ಕವಿತೆ
ಸರಿಯಿಲ್ಲದ ಗಡಿಯಾರ
ಅಬ್ಳಿ ಹೆಗಡೆ
ಗೊತ್ತು,ಗುರಿಯಿಲ್ಲದೇ
ತಿರುಗುವ,ಸುಂದರ,
‘ಸರಿ”ಯಿಲ್ಲದ ಗಡಿಯಾರ.
ಎರಡು ಒಂದಾಗಿ,ಒಮ್ಮೊಮ್ಮೆ
ನಾಲ್ಕು ಎಂಟಾಗಿ,ಲೆಕ್ಕ-
ತಪ್ಪಿದಾಗ ಬದುಕು ದುರ್ಭರ.
ಮನಸ್ಸುಚಂಚಲ,ಕನಸು
ಚಿಗುರಿ,ಹೂವಾಗುವದಿಲ್ಲ,
ಕಾಯಾಗಿ,ಹಣ್ಣಾಗುವದಿಲ್ಲ,
ನಳ,ನಳಿಸುವದಿಲ್ಲ ನನಸಲ್ಲಿ.
ಲಗಾಮು ಇಲ್ಲದ ಕದುರೆ
ದಿಕ್ಕಾಪಾಲು ನೆಗೆದಂತೆ
ಅಸ್ತವ್ಯಸ್ತ ,ಜೀವನದಾಟ.
‘ಸರಿ”ಯಿಲ್ಲದ ಗಡಿಯಾರ
ಶಕ್ತಿಯಿಲ್ಲದೆ,ನಿಶ್ಚಲವಾಗುವ
ಮೊದಲು,’ಸರಿ”ಯಾಗಿಸ-
ಬೇಕು,ಮನಸಿನ ತುಂಬ
ಸುಂದರ ಕನಸ,ಚಿಗುರಿಸ-
ಬೇಕು,ಮೊಗ್ಗು ಹೂವಾಗಿಸ-
ಬೇಕು,ಕಾಯಿ,ಹಣ್ಣಾಗಿಸ-
ಬೇಕು,ನನಸಲ್ಲಿ.ಬದುಕು
ಕಣ್ಮನಸೆಳೆವ,,,,,…
ನಂದನವಾಗಿಸಬೇಕು…..!
******