ಪ್ರಸ್ತುತ

ಪ್ರಸ್ತುತ

ಗೋಲ್ಡನ್ ಟೈಮ್ ಸ್ಮಿತಾ ರಾಘವೇಂದ್ರ ಅಬ್ಬಬ್ಬಾ ಅಂದ್ರೆ ಮೂರುದಿನ ಇರಬಹುದಪ್ಪಾ ಮನೆಲಿ ಅದಕ್ಕಿಂತ ಹೆಚ್ಚಿಗೆದಿನ ಬಾಗಿಲುಹಾಕಿ ಕೂರಲು ಅಸಾಧ್ಯ..ಆದರೆ ಬರೋಬ್ಬರಿ ಇಪ್ಪತ್ತೊಂದು ದಿನಗಳಕಾಲ ಮಹಾಮಾರಿ ಕೋವಿಡ್ 19 ತೊಲಗಿಸಲು ಮನೆಯೇ ಮದ್ದು ಎಂದು,ಜನಹಿತಕ್ಕಾಗಿ ಜಾರಿಮಾಡಿದ ಸರ್ಕಾರದ ನಿಯಮ ಪಾಲಿಸದೇ ಇರಲು ಸಾಧ್ಯವಿಲ್ಲ.. ಲಕ್ಷಣರೇಖೆ ಹಾಕಿ ಬಾಗಿಲು ಹಾಕಿ ಕೊಳ್ಳುವದು ಉತ್ತಮ ಕೆಲಸ ಆದರೆ ಅದೆಷ್ಟು ಜನರಿಗೆ ಒಳಗೊಳಗೇ ಕಸಿವಿಸಿ,ದಿಗಿಲು,ಇನ್ನೇನು ಬದುಕೇ ಮುಗಿಯಿತೇ!? ಎನ್ನುವ ಭಾವ,ಬಾಗಿಲು ಹಾಕಿ ಕೂತು ಏನು ಮಾಡುವದು ಎನ್ನುವ ಗೊಣಗು. ತಲೆ ಕೆಡಿಸಿಕೊಳ್ಳಬೇಡಿ ಅಯ್ಯೋ […]

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನೆರಳ ಕಂಡೂ ಬೆಚ್ಚ ಬೇಕಾಗಿದೆ ಜೀವ ತಲ್ಲಣಿಸಿದೆ ಮುಂದೇನು ಕಾದಿದೆ ತಿಳಿಯದೆ ಜೀವ ತಲ್ಲಣಿಸಿದೆ ಗೋಡೆ ನಾಲ್ಕರ ನಡುವೆ ಬಂದಿಯಾಗಿದೆ ಬದುಕು ಹೊರ ದಾರಿಗಳೇ ಕಾಣದೆ ಜೀವ ತಲ್ಲಣಿಸಿದೆ ಹತ್ತಾರು ತಾಸಿನ ಬಂದ್ ಈಗ ವಾರಗಳ ಲೆಕ್ಕ ಭಯ ಕತ್ತು ಹಿಸುಕುತಿದೆ ಜೀವ ತಲ್ಲಣಿಸಿದೆ ಮೂಗು ಕಣ್ಣುಗಳನ್ನೇ ಮುಟ್ಟುವಂತಿಲ್ಲ ಈಗ ಕೈ ತೊಳೆದಿದ್ದನ್ನೇ ತೊಳೆದಿದೆ ಜೀವ ತಲ್ಲಣಿಸಿದೆ ಕಾಣದ ಕ್ರಿಮಿಯ ದಾಳಿಗೆ ಆಹುತಿಯಾದವರೆಷ್ಟು ಕೊನೆಯೆಲ್ಲಿ ಯಾವಾಗ ಅರಿಯದೆ ಜೀವ ತಲ್ಲಣಿಸಿದೆ ಎಲ್ಲಿಂದಲೂ ಎಷ್ಟು […]

ಜ್ಞಾನಪೀಠ ವಿಜೇತರು

ಯು.ಆರ್.ಅನಂತಮೂರ್ತಿ..! ಜ್ಞಾನಪೀಠ ಪುರಸ್ಕೃತ ಯು.ಆರ್.ಅನಂತಮೂರ್ತಿ..! ಕನ್ನಡಕ್ಕೆ ಆರನೆಯ ಜ್ಞಾನಪೀಠ ಪ್ರಶಸ್ತಿ ೧೯೯೪ರಲ್ಲಿ ಬಂದಾಗ ಕನ್ನಡ ಸಾಹಿತ್ಯ ಲೋಕ ಮತ್ತೊಮ್ಮೆ ಇಡೀ ದೇಶದ ಗಮನ ಸೆಳೆಯಿತು. ಈ ಗೌರವ ಪಡೆದವರು ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ… ಎಲ್ಲರಿಗೂ ಅವರವರ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಅತ್ಯಗತ್ಯ ಎಂದು ಬಲವಾಗಿ ಪ್ರತಿಪಾದಿಸುವ ಅನಂತಮೂರ್ತಿ; ವಿದೇಶಗಳ ಹಲವಾರು ಭಾಷೆ ತಿಳಿದಿರುವ ನಮಗೆ ನಮ್ಮ ಅಕ್ಕಪಕ್ಕದ ನಾಡಿನ ಭಾಷೆಗಳು ಗೊತ್ತೇ ಇಲ್ಲದ್ದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಜಗತ್ತಿನ ಬೇರೆ ಬೇರೆ ಭಾಷೆಗಳ ಹಲವು ಮಹತ್ವದ […]

ಕಾವ್ಯಯಾನ

ಸಮಯ ಕಳೆಯಲು ರೇಖಾ ವಿ.ಕಂಪ್ಲಿ ಅಂದೋ ನಮ್ಮಿರಿಯರು ಕಾಲ ಕಳೆಯಲು ಅರಳಿ ಕಟ್ಟೆ ಬೇವಿನ ಕಟ್ಟೆ ನೆರಳಡಿಯಲಿ ಕೂತು ಹರಟೆ ಮಾತುಗಳನಾಡುತ ತೂಕಡಿಸಿ ಆಕಳಿಸಿ ಒಂದು ನಿದ್ದೆ ಹೊಡಿಯುತ್ತಿದ್ದರು………….. ಅಂದೋ ನಮ್ಮೆಂಗಸರು ಓಣಿಗಳಲಿ ಅವರೀವರ ಮನೆ ವಿಚಾರಗಳನು ಗುಸುಗುಸು ಪಿಸುಪಿಸು ಎಂದು ಪುಸುಪುಸು ಮಾತಾಡಿಬಿಡುತ್ತಿದ್ದರು ಮರಡಬ್ಬಾಕಿಕೊಂಡು ಜಗಳವಾಡಿ…….. ಅಂದೋ ನಮ್ಕಿರಿಯರು ಸಡಿಲ ವಸ್ತ್ರಗಳ ಏರಿಸಿಕೊಳ್ಳುತಾ ಮಣ್ಣು ಮಸಿಗಳ ಬಳಿದುಕೊಂಡು ಮಳೆಯ ನೀರಿನಲಿ ಜಿಗಿದು ಚಳಿಯ ಬೆಂಕಿ ಮುಂಜಾವಿನಲಿ ಕಾಸಿ ಚಿನ್ನಿದಾಂಡು ಗೋಲಿ, ಮರಕೋತಿ ಆಡುತಾ… . ಇಂದೋ […]

ಕಾವ್ಯಯಾನ

ಕರೋನಾದ ಮುಂದೆ ಯುಗಾದಿ ಬಿದಲೋಟಿ ರಂಗನಾಥ್ ಹೊಸ್ತಿಲ ಮುಂದೆ ಲಕ್ಷ್ಮಣರೇಖೆ ಒಳಗೆ ಕರಳರಚುವ ಸದ್ದು ಉಗಾದಿಯ ಬೆನ್ನಿಗೂ ಬಿತ್ತು ಕಲ್ಲು ಇರುವ ಪುಡಿಕಾಸಿನಲಿ ಹೋಳಿಗೆ ತಟ್ಟಿದರೆ,ಹೊಸಬಟ್ಟೆ ತಂದರೇ… ಇಪ್ಪತ್ತೊಂದು ದಿನಗಳ ಹಾಲಿಗಿಲ್ಲ ಕಾಸು ಊರಿನ ಬಸ್ಸಿಗಿಲ್ಲ ಬಾಗಿಲು,ಟೈರು ಇದ್ದರು ಭಯದ ಪಂಕ್ಚರ್ರು ಬಿರು ಬಿಸಿಲ ಬೇಗೆಯಲಿ ಸುಡುವ ತಾಯ ಕರುಳು ಅಪ್ಪನ ವಾತ್ಸಲ್ಯದ ಮನಸು ಕಾಯುತ್ತಿವೆ…ಹಬ್ಬದ ನೆವದಲ್ಲಿ ಯಾರೋ ಮಾಡಿದ ತಪ್ಪಿಗೆ ದೇಶದ ಜನ ನರಳುತ್ತಾ ನಲುಗುವ ಕ್ಷಣ ಕ್ಷಣಕ್ಕೂ ಭಯದ ಭುಗಿಲು ಹೆಗಲೇರಿ ಜೈಲಲ್ಲದ ಒಂಥರಾ […]

ಕಾವ್ಯಯಾನ

ಕರೋನ ದಿನಗಳು ರೇಶ್ಮಾ ಗುಳೇದಗುಡ್ಡಾಕರ್ ಕರೋನ ದಿನಗಳು ತಿರುಗಾಟ ತಪ್ಪಿಸಿದೆ ಮನೆಯಮಂತ್ರಾಲಯ ಮಾಡಿದೆಊರೆಲ್ಲಾ ಲಾಕ್ ಡೌನ್ ಮಾಡಿದೆಪ್ರಾಣಿ ಪಕ್ಷಿಗಳ ಸ್ವಂತಂತ್ರ ಹೆಚ್ಚಿಸಿದೆ ಮೌನಕ್ಕೊಂದು ಅರ್ಥ ವಿದೆ ಎಂಬಮಾತು ನಿಜವೆನ್ನಿಸಿದೆಜನಜಂಗುಳಿಯಿಂದ ದೊರವಾಗಿಅಂತರಂಗ ತೆರೆಯಲು ಅನುವು ಮಾಡಿದೆ ಸಮಯದೊಂದಿಗೆ ಓಡುವ ನಮ್ಮನ್ನುಪ್ರೀತಿ ಪಾತ್ರರೊಡನೆ ಕಳೆಯಲು ಬಿಟ್ಟೆನಮ್ಮಗಳ ಪರಿಚಯ ಮತ್ತೆ ನಮಗೆಮಾಡಿಸಿದೆ ನೋವಿನಲ್ಲೊ ನಗುವಿದೆಆತಂಕದ ನೆರಳಿನಲ್ಲಿಯೂ ಬಲುರೋಮಾಚಕ ತಿರುವಿದೆ ಈ ಬದುಕಿನಪಾಠ ಶಾಲೆ ಪ್ರತಿಯೊಬ್ಬರಿಗೊ ಉಚಿತವಿದೆ ನಿನ್ನ ದೂರ ಮಾಡಲು ಹೋಗಿನಮ್ಮವರಿಗೆ ಹತ್ತಿರವಾದೆವುಮೊಗೆದಷ್ಟು ನೆನಪುಗಳು ಗರಿ ಬಿಚ್ಚಿನರ್ತಿಸಿದವು ವರ್ತಮಾನದಕಟು ಸತ್ಯದ ಮುಂದೆ  […]

ಕಥಾಯಾನ

ಕು.ಸ.ಮದುಸೂದನರವರ ಕಥೆ ಲಾರಿಯಿಂದ ಲಾರಿಗೆ ಯನ್ನು ಪ್ರತಿಲಿಪಿಯವರುಆಡೀಯೊ ರೂಪದಲ್ಲಿ ಹೊರತಂದಿದ್ದಾರೆ ನೀವೂ ಈ ಕಥೆ ಕೇಳಿ ಚಿತ್ರದ ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ ಕಥೆ ಕೇಳಿ https://kannada.pratilipi.com/audio/ಲಾರಿಯಿಂದ-ಲಾರಿಗೆ-pdrylv2au9op?utm_campaign=Shared&utm_source=Link ಲಾರಿಯಿಂದ ಲಾರಿಗೆ ಕಥೆ

ಪುಸ್ತಕ ಪರಿಚಯ

ಸಂಕೋಲೆಗಳ ಕಳಚುತ್ತ ಕೃತಿ: ಸಂಕೋಲೆಗಳ ಕಳಚುತ್ತ ಕವಿ: ಕು.ಸ.ಮಧುಸೂದನ ಪ್ರಕಾಶಕರು: ಕಾವ್ಯಸ್ಪಂದನ ಪ್ರಕಾಶನ, ಬೆಂಗಳೂರು ಪುಸ್ತಕ ದೊರೆಯುವ ವಿವರಗಳು ಸಂಕೋಲೆಗಳ ಕಳಚುತ್ತ ಪುಸ್ತಕತರಿಸಿಕೊಳ್ಳುವ ವಿವರಗಳು ಪುಸ್ತಕದ ಬೆಲೆ=150=00 ಬ್ಯಾಂಕ್ ವಿವರಗಳು IFSC CODE-CNRB0002698 AC/NO=1145101036761 Bhadravathiramachari Canara bank,rajajinagar 2nd block***********

ಕನ್ನಡ ಕಾವ್ಯ ಕುರಿತು

ಕಾವ್ಯವನ್ನು ಬಗೆಯುವ ಬಗೆ ರಾಮಸ್ವಾಮಿ ಡಿ.ಎಸ್. ಕಾವ್ಯವನ್ನು ಬಗೆಯುವ ಬಗೆ ಮೊನ್ನೆ ಭಾನುವಾರ ನಾವೆಲ್ಲ ಸ್ವಯಂ ಕರ್ಫ್ಯೂ ವಿಧಿಸಿಕೊಂಡು ಮನೆಯಲ್ಲೇ ಇದ್ದಾಗ ಬೆಳಗಾವಿಯ ಕವಿ ಪ್ರವೀಣ ಆಯ್ದ ಕೆಲ ಯುವ ಕವಿಗಳನ್ನು ಫೇಸ್ಬುಕ್ ಲೈವಲ್ಲಿ ಬರುವಂತೆ ಆಯೋಜಿಸಿ ಕವಿತೆಗೆ ಇರುವ ಅನನ್ಯ ಸಾಧ್ಯತೆಗಳ ವಿಸ್ತಾರವ‌ನ್ನು ಮತ್ತೊಮ್ಮೆ ಕಾವ್ಯಾಸಕ್ತರಿಗೆ ತಿಳಿಯಪಡಿಸಿದರು. ಶ್ರೀ ಪ್ರವೀಣ ಮತ್ತು ಅವರ ಎಲ್ಲ ಗೆಳೆಯರಿಗೂ ಅಭಿನಂದನೆಗಳು. ಕೆಲಸವಿಲ್ಲದೆ ಸುಮ್ಮನೆ ಏನನ್ನೋ ಟ್ರೋಲ್ ಮಾಡುತ್ತಿದ್ದಾಗ ಈ ಕವಿಗೋಷ್ಠಿಯ ಮೊದಲ ಕವಿ ವೀರಣ್ಣ ಮಡಿವಾಳರನ್ನು ಕೇಳಿಸಿಕೊಂಡೆ. ಅವರ […]

ಯುಗಾದಿಗೊಂದು ಗಝಲ್

ಗಝಲ್ ಸುಜಾತಾ ಲಕ್ಮನೆ ಒಲಿದೊಮ್ಮೆ ನಕ್ಕುಬಿಡು ಯುಗಾದಿ ಚೆಲ್ಲಲಿ ನಮ್ಮೊಳಗೆ ಮುನಿಸೇಕೆ ಹೇಳಿಬಿಡು ಯುಗಾದಿ ಮಾಗಲಿ ನಮ್ಮೊಳಗೆ ಕನಸು ಕಂಗಳ ತುಂಬ ರಂಗು ರಂಗಿನ ಚುಂಬಕ ಚಿತ್ತಾರ ಚುಕ್ಕಿಗಳ ಸುರಿದುಬಿಡು ಯುಗಾದಿ ತುಂಬಲಿ ನಮ್ಮೊಳಗೆ ಹೀಗೆ ವರುಷ ವರುಷಕೂ ಬರುವ ಹಬ್ಬವೇತಕೆ ಹೇಳು ನವ ಹರುಷವ ತೂಗಿಬಿಡು ಯುಗಾದಿ ಜೀಕಲಿ ನಮ್ಮೊಳಗೆ ತೆರೆಯು ತೆರೆವ ತೆರದಿ ನಾವು ತೆರೆದು ಬೆರೆಯಲಾರೆವೇನು ತೆರೆತೆರೆದು ಬೆರೆತುಬಿಡು ಯುಗಾದಿ ಬೀಗಲಿ ನಮ್ಮೊಳಗೆ ಉಸಿರುಸಿರು ಬೆರೆಯದೇ ಒಳಗೆ ಬಿಸುಪು ಹರಿವುದೇನೇ ನಿನ್ನ್ಹೆಸರ ಉಸಿರಿಬಿಡು […]

Back To Top