಡ ಅಷ್ಟೆ ಪ್ರಪಂಚ, ಬೇರೇ ಯಾರೂ ಬೇಕಾಗಿಲ್ಲ ಎಂದು ನಾನು ಮೂರು ವರ್ಷಕ್ಕೆ ಮುಂಚೆ ಅವರ ಎದುರಿಗೆ ಹೇಳಿದ್ದ ವಾಕ್ಯಗಳು ಈಗ ನನ್ನ ಮನಸ್ಸಿಗೆ ಈಟಿ ತೆಗೆದುಕೊಂಡು ಚುಚ್ಚುತ್ತಿರುವಂತಿತ್ತು.

ರಂಗ ರಂಗೋಲಿಯಲ್ಲಿ ಪೂರ್ಣಿಮಾ ಬರೆಯುತ್ತಾರೆ-
ಅದು ಸುಮಾರು 2009 ರ ಇಸವಿ. ಬದುಕಿನ ಸಂಕ್ರಮಣ ಕಾಲ. ಹಲವು ಕೌತುಕಗಳನ್ನು, ಹಲವು ತಿರುವುಗಳನ್ನೂ, ಹಲವು ಸಂಕಟಗಳನ್ನೂ, ಸಂಭ್ರಮಗಳನ್ನು ಯಥೇಚ್ಛವಾಗಿ ಸುರಿದುಬಿಟ್ಟಿತ್ತು.

Back To Top